For Quick Alerts
ALLOW NOTIFICATIONS  
For Daily Alerts

ಮಗುವಿನ ಆಹಾರದಲ್ಲಿ ಹಣ್ಣುಗಳಿಗೆ ಇರಲಿ ಪ್ರಾಧಾನ್ಯತೆ

By Jaya subaramanya
|

ಮಗುವಿನ ಮೊದಲ ಐದು ವರ್ಷಗಳು ಹೆಚ್ಚು ನಿರ್ಣಾಯಕ ಎಂದೆನಿಸಿದ್ದು ಈ ಸಮಯದಲ್ಲಿ ಅವರಿಗೆ ಎಲ್ಲಾ ರೀತಿಯ ಆಹಾರಗಳನ್ನು ನೀಡುವಂತಿಲ್ಲ. ಮಗುವಿನ ಬೆಳವಣಿಗೆಗೆ ಅಗತ್ಯವಾಗಿರುವ ಆಹಾರಗಳನ್ನೇ ಈ ಸಮಯದಲ್ಲಿ ಪೋಷಕರು ಅವರಿಗೆ ನೀಡಬೇಕಾಗಿದ್ದು ಇದರಲ್ಲಿ ಪ್ರೊಟೀನ್ ಮತ್ತು ನ್ಯೂಟ್ರೀನ್ ಅಂಶಗಳು ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಸಮತೋಲಿತ ಆಹಾರ ವಿಧಾನವನ್ನೇ ಅನುಸರಿಸಿ ಅದರಂತೆ ಮಗುವಿಗೆ ಆಹಾರವನ್ನು ನೀಡಬೇಕಾಗುತ್ತದೆ. ಇದರಿಂದ ಮಗು ಆರೋಗ್ಯಪೂರ್ಣವಾಗಿದ್ದು ರೋಗನಿರೋಧಕ ಶಕ್ತಿಯನ್ನು ತಮ್ಮಲ್ಲಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಸೂಕ್ತ ಆಹಾರ ಕ್ರಮ: ಮಗುವಿನ ಜ್ಞಾಪಕ ಶಕ್ತಿ ಹೆಚ್ಚಿಸಲು ಅತ್ಯಗತ್ಯ

ಮಗುವಿನ ಆಹಾರ ಎಂದರೆ ಅದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಸಮ್ಮಿಳಿತಗೊಂಡಿರಬೇಕು. ಈ ಸಂದರ್ಭದಲ್ಲಿ ಹಣ್ಣುಗಳನ್ನು ನೀಡುವುದು ಅವರ ಬೆಳವಣಿಗೆಯನ್ನು ಪೋಷಿಸಲಿದೆ. ಇಂದಿನ ಲೇಖನದಲ್ಲಿ ಮಗುವಿಗೆ ನೀಡಬಹುದಾದ ಉತ್ತಮ ಪೋಷಕಾಂಶಗಳಿರುವ ಹಣ್ಣುಗಳ ಪಟ್ಟಿಯನ್ನು ನಾವು ನೀಡಿದ್ದು ಇವುಗಳ ವಿಶೇಷತೆ ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇವುಗಳು ನೀಡುವ ಕೊಡುಗೆಯನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ. ಮಗುವಿಗೆ ಶಕ್ತಿಯನ್ನು ಪೂರೈಸುವ ಶಕ್ತಿಮೂಲವಾಗಿ ಈ ಹಣ್ಣುಗಳು ಇದ್ದು ಮಕ್ಕಳು ಹೆಚ್ಚು ಇಷ್ಟಪಡುವ ಹಣ್ಣುಗಳನ್ನೇ ನಾವು ಈ ಪಟ್ಟಿಯಲ್ಲಿ ಸೇರಿಸಿದ್ದೇವೆ. ಬೆಳೆಯುವ ಮಕ್ಕಳ ಆಹಾರ ಪದ್ಧತಿ ಬಗ್ಗೆ ಗಮನವಿರಲಿ

ಪಪ್ಪಾಯಿ

ಪಪ್ಪಾಯಿ

ಮಗುವಿಗೆ ಅತ್ಯುತ್ತಮ ಎಂದೆನಿಸಿರುವ ಹಣ್ಣಾಗಿದೆ ಪಪ್ಪಾಯಿ. ವಿಟಮಿನ್ ಸಿ ಮತ್ತು ಬೀಟಾ ಕ್ಯಾರಟೀನ್ ಇದರಲ್ಲಿದ್ದು, ನ್ಯೂಟ್ರೀನ್‎ಗಳ ನಿತ್ಯದ ಅವಶ್ಯಕತೆಯನ್ನು ಪುರೈಸುವಲ್ಲಿ ಇದು ಸಹಕಾರಿ ಎಂದೆನಿಸಿದೆ. ಕರಗಿಸುವ ನಾರಿನ ಅಂಶಗಳು ಈ ಹಣ್ಣಿನಲ್ಲಿರುವುದರಿಂದ ಕರುಳಿನ ಚಲನೆಯನ್ನು ಇದು ಉತ್ತೇಜಿಸುತ್ತದೆ.

ಸೇಬು

ಸೇಬು

ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸೇಬಿನ ಪಾತ್ರ ಹಿರಿದಾದುದು. ಪೆಕ್ಟಿನ್ ಮತ್ತು ಇತರ ವಿಟಮಿನ್‎ಗಳು, ಮಿನರಲ್‎ಗಳು ಈ ಹಣ್ಣಿನಲ್ಲಿರುವುದರಿಂದ ಮಗುವಿಗೆ ಇದು ಉತ್ತಮವಾದುದು.

ಅವೊಕಾಡೊ

ಅವೊಕಾಡೊ

ಮಗುವಿನ ಆಹಾರದಲ್ಲಿ ಅವೊಕಾಡೊ ಇರುವಂತೆ ನೋಡಿಕೊಳ್ಳಿ. ಅಪರ್ಯಾಪ್ತ ಕೊಬ್ಬಿನ ಮೂಲವಾಗಿರುವುದರಿಂದ ಮಗುವಿನ ಮೆದುಳಿನ ಚುರುಕುತನಕ್ಕೆ ಮತ್ತು ಅವರುಗಳು ಚಟುವಟಿಕೆಯಿಂದ ಇರುವುದಕ್ಕೆ ಸಹಾಯ ಮಾಡುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಕಾರ್ಬೊಹೈಡ್ರೇಟ್ಸ್ ಮತ್ತು ಶಕ್ತಿದಾಯಕ ಅಂಶಗಳನ್ನು ಬಾಳೆಹಣ್ಣು ಹೊಂದಿದೆ. ಇದರಲ್ಲಿರುವ ನಾರಿನಂಶ ಕರುಳಿನ ಚಲನೆಗಳನ್ನು ಸರಾಗವಾಗಿಸಲು ಸಹಕಾರಿ. ಅಂತೆಯೇ ಇವುಗಳನ್ನು ಜಗಿಯಲು ಆರಾಮದಾಯಕವಾಗಿರುತ್ತದೆ. ಮಗುವಿಗೆ ಉತ್ತಮ ಆಹಾರವಾಗಿದೆ ಬಾಳೆಹಣ್ಣು.

ಒಣದ್ರಾಕ್ಷಿ

ಒಣದ್ರಾಕ್ಷಿ

ಹೆಚ್ಚು ನಾರಿನ ಅಂಶವು ಒಣದ್ರಾಕ್ಷಿಯಲ್ಲಿರುವುದರಿಂದ ಕರುಳಿನ ಚಲನೆಗಳನ್ನು ಸರಾಗವಾಗಿಸಲು ಈ ಹಣ್ಣು ಸಹಕಾರಿಯಾಗಿದೆ. ಮಲಬದ್ಧತೆಯನ್ನು ಇದು ನಿವಾರಣೆ ಮಾಡುತ್ತದೆ. ಆಪಲ್ ಮ್ಯಾಶ್ ಅ‎ಥವಾ ಸೆರೇಲ್ಸ್‎ನೊಂದಿಗೆ ಒಣದ್ರಾಕ್ಷಿಯನ್ನು ಸೇರಿಸಿ ನೀಡಬಹುದಾಗಿದೆ.

English summary

Top Healthy Fruits For Babies

The first few years of the baby is very crucial and they cannot afford to eat everything. Thus parents have to make sure that the baby gets proper nutrition for the growth and development. It is important to give a balanced diet to the baby focusing more on proteins and fibres. Proteins and fibres are available in the form of fruits. Fruits area great option to be included in the baby's diet. It gives them instant energy and increases their immunity
X
Desktop Bottom Promotion