Just In
Don't Miss
- News
ಗಣತಂತ್ರದಿನಕ್ಕಾಗಿ ಐಕ್ಯತಾ ಡೂಡ್ಲ್ ರಚಿಸಿದ ಮುಂಬೈ ಕಲಾವಿದ
- Movies
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
- Sports
ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ
- Finance
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ: ಲೀಟರ್ಗೆ 100 ರೂಪಾಯಿ ತಲುಪುತ್ತಾ?
- Automobiles
ಕೆಟಿಎಂನಿಂದ ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೊಸ ಅಭಿಯಾನ ಆರಂಭ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಮ್ಮ ಮಗು ಎಷ್ಟು ಹೊತ್ತು ನಿದ್ರೆ ಮಾಡಿದರೆ ಆರೋಗ್ಯಕಾರಿ
ನಿದ್ರೆ ಎನ್ನುವುದು ಮನುಷ್ಯನ ಆರೋಗ್ಯಕ್ಕೆ ಪ್ರಮುಖ ಕೀಲಿಕೈ ಎಂದೇ ಹೇಳಬಹುದು. ಯಾಕೆಂದರೆ ನಿದ್ರಾಹೀನತೆ ಸಮಸ್ಯೆ ಇದ್ದರೆ ಆಗ ಹಲವಾರು ರೀತಿಯ ಅನಾರೋಗ್ಯಗಳು ದೇಹವನ್ನು ಕಾಡಬಹುದು. ಹೀಗಾಗಿ ಒಳ್ಳೆಯ ನಿದ್ರೆ ಮಾಡುವ ವ್ಯಕ್ತಿಯ ಆರೋಗ್ಯವು ಉತ್ತಮವಾಗಿ ಇರುವುದು. ದೊಡ್ಡವರಿಗೆ ದಿನಕ್ಕೆ 7-8 ಗಂಟೆಗಳ ನಿದ್ರೆ ಬೇಕು ಎಂದು ಹೇಳಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಇದರ ಬಗ್ಗೆ ಹಲವಾರು ವಾದಗಳು ನಡೆಯುತ್ತಲೇ ಇದೆ.
ಏನೇ ಇದ್ದರೂ ಮನುಷ್ಯನಿಗೆ ಸರಾಸರಿ ಎಂಟು ಗಂಟೆಗಳ ನಿದ್ರೆ ಬೇಕೇಬೇಕು. ಹಾಗಾದರೆ ಸಣ್ಣ ಮಕ್ಕಳಿಗೆ ಎಷ್ಟು ಗಂಟೆ ನಿದ್ರೆ ಬೇಕು ಎನ್ನುವ ಪ್ರಶ್ನೆಯು ಬರುವುದು. ಸಾಮಾನ್ಯವಾಗಿ ನಾವು ನೋಡಿದರೆ ಸಣ್ಣ ಮಕ್ಕಳು ಹೆಚ್ಚಿನ ಕಾಲ ನಿದ್ರೆಯಲ್ಲೇ ಇರುತ್ತವೆ. ನಿದ್ರೆಯಿಂದಾಗಿ ಶಿಶುಗಳ ದೇಹದ ಬೆಳವಣಿಗೆ ಕೂಡ ಆಗುವುದು. ಶಿಶುವಿನ ಆರೋಗ್ಯವು ಅದು ನಿದ್ರಿಸುವ ಅವಧಿಯಿಂದ ನಿರ್ಧಾರವಾಗುತ್ತದೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ. ಹಾಗಾದರೆ ಸಣ್ಣ ಮಕ್ಕಳಿಗೆ ಯಾವ ಹಂತದಲ್ಲಿ ಎಷ್ಟು ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

1-4 ವಾರಗಳ ಮಗು: ದಿನಕ್ಕೆ 15-16 ಗಂಟೆ
ನವಜಾತ ಶಿಶುಗಳು ಸಾಮಾನ್ಯವಾಗಿ ದಿನಕ್ಕೆ 15-18 ಗಂಟೆಗಳ ಕಾಲ ನಿದ್ರೆ ಮಾಡುವವು. ಆದರೆ ಇದು ನಿರಂತರವಾಗಿ ಇರದೆ, ಎರಡರಿಂದ ನಾಲ್ಕು ಗಂಟೆಗಳ ಸಣ್ಣ ಅವಧಿಯದ್ದಾಗಿರುವುದು. ಅಕಾಲಿಕವಾಗಿ ಜನಿಸಿದ ಮಕ್ಕಳು ಹೆಚ್ಚು ನಿದ್ರೆ ಮಾಡುವರು ಮತ್ತು ಸಕಾಲದಲ್ಲಿ ಹೆರಿಯಾದವರು ಕಡಿಮೆ. ನವಜಾತ ಶಿಶುಗಳಲ್ಲಿ ಯಾವುದೇ ರೀತಿಯ ಆಂತರಿಕ ಗಡಿಯಾರವು ನಿರ್ಮಾಣವಾಗದೆ ಇರುವ ಕಾರಣದಿಂದಾಗಿ ಅವುಗಳಿಗೆ ಹಗಲು-ರಾತ್ರಿ ಎನ್ನುವುದು ತಿಳಿಯುವುದಿಲ್ಲ.

1-4 ತಿಂಗಳ ಮಗು: ದಿನಕ್ಕೆ 14-15 ಗಂಟೆ
ಮಕ್ಕಳಿಗೆ ಬೆಳೆಯಲು, ಕಲಿಯಲು ಮತ್ತು ಫಿಟ್ ಆಗಿರಲು ಹೆಚ್ಚಿನ ನಿದ್ರೆಯು ಅವಶ್ಯಕ. ಮಗುವಿಗೆ ಆರು ವಾರಗಳಾಗುವ ವೇಳೆ ಮಗುವು ಸ್ವಲ್ಪ ಮಟ್ಟಿಗೆ ಹೊಂದಿಕೊಂಡಿರುವುದು ಮತ್ತು ಅದು ಒಂದು ನಿರ್ದಿಷ್ಟ ಸಮಯದಲ್ಲಿ ನಿದ್ರಿಸುವುದನ್ನು ನೀವು ಕಾಣಬಹುದು. ನಾಲ್ಕರಿಂದ ಆರು ಗಂಟೆಗಳ ಕಾಲ ಮಗು ಮಲಗಬಹುದು. ಅದರಲ್ಲೂ ಹೆಚ್ಚಾಗಿ ಸಂಜೆ ವೇಳೆ ಮಗು ನಿದ್ರೆ ಮಾಡಬಹುದು. ಹೀಗಾಗಿ ಅದರ ಹಗಲು-ರಾತ್ರಿಯ ಗೊಂದಲವು ನಿವಾರಣೆ ಆಗಿದೆ ಎಂದು ಹೇಳಬಹುದು.

4-12 ತಿಂಗಳ ಮಗು: 14-15 ಗಂಟೆಗಳ ನಿದ್ರೆ
ದಿನಕ್ಕೆ 15 ಗಂಟೆ ಸಾಮಾನ್ಯವಾಗಿ ಮಕ್ಕಳು ನಿದ್ರಿಸುವ ಸಮಯ. ಆದರೆ ಕೆಲವು ಕೆಲವು ನವಜಾತ ಮಕ್ಕಳು 11 ತಿಂಗಳ ತನಕ ಕೇವಲ 12 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತವೆ. ಈ ಹಂತದಲ್ಲಿ ನೀವು ಮಗುವಿಗೆ ಆರೋಗ್ಯಕಾರಿ ನಿದ್ರೆಯ ಅಭ್ಯಾಸವನ್ನು ಬೆಳೆಸಬೇಕು. ಮಗು ಹೆಚ್ಚು ಬೆರೆಯುವ ಕಾರಣದಿಂದಾಗಿ ಅದರ ನಿದ್ರೆ ಕೂಡ ಈಗ ದೊಡ್ಡವರಂತೆ ಆಗುವುದು.
ನವಜಾತ ಮಕ್ಕಳು ಮೂರು ಸಲ ನಿದ್ರೆ ಮಾಡುವುದು ಇದೆ. ಆದರೆ ಆರು ತಿಂಗಳಾಗುವ ವೇಳೆ ಅದು ಎರಡು ಅವಧಿಗೆ ಇಳಿಯುವುದು. ಈ ವೇಳೆ ಅವರು ರಾತ್ರಿ ವೇಳೆ ನಿದ್ರೆ ಮಾಡುವುದಕ್ಕೆ ಸಮರ್ಥರಾಗಿರುವರು. ನಿಯಮಿತವಾಗಿ ನಿದ್ರೆ ಮಾಡುವುದು ಈ ಹಂತದಲ್ಲಿ ನಡೆಯುವುದು ಯಾಕೆಂದರೆ ಈ ಸಮಯದಲ್ಲಿ ಆಂತರಿಕ ಜೈವಿಕ ಗಡಿಯಾರವು ರಚನೆ ಆಗಿರುವುದು. ಬೆಳಗ್ಗೆ 9 ಗಂಟೆಗೆ ಸುಮಾರು ಒಂದು ಗಂಟೆ ಅವಧಿಗೆ ನಿದ್ರಿಸುವುದು. ಮಧ್ಯಾಹ್ನ 12ರಿಂದ 2 ಗಂಟೆ ಮಧ್ಯೆ ಮಧ್ಯಾಹ್ನದ ನಿದ್ರೆಯು ಆರಂಭವಾಗುವುದು ಮತ್ತು ಇದು ಒಂದು ಅಥವಾ ಎರಡು ಗಂಟೆ ಅವಧಿಯದ್ದಾಗಿರುವುದು. ಸಂಜೆಯ ನಿದ್ರೆಯು 3ರಿಂದ 5 ಗಂಟೆಯ ಮಧ್ಯೆ ಬರುವುದು. ಇದರ ಅವಧಿಯು ದೀರ್ಘವಾಗಿ ಇರುವುದು.

1-3 ವರ್ಷದ ಮಗು: ದಿನಕ್ಕೆ 12-14 ಗಂಟೆಗಳು
ಮಗು ಬೆಳೆಯುತ್ತಾ 18-21 ತಿಂಗಳಿಗೆ ಬಂದಾಗ ಅದು ಬೆಳಗ್ಗೆ ಮತ್ತು ಸಂಜೆಯ ನಿದ್ರೆ ಕಳೆದುಕೊಳ್ಳುವುದು ಮತ್ತು ದಿನಕ್ಕೆ ಒಂದು ಸಲ ಮಾತ್ರ ನಿದ್ರೆ ಮಾಡುವುದು. ಸಣ್ಣ ಮಕ್ಕಳಿಗೆ 14 ಗಂಟೆಗಳ ನಿದ್ರೆ ಬೇಕಾಗಿರುವುದು. ಆದರೆ ಅವರು ನಿದ್ರೆ ಮಾಡುವುದು 10 ಗಂಟೆಗಳ ಕಾಲ ಮಾತ್ರ. 21-36 ತಿಂಗಳ ಮಕ್ಕಳು ದಿನಕ್ಕೆ ಒಂದು ಸಲ ನಿದ್ರೆ ಮಾಡಬೇಕು. ಇದು ಒಂದರಿಂದ ಮೂರುವರೆ ಗಂಟೆ ಅವಧಿಯದ್ದಾಗಿರುವುದು. ಈ ಮಕ್ಕಳು ಸಾಮಾನ್ಯವಾಗಿ ಸಂಜೆ 7ರಿಂದ ರಾತ್ರಿ 9ರ ಮಧ್ಯೆ ನಿದ್ರೆ ಮಾಡುವರು ಮತ್ತು ಬೆಳಗ್ಗೆ 6ರಿಂದ 8 ಗಂಟೆ ಮಧ್ಯೆ ಎದ್ದೇಳುವರು.

3-6 ವರ್ಷದ ಮಕ್ಕಳು: ದಿನಕ್ಕೆ 12 ಗಂಟೆ
ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆ ಮಧ್ಯೆ ನಿದ್ರೆಗೆ ಜಾರುವರು ಮತ್ತು ಬೆಳಗ್ಗೆ 6ರಿಂದ 8 ಗಂಟೆ ಮಧ್ಯೆ ಎದ್ದೇಳುವರು. 3ರ ಹರೆಯದಲ್ಲಿ ಕೆಲವು ಮಕ್ಕಳು ಕಿರು ನಿದ್ರೆಗೆ ಜಾರುವರು. ಆದರೆ ಐದರ ಹರೆಯಕ್ಕೆ ಬರುವ ವೇಳೆ ಇದು ನಿಂತುಬಿಡುವುದು. ಕಿರುನಿದ್ರೆಯ ಅವಧಿಯು ಕಡಿಮೆ ಆಗುವುದು ಮತ್ತು ಮೂರರ ಹರೆಯದ ಬಳಿಕ ನಿದ್ರೆಯ ಯಾವುದೇ ಸಮಸ್ಯೆಯು ಇರುವುದಿಲ್ಲ.

7-12 ವರ್ಷದ ಮಕ್ಕಳು: 10-11 ಗಂಟೆಗಳು
ಈ ವಯಸ್ಸಿನಲ್ಲಿ ಮಕ್ಕಳು ಹೆಚ್ಚಾಗಿ ಆಟವಾಡುವುದು, ಬೇರೆ ಮಕ್ಕಳೊಂದಿಗೆ ಬೆರೆಯುವುದು, ಶಾಲೆ ಮತ್ತು ಕುಟುಂಬದ ಚಟುವಟಿಕೆಗಳಿಂದಾಗಿ ನಿದ್ರಿಸುವುದು ವಿಳಂಬವಾಗುವುದು. 12 ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ರಾತ್ರಿ 9 ಗಂಟೆಗೆ ಮಲಗುವರು. 7.30ರಿಂದ 10 ಗಂಟೆ ಅವಧಿಯಲ್ಲಿ ಈ ವಯಸ್ಸಿನ ಮಕ್ಕಳು ನಿದ್ರೆಗೆ ಜಾರುವುದು ಇದೆ. ಈ ಸಮಯದಲ್ಲಿ ಇವರು 9-12 ಗಂಟೆಗಳ ಕಾಲ ನಿದ್ರೆ ಮಾಡುವರು. ಅಂದರೆ ಸರಾಸರಿ 9 ಗಂಟೆಗಳ ಕಾಲ ನಿದ್ರೆ ಮಾಡುವರು.

12-18 ವರ್ಷದ ಮಕ್ಕಳು: ದಿನಕ್ಕೆ 8-9 ಗಂಟೆಗಳು
ಆರೋಗ್ಯಕ್ಕೆ ನಿದ್ರೆಯು ತುಂಬಾ ನೆರವಾಗುವುದು ಮತ್ತು ಹದಿಹರೆಯದಲ್ಲಿ ನಿದ್ರೆಯು ದೇಹಕ್ಕೆ ಅತೀ ಅನಿವಾರ್ಯ ಕೂಡ. ಹದಿಹರೆಯದಲ್ಲಿ ಕೆಲವರಿಗೆ ಹೆಚ್ಚಿನ ಗಂಟೆಗಳ ನಿದ್ರೆಯು ಬೇಕಾಗುವುದು. ಆದರೆ ಹೆಚ್ಚಿನ ಹದಿಹರೆಯದ ಮಕ್ಕಳು ಈ ಅವಧಿಯಲ್ಲಿ ತಮ್ಮ ಗೆಳೆಯ ಗೆಳೆತಿಯರ ಬಳಗದಲ್ಲಿ ಇರುವ ಕಾರಣದಿಂದಾಗಿ ಉತ್ತಮ ಗುಣಮಟ್ಟದ ಹಾಗೂ ಸರಿಯಾದ ಪ್ರಮಾಣದ ನಿದ್ರೆಯು ಸಿಗದು.