ಮಗುವಿನ ಜನನದ ನಂತರ ತಾಯಿಗೆ ಕಾಡುವ ಖಿನ್ನತೆ! ಪರಿಹಾರವೇನು?

By: Jayasubramanya
Subscribe to Boldsky

ನೀವು ಅತಿ ಶೀಘ್ರದಲ್ಲೇ ಕಂದನನ್ನು ನಿರೀಕ್ಷಿಸುತ್ತಿರುವ ಗರ್ಭಿಣಿ ತಾಯಿಯಾಗಿದ್ದೀರಿ ಎಂದಾದಲ್ಲಿ ನೀವು ಮಗುವಿನ ಜನನದ ನಂತರ ತಲೆದೋರುವ ಸಮಸ್ಯೆಗಳಿಗೆ ಈಗಲೇ ಕಡಿವಾಣವನ್ನು ಹಾಕುವುದು ಒಳಿತಾದುದು. ಈ ಸಮಸ್ಯೆಯಲ್ಲಿ ಅತಿ ಪ್ರಮುಖವಾಗಿರುವುದು ಮಗುವಿನ ಜನನದ ನಂತರದ ಖಿನ್ನತೆಯಾಗಿದೆ.

ಗರ್ಭಾವಸ್ಥೆಯಲ್ಲಿ ಮತ್ತು ಮಗುವಿನ ಜನನದ ನಂತರ ಪೋಷಣೆ ಅತಿ ಮುಖ್ಯವಾದುದು. ಈ ಸಮಯದಲ್ಲಿ ಹೆಣ್ಣಿನ ದೇಹವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳುತ್ತದೆ. ಆದ್ದರಿಂದ ಸದಾ ಕಾಲವು ನ್ಯೂಟ್ರಿಶಿಯಸ್ ಆಹಾರಗಳನ್ನು ಸೇವನೆ ಮಾಡುವುದು ಒಳಿತಾದುದಾಗಿದೆ. ಗರ್ಭಾವಸ್ಥೆ ಸಂದರ್ಭದಲ್ಲಿ ಬಹಳಷ್ಟು ಹಾರ್ಮೋನಲ್ ಬದಲಾವಣೆಗಳು ಉಂಟಾಗುತ್ತದೆ. ತಾಯಿಯ ಖಿನ್ನತೆಯು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?  

ಹೊಸ ಮಗುವನ್ನು ಹೊಂದುವ ತವಕ, ಹೊಸ ಹೊಸ ಜವಾಬ್ದಾರಿಗಳು ಹೀಗೆ ಗರ್ಭಿಣಿಯರಲ್ಲಿ ಇಂತಹ ಸಮಸ್ಯೆಗಳು ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಅದುವೇ ಖಿನ್ನತೆಗೆ ಕಾರಣವಾಗುತ್ತದೆ. ಮಗುವಿನ ಜನನದ ನಂತರ ತಲೆದೋರುವ ಖಿನ್ನತೆಯನ್ನು ನಿವಾರಿಸಲು ಮಹಿಳೆಯರು ತೆಗೆದುಕೊಳ್ಳಬೇಕಾದ ಆಹಾರ ಪಟ್ಟಿಗಳನ್ನು ನಾವಿಲ್ಲಿ ನೀಡುತ್ತಿದ್ದು ಇದರತ್ತ ಗಮನ ಹರಿಸಿ.

ಬಾದಾಮಿ

ಬಾದಾಮಿ

ಒಮೇಗಾ 3 ಫ್ಯಾಟಿ ಆಸಿಡ್ ಬಾದಾಮಿಯಲ್ಲಿದ್ದು ಜನನ ನಂತರದ ಖಿನ್ನತೆಯನ್ನು ದೂರ ಮಾಡಲು ಇದು ಸಹಕಾರಿಯಾದುದಾಗಿದೆ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಅವೊಕಾಡೊ ಅಥವಾ ಬೆಣ್ಣೆ ಹಣ್ಣು

ಅವೊಕಾಡೊ ಅಥವಾ ಬೆಣ್ಣೆ ಹಣ್ಣು

ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಒಮೇಗಾ 3 ಫ್ಯಾಟಿ ಆಸಿಡ್ ಇದರಲ್ಲಿದ್ದು ನಿಮ್ಮ ಮೆದುಳಿನ ಕೋಶಗಳನ್ನು ಪೋಷಿಸುವ ಮೂಲಕ ಇದು ಜನನ ನಂತರ ಒತ್ತಡವನ್ನು ನಿವಾರಿಸುತ್ತದೆ.

ಮೀನು

ಮೀನು

ಆಗಾಗ್ಗೆ ಮೀನು ಸೇವನೆ ಕೂಡ ನಿಮ್ಮ ಖಿನ್ನತೆಯನ್ನು ನೈಸರ್ಗಿಕವಾಗಿ ದೂರಮಾಡಲು ಸಹಕಾರಿಯಾದುದಾಗಿದೆ. ಇದರಲ್ಲಿ ವಿಟಮಿನ್ ಇ ಅಂಶವಿದ್ದು, ಹಾರ್ಮೋನಲ್ ಅಸಮತೋಲವನ್ನು ಇದು ನಿಯಂತ್ರಣದಲ್ಲಿರಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣು ಕೂಡ ಖಿನ್ನತೆಯನ್ನು ನಿವಾರಿಸುವಲ್ಲಿ ಹೆಚ್ಚು ಉಪಕಾರಿಯಾದುದಾಗಿದೆ. ಇದರಲ್ಲಿ ಪೊಟಾಶಿಯಮ್ ಅಂಶ ಹೆಚ್ಚಿದ್ದು ರೋಗ ಲಕ್ಷಣಗಳನ್ನು ಉಪಚರಿಸುವಲ್ಲಿ ಸಹಾಯಕ. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಪಾಲಾಕ್

ಪಾಲಾಕ್

ಪಾಲಾಕ್‎ನಲ್ಲಿ ಕೂಡ ಕಬ್ಬಿಣದ ಅಂಶಗಳು ಹೆಚ್ಚಿದ್ದು, ಮೆದುಳಿಗೆ ರಕ್ತದ ಹರಿವನ್ನು ಇದು ವರ್ಧಿಸುತ್ತದೆ ಮತ್ತು ಕಬ್ಬಿಣದ ಅಂಶ ಇದರಲ್ಲಿ ಹೆಚ್ಚು ಪ್ರಮಾಣದಲ್ಲಿದೆ.

ಫ್ಲ್ಯಾಕ್ಸ್ ಸೀಡ್ಸ್

ಫ್ಲ್ಯಾಕ್ಸ್ ಸೀಡ್ಸ್

ಪ್ರೊಟೀನ್ ಅಂಶ ಮತ್ತು ಒಮೇಗಾ 3 ಫ್ಯಾಟಿ ಆಸಿಡ್ ಇದರಲ್ಲಿದ್ದು, ನೈಸರ್ಗಿಕವಾಗಿ ಈ ಬಗೆಯ ಖಿನ್ನತೆಯನ್ನು ಇದು ನಿವಾರಿಸುತ್ತದೆ.

ಸೋಯಾಬೀನ್

ಸೋಯಾಬೀನ್

ಖಿನ್ನತೆಯನ್ನು ನಿವಾರಿಸುವಲ್ಲಿ ಸೋಯಾಬೀನ್ ಕೂಡ ಒಂದು. ಆಲ್ಫಾ - ಲಿನೊಲೆನಿಕ್ ಆಸಿಡ್ ಇದ್ದು ಖಿನ್ನತೆಯನ್ನು ಇದು ನಿವಾರಿಸುತ್ತದೆ.

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್

ಖಿನ್ನತೆಯನ್ನು ಉಪಚರಿಸುವಲ್ಲಿ ಡಾರ್ಕ್ ಚಾಕಲೇಟ್ ಪ್ರಮುಖವಾದುದು. ಮಗುವಿನ ಜನನದ ನಂತರದ ಖಿನ್ನತೆಯನ್ನು ನಿವಾರಿಸಲು ಇದು ಸಹಾಯ ಮಾಡಲಿದೆ. ಕಪ್ಪು ಚಾಕಲೇಟ್ ನಲ್ಲಿದೆ ಔಷಧೀಯ ಗುಣ

ಸೇಬು

ಸೇಬು

ಖಿನ್ನತೆಯನ್ನು ದೂರಮಾಡುವ ಆಹಾರಗಳಲ್ಲಿ ಸೇಬು ಕೂಡ ಒಂದು. ಇದರಲ್ಲಿ ಉತ್ಕರ್ಷಣ ನಿರೋಧಿ ಅಂಶಗಳು ಅಧಿಕವಾಗಿದ್ದು ಮೆದುಳಿನ ಕೋಶಗಳನ್ನು ಇದು ಸಂರಕ್ಷಿಸುತ್ತದೆ. ವೈದ್ಯರಿಂದ ದೂರವಿರಲು, ದಿನಕ್ಕೊಂದು ಸೇಬು ಸಾಕು

ತುಪ್ಪ

ತುಪ್ಪ

ನಿಮ್ಮ ಆಹಾರದಲ್ಲಿ ತುಪ್ಪವನ್ನು ಸೇವಿಸುವುದು ಮಗುವಿನ ಜನನದ ನಂತರದ ಖಿನ್ನತೆಯನ್ನು ದೂರಮಾಡುತ್ತದೆ. ಇದರಲ್ಲಿ ಒಮೇಗಾ - 3 ಫ್ಯಾಟಿ ಆಸಿಡ್ ಅಧಿಕವಾಗಿದೆ.

ಚಿಕನ್ ಸೂಪ್

ಚಿಕನ್ ಸೂಪ್

ಬಿಸಿಯಾದ ಚಿಕನ್ ಸೂಪ್ ನಿಮ್ಮ ಮೂಡ್ ಅನ್ನು ಉತ್ತಮಗೊಳಿಸುವಲ್ಲಿ ಸಹಕಾರಿಯಾದುದಾಗಿದೆ. ಇದು ತಾಯ್ತನವನ್ನು ಉದ್ದೀಪನಗೊಳಿಸುವುದು ಖಂಡಿತ. ಆರೋಗ್ಯಕರ ಡಯಟ್ -ಚಿಕನ್ ಸೂಪ್

 

 

English summary

Foods That Can Prevent Postnatal Depression

Postnatal depression, also known as postpartum depression, can occur a few days after childbirth, or sometimes, even after a few months. Some of the main symptoms of postnatal depression are anger, anxiety, hopelessness, guilt, fatigue, loneliness, mood swings, loss of general interest, resentment towards the child, etc. So, here is a list of foods that can prevent and even reduce postnatal depression.
Story first published: Tuesday, March 7, 2017, 23:28 [IST]
Subscribe Newsletter