For Quick Alerts
ALLOW NOTIFICATIONS  
For Daily Alerts

ಮಕ್ಕಳೊಂದಿಗೆ ಸಮಯ ಕಳೆಯುವಾಗ, ಮೊಬೈಲ್ ಪಕ್ಕಕ್ಕೆ ಇಡಿ

By Manu
|

ಇತ್ತೀಚೆಗೆ ಬಂದಿರುವ ಒಂದು ವರದಿಯ ಪ್ರಕಾರ ಮಕ್ಕಳೊಂದಿಗೆ ಊಟ ಮಾಡುತ್ತಿರುವಾಗ ಮೊಬೈಲ್ ಬಳಸಿದಾಗ ಇದರ ಪರಿಣಾಮ ಮಕ್ಕಳ ಮೇಲೆ ವ್ಯತಿರಿಕ್ತವಾಗಿ ಆಗುತ್ತದೆ. ಅಂದರೆ ಮಕ್ಕಳು ತಮ್ಮ ತಂದೆತಾಯಿಯರೊಂದಿಗಿನ ಬಾಂಧವ್ಯನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಇದರಿಂದ ಕ್ರಮೇಣ ಮಕ್ಕಳು ಪಾಲಕರ ಬಗ್ಗೆ ಇರಬೇಕಾಗುವಷ್ಟು ಅಭಿಮಾನ ತಾಳದಿರುವ ಭಯವಿದೆ. ಈ ಸಮೀಕ್ಷೆಯ ಇತರ ಮಹತ್ವದ ಸಂಗತಿಗಳು ಈ ಕೆಳಗಿನಂತಿವೆ:

Why Parents Shouldn't Use Mobiles While Eating With Kids

* ಈ ಸಮೀಕ್ಷೆಯ ಪ್ರಕಾರ ಪಾಲಕರು ಮಕ್ಕಳೊಂದಿಗೆ ಕಳೆಯುತ್ತಿರುವ ಸಮಯದಲ್ಲಿ, ಉದಾಹರಣೆಗೆ ಊಟ ಮಾಡುವ ಸಮಯ, ಜೊತೆಯಾಗಿ ಪಯಣಿಸುತ್ತಿರುವ ಸಮಯ, ಆಟ ಅಥವಾ ಮನೆಯಲ್ಲಿ ಕುಳಿತಿರುವ ಸಮಯ ಇತ್ಯಾದಿಗಳಲ್ಲಿ, ಮಕ್ಕಳಿಗಿಂತ ಹೆಚ್ಚಾಗಿ ತಮ್ಮ ಮೊಬೈಲುಗಳಿಗೆ ಹೆಚ್ಚಿನ ಗಮನ ನೀಡುವ ಮೂಲಕ ಮಕ್ಕಳು ತಮ್ಮ ಪಾಲಕರ ಬಗ್ಗೆ ವ್ಯತಿರಿಕ್ತ ಭಾವನೆ ತಳೆಯುವಂತೆ ಮಾಡುತ್ತದೆ. ಪರಿಣಾಮವಾಗಿ ಈ ಮಕ್ಕಳು ತಮ್ಮ ಪಾಲಕರ ಜೊತೆಗೆ ಸಂತೋಷವಾಗಿರುವುದಿಲ್ಲ.
* ಸುಮಾರು ಎಂಭತ್ತರ ದಶಕದಲ್ಲಿ ಟೀವಿ ಮನೆಯೊಳಗೆ ಬಂದಾಗಲೂ ಈ ವಿಷಯದ ಪ್ರಸ್ತಾಪವಿತ್ತು. ಆಗ ಮಾನವಸಂಬಂಧಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದ ತಜ್ಞರು ಈ ಬಗ್ಗೆ ಎಚ್ಚರಿಸಿದ್ದರು ಸಹಾ.


* ಜಗತ್ತಿನಲ್ಲಿ ಅತಿ ಅಮೂಲ್ಯ ಕ್ಷಣಗಳೆಂದರೆ ತಮ್ಮವರೊಂದಿಗೆ ಕಳೆದ ಕ್ಷಣಗಳು ಎಂದು ಪ್ರತಿಯೊಬ್ಬರೂ ತಿಳಿಸುತ್ತಾರೆ. ಇಲ್ಲಿ ತಮ್ಮವರು ಎಂಬ ಭಾವನೆ ಬರಲು ಆ ಕ್ಷಣದಲ್ಲಿ ಪರಸ್ಪರ ಜೊತೆಯಾಗಿದ್ದು ಜೊತೆಯಾಗಿಯೇ ಸಮಯವನ್ನು ಕಳೆದು ಜೊತೆಯಾಗಿ ಕೆಲಸಗಳನ್ನು ಹಂಚಿಕೊಂಡು ಕುಟುಂಬದ ಭಾವನೆ ಬರುವಂತಾದರೆ ಇದೇ ಸ್ವರ್ಗಕ್ಕೆ ಸಮಾನ. ಆದರೆ ಆ ಕ್ಷಣದಲ್ಲಿ ಜೊತೆಯಲ್ಲಿದ್ದವರನ್ನು ಪೂರ್ಣವಾಗಿ ಮರೆತು ತಮ್ಮ ಮೊಬೈಲಿನಲ್ಲಿ ತಲ್ಲೀನರಾಗಿಬಿಟ್ಟರೆ?
* ಇಂಟರ್ನೆಟ್ ಬಂದ ಬಳಿಕವಂತೂ ಮಾನವರ ನಡುವಣ ಬಾಂಧವ್ಯಕ್ಕೆ ಮೂಡಿದ ಬಿರುಕು ಇನ್ನಷ್ಟು ಹೆಚ್ಚಿದ್ದು ಎದುರು ಬದುರು ಕುಳಿತಿದ್ದವರೂ ಚ್ಯಾಟಿಂಗ್ ಮೂಲಕವೇ ಸಂಪರ್ಕಿಸುವಂತಾಗಿದೆ. ವಿಶೇಷವಾಗಿ ಮಕ್ಕಳಲ್ಲಿ ಮತ್ತು ಪಾಲಕರ ನಡುವೆ ಈ ಬಿರುಕು ಹೆಚ್ಚುತ್ತಿದೆ. ಮಕ್ಕಳು ಆಧುನಿಕ ಉಪಕರಣಗಳಿಗೆ ದಾಸರಾಗುತ್ತಾ ಹೋಗುತ್ತಿದಂತೆಯೇ ಮಕ್ಕಳೊಂದಿಗಿನ ಬಾಂಧವ್ಯವನ್ನು ಹೆಚ್ಚಿಸಲು ಪಾಲಕರು ತಿಣುಗಾಡಬೇಕಾಗಿದೆ.
* ಮಕ್ಕಳ ಮತ್ತು ಪಾಲಕರ ನಡುವಣ ಬಾಂಧವ್ಯಕ್ಕೆ ಪರಸ್ಪರ ನೀಡುವ ಸಮಯ ಮತ್ತು ನೆರವಾಗುವ ಗುಣ ಪ್ರಮುಖವಾಗಿವೆ. ಈ ಸಮಯ ಕಡಿಮೆಯಾಗುತ್ತಾ ಹೋಗುತ್ತಿದ್ದಂತೆಯೇ ಬಾಂಧವ್ಯವೂ ಕಡಿಮೆಯಾಗುತ್ತದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ.
ಸುಮಾರು ಮುನ್ನೂರು ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಿ ಈ ವಿಷಯವನ್ನು ಪ್ರಕಟಿಸಲಾಗಿದೆ. ಅದರಲ್ಲೂ ಇಂದು ಸ್ಮಾರ್ಟ್ ಫೋನ್ ಗಳು ಬಂದ ಬಳಿಕ ಈ ಬಿರುಕು ಅಪಾಯಕಾರಿಯಾಗಿ ಹೆಚ್ಚಿದೆ ಎಂದು ಈ ಸಮೀಕ್ಷೆ ಎಚ್ಚರಿಸುತ್ತಿದೆ.
* ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಮಕ್ಕಳಲ್ಲಿ 90%ಕ್ಕೂ ಹೆಚ್ಚು ಮಕ್ಕಳು ತಮ್ಮ ಪಾಲಕರು ತಮ್ಮ ಬಗ್ಗೆ ಹೆಚ್ಚಿನ ಗಮನ ನೀಡುವಂತಾಗಬೇಕು ಎಂದು ಅಪೇಕ್ಷಿಸುತ್ತಾರೆ. ತಮ್ಮ ಪಾಲಕರು ಲ್ಯಾಪ್ ಟಾಪ್ ಮತ್ತು ಮೊಬೈಲುಗಳಲ್ಲಿಯೇ ಮುಳುಗಿ ತಮ್ಮನ್ನು ಅಲಕ್ಷಿಸುವುದನ್ನು ಯಾವುದೇ ಮಗು ಇಷ್ಟಪಡುವುದಿಲ್ಲ.
English summary

Why Parents Shouldn't Use Mobiles While Eating With Kids

A new study says that parents who use mobile phones even while eating food with kids may make their kids unhappy (or may develop strained relationships with their kids).
Story first published: Tuesday, March 15, 2016, 10:01 [IST]
X
Desktop Bottom Promotion