For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ, ತುಪ್ಪದ ಡಬ್ಬಿಯನ್ನು ಪಕ್ಕಕ್ಕೆ ಸರಿಸಿ..!

By Jaya subramanya
|

ಆಲೀವ್ ಆಯಿಲ್ ನಂತರ ಹೆಚ್ಚು ಪೋಷಕಾಂಶ ಮತ್ತು ನ್ಯೂಟ್ರೀನ್ ಭರಿತವಾಗಿ ತುಪ್ಪವು ಸ್ಥಾನ ಪಡೆದುಕೊಂಡಿದ್ದು ತರಕಾರಿ ಎಣ್ಣೆಗಳಿಗಿಂತ ಉತ್ತಮವಾದುದು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ಮಿತಿಮೀರಿದಾಗ ಅಮೃತವೂ ವಿಷವಾಗುತ್ತದೆ ಎಂಬ ಮಾತಿನಂತೆ ತುಪ್ಪದ ಹೆಚ್ಚುವರಿ ಬಳಕೆಯು ದೇಹಕ್ಕೆ ಅಷ್ಟೊಂದು ಹಿತಕಾರಿಯಲ್ಲ. ಅದರಲ್ಲೂ ಹೆರಿಗೆಯ ನಂತರ ತಾಯಿಯು ತುಪ್ಪವನ್ನು ಸೇವಿಸುವುದು ದೇಹಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು.

Is Ghee Healthy For Mothers Post Delivery?

ಆದರೆ ಸ್ತ್ರೀರೋಗ ತಜ್ಞರು ಹೇಳುವಂತೆ ಹೊಸ ತಾಯಂದಿರು ಒಂದು ಚಮಚ ತುಪ್ಪವನ್ನು ತಮ್ಮ ನಿತ್ಯ ಆಹಾರದಲ್ಲಿ ಬಳಸಿಕೊಳ್ಳಬಹುದು ಎಂದಾಗಿದೆ. ಇನ್ನು ಹಿಂದಿನ ಕಾಲದಲ್ಲಿ ಮನೆಯಲ್ಲಿದ್ದ ಹಿರಿಯರು ನೂತನ ತಾಯಿಗೆ ತುಪ್ಪವನ್ನು ಸೇವಿಸಲು ಸಲಹೆ ನೀಡುತ್ತಿದ್ದರು ಇದರಿಂದ ದುರ್ಬಲವಾಗಿರುವ ಕೀಲುಗಳು ಬಲಿಷ್ಠಗೊಂಡು ಚಲನೆಗೆ ಸಹಕಾರವನ್ನುಂಟು ಮಾಡುತ್ತದೆ ಎಂಬ ನಂಬಿಕೆ ಇದರ ಹಿಂದಿತ್ತು.

ತುಪ್ಪವನ್ನು ಸೇವಿಸುವುದರಿಂದ ದೇಹದ ಗಾಯಗಳು ಆದಷ್ಟು ಬೇಗನೇ ಮಾಯುತ್ತದೆ ಎಂಬುದು ಹಿರಿಯವರ ನಂಬಿಕೆಯಾಗಿದೆ. ಇನ್ನು ಹೆರಿಗೆಯ ನಂತರ ತಾಯಿಗೆ ಹಾಲಿನ ಉತ್ಪಾದನೆಯಲ್ಲಿ ತುಪ್ಪವು ಸಹಕಾರಿ ಎಂಬ ಮಾತೂ ಇರುವುದರಿಂದ ತುಪ್ಪವನ್ನು ಊಟದಲ್ಲಿ ತಾಯಿಗೆ ನೀಡಲಾಗುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ತುಪ್ಪದ ಕುರಿತಾದ ಕೆಲವೊಂದು ಮಹತ್ವಕಾರಿ ಸಂಗತಿಗಳನ್ನು ಅರಿತುಕೊಳ್ಳೋಣ ಮತ್ತು ನೂತನ ತಾಯಿಗೆ ಇದು ಹೇಗೆ ಸಹಕಾರಿ ಎಂಬ ಅಂಶವನ್ನು ತಿಳಿಯೋಣ.

ಹೆರಿಗೆಯ ನಂತರ ತಾಯಿಯ ಕೀಲುಗಳು ದುರ್ಬಲಗೊಳ್ಳುತ್ತವೆ, ಕಡಿಮೆ ನಯವಾಗಿಸುವಿಕೆಯನ್ನು ಇದು ಹೊಂದುತ್ತದೆ. ಹೆರಿಗೆಯ ಸಮಯದಲ್ಲಿ ತಾಯಿಯ ದೇಹವು ರಿಲಾಕ್ಸಿನ್ ಎಂಬ ಹೆಸರಿನ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ, ಇದು ತಾಯಿಯ ಎಲ್ಲಾ ಸ್ನಾಯುಗಳನ್ನು ಸಡಿಲಗೊಳಿಸಿ ಹೆರಿಗೆಗೆ ಅನುವು ಮಾಡಿಕೊಡುತ್ತದೆ. ಈ ಹಾರ್ಮೋನು ಕೀಲುಗಳು ಮತ್ತು ಕೀಲುಗಳ ಸ್ನಾಯುಗಳನ್ನು ಸಡಿಲಗೊಳಿಸಿ ಕೀಲುಗಳು ದುರ್ಬಲಗೊಂಡಿವೆ ಎಂಬ ಭಾವನೆಯನ್ನು ಉಂಟುಮಾಡಬಹುದು. ಅದಾಗ್ಯೂ ಕೆಲವು ವಾರಗಳ ನಂತರ, ರಿಲಾಕ್ಸಿನ್ ಹಾರ್ಮೋನು ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ಮಹಿಳೆಯನ್ನು ಹಿಂದಿನಂತೆ ಸಾಮಾನ್ಯ ಸ್ಥಿತಿಗೆ ತರುತ್ತದೆ. ಈ ಸಂದರ್ಭದಲ್ಲಿ ತುಪ್ಪವು ಕೀಲುಗಳನ್ನು ಬಲಪಡಿಸಲು ಸಹಕಾರಿಯಾಗಿರುತ್ತದೆ.

ಗರ್ಭಾವಸ್ಥೆಯ ನಂತರ ನಿಮ್ಮ ಮೂಳೆಗಳು ತುಂಬಾ ದುರ್ಬಲಗೊಂಡಿವೆ ಎಂದು ವೈದ್ಯರು ತಿಳಿಸಿದಲ್ಲಿ, ಕ್ಯಾಲ್ಶಿಯಮ್ ಹೆಚ್ಚಿರುವ ಆಹಾರಗಳನ್ನು ನೀವು ಸೇವಿಸಲೇಬೇಕು. ಆರೋಗ್ಯಕರ ಆಹಾರಗಳನ್ನು ನೀವು ಸೇವಿಸುವುದರಿಂದ ನಿಮ್ಮನ್ನು ಇದು ಆರೋಗ್ಯಕರವಾಗಿ ಇರಿಸುವುದಲ್ಲದೆ ತುಪ್ಪಕ್ಕಿಂತಲೂ ಮಿಗಿಲಾದ ಆಯ್ಕೆ ಎಂದೆನಿಸಿದೆ. ಹೆರಿಗೆಯ ನಂತರ ತಾಯಿಯು ಹೆಚ್ಚು ತುಪ್ಪ ತಿಂದಲ್ಲಿ ಹೆರಿಗೆಯ ನಂತರ ಸಂಭವಿಸಬಹುದಾದ ಮೂರು ಗುರುತರ ಅಪಾಯಗಳನ್ನು ಎದುರಿಸಬೇಕಾದ ಸಂಭವವಿರುತ್ತದೆ.

ಬೊಜ್ಜು, ಹೃದಯ ಕಾಯಿಲೆಗಳು ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ ಇದು ಹೃದಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಹೆರಿಗೆಯ ನಂತರ ತುಪ್ಪವನ್ನು ನೀವು ಬಳಸಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಲೇಬೇಕು. ಶೋಧಿಸಿದ ಬೆಣ್ಣೆಯಾಗಿರುವ ತುಪ್ಪವು ಕೊಬ್ಬಿನ ಮೂಲ ಎಂದೆನಿಸಿದೆ. ಈ ರುಚಿಕರ ಆಹಾರ ಪದಾರ್ಥವನ್ನು ಗರ್ಭಿಣಿ ಸ್ತ್ರೀಯರ ಡಯೆಟ್‎ನಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಮತ್ತು ಗರ್ಭಾವಸ್ಥೆಯ ಸಂದರ್ಭದಲ್ಲಿ ನಿಮ್ಮನ್ನು ಬಲಯುತಗೊಳಿಸಿ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ತುಪ್ಪವನ್ನು ಸೇವಿಸಬೇಕಾದ ನಾಲ್ಕು ಕಾರಣಗಳು
*ತಲೆನೋವು ಮತ್ತು ಮೈಗ್ರೇನ್ ಸಂಬಂಧಿತ ನೋವನ್ನು ನಿವಾರಿಸಲು ತುಪ್ಪವು ಸಹಕಾರಿಯಾಗಿದೆ.
*ತ್ವಚೆಗೆ ಅತ್ಯುತ್ತಮ ಎಂದೆನಿಸಿರುವ ತುಪ್ಪವು ದೇಹದಲ್ಲಿ ಉರಿಯೂತವನ್ನು ನಿವಾರಿಸುತ್ತದೆ.
*ತುಪ್ಪವನ್ನು ನೀವು ಸೇವಿಸಿದಾಗ, ಗರ್ಭಿಣಿ ಸ್ತ್ರೀಯರಲ್ಲಿ ಇದು ಚಯಾಪಚಯವನ್ನು ಹೆಚ್ಚಿಸುತ್ತದೆ, ಇದರಿಂದ ಆಕೆ ಹೆಚ್ಚು ಸುಸ್ತಾಗುವುದು ತಪ್ಪುತ್ತದೆ. ಇನ್ನು ಹೊಟ್ಟೆಯ ಕಾಯಿಲೆಗಳಿಗೂ ತುಪ್ಪವು ಉತ್ತಮ ಔಷಧವಾಗಿದ್ದು ಗರ್ಭಾವಸ್ಥೆಯಲ್ಲಿ ಸ್ತ್ರೀಯರನ್ನು ಕಾಡುವ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

English summary

Is Ghee Healthy For Mothers Post Delivery?

Ghee is considered to be better than vegetable oil. Ranked among the healthiest and most nutritious one after olive oil, ghee should be added to every meal that you consume every day. However, too much of this saturated butter can be harmful, especially after delivery.So, how is ghee useful for a new mother? Here are some of the facts that you should know if you've recently been blessed with motherhood:
Story first published: Wednesday, March 23, 2016, 20:15 [IST]
X
Desktop Bottom Promotion