ಹೆರಿಗೆಯ ನಂತರ ಇದೆಲ್ಲಾ ಮಾಮೂಲು-ಏನೂ ಭಯ ಪಡದಿರಿ!

By: Hemanth
Subscribe to Boldsky

 ಗರ್ಭಧಾರಣೆಯೆನ್ನುವುದು ಮಹಿಳೆಗೆ ಸಂತಸ ಹಾಗೂ ಅಗ್ನಿಪರೀಕ್ಷೆಯನ್ನು ಒಡ್ಡುವ ಸಮಯವಾಗಿದೆ. ಮಹಿಳೆ ಗರ್ಭಿಣಿಯಾದಾಗ ಮತ್ತು ಮಗುವಿಗೆ ಜನ್ಮ ನೀಡಿದಾಗ ಆಕೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳುವಾಗ ಕೆಲವರು ಒತ್ತಡ ಹಾಗೂ ಖಿನ್ನತೆಗೆ ಒಳಗಾಗುತ್ತಾರೆ. ಎಷ್ಟೇ ಧೈರ್ಯ ಮಾಡಿಕೊಂಡರೂ, ಆಕೆಗೆ ಭಯ ಇದ್ದೇ ಇರುತ್ತದೆ!

ಹಾರ್ಮೋನುಗಳಲ್ಲಿ ಆಗುವಂತಹ ಬದಲಾವಣೆಗಳಿಂದಾಗಿ ದೇಹದಲ್ಲಿ ವೈಪರಿತ್ಯಗಳು ಕಾಣಿಸಿಕೊಳ್ಳುವುದು. ಇದು ಕೆಲವರನ್ನು ಭಾರೀ ಒತ್ತಡಕ್ಕೆ ಸಿಲುಕಿಸುತ್ತದೆ. ಹೆರಿಗೆ ಬಳಿಕ ಬಾಣಂತಿಯರಿಗೆ ಕಾಡುವ ಆ ನರಕಯಾತನೆ...

ಅದರಲ್ಲೂ ಇಂದಿನ ದಿನಗಳಲ್ಲಿ ವೃತ್ತಿಯನ್ನು ಆಯ್ದುಕೊಂಡಿರುವ ಮಹಿಳೆಯರಿಗೆ ಗರ್ಭಧಾರಣೆ ಮತ್ತು ಹೆರಿಗೆಯು ಮತ್ತಷ್ಟು ಸವಾಲುಗಳನ್ನು ತಂದೊಡ್ಡಿದೆ. ಹೆರಿಗೆ ಬಳಿಕ ಜನನಾಂಗ ಒಣಗುವುದು ದೊಡ್ಡ ಸಮಸ್ಯೆಯಾಗಿರುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯಿರಿ.... 

#1

#1

ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ ಗರ್ಭಧಾರಣೆ ಸಮಯದಲ್ಲಿ ಹೆಚ್ಚಾಗಿರುತ್ತದೆ ಮತ್ತು ಮಗುವಿನ ಜನನದ ಬಳಿಕ ತಕ್ಷಣ ಕಡಿಮೆಯಾಗುವುದು. ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಈಸ್ಟ್ರೋಜನ್ ಮಟ್ಟವು ಕಡಿಮೆಯಾಗುವುದು.

#2

#2

ಮಹಿಳೆಯರ ಜನನಾಂಗ ಒಣಗಲು ಮತ್ತೊಂದು ಕಾರಣವೆಂದರೆ ಪ್ರಸವಾನಂತರದ ಥೈರಾಯ್ಡಿಟಿಸ್. ಮಗುವಿನ ಜನನದ ವೇಳೆ ಥೈರಾಯ್ಡ್ ನಲ್ಲಿ ಉಂಟಾಗುವ ಉರಿಯೂತದಿಂದ ಹೀಗೆ ಆಗಬಹುದು. ಥೈರಾಯ್ಡ್ ಉರಿಯೂತಕ್ಕೆ ಒಳಗಾದರೆ ಅದರಿಂದ ಥೈರಾಯ್ಡ್ ನ ನಿರ್ಮಾಣವಾಗುವುದಿಲ್ಲ. ಇದರಿಂದ ಖಿನ್ನತೆ, ಕಿರಿಕಿರಿ, ತೂಕ ಹೆಚ್ಚಳ ಮತ್ತು ಜನನಾಂಗ ಒಣಗುವ ಸಮಸ್ಯೆ ಕಾಣಿಸಬಹುದು. ಥೈರಾಯ್ಡ್ ನ ಉರಿಯೂತವೇ ಎಂದು ತಿಳಿಯಲು ವೈದ್ಯರನ್ನು ಭೇಟಿಯಾಗಿ.

#3

#3

ಈ ಸಮಸ್ಯೆ ಎಷ್ಟು ಸಮಯವಿರಬಹುದು? ಮಗುವಿಗೆ ಹಾಲುಣಿಸುವ ಸಮಯ ಕಳೆದ ಬಳಿಕ ಈ ಸಮಸ್ಯೆ ಕಡಿಮೆಯಾಗಬಹುದು.

#4

#4

ಜನನಾಂಗ ಒಣಗುವ ಸಮಸ್ಯೆಯನ್ನು ನಿವಾರಿಸಬೇಕಾದರೆ ಕೆಲವೊಂದು ಆಹಾರ ಪಥ್ಯವನ್ನು ಅನುಸರಿಸಬೇಕು. ಸರಿಯಾಗಿ ನೀರು ಕುಡಿದು ದೇಹವನ್ನು ಯಾವಾಗಲೂ ತೇವಾಂಶದಿಂದ ಇಡಿ. ಆಹಾರದಲ್ಲಿ ಒಮೆಗಾ3 ಕೊಬ್ಬಿನಾಮ್ಲ ಮತ್ತು ಪ್ರೋಟೀನ್ ಹೆಚ್ಚಾಗಿರಲಿ.

#5

#5

ಮಹಿಳೆಯರ ಜನನಾಂಗಕ್ಕೆ ತೇವಾಂಶವನ್ನು ನೀಡಬಲ್ಲ ಕೊಬ್ಬಿನಾಮ್ಲಗಳನ್ನು ಸೇವನೆ ಮಾಡಿ. ಸಾಲ್ಮನ್, ಟೂನಾ, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಮತ್ತು ಎಳ್ಳು ಕೊಬ್ಬಿನಾಮ್ಲವನ್ನು ಹೊಂದಿದೆ.

#6

#6

ಸೆಲರಿ, ಬೀಜಗಳು, ಸೇಬು, ಸೋಯಾ, ದ್ವಿದಳ ಧಾನ್ಯಗಳಲ್ಲಿ ಐಸೋಫ್ಲಾವಿನ್ಸ್ ದೇಹದಲ್ಲಿ ಈಸ್ಟ್ರೋಜನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಒಳ್ಳೆಯ ಆಹಾರ ಮತ್ತು ಸರಿಯಾದ ತೇವಾಂಶವು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತದೆ.

 

English summary

Dealing with post-partum vaginal dryness

Pregnancy brings many changes with it and it goes without saying that the lady parts take a lots of stress both during pregnancy and also during childbirth. The obvious reason behind many pregnancy-related physiological changes is hormonal action. One uncomfortable bodily change is dryness down there post pregnancy.
Subscribe Newsletter