For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಆಂಟಿ ಬಯೋಟಿಕ್ಸ್ ಕೊಡುವುದು ಸರಿಯೇ? ಇದರ ಅಡ್ಡಪರಿಣಾಮಗಳೇನು?

|

ಮಕ್ಕಳಿಗೆ ಅನಾರೋಗ್ಯವಾದರೆ ಪೋಷಕರು ಗಾಬರಿಯಾಗುವುದು ಸರ್ವೇಸಾಮಾನ್ಯ. ಯಾಕೆಂದರೆ ಮಕ್ಕಳಿಗೆ ಏನಾಗುತ್ತಿದೆ ಎಂದು ಹೇಳಲು ಬರುವುದಿಲ್ಲ ಹೀಗಾಗಿ ಮಕ್ಕಳಿಗೆ ಅನಾರೋಗ್ಯ ಉಂಟಾದರೆ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಒಳ್ಳೆಯದು. ಇನ್ನು ಮಕ್ಕಳಿಗೆ ನೀಡುವ ಚಿಕಿತ್ಸೆ ಬಗ್ಗೆ ಪೋಷಕರಿಗೆ ಅನೇಕ ಅನುಮಾನಗಳು ಇರುತ್ತವೆ.

Doctor explains why antibiotics are prescribed when your child is sick and if there are any side effects in kannada

ಅದರಲ್ಲೂ ಮಕ್ಕಳಿಗೆ ಯಾವ ಔಷಧಿ ಕೊಡ್ತಾರೇ? ಏಕೆ ಆಂಟಿ ಬಯೋಟಿಕ್ಸ್ ಕೊಡ್ತಾರೇ? ಎನ್ನುವ ಅನುಮಾನಗಳು ಬಹಳಷ್ಟು ಇರುತ್ತದೆ. ಈ ಬಗ್ಗೆ ಇದೀಗ ನಾವು ನಿಮಗೆ ಮಹತ್ತರದ ಮಾಹಿತಿಯನ್ನು ನೀಡುತ್ತೇವೆ.

ಮಕ್ಕಳಿಗೆ ಆಂಟಿ ಬಯೋಟಿಕ್ಸ್ ನೀಡಬಹುದೇ?

ಮಕ್ಕಳಿಗೆ ಆಂಟಿ ಬಯೋಟಿಕ್ಸ್ ನೀಡಬಹುದೇ?

ಹೌದು, ಮಕ್ಕಳಿಗೆ ಆಂಟಿ ಬಯೋಟಿಕ್ಸ್ ನೀಡುವ ಬಗ್ಗೆ ‌ಚರ್ಚೆಯಾಗುತ್ತಲೇ ಇರುತ್ತದೆ. ಇದರಿಂದ ಉಂಟಾಗುವ ಸೈಡ್ ಎಫೆಕ್ಟ್ ಬಗ್ಗೆಯೂ ಚರ್ಚೆಯಾಗುತ್ತದೆ. ಹೀಗಾಗಿ ಈ ಸ್ಟೋರಿಯಲ್ಲಿ ಪೋಷಕರಿಗೆ , ಆಂಟಿ ಬಯೋಟಿಕ್ಸ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮ, ಮಕ್ಕಳಿಗೆ ಯಾವ ರೀತಿಯ ಔಷಧ ಬಳಕೆ ಮಾಡಬೇಕು? ಯಾವಾಗ ಆಂಟಿ ಬಯೋಟಿಕ್ಸ್ ಬಳಕೆ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ.

ಬ್ಯಾಕ್ಟೀರಿಯಾದಿಂದ ಉಂಟಾದ ಸೋಂಕುಗಳಿಗೆ 99.9% ಪ್ರತಿಜೀವಕಗಳು ಅಥವಾ ಆಂಟಿ ಬಯೋಟಿಕ್ಸ್ ನೀಡಲಾಗುತ್ತದೆ. ಇನ್ನು ಅನೇಕ ಬಾರಿ ಶಿಶುವೈದ್ಯರು ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಸಾಮಾನ್ಯವಾಗಿ ಆಂಟಿ ಬಯೋಟಿಕ್ಸ್ ನೀಡಲು ಸೂಚಿಸುತ್ತಾರೆ. ಹಾಗಾದರೆ ಯಾವೆಲ್ಲ ಕಾರಣ..? ತಿಳಿಯಲು ಮುಂದೆ ಓದಿ.

1. ಆಂಟಿ ಬಯೋಟಿಕ್ಸ್ ಬಳಕೆ ಹೇಗೆ?

1. ಆಂಟಿ ಬಯೋಟಿಕ್ಸ್ ಬಳಕೆ ಹೇಗೆ?

ವೈದ್ಯರು ಕೆಲವೊಮ್ಮೆ ಪ್ರಾಯೋಗಿಕ ಆಂಟಿಮೈಕ್ರೊಬಿಯಲ್ ಚಿಕಿತ್ಸೆಯನ್ನು ಪ್ರಾರಂಭಿಸಬಹುದು, ಇದು ಸಾಂಕ್ರಾಮಿಕ ಕಾಯಿಲೆಯ ನಿರೀಕ್ಷಿತ ಮತ್ತು ಸಂಭವನೀಯ ಕಾರಣದ ವಿರುದ್ಧ ಬಳಕೆ ಮಾಡಲಾಗುತ್ತದೆ. ನಿರ್ದಿಷ್ಟ ಬ್ಯಾಕ್ಟೀರಿಯ ಅಥವಾ ಶಿಲೀಂಧ್ರವು ಸೋಂಕಿಗೆ ಕಾರಣವಾಗುವ ಮೊದಲು ಮಗುವಿಗೆ ಆಂಟಿಮೈಕ್ರೊಬಿಯಲ್ಗಳನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ, ಮಗುವಿಗೆ ರಕ್ತ ಪರೀಕ್ಷೆಯನ್ನು ಮಾಡಬೇಕಾಗಿಲ್ಲ. ಏಕೆಂದರೆ ವೈದ್ಯರು ಇತ್ತೀಚೆಗೆ ಪರೀಕ್ಷಿಸಿದ ಇತರ ರೋಗಿಗಳಲ್ಲಿ ಕಂಡುಬರುವ ಸ್ಥಾಪಿತ ಪ್ರವೃತ್ತಿಯಿಂದ ವಿಶಿಷ್ಟವಾದ ಸೋಂಕನ್ನು ಗುರುತಿಸಲು ಇದು ಸಾಧ್ಯವಾಗುತ್ತದೆ. ಹೀಗೆ ಈ ರೀತಿಯಾದ ಆಂಟಿ ಬಯೋಟಿಕ್ಸ್ ಬಳಕೆ ಮಾಡಬಹುದಾಗಿದೆ.

2. ಆಂಟಿ ಬಯೋಟಿಕ್ಸ್ ಯಾವಾಗ ನೀಡುತ್ತಾರೆ?

2. ಆಂಟಿ ಬಯೋಟಿಕ್ಸ್ ಯಾವಾಗ ನೀಡುತ್ತಾರೆ?

ನಿಮ್ಮ ಮಗುವಿನ ಮಲದಲ್ಲಿ, ಮೂತ್ರದಲ್ಲಿ ಅಥವಾ ಬ್ಲಡ್ ಕೌಂಟ್ ನಲ್ಲಿ ಕೀವು ಕೋಶಗಳಂತಹ ಬ್ಯಾಕ್ಟೀರಿಯಾದ ಸೋಂಕಿನ ಚಿಹ್ನೆಗಳು ಕಂಡುಬಂದರೆ ಈ ಸಮಯದಲ್ಲಿ ಆಂಟಿ ಬಯೋಟಿಕ್ಸ್ ನೀಡುವ ಅಗತ್ಯ ಖಂಡಿತವಾಗಿಯೂ ಇದೆ. ಅಲ್ಲದೇ ಕೆಲವು ದಿನಗಳವರೆಗೆ ತೀವ್ರತರದ ಜ್ವರ, ವೈರಲ್ ಜ್ವರಗಳು ಎರಡರಿಂದ ಮೂರು ದಿನಗಳಿಗಿಂತ ಹೆಚ್ಚು ಕಾಲ ಉಳಿದಿದ್ದರೆ. ತೀವ್ರ ತರದ ಕೆಮ್ಮು ಬ್ಯಾಕ್ಟೀರಿಯಾದಿಂದ ಬಂದಿದ್ದರೆ ಈ ವೇಳೆ ವೈದ್ಯರು ನಿರ್ದಿಷ್ಟ ಪ್ರತಿಜೀವಕದ ಪ್ರಯೋಗವನ್ನು ಮಾಡುತ್ತಾರೆ.

3. ಕಿವಿಯ ಸೋಂಕು ಅಥವಾ ಬ್ರಾಂಕೈಟಿಸ್‌ಗೂ ಆಂಟಿ ಬಯೋಟಿಕ್ಸ್

3. ಕಿವಿಯ ಸೋಂಕು ಅಥವಾ ಬ್ರಾಂಕೈಟಿಸ್‌ಗೂ ಆಂಟಿ ಬಯೋಟಿಕ್ಸ್

ನಿಮ್ಮ ಮಕ್ಕಳಿಗೆ ಕಿವಿಯ ಸೋಂಕು ಅಥವಾ ಬ್ರಾಂಕೈಟಿಸ್ ಅಥವಾ ಅಂತಹ ಯಾವುದಾದರೂ ಈ ಹಿಂದೆ ಬಂದಿದ್ದರೆ, ಅದು ವೈರಲ್ ಸೋಂಕಿನಂತೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ ವೈದ್ಯರು ಪ್ರಾಯೋಗಿಕವಾಗಿ ಪ್ರತಿಜೀವಕಗಳನ್ನು ಪ್ರಯೋಗಿಸುತ್ತಾರೆ.

4. ಪ್ರತಿಜೀವಕಗಳು ಯಾವುದೇ ಅಲ್ಪಾವಧಿಯ ಅಥವಾ ದೀರ್ಘಾವಧಿಯ ಅಡ್ಡ ಪರಿಣಾಮಗಳನ್ನು ಹೊಂದಿದೆಯೇ?

4. ಪ್ರತಿಜೀವಕಗಳು ಯಾವುದೇ ಅಲ್ಪಾವಧಿಯ ಅಥವಾ ದೀರ್ಘಾವಧಿಯ ಅಡ್ಡ ಪರಿಣಾಮಗಳನ್ನು ಹೊಂದಿದೆಯೇ?

ಪ್ರತಿಜೀವಕಗಳು ಅಥವಾ ಆಂಟಿ ಬಯೋಟಿಕ್ಸ್ ಸರಿಯಾದ ಕಾರಣಕ್ಕಾಗಿ ನೀಡಿದರೆ, ಸರಿಯಾದ ಡೋಸೇಜ್ ನಲ್ಲಿ ನೀಡಿದರೆ ಮತ್ತು ಸರಿಯಾದ ಸಮಯಕ್ಕೆ ನೀಡಿದರೆ, ಯಾವುದೇ ದೀರ್ಘಾವಧಿಯ ಅಥವಾ ಅಲ್ಪಾವಧಿಯ ಅಡ್ಡ ಪರಿಣಾಮಗಳನ್ನು ಅದು ಮಕ್ಕಳ ಮೇಲೆ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಅದಾಗ್ಯೂ ಕೆಲವರಿಗೆ ಆಂಟಿ ಬಯೋಟಿಕ್ ಗಳನ್ನು ಸೇವಿಸಿದಾಗ ಹೊಟ್ಟೆ ಉಬ್ಬುವುದು, ಸೌಮ್ಯವಾದ ವಾಂತಿ,ಲೂಸ್ ಮೋಷನ್ ಮುಂತಾದ ಅಸ್ವಸ್ಥತೆಗಳು ಸಾಮಾನ್ಯವಾಗಿ ಕಾಡುತ್ತದೆ. ಆದರೆ ಇವುಗಳನ್ನು ಪ್ರೋಬಯಾಟಿಕ್ ಅಥವಾ ಆಂಟಾಸಿಡ್ ಮೂಲಕ ಸರಿಪಡಿಸಬಹುದಾಗಿದೆ.

5. ಪ್ರತಿಜೀವಕಗಳ ಬಗ್ಗೆ ಪೋಷಕರು ಮಾಡುವ ತಪ್ಪೇನು?

5. ಪ್ರತಿಜೀವಕಗಳ ಬಗ್ಗೆ ಪೋಷಕರು ಮಾಡುವ ತಪ್ಪೇನು?

ಬಹಳಷ್ಟು ಪೋಷಕರು ಆಂಟಿ ಬಯೋಟಿಕ್ಸ್ ಬಗ್ಗೆ ತಪ್ಪು ಕಲ್ಪನೆ ಹೊಂದಿರುವುದುಂಟು. ಮಗು ಹುಷಾರು ಇಲ್ಲದಾಗ ಮಗುವಿಗೆ ಆಂಟಿ ಬಯೋಟಿಕ್ ನೀಡುತ್ತಾರೆ. ಈ ವೇಳೆ ಮಗು ಒಂದು ಅಥವಾ ಎರಡು ದಿನಗಳಲ್ಲಿ ಹುಷಾರು ಆಗುತ್ತಾರೆ. ಆದರೆ ಹುಷಾರ್ ಆದ ಬಳಿಕ ಡೋಸೇಜ್ ಅನ್ನು ಪೂರ್ಣಗೊಳಿಸದೆ ಅಥವಾ ವೈದ್ಯರಿಂದ ಸಲಹೆ ಪಡೆಯದೆ ನಿಲ್ಲಿಸುತ್ತಾರೆ.

ಇದು ವಾಸ್ತವವಾಗಿ ನಿಮ್ಮ ಮಗುವಿನ ಆರೋಗ್ಯಕ್ಕೆ ಹಾನಿಕಾರಕವಾಗಬಹುದು, ಭವಿಷ್ಯದಲ್ಲಿ ಸಮಸ್ಯೆ ಉಲ್ಬಣಿಸಬಹುದು. ಯಾಕೆಂದರೆ ನೀವು ಅರ್ಧದಲ್ಲಿ ನಿಲ್ಲಿಸಿದ್ದರಿಂದ ಪ್ರತಿಜೀವಕಗಳ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಇದು ಬ್ಯಾಕ್ಟೀರಿಯಾಗಳಿಗೆ ಪ್ರತಿಕ್ರಿಯಿಸುವುದಿಲ್ಲ, ಅವುಗಳು ಪ್ರತಿರೋಧವನ್ನು ಅಭಿವೃದ್ಧಿಪಡಿಸುತ್ತವೆ. ಹೀಗಾಗಿ ಆಂಟಿ ಬಯೋಟಿಕ್ ಯಾವ ರೀತಿ ಕೊಡಬೇಕು ಅನ್ನುವುದನ್ನು ಕೂಡ ಅರಿತಿರಬೇಕು.

English summary

Doctor explains why antibiotics are prescribed when your child is sick and if there are any side effects in kannada

Here we are discussing about Doctor explains why antibiotics are prescribed when your child is sick and if there are any side effects in kannada. Read more.
Story first published: Friday, September 9, 2022, 17:30 [IST]
X
Desktop Bottom Promotion