For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಹೆಚ್ಚಿದ ಮೈ ತೂಕ ಕಮ್ಮಿಮಾಡಬೇಕೆ?

|

ಹೆರಿಗೆಯ ನಂತರ ಬಹುತೇಕ ಮಹಿಳೆಯರ ಮೈತೂಕ ಹೆಚ್ಚುವುದು. ಹಾರ್ಮೋನ್ ಗಳ ವ್ಯತ್ಯಾಸ ಮತ್ತು ಬಾಣಂತಿ ಸಮಯದಲ್ಲಿ ದೊರೆಯುವ ವಿಶೇಷ ಪೋಷಣೆಯಿಂದಾಗಿ ಮೈ ತೂಕ ಹೆಚ್ಚುವುದು. ಹೆರಿಗೆಯ ಬಳಿಕ 3 ತಿಂಗಳವರೆಗೆ ದೈಹಿಕ ಶ್ರಮದ ಯಾವುದೇ ಕೆಲಸವಾಗಲಿ, ವ್ಯಾಯಾಮವಾಗಲಿ ಮಾಡದೆ ದೇಹದ ಆರೈಕೆ ಮಾಡಬೇಕು. ಈ ಸಮಯದಲ್ಲಿ ಮೈ ತೂಕ ಹೆಚ್ಚುವುದು ಸಹಜ.

ಹೀಗೆ ಮೈ ತೂಕ ಹೆಚ್ಚಾದರೆ ಹೆಚ್ಚಿನವರು ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ. ಕ್ರಾಷ್ ಡಯಟ್ ಮಾಡಲಾರಂಭಿಸುತ್ತಾರೆ. ಆದರೆ ನೆನಪಿಡಿ, ಮಗುವಿಗೆ ಎದೆ ಹಾಲು ಕೊಡುತ್ತಿರುವ ಸಮಯದಲ್ಲಿ ಕ್ರಾಷ್ ಡಯಟ್ ಮಾಡುವುದು ನಿಮಗೂ, ನಿಮ್ಮ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ.

ಮೈ ತೂಕ ಹೆಚ್ಚಾಗಿದೆ ಎಂಬ ಚಿಂತೆ ಬಿಡಿ, ಈ ಕೆಳಗಿನ ಟಿಪ್ಸ್ ಪಾಲಿಸಿ ತೆಳ್ಳಗಿನ ಮೈ ಮಾಟ ನಿಮ್ಮದಾಗುವುದು:

ಆಹಾರಕ್ರಮ

ಆಹಾರಕ್ರಮ

ಕ್ರಾಷ್ ಡಯಟ್ ಮಾಡಬೇಡಿ, ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ಸ್ ಇರುವ ಆಹಾರವನ್ನು ತಿನ್ನಿ, ಹಾಲಿನ ಉತ್ಪನ್ನಗಳನ್ನು ಸೇವಿಸಿ. ಆಹಾರದಲ್ಲಿ ಪೋಷಕಾಂಶಗಳ ಸಮತೋಲನ ಕಾಪಾಡಿದರೆ ಆರೋಗ್ಯ ವೃದ್ಧಿಸುವುದು, ಸಮತೂಕದ ಮೈ ತೂಕ ನಿಮ್ಮದಾಗುವುದು.

ವ್ಯಾಯಾಮ

ವ್ಯಾಯಾಮ

ನಾರ್ಮಲ್ ಡೆಲಿವರಿ ಆದವರು 3 ತಿಂಗಳ ಬಳಿಕ, ಸಿಸೇರಿಯನ್ ಆದವರು 6 ತಿಂಗಳ ಬಳಿಕ ಮೆಲ್ಲನೆ ಲಘುವಾದ ವ್ಯಾಯಾಮ ಮಾಡಲು ಪ್ರಾರಂಭಿಸಬೇಕು.

ಕ್ಯಾಲೋರಿ ಗಮನದಲ್ಲಿರಲಿ

ಕ್ಯಾಲೋರಿ ಗಮನದಲ್ಲಿರಲಿ

ಅಧಿಕ ಕ್ಯಾಲೋರಿ ಇರುವ ಆಹಾರಗಳನ್ನು ತಿನ್ನುವ ಬದಲು ಅಧಿಕ ಪೋಷಕಾಂಶಗಳಿರುವ ಆಹಾರವನ್ನು ತಿನ್ನುವುದು ಒಳ್ಳೆಯದು.

ಎದೆ ಹಾಲು

ಎದೆ ಹಾಲು

ಮಗುವಿಗೆ ಎದೆ ಹಾಲು ಕೊಡುವುದರಿಂದ ಮಗುವಿಗೆ ಅಗತ್ಯವಾದ ಪೋಷಕಾಂಶ ದೊರೆಯುವುದು, ಎದೆ ಹಾಲುಣಿಸುವುದು ತಾಯಿಗೂ ಪ್ರಯೋಜನಕಾರಿ- ಮೈ ತೂಕವನ್ನು ಕಮ್ಮಿ ಮಾಡುತ್ತದೆ, ಸ್ತನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ವಿಶ್ರಾಂತಿ

ವಿಶ್ರಾಂತಿ

ಹೆರಿಗೆಯ ಬಳಿಕ ಮಗುವನ್ನು ನೋಡಿಕೊಳ್ಳುವಾಗ ತಾಯಿಗೆ ವಿಶ್ರಾಂತಿಯೇ ದೊರೆಯುವುದಿಲ್ಲ, ಮಗು ನಿದ್ದೆ ಮಾಡಿದಾಗ ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ, ಯೋಗ ಮಾಡಿ, ಮಾನಸಿಕ ಒತ್ತಡ ಕಡಿಮೆಯಾಗುವುದು.

ನೀರು ಕುಡಿಯುವುದು

ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯಬೇಕು, ಅದರಲ್ಲೂ ಊಟದ ಬಳಿಕ ಬಿಸಿ ನೀರು ಕುಡಿಯುವ ಅಭ್ಯಾಸ ಹೊಟ್ಟೆ ಕರಗಲು ಒಳ್ಳೆಯದು. ಬೆಳಗ್ಗೆ ಬಿಸಿ ನೀರಿಗೆ ಜೇನು ಮತ್ತು ನಿಂಬೆ ರಸ ಹಾಕಿ ಕುಡಿದರೆ ಮತ್ತಷ್ಟು ಒಳ್ಳೆಯದು.

 ಮೈ ತೂಕ ಕಮ್ಮಿ ಮಾಡುವತ್ತ ಪ್ರಯತ್ನ

ಮೈ ತೂಕ ಕಮ್ಮಿ ಮಾಡುವತ್ತ ಪ್ರಯತ್ನ

ಬೆಳಗ್ಗೆ ಮತ್ತು ಸಂಜೆ ವಾಕ್ ಹೋಗುವುದು, ವ್ಯಾಯಾಮ ಇವೆಲ್ಲಾ ಮೈ ತೂಕವನ್ನು ಕಮ್ಮಿ ಮಾಡುವಲ್ಲಿ ಸಹಕಾರಿಯಾಗಿದೆ.

ತಾಳ್ಮೆ

ತಾಳ್ಮೆ

ಮೈ ತೂಕವನ್ನು ಕಮ್ಮಿ ಮಾಡಬೇಕು ಎಂದು ನೀವು ಬಯಸುವುದಾದರೆ ತಾಳ್ಮೆಯಿಂದ ಇರಿ. ಬೇಗನೆ ಮೈ ತೂಕ ಕಮ್ಮಿಯಾಗಬೇಕೆಂದು ಮಾತ್ರೆ ತೆಗೆದುಕೊಳ್ಳುವುದು, ಆಹಾರ ಬಿಡುವುದು ಮಾಡಬಾರದು. ಆರೋಗ್ಯಕರವಾಗಿ ಪ್ರಯತ್ನಿಸಿದರೆ ಮಾತ್ರ ತೆಳ್ಳಗಾಗಿ, ಆರೋಗ್ಯಕರವಾಗಿ ಇರಲು ಸಾಧ್ಯ.

English summary

Tips To Get Back In Shape After Pregnancy

If you want to reduce postnatal weight just wait before rushing into such rash decisions. Here are some easy and effective ways to get back in shape after pregnancy.
 
 
X
Desktop Bottom Promotion