Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಎಷ್ಟೇ ಧೈರ್ಯ ಮಾಡಿಕೊಂಡರೂ, ಆಕೆಗೆ ಭಯ ಇದ್ದೇ ಇರುತ್ತದೆ!
ಹರಿಗೆ ವೇಳೆ ಕೆಲವೊಂದು ಅನಿರೀಕ್ಷಿತ ವಿಷಯಗಳು ನಡೆಯುವುದರಿಂದ ಮಹಿಳೆಯ ಪತಿ, ಕುಟುಂಬಸ್ಥರು ಹಾಗೂ ಬಂಧುಗಳು ಆಕೆಯ ಜತಗಿದ್ದು, ಆಕೆಗೆ ಬೆಂಬಲವನ್ನು ನೀಡುತ್ತಿರುತ್ತಾರೆ..ಆದರೂ ಆಕೆಗೆ ಆ ಅನಿರೀಕ್ಷಿತ ವಿಷಯಗಳ ಭಯ ಇದ್ದೇ ಇರುತ್ತದೆ
ಗರ್ಭಧಾರಣೆ ಮತ್ತು ಮಗುವಿಗೆ ಜನ್ಮ ನೀಡುವುದು ಇದೆಯಲ್ಲಾ ಅದರಷ್ಟು ಸಂತೋಷದ ಕ್ಷಣ ಮಹಿಳೆಗೆ ಮತ್ತೊಂದಿಲ್ಲ. ಸಹಿಸಲಾರದ ನೋವನ್ನು ನುಂಗಿ ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆಯು ಮಹಿಳೆಗೆ ಪುನರ್ಜನ್ಮವೆನ್ನಬಹುದು. ಆ ನೋವನ್ನು ನುಂಗಿಯೂ ಮಗುವಿಗೆ ಜನ್ಮ ನೀಡಿದ ಬಳಿಕ ಕುಟುಂಬದವರ ಸಂತೋಷ ಹಾಗೂ ಸಂಭ್ರಮವನ್ನು ನೋಡಿ ಪ್ರತಿಯೊಂದು ಮರೆತು ಹೋಗುತ್ತದೆ.

ಆ ನೋವು ಇರಲೇ ಇಲ್ಲ ಎನ್ನುವಂತಾಗುತ್ತದೆ. ಹೆರಿಗೆ ವೇಳೆ ಪ್ರೀತಿಪಾತ್ರರು ಮಹಿಳೆಯ ಜತೆಗಿದ್ದು ಆಕೆಗೆ ಬೆಂಬಲವಾಗಿ ನಿಂತಿರುತ್ತಾರೆ. ಯಾರೇ ಬಳಿಯಲ್ಲಿ ಇದ್ದರೂ ಸಹಿತ ನೋವನ್ನು ಸಹಿಸಬೇಕಾಗಿರುವುದು ಮಗುವಿಗೆ ಜನ್ಮ ನೀಡುವವರೇ. ಹೆರಿಗೆ ವೇಳೆ ಸಂಭವಿಸಬಹುದಾದ ಕೆಲವೊಂದು ಅನಿರೀಕ್ಷಿತಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೆರಿಗೆಯ ಬಳಿಕ, ಮಹಿಳೆಯ ಸಮಸ್ಯೆ ಕೇಳುವವರು ಯಾರು?
ಕೆಲವು ಮಹಿಳೆಯರಲ್ಲಿ ಸಂಕೋಚನ ರೀತಿಯ ಸಂವೇದನೆಗಳು ಕಂಡು ಬರಬಹುದು. ಆದರೆ ಇದು ಸಂಕೋಚನವಲ್ಲ. ಆದರೆ ವೈದ್ಯರು ನಿಜವಾದ ಸಂಕೋಚನದ ತನಕ ಕಾಯಬೇಕು. ಆದರೆ ಮಹಿಳೆ ಮಾತ್ರ ತನ್ನ ದೇಹದಲ್ಲಿ ಆಗುವಂತಹ ವಿಚಿತ್ರ ಸಂವೇದನೆಯಿಂದಾಗಿ ಒತ್ತಡಕ್ಕೆ ಒಳಗಾಗಬಹುದು, ಅಲ್ಲದೆ ಕೆಲವೊಮ್ಮೆ ಅವಳು ವಿಪರೀತ ಭಯಭೀತ ಕೂಡ ಆಗುವಳು.
ಮತ್ತೊಂದು ಅನಿರೀಕ್ಷಿತವೆಂದರೆ ಸಿಸೇರಿಯನ್.... ಪ್ರತಿಯೊಬ್ಬ ಮಹಿಳೆ ಕೂಡ ತನಗೆ ಸಾಮಾನ್ಯ ಹೆರಿಗೆಯಾಗಬೇಕೆಂದು ಬಯಸುತ್ತಾ ಇರುತ್ತಾಳೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸಿಸೇರಿಯನ್ ಮಾಡಲೇಬೇಕಾಗುತ್ತದೆ. ಮಗುವಿಗೆ ಜನ್ಮ ನೀಡಿದ ಬಳಿಕವೂ ಕೆಲವು ಮಹಿಳೆಯರಲ್ಲಿ ಸಂಕೋಚನದ ಕಾಣಿಸಿಕೊಳ್ಳಬಹುದು.
ಗರ್ಭಕೋಶವು ತನ್ನ ಮೂಲ ಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ದೇಹವು ಕೆಲವೊಂದು ಬದಲಾವಣೆ ಮಾಡುವುದರಿಂದ ಈ ರೀತಿಯಾಗುತ್ತದೆ. ಕೆಲವರಿಗೆ ತುಂಬಾ ವೇಗವಾಗಿ ಹೆರಿಯಾಗುವುದು. ಕೆಲವರಿಗೆ ಅನಿರೀಕ್ಷಿತವಾಗಿ ವೇಗ ಹಾಗೂ ಹೆಚ್ಚಿನ ಶ್ರಮವಿಲ್ಲದೆ ಹೆರಿಗೆಯಾಗುತ್ತದೆ. ಹೆರಿಗೆ ಬಳಿಕ ಕಂಡುಬರುವ ಸಾಮಾನ್ಯ ಸಮಸ್ಯೆಗಳು
ಇದು ತುಂಬಾ ಸಮಾಧಾನವನ್ನು ನೀಡುವುದು. ಕೈ ಹಾಗೂ ಕಾಲುಗಳಲ್ಲಿ ನಿಶ್ಚೇಷ್ಟಿತ ಸಂವೇದನೆ ಕಂಡುಬಂದರೆ ತಕ್ಷಣ ವೈದ್ಯರನ್ನು ಕರೆಸಬೇಕು. ಯಾಕೆಂದರೆ ಇದು ತುಂಬಾ ಗಂಭೀರ ವಿಷಯ ಮತ್ತು ವೈದ್ಯರಿಂದ ಸಲಹೆ ಪಡೆಯುವುದು ಅತ್ಯಗತ್ಯ. ಹೆರಿಗೆಯ ನಂತರದ ಲೈಂಗಿಕ ಕ್ರಿಯೆ ಸುರಕ್ಷಿತವೇ?



Click it and Unblock the Notifications


