ತಾಯ್ತನದ ಸಂತಸ, ಆದರೆ ಮಧುಮೇಹ ಎಂಬ ಪೆಡಂಭೂತ!

By: Jaya subramanya
Subscribe to Boldsky

ಇಂದಿನ ದಿನಗಳಲ್ಲಿ ಮಧುಮೇಹವೆಂಬುದು ಹೆಚ್ಚು ಉಲ್ಬಣಿಸುತ್ತಿರುವ ಕಾಯಿಲೆಯಾಗಿ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಚಯಾಪಚಯ ಅನಾರೋಗ್ಯಕರ ವಿಧಾನವಾಗಿರುವ ಸಕ್ಕರೆ ಕಾಯಿಲೆ ಸಣ್ಣ ಮಗುವಿನಿಂದ ಹಿಡಿದು ವಯಸ್ಸಾದವರನ್ನೂ ಕಾಡುತ್ತಿದೆ. ವ್ಯಕ್ತಿಯ ರಕ್ತದಲ್ಲಿನ ಗ್ಲುಕೋಸ್ ಮಟ್ಟವು ಏರಿಕೆಯಾದಾಗ ಮಧುಮೇಹವು ತಲೆದೋರುತ್ತದೆ. ಏನಿದು ಗೆಸ್ಟೇಶನಲ್ ಮಧುಮೇಹ..? ಇದರ ಲಕ್ಷಣಗಳೇನು?

ಗರ್ಭಿಣಿಯರಲ್ಲೂ ಈ ರೋಗ ಇಂದು ಸರ್ವೇ ಸಾಮಾನ್ಯ ಎಂದೆನಿಸಲಿದ್ದು ತಾಯಿಗೆ ಈ ರೋಗವಿದ್ದಲ್ಲಿ ಹುಟ್ಟುವ ಮಗುವಿಗೂ ಈ ಕಾಯಿಲೆ ಬರಲಿದೆ. ಹೆರಿಗೆಯ ನಂತರ ಕೂಡ ತಾಯಿ ಮತ್ತು ಮಗುವನ್ನು ಈ ಮಧುಮೇಹವು ಆಕ್ರಮಿಸುವ ಸಾಧ್ಯತೆಗಳು ಶೇ 80 ರಷ್ಟಿದೆ. ಗರ್ಭಿಣಿಯಾಗಿರುವಾಗಲೇ ತಾಯಿ ಮಧುಮೇಹದಿಂದ ಬಳಲುತ್ತಿದ್ದರೆ ಅದು ಹುಟ್ಟುವ ನವಜಾತ ಕಂದಮ್ಮನಿಗೂ ಹರಡಲಿದೆ. ಮಧುಮೇಹ ನಿಯಂತ್ರಣಕ್ಕೆ, ಪ್ರಯತ್ನಿಸಿ ನೈಸರ್ಗಿಕ ಆಹಾರಗಳು

ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಮಧುಮೇಹವನ್ನು ನೂತನ ತಾಯಿ ಮಗು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬುದನ್ನು ಕೆಲವೊಂದು ಸಲಹೆಗಳ ಮೂಲಕ ಅರಿತುಕೊಳ್ಳೋಣ.

ಸಲಹೆ 1.

ಸಲಹೆ 1.

ನೀವು ಮತ್ತು ನಿಮ್ಮ ಮಗುವಿಗೆ ಮಧುಮೇಹದೊಂದಿಗೆ ಹೋರಾಡುವ ಶಕ್ತಿ ಇದೆ ಎಂಬುದನ್ನು ಕಂಡುಕೊಳ್ಳಿ. ಆದ್ದರಿಂದ ನೀವು ಎದೆಗುಂದುವ ಅವಶ್ಯಕತೆ ಇರುವುದಿಲ್ಲ. ಮಕ್ಕಳಲ್ಲಿ ಮಧುಮೇಹ: ಎಚ್ಚರ ತಪ್ಪಿದರೆ ಜೀವಕ್ಕೆ ಮಾರಕ!

ಸಲಹೆ 2

ಸಲಹೆ 2

ಗರ್ಭಾವಸ್ಥೆಯ ನಂತರ, ನಿಮ್ಮ ದೇಹವು ಹೆಚ್ಚಿನ ಬದಲಾವಣೆಗಳಿಗೆ ಒಳಗಾಗುತ್ತದೆ ಮತ್ತು ನೀವು ದುರ್ಬಲರಾಗುತ್ತೀರಿ. ನಿಮ್ಮ ವೈದ್ಯರೊಂದಿಗೆ ಮಾತನಾಡಿ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಿಕೊಳ್ಳಿ.

ಸಲಹೆ 3

ಸಲಹೆ 3

ನಿಮ್ಮ ರಕ್ತದ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿದೆ ಎಂಬುದನ್ನು ಕಂಡುಕೊಳ್ಳಲು ನಿಯಮಿತ ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಹಾರ್ಮೋನಲ್ ಬದಲಾವಣೆಗಳು ದೇಹದಲ್ಲಿ ಉಂಟಾಗುತ್ತಿರುವಂತೆ ರಕ್ತದ ಸಕ್ಕರೆ ಮಟ್ಟದಲ್ಲೂ ಬದಲಾವಣೆಗಳನ್ನು ನೀವು ಕಾಣಬಹುದು.

ಸಲಹೆ 4

ಸಲಹೆ 4

ನೀವು ನಿಯಮಿತವಾಗಿ ವ್ಯಾಯಾಮವನ್ನು ಮಾಡುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿ. ಇಲ್ಲದೇ ಹೋದರೆ ಗರ್ಭಾವಸ್ಥೆಯ ತೂಕವು ಮಧುಮೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.

ಸಲಹೆ 5

ಸಲಹೆ 5

ನಿಮ್ಮ ಮಗುವಿನ ಕಾಳಜಿಯಲ್ಲಿ ನೀವು ಹೆಚ್ಚು ಸಮಯಗಳನ್ನು ವ್ಯಯಿಸುತ್ತಿದ್ದೀರಿ ಎಂದಾದಲ್ಲಿ, ನಿಮಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುತ್ತದೆ. ಮಧುಮೇಹವು ನಿಮ್ಮನ್ನು ಬಳಲಿಸಿಬಿಡುತ್ತದೆ.

ಸಲಹೆ 6

ಸಲಹೆ 6

ನಿಮಗೆ ಸಕ್ಕರೆ ಕಾಯಿಲೆ ಇದ್ದಾಗಲೂ ಮಗುವಿಗೆ ಹಾಲುಣಿಸಬಹುದಾಗಿದೆ. ಈ ಕುರಿತಾಗಿ ನಿಮ್ಮ ವೈದ್ಯರೊಂದಿಗೆ ಮಾತನಾಡಿ.

ಸಲಹೆ 7

ಸಲಹೆ 7

ನೀವು ಆರೋಗ್ಯಕರ ಆಹಾರಗಳನ್ನು ಸೇವಿಸುತ್ತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಆಹಾರವನ್ನು ಸಣ್ಣ ಗಾತ್ರದಲ್ಲಿ ತೆಗೆದುಕೊಳ್ಳಿ. ಮಧುಮೇಹವಿರುವ ನೂತನ ತಾಯಿ ಕಡಿಮೆ ರಕ್ತದೊತ್ತಡ ಸಮಸ್ಯೆಗೆ ಒಳಗಾಗುತ್ತಿರುತ್ತಾರೆ. ಅದ್ದರಿಂದ ಆಹಾರದ ವಿಷಯದಲ್ಲಿ ಕಾಳಜಿ ಅತ್ಯಗತ್ಯ.

 

 

English summary

Healthy Tips For A Diabetic New Mother

Diabetes is an extremely common disorder, which usually affects people above the age of 40; however, it can even affect younger people and children too! So, if you are a woman who has just given birth to a child, you would already be experiencing a lot of stress. Follow these tips that can help make your life easier, if you are a new mother with diabetes.
Subscribe Newsletter