For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಮೊದಲಿನ ಮೈಮಾಟ ಮರಳಿ ಪಡೆದ ಯುವರತ್ನ ನಟಿ ಸಾಯೇಷ

|

ಗರ್ಣಿಣಿಯಾದಾಗ ದೇಹದ ಆಕಾರದಲ್ಲಿ ಬದಲಾವನೆಯಾಗುವುದು ಸಹಜ, ಪ್ರತಿ ತಿಂಗಳು ಸ್ವಲ್ಪ-ಸ್ವಲ್ಪ ತೂ ಹೆಚ್ಚಾಗುತ್ತಾ ಹೋಗುವುದು. ಹೆರಿಗೆಯ ಬಳಿಕ ಕೂಡ ದೇಹ ಮೊದಲಿನ ಆಕಾರಕ್ಕೆ ಬರಲು ಸಮಯ ತೆಗೆದುಕೊಳ್ಳುವುದು, ಆದರೆ ಅದಕ್ಕೆ ಆಹಾರಕ್ರಮ ಹಾಗೂ ಪರಿಶ್ರಮ ಬೇಕು ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ ಬೇಕು.

 Sayesha Saigal

ಹೆರಿಗೆಯಾದ ತಕ್ಷಣ ಮೈಮಾಟ ಮೊದಲಿನಂತೆ ಬೇಕು ಎಂದು ಬಯಸಿದರೆ ಅದು ಸಾಧ್ಯವಿಲ್ಲ, ದೇಹ ಮೊದಲು ಚೇತರಿಸಿಕೊಳ್ಳಬೇಕು, ನಂತರ ಮೈ ತೂಕ ಕರಗಿಸುವುದರ ಕಡೆ ಗಮನ ನೀಡಬೇಕು. ಇದೀಗ ಯುವರತ್ನದ ನಾಯಕಿ ಸಯೇಷಾ ಸೈಗಲ್ ಹೆರಿಗೆಯಾಗಿ ಹಲವು ತಿಂಗಳ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಫೋಟೋವನ್ನು ಶೇರ್‌ ಮಾಡಿದ್ದು ಆ ಫೋಟೋ ನೋಡಿದವರು ವಾವ್! ಅಂತಿದ್ದಾರೆ. ಹೌದು ನಟಿ ಹೆರಿಗೆಯ ಬಳಿಕ ನಟಿ ತನ್ನ ಮೊದಲಿನ ಮೈ ಮಾಟಕ್ಕೆ ಮರಳಿದ್ದಾರೆ. ಜೊತೆಗೆ ತೂಕ ಇಳಿಕೆ ಹೇಗಿರಬೇಕು ಎಂಬುವುದನ್ನೂ ಹೇಳಿದ್ದಾರೆ ನೋಡಿ:

 ಸೆಲೆಬ್ರಿಟಿ ನೋಡಿ ನಿಮ್ಮ ಗೋಲ್‌ ಸೆಟ್‌ ಮಾಡಬೇಡಿ- ಸಯೇಷಾ

ಸೆಲೆಬ್ರಿಟಿ ನೋಡಿ ನಿಮ್ಮ ಗೋಲ್‌ ಸೆಟ್‌ ಮಾಡಬೇಡಿ- ಸಯೇಷಾ

ತೂಕ ಕಡಿಮೆಯಾಗಿರುವ ಫೋಟೋವನ್ನು ಶೇರ್ ತುಂಬಾ ಮುಖ್ಯವಾದ ಮಾತುಗಳನ್ನಾಡಿದ್ದಾರೆ ಈ ನಟಿ ನೋಡಿ...

"ಹೆರಿಗೆಯ ಬಳಿಕ ತೂಕ ಕಡಿಮೆ ಮಾಡಿಮೆ ಮಾಡುವುದು ಸುಲಭವಲ್ಲ. ಆದರೆ ನಿರಂತರ ಪರಿಶ್ರಮ ಹಾಗೂ ದೃಢ ನಿರ್ಧಾರದಿಂದ ಸಾಧಿಸಬಹುದು. ಅಲ್ಲದೆ ಯಾರೂ ಮಾಡಲು ಸಾಧ್ಯವಾಗದ ಗೋಲ್‌ ಸೆಟ್ ಮಾಡಬಾರದು. ಪ್ರತಿಯೊಬ್ಬ ಮಹಿಳೆ ಅವರದ್ದೇ ಆದ ರೀತಿಯಲ್ಲಿ ಸುಂದರವಾಗಿರುತ್ತಾರೆ. ತೆಳ್ಳಗಾದರೆ ದೇಹದ ಅಂಗಾಂಗಳಲ್ಲಿರುವ ಅಧಿಕ ಕೊಬ್ಬು ಇಲ್ಲವಾಗುವುದು, ಆದರೆ ಆರೋಗ್ಯಕರವಾಗಿರುವುದು ನಿಮ್ಮ ಗುರಿಯಾಗಿರಬೇಕು, ಆದರೆ ಇದಕ್ಕೆ ಸಮಯ ತೆಗೆದುಕೊಳ್ಳಬಹುದು. ಸೆಲೆಬ್ರಿಟಿಗಳನ್ನು ನೋಡಿ ನಿಮ್ಮ ಗೋಲ್‌ ಸೆಟ್‌ ಮಾಡಬೇಡಿ. ಪ್ರತಿಯೊಬ್ಬರ ದೇಹ ಹಾಗೂ ಆರೋಗ್ಯ ಇತರರಿಗಿಂತ ಭಿನ್ನವಾಗಿರುತ್ತೆ. ಈ ಫೋಟೋ ನನ್ನ ಜೀವನಶೈಲಿ ಫಿಟ್ನೆಸ್‌ ಎಂಬುವುದನ್ನು ತೋರಿಸಲು ಹಾಕಿದ್ದೇನೆ, ಅದು ನನಗೆ ಖುಷಿ ಕೊಟ್ಟಿದೆ." ಎಂದು ಹೇಳಿದ್ದಾರೆ.

 ಹೆರಿಗೆಯಾದ ಬಳಿಕ ತೂಕ ಇಳಿಕೆಗೆ ಸಲಹೆಗಳು

ಹೆರಿಗೆಯಾದ ಬಳಿಕ ತೂಕ ಇಳಿಕೆಗೆ ಸಲಹೆಗಳು

1 ಆತುರಬೇಡ: ಮೊದಲನೆಯದು ಆಗಿ ಹೆರಿಗೆಯಾದ ತಕ್ಷಣವೇ ಫಿಟ್ನೆಸ್‌ಗೆ ಮರಳಬೇಕು ಎಂಬ ಆತುರ ಬೇಡ, ಅದರಲ್ಲೂ ಸಿ-ಸೆಕ್ಷನ್ ಆದರೆ ದೇಹಕ್ಕೆ ತುಂಬಾನೇ ವಿಶ್ರಾಂತಿ ಬೇಕು. ಗಾಯ ಸಂಪೂರ್ಣವಾಗಿ ಒಣಗಬೇಕು. ಅಲ್ಲದೆ ಕನಿಷ್ಠ ಹೆರಿಗೆಯಾಗಿ ಎರಡು ತಿಂಗಳು ಆಗುವವರೆಗೆ ಸಂಪೂರ್ಣ ವಿಶ್ರಾಂತಿ ಬೇಕು. ಮಗುವಿಗೆ ಆಗಾಗ ಹಾಲುಣಿಸಬೇಕಾಗಿರುವುದರಿಂದ ನಿದ್ದೆ ಕಡಿಮೆ ಇರುತ್ತೆ, ಅಲ್ಲದೆ ದೇಹ ಬಳಲಿ ಇರುತ್ತೆ, ಈ ಸಮಯದಲ್ಲಿ ವ್ಯಾಯಾಮ ಮಾಡಿದರೆ ದೇಹ ತುಂಬಾ ಬಳಲುವುದು, ಜೊತೆಗೆ ಅಡ್ಡಪರಿಣಾಮ ಉಂಟಾಗಬಹುದು ಆದ್ದರಿಂದ ಆತುರಪಡಬೇಡಿ.

 2. ಪೋಷಕಾಂಶದ ಆಹಾರ ಸೇವಿಸಿ:

2. ಪೋಷಕಾಂಶದ ಆಹಾರ ಸೇವಿಸಿ:

ಹೆರಿಗೆಯಾದ ಬಳಿಕ ಮಗುವಿನ ಆರೋಗ್ಯಕ್ಕೆ ಹಾಗೂ ನಿಮ್ಮ ಆರೋಗ್ಯಕ್ಕೆ ಪೋಷಕಾಂಶಗಳಿರುವ ಆಹಾರ ಅವಶ್ಯಕ. ಆದ್ದರಿಂದ ಡಯಟ್‌ ಮಾಡುತ್ತೇನೆ ಎಂದು ಆಹಾರ ಕಡಿಮೆ ಮಾಡುವ ತಪ್ಪು ಮಾಡದಿರಿ, ಹೀಗೆ ಮಾಡಿದರೆ ಮಗುವಿಗೆ ಎದೆ ಹಾಲು ಕಡಿಮೆಯಾಗುವುದು, ನಿಮ್ಮ ದೇಹ ಕೂಡ ಬೇಗನೆ ಚೇತರಿಸಿಕೊಳ್ಳುವುದಿಲ್ಲ. ಆದ್ದರಿಂದ ತರಕಾರಿ, ಪ್ರೊಟೀನ್ , ಒಮೆಗಾ 3 ಕೊಬ್ಬಿನಂಶವಿರುವ ಆಹಾರ ಸೇವಿಸಿ. ಆಹಾರವನ್ನು 3 ಬಾರಿ ತಿನ್ನುವ ಮಾದಲು ಡಿವೈಡ್‌ ಮಾಡಿ 6 ಬಾರಿ ಸೇವಿಸುವುದರಿಂದ ತೂಕ ಹೆಚ್ಚುವುದನ್ನು ತಡೆಗಟ್ಟಬಹುದು.

3. ಮೊದಲಿಗೆ ಸರಳ ವ್ಯಾಯಾಮದಿಂದ ಪ್ರಾರಂಭಿಸಿ

3. ಮೊದಲಿಗೆ ಸರಳ ವ್ಯಾಯಾಮದಿಂದ ಪ್ರಾರಂಭಿಸಿ

ಹೆರಿಗೆಯಾಗಿ ಒಂದು ವಾರ ಕಳೆದ ಮೇಲೆ ಸ್ವಲ್ಪ ಹೊತ್ತು ವಾಕ್‌ ಮಾಡಿ.. 2-3 ತಿಂಗಳು ಸ್ವಲ್ಪ ಹೊತ್ತು ವಾಕ್‌ ಮಾತ್ರ ಮಾಡಿ. ನಂತರ ನಿಧಾನಕ್ಕೆ ಸರಳವಾದ ವ್ಯಾಯಾಮ ಮಾಡಿ, ಅದಾದ ಬಳಿಕ ತೂಕ ಇಳಿಕೆಯ, ಹೊಟ್ಟೆ ಕರಗುವ ವ್ಯಾಯಾಮಗಳನ್ನು ಮಾಡಿ.

4. ಹೆರಿಗೆಯ ಬಳಿಕ ತೂಕ ಇಳಿಕೆಗೆ ಮನೆಯವರ ಸಹಾಯ ಪಡೆಯಿರಿ

4. ಹೆರಿಗೆಯ ಬಳಿಕ ತೂಕ ಇಳಿಕೆಗೆ ಮನೆಯವರ ಸಹಾಯ ಪಡೆಯಿರಿ

ಮಗುವನ್ನು ಸ್ವಲ್ಪ ಹೊತ್ತು ನೋಡಿಕೊಳ್ಳಲು ಮನೆಯವರ ಬಳಿ ಕೇಳಿಕೊಳ್ಳಿ. ಒಂದು ಅರ್ಧ ಗಂಟೆ ಅವರು ಮಗುವನ್ನು ನೋಡಿಕೊಳ್ಳುವಂತೆ ಕೇಳಿ, ಹೀಗೆ ಮಾಡುವುದರಿಂದ

ನೀವು ನಿಮ್ಮ ಫಿಟ್ನೆಸ್‌ ಕಡೆ ಗಮನ ನೀಡಬಹುದು.

English summary

South Indian Actress Sayesha Saigal weight loss after Childbirth

South Indian Actress Sayesha Saigal weight loss after Childbirth, Read on...
X
Desktop Bottom Promotion