For Quick Alerts
ALLOW NOTIFICATIONS  
For Daily Alerts

ಮಗು ಒಂಟಿಯಾಗಿ ಮಲಗಬೇಕೆ? ಈ ಸಲಹೆಗಳನ್ನು ಪಾಲಿಸಿ

ಮಗುವಿನ ಆರೈಕೆ, ಪೋಷಣೆ ಒಂದು ಕಲೆ. ಮಗುವನ್ನು ನಿಯಮಿತ ಸಮಯಕ್ಕೆ ಕಿರಕಿರಿ ಇಲ್ಲದೆ ಮಲಗಿಸುವುದು, ನಿದ್ರೆಯ ಮಧ್ಯೆ ಏಳದಂತೆ ತಡೆಯುವುದು, ಮಗು ಒಂಟಿಯಾಗಿ ಮಲಗಲು ಅಭ್ಯಾಸ ಮಾಡಿಸುವುದು ಇಂದಿನ ದಿನಗಳಲ್ಲಿ ತಾಯಂದಿರಿಗೆ ತ್ರಾಸದಾಯಕ ಎನಿಸದಿರದು. ಅದ

|

ಮಗು ಹಾಗೂ ತಾಯಿಯ ಬಾಂಧವ್ಯ ವರ್ಣಿಸಲಸಾಧ್ಯ, ಎಷ್ಟೇ ದೂರವಿದ್ದರೂ ಸಂಬಂಧದ ಕೊಂಡಿ ಸದಾ ಜೊತೆಯಲ್ಲೇ ಇರುವಂತೆ ಭಾಸವಾಗುತ್ತದೆ. ಮಗು ಎಂದಿಗೂ ತಾಯಿಗೆ ಭಾರವಾಗದು, ಹಾಗೆಂದು ಮಗುವನ್ನು ತೀರಾ ಎದೆಗವಿಚಿಕೊಂಡು ಪೋಷಿಸಿದರೂ ಸಮಸ್ಯೆ ಕಟ್ಟಿಟ್ಟಬುತ್ತಿ.

ಇತ್ತೀಚೆಗಂತೂ ಬಹುತೇಕ ಮಹಿಳೆಯರು ಉದ್ಯೋಗಿಗಳಾಗಿದ್ದು, ಇಷ್ಟವಿಲ್ಲದಿದ್ದರೂ ಮಗುವಿನ ಆರೈಕೆ ಕೇವಲ ತಿಂಗಳುಗಳಿಗಷ್ಟೇ ಸೀಮಿತಗೊಳಿಸಬೇಕಾಗುತ್ತದೆ. ಕೆಲವು ತಿಂಗಳ ಬಳಿಕ ಮಗುವನ್ನು ಬಿಟ್ಟು ತಾಯಿ ಕೆಲಸಗಳಿಗೆ ತೆರಳಬೇಕಿರುತ್ತದೆ, ಈ ವೇಳೆ ಮಗು ತಾಯಿಯನ್ನು ಬಿಟ್ಟು ಮಲಗುವುದಕ್ಕೆ ಸಾಕಷ್ಟು ಕಿರಿಕಿರಿ ಮಾಡುತ್ತದೆ. ಆದ್ದರಿಂದ ಆರು ತಿಂಗಳ ಬಳಿಕ ಮಗು ಒಂಟಿಯಾಗಿ ಮಲಗಲು ಅಭ್ಯಾಸ ಮಾಡಿಸುವುದು ಒಳಿತು. ಇದರಿಂದ ಮಗು ಸಹ ಸ್ವಂತಂತ್ರವಾಗಿ, ಧೈರ್ಯವಾಗಿ ಬೆಳೆಯುವುದನ್ನು ಕಲಿಯುತ್ತದೆ.

Mske Baby sleep alone

ಈ ಸಲುವಾಗಿ ನೀವು ಈಗಾಗಲೇ ಸಾಕಷ್ಟು ಪ್ರಯತ್ನಿಸಿ ಬೇಸತ್ತಿದ್ದರೆ ಇನ್ನು ಮುಂದೆ ಈ ಸಲಹೆಗಳನ್ನು ಪಾಲಿಸಿ. ಮಕ್ಕಳನ್ನು ಒಂಟಿಯಾಗಿ ಮಲಗಿಸುವ ಬಗ್ಗೆ, ಮಗುವಿಗೆ ನಿರ್ದಿಷ್ಟ ನಿದ್ರೆಯ ಸಮಯವನ್ನು ನಿಗದಿ ಮಾಡುವುದು ಹೇಗೆ? ಕುರಿತ ವಿವಿಧ ಸಲಹೆಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಉತ್ತಮ ಸ್ಥಳ ಆಯ್ಕೆ

ಉತ್ತಮ ಸ್ಥಳ ಆಯ್ಕೆ

ಮಗು ಮಲಗಲು ಉತ್ತಮ ಬೆಳಕು, ಗಾಳಿ ಬರುವಂಥ ಸ್ವಚ್ಛ ಸ್ಥಳ ಆಯ್ಕೆ ಮಾಡಿ. ತೊಟ್ಟಿಲು, ಬೆಡ್ ಅಥವಾ ಪ್ರತ್ಯೇಕ ಕೋಣೆ ಯಾವುದೇ ಆಗಿರಲಿ ಮಗುವಿನ ಸುರಕ್ಷತೆಗೆ ಆದ್ಯತೆ ನೀಡಿ. ಮಗುವಿನ ಬೇಡಿಕೆಯನ್ನು ಸಹ ಆಲಿಸಿ, ಮಗು ಯಾವ ಸ್ಥಳದಲ್ಲಿ ಚೆನ್ನಾಗಿ ನಿದ್ರಿಸುತ್ತದೆ ಅರಿತು ಸ್ಥಳ ಬದಲಾಯಿಸಿ.

ನಿದ್ರೆಯ ಸಮಯ ನಿಗದಿ ಮಾಡಿ

ನಿದ್ರೆಯ ಸಮಯ ನಿಗದಿ ಮಾಡಿ

ಮಗು ನಿತ್ಯ ಮಲಗುವ ಸಮಯವನ್ನು ನಿಗದಿ ಮಾಡಿ ಆ ಸಮಯದಲ್ಲೇ ಮಲಗಿಸಿ. ಈ ಮೂಲಕ ಮಗು ನಿತ್ಯ ಯಾವ ಸಮಯಕ್ಕೆ ಮಲಗಬೇಕು ಎಂಬುದನ್ನು ದಿನದಿಂದ ದಿನಕ್ಕೆ ಪರೋಕ್ಷವಾಗಿ ಕಲಿಯುತ್ತದೆ. ಮಗು ಮಲಗಲು ಜೋಗುಳ ಅಥವಾ ಸನ್ನೆಗಳನ್ನು ಅಭ್ಯಾಸ ಮಾಡಿಸಿ, ಇದು ಸಹ ಸುಲಭವಾಗಿ ಮಲಗಲು ಹಾಗೂ ಮಗು ಸ್ವತಃ ಇದು ಮಲಗುವ ಸಮಯ ಎಂದು ಅರಿಯಲು ಸಹಾಯಕವಾಗುತ್ತದೆ.

ಕಿರುನಿದ್ರೆ

ಕಿರುನಿದ್ರೆ

ಮಕ್ಕಳು ಕಿರುನಿದ್ರೆಗೆ ಜಾರಲು ಅಥವಾ ಏಳಲು ಸೂಕ್ತ ಅಭ್ಯಾಸಗಳನ್ನು ಮಾಡಿಸಿ. ಬಿಸಿ ನೀರಿನ ಸ್ನಾನ, ಡೈಪರ್ ಬದಲಾವಣೆಯಂಥ ಸಣ್ಣ ಸಂಕೇತಗಳ ಮೂಲಕ ಮಕ್ಕಳ ಕಿರುನಿದ್ರೆಗೆ ಸನ್ನೆ ನೀಡಬಹುದು. ನಿತ್ಯ ಇದೇ ಅಭ್ಯಾಸವಾದರೆ ಕೆಲವು ದಿನಗಳ ಬಳಿಕ ಮಗು ತನಗೆ ತಾನೇ ಮಲಗಿ ಏಳುತ್ತದೆ.

ಹಿತಕರ ಉಡುಗೆ

ಹಿತಕರ ಉಡುಗೆ

ಮಕ್ಕಳಿಗೆ ಕಿರಿಕಿರಿ ಎನಿಸದಂಥಹ ಹಿತಕರ ಉಡುಗೆಯನ್ನೇ ಹಾಕಿ. ಬಿಗಿಯಾದ, ತ್ರಾಸ ಎನಿಸುವ ಉಡುಗೆಯಿಂದಾಗಿ ಮಗುವಿನ ನಿದ್ರೆಗೆ ಸಮಸ್ಯೆಯಾಗಬಹುದು. ಮಕ್ಕಳ ಬಟ್ಟೆಗಳು ಮೆತ್ತಗೆ ಇದ್ದರೆ ಸುಖಕರವಾಗಿ ನಿದ್ರಿಸುತ್ತದೆ.

ಮಗುವಿಗೆ ಹಸಿವಾಗದಂತಿರಲಿ

ಮಗುವಿಗೆ ಹಸಿವಾಗದಂತಿರಲಿ

ಮಗು ಮಲಗುವ ಮುನ್ನ ಉತ್ತಮ ಪೌಷ್ಠಿಕಾಂಶ ನೀಡಿ, ಅರೆಬರೆ ಆಹಾರದಿಂದಾಗಿ ಮಗುವಿಗೆ ಹಸಿವಾದರೆ ಮಧ್ಯರಾತ್ರಿಯಲ್ಲಿಯೇ ಎಳಬಹುದು. ಹಾಗೆಂದ ಮಾತ್ರಕ್ಕೆ ಅತಿಯಾದ ಆಹಾರ ನೀಡುವುದು ಸಹ ಒಳ್ಳೆಯದಲ್ಲ. ಮಗುವಿಗೆ ಅಗತ್ಯವಾದಷ್ಟು ಆಹಾರ ಮಾತ್ರ ನೀಡಿ. ನಿಮ್ಮ ಮಗು ಇನ್ನೂ ಎದೆಹಾಲು ಕುಡಿಯುತ್ತಿದ್ದರೆ ಮಲಗುವ ಮುನ್ನ ಹಾಲು ಕುಡಿಸಿ, ಮತ್ತೆ ಮಧ್ಯರಾತ್ರಿ ಎದ್ದರೆ ಆಟಿಕೆಗಳನ್ನು ನೀಡುವ ಬದಲು ಹಾಲುಣಿಸಿ ಮಲಗಿಸಿ.

ಮೂಗು ಶುಚಿಗೊಳಿಸಿ

ಮೂಗು ಶುಚಿಗೊಳಿಸಿ

ಮಗುವಿಗೆ ಶೀತವಾಗಿದ್ದರೆ ಮಲಗುವ ಮುನ್ನ ಮೂಗನ್ನು ಶುಚಿಗೊಳಿಸಿ. ಶೀತದಿಂದ ಮಗುವಿನ ಮೂಗು ಕಟ್ಟಿದ್ದರೆ ಮಲಗಲು ನಿದ್ದೆ ಮಾಡದೇ ದಿನವಿಡೀ ಅಳುತ್ತದೆ. ಬಾಯಿಯಿಂದ ಉಸಿರಾಡುವುದನ್ನು ತಪ್ಪಿಸಿ, ಇದರಿಂದ ಮಗುವಿಗೆ ಸುಲಭವಾಗಿ ಸೋಂಕು ತಗುಲಬಹುದು.

ಮಲಗಲು ವಾತಾವರಣ ಸೃಷ್ಟಿಸಿ

ಮಲಗಲು ವಾತಾವರಣ ಸೃಷ್ಟಿಸಿ

ಮಗು ಮಲಗಲು ಶಾಂತಿಯುತ ವಾತಾವರಣ ಸೃಷ್ಟಿಸಿ, ಸಣ್ಣ ಧ್ವನಿ ಸಹ ಮಲಗಿರುವ ಮಗುವನ್ನು ಎಚ್ಚರಗೊಳಿಸುತ್ತದೆ. ಟಿವಿ, ರೇಡಿಯೋದಂಥ ಯಾವುದೇ ಶಬ್ದ ಮಗುವಿನ ನಿದ್ರೆಗೆ ಭಂಗ ತರದಂತೆ ನೋಡಿಕೊಳ್ಳಿ. ಮಗು ಬೆಳೆದಂತೆ ಎಂಥಹ ಸದ್ದಿನ ನಡುವೆಯೂ ಮಲಗುವುದನ್ನು ತಾನೇ ಅಭ್ಯಾಸ ಮಾಡಿಕೊಳ್ಳುತ್ತದೆ.

ಆಲಿಸಲು ಸಂಗೀತವಿರಲಿ

ಆಲಿಸಲು ಸಂಗೀತವಿರಲಿ

ಮಗು ತಾಯಿಯ ಹೊಟ್ಟೆಯಲ್ಲಿರುವಾಗಲೇ ಸಂಗೀತಕ್ಕೆ ಪ್ರತಿಕ್ರಿಯಿಸಲು ಆರಂಭಿಸುತ್ತದೆ, ಆಂತೆಯೇ ಮಗು ಜನ್ಮ ಪಡೆದ ನಂತರವೂ ಸಂಗೀತವನ್ನು ಇಷ್ಟಪಡುತ್ತದೆ. ಆದ್ದರಿಂದ ಮಲಗುವ ವೇಳೆ ಸುಮಧುರ ಸಂಗೀತವಿದ್ದರೆ ಬೇಗ ನಿದ್ರೆಗೆ ಜಾರುತ್ತದೆ. ನೆನಪಿರಲಿ ಸಂಗೀತ ಸಣ್ಣ ಧ್ವನಿಯಲ್ಲಿರಬೇಕು ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳುವಂತಿರಬೇಕು.

ಬೆಚ್ಚನೆ ಹೊದಿಕೆ ಇರಲಿ

ಬೆಚ್ಚನೆ ಹೊದಿಕೆ ಇರಲಿ

ಮಗು ತಾಯಿಯ ಮಡಿಲಿನಲ್ಲಿ ಬೆಚ್ಚಗೆ ಮಲಗುವುದಕ್ಕೂ, ಹೊರಗೆ ಮಲಗುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ತಾಯಿಯ ಮಡಿಲು, ಆಕೆಯ ತೋಳಿನ ಬೆಚ್ಚಗಿನ ಶಾಖ ಮಗುವನ್ನು ಮಲಗುವಂತೆ ಪ್ರೇರೆಪಿಸುತ್ತದೆ. ಅಂತೆಯೇ ಮಗು ತಾಯಿಯಿಂದ ದೂರ ಮಲಗಲು ಸಹ ಅಷ್ಟೇ ಬೆಚ್ಚನೆಯ ವಾತಾವರಣ ಕಲ್ಪಿಸಬೇಕು. ಉತ್ತಮವಾದ, ಮೆದುವಾದ ಹೊದಿಕೆ ಮಗುವನ್ನು ಬೆಚ್ಚಗಿರಿಸಬೇಕು. ತಾಯಿಯ ಮಡಿಲಿನಷ್ಟೇ ಬೆಚ್ಚನೆಯನ್ನು ಕೃತಕವಾಗಿ ಮಾಡಬೇಕು, ತಾಯಿ ಸಮೀಪದಲ್ಲೇ ಇದ್ದಾರೆ ಎಂಬಂತೆ ಮಗುವಿಗೆ ಭಾಸವಾಗಬೇಕು, ಅಭದ್ರತೆ ಕಾಡಬಾರದು.

ಮಗುವಿನ ನೆಮ್ಮದಿ ಕಾಪಾಡಿ

ಮಗುವಿನ ನೆಮ್ಮದಿ ಕಾಪಾಡಿ

ಮಗು ಇಡೀ ದಿನ ಶಾಂತಿಯುತವಾಗಿ, ನೆಮ್ಮದಿಯಾಗಿರುವಂತೆ ನೋಡಿಕೊಳ್ಳಿ. ಇಡೀ ದಿನ ಮಗು ಚಟುವಟಿಕೆಯಿಂದ, ಲವಲವಿಕೆಯಿಂದ ಇದ್ದರೆ ರಾತ್ರಿ ಊಟದ ನಂತರ ಸುಲಭವಾಗಿ ನಿದ್ರೆಗೆ ಜಾರುತ್ತದೆ. ಹಗಲಲ್ಲಿ ಹೆಚ್ಚಿನ ಸಮಯ ನಿದ್ದೆ ಮಾಡದಂತೆ ಸಹ ಎಚ್ಚರವಹಿಸಿ, ಹಗಲಲ್ಲಿ ಹೆಚ್ಚು ನಿದ್ದೆ ಮಾಡಿದರೆ ರಾತ್ರಿ ಬೇಗ ಮಲಗಲು ಹಠ ಮಾಡಬಹುದು.

ಮಗುವಿನ ನಿದ್ದೆಗೆ ಜೊತೆಯಾಗಿ

ಮಗುವಿನ ನಿದ್ದೆಗೆ ಜೊತೆಯಾಗಿ

ಮಗು ಒಂದೇ ಮಲಗಲು ಸಾಮಾನ್ಯ ಬೇಸರಿಸುತ್ತದೆ. ಅಲ್ಲದೇ ನಿಮ್ಮ ಮಡಿಲು ಅಥವಾ ತೋಳಿನಲ್ಲಿ ಮಲಗುವ ಅಭ್ಯಾಸದ ಬದಲು ನೀವು ಸಹ ಕೊಂಚ ಸಮಯ ಮಗುವಿನ ಹೊತೆಯಾಗಿ ಮಲಗಿ. ತನ್ನ ಜೊತೆ ತಾಯಿ ಇದ್ದಾಳೆ ಎಂಬ ಅಭಯ ಮಗು ಬಯಸುತ್ತದೆ. ಆರಂಭಿಕ ದಿನಗಳಲ್ಲಿ ಇದು ಅಭ್ಯಾಸವಾದರೆ ನಂತರ ಮಗು ಏಕಾಂಗಿಯಾಗಿ ಸಹ ಮಲಗುತ್ತದೆ.

ಇಷ್ಟೆಲ್ಲಾ ಸಲಹೆಗಳ ಹೊರತಾಗಿಯೂ ನಿಮ್ಮ ಮಗು ರಾತ್ರಿಯಿಡೀ ಎದೆಹಾಲು ಕುಡಿಯುವ, ಎದೆ ಚೀಪುವ, ಬಾಯಿ ತೆರೆದು ಮಲಗುವ, ನಿದ್ದೆಯಲ್ಲಿ ಮಾತಾಡುವ ಅಭ್ಯಾಸಗಳಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

Read more about: health fitness parenting baby
English summary

How To Make Baby sleep alone

Parenting is an Art. Managing babies is a very difficult task, especially when it comes to helping them adopt the right sleeping pattern and habits. You must have tried a lot of things and nothing might seem to work. But, don't worry. You can follow these simple tips to make your baby sleep alone. Tips To Make Your Baby Sleep Alone here are Few tips.
X
Desktop Bottom Promotion