Just In
Don't Miss
- News
ವಿಡಿಯೋ ವೈರಲ್; ಗೋವಾದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ
- Movies
ಜೈಲಿನಿಂದ ಹೊರಬಂದ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಂಡ ರಾಗಿಣಿ
- Automobiles
ಎಪ್ರಿಲಿಯಾ ಆರ್ಎಸ್ 660, ಟುವೊನೊ 660 ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ
- Education
BMRCL Recruitment 2021: ಚೀಫ್ ಇಂಜಿನಿಯರ್, ಮ್ಯಾನೇಜರ್ ಮತ್ತು ಡಿಜಿಎಂ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಲ್ಪಿಜಿ ಸಿಲಿಂಡರ್ಗಳ ಬೆಲೆ ಮತ್ತೆ ಹೆಚ್ಚಳ: ತಿಂಗಳಲ್ಲಿ 3ನೇ ಬಾರಿ!
- Sports
ಜಯದೊಂದಿಗೆ ಋತು ಮುಗಿಸುವ ಹಂಬಲದಲ್ಲಿ ಬೆಂಗಳೂರು, ಜೆಮ್ಷೆಡ್ಪುರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ವರ್ಷದಲ್ಲಿ ಮಗುವಿಗೆ ಯಾವ ಬಗೆಯ ಆಹಾರಗಳನ್ನು ನೀಡಬೇಕು
ನವಜಾತ ಶಿಶುವಿನ ಆರೈಕೆ ಎನ್ನುವುದು ಕಬ್ಬಿಣದ ಕಡಲೆಯಂತೆ! ಇದು ತುಂಬಾ ಕಠಿಣ. ಹಲವಾರು ಸವಾಲು ಹಾಗೂ ಸಮಸ್ಯೆಗಳನ್ನು ಈ ವೇಳೆ ಎದುರಿಸಬೇಕಾಗುತ್ತದೆ. ಯಾಕೆಂದರೆ ನವಜಾತ ಶಿಶುವಿಗೆ ಮೊದಲ ವರ್ಷದಲ್ಲಿ ತಾಯಿಯ ಎದೆಹಾಲು ಅತೀ ಮುಖ್ಯವಾಗಿರುವುದು. ಅದೇ ರೀತಿಯಾಗಿ ಕೆಲವೊಂದು ಬೇರೆ ಆಹಾರಗಳನ್ನು ಕೂಡ ಕೊಡಬಹುದು. ಯಾವ ಆಹಾರ ಮಗುವಿಗೆ ಪಥ್ಯವಾಗುವುದು ಎಂದು ತಿಳಿಯಬೇಕು. ಮಗು ಸೇವಿಸುವ ಆಹಾರವು ಅದರ ಜೀರ್ಣಕ್ರಿಯೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಹೀಗಾಗಿ ಮೊದಲ ಸಲ ತಾಯಿಯಾಗುವಂತವರಿಗೆ ಮಗುವಿನ ಆರೈಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮೊದಲ ಮೂರು ತಿಂಗಳಲ್ಲಿ ಮಗುವಿನ ತಾಯಿಯ ಎದೆಹಾಲು ಅತೀ ಅಗತ್ಯ ಪೋಷಣೆ ನೀಡುವುದು. ನೀವು ಎದೆಹಾಲಿನೊಂದಿಗೆ ಕೆಲವೊಂದು ಆರೋಗ್ಯಕಾರ ಆಹಾರವನ್ನು ಮಗುವಿಗೆ ನೀಡುವ ಮೂಲಕವಾಗಿ ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು.

0-6 ತಿಂಗಳ ಮಗುವಿಗೆ
ಈ ತಿಂಗಳಲ್ಲಿ ಮಗುವಿನಲ್ಲಿ ನೀವು ಹಲವಾರು ಬದಲಾವಣೆಗಳನ್ನು ಕಾಣಲಿದ್ದೀರಿ. ಮಗು ಬೇರೆ ಬೇರೆ ವಿಚಾರಗಳಿಗೆ ಸ್ಪಂದನೆ ನೀಡಲು ಆರಂಭಿಸುವುದು.

1-3 ತಿಂಗಳು
ಮೊದಲ ಮೂರು ತಿಂಗಳಲ್ಲಿ ಮಗುವಿನ ತಾಯಿಯ ಎದೆಹಾಲು ಅತೀ ಅಗತ್ಯ ಪೋಷಣೆ ನೀಡುವುದು. ಇದರಿಂದಾಗಿ ಮಗುವಿನ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿ ಇರುವುದು ಮತ್ತು ಮಲಬದ್ಧತೆ ಹಾಗೂ ಭೇದಿಯಂತಹ ಸಮಸ್ಯೆ ನಿವಾರಣೆ ಮಾಡುವುದು. ಮೊದಲ ಮೂರು ತಿಂಗಳಲ್ಲಿ ಮಗುವಿನ ಹಸಿವಿನ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಸಿಗುವುದು. ಮಗುವಿಗೆ ಯಾವಾಗ ಹಸಿವಾಗಿದೆ ಮತ್ತು ಅದರ ಹೊಟ್ಟೆ ತುಂಬಿದೆಯಾ ಎಂದು ನಿಮಗೆ ತಿಳಿಯುವುದು. ಮೊದಲ ಮೂರು ತಿಂಗಳಲ್ಲಿ ಮಗು ಹೆಚ್ಚಿನ ಎದೆಹಾಲು ತಿನ್ನುವುದು. ಇದರಿಂದಾಗಿ ಮಗುವಿನ ಆಹಾರ ಸಮಯದ ಬಗ್ಗೆ ಗಮನಹರಿಸಬೇಕು.
Most Read: ಒಂದು ತಿಂಗಳ ಮಗುವಿನ ಆರೈಕೆಗೆ ಕೆಲವು ಸಲಹೆಗಳು

4-6 ತಿಂಗಳು
ನವಜಾತ ಶಿಶುವಿಗೆ ಎದೆಹಾಲಿನ ಬದಲಿಗೆ ಬೇರೆ ಯಾವುದೇ ಆಹಾರ ನೀಡುತ್ತಲಿದ್ದರೂ ಅದನ್ನು ನೀವು ವೈದ್ಯರ ಸಲಹೆ ಮೇರೆಗೆ ನೀಡಬೇಕು. 4-6 ತಿಂಗಳ ಮಗುವು ದೇಹವನ್ನು ಎಳೆಯುತ್ತಾ ಸಾಗುವುದು ಮತ್ತು ಕುಳಿತುಕೊಳ್ಳಲು ಪ್ರಯತ್ನಿಸುವುದು. ಇದರಿಂದ ಮಗುವಿಗೆ ಸೀರಲ್ ನೀಡಬಹುದು. ಆದರೆ ಇದನ್ನು ಮಗುವಿಗೆ ಅತಿಯಾಗಿ ಕೊಡಬಾರದು. ದಿನದಲ್ಲಿ 2-3 ಚಮಚ ನೀಡಿದರೂ ಸಾಕು. ಎದೆ ಹಾಲು ಎನ್ನುವುದು ಪೋಷಣೆಯ ಪ್ರಮುಖ ಮೂಲ ಆಗಿರುವುದು. ಇದರಿಂದ ಎದೆಹಾಲಿಗೆ ಪರ್ಯಾಯವಾಗಿ ಸೀರಲ್ ನೀಡಬೇಕು. ಮಗುವಿಗೆ ಆಹಾರ ನೀಡಲು ಮೆತ್ತಗಿನ ಚಮಚ ಬಳಸಿಕೊಳ್ಳಿ. ಯಾಕೆಂದರೆ ಮಗುವಿನ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು.

6-8 ತಿಂಗಳು
ಮಗುವಿಗೆ ಆರು ತಿಂಗಳು ಕಳೆದ ಬಳಿಕ ಅದರ ಆಹಾರ ಕ್ರಮದಲ್ಲಿ ಬೇರೆ ಆಹಾರಗಳನ್ನು ಕೂಡ ಸೇರಿಸಿಕೊಳ್ಳಬಹುದು. ಎದೆ ಹಾಲಿನೊಂದಿಗೆ ಬೇರೆ ಆಹಾರಗಳನ್ನು ನೀಡುವ ಮೂಲಕವಾಗಿ ನೀವು ಮಗುವಿಗೆ ಬೇಕಾಗಿರುವ ಪೋಷಕಾಂಶ ನೀಡಬಹುದು. ಹಣ್ಣುಗಳು ಮತ್ತು ತರಕಾರಿಗಳನ್ನು ಮಗುವಿಗೆ ನೀಡಬಹುದು. ಮಗುವಿಗೆ ಸಿಹಿ ಹಣ್ಣುಗಳು ಹೆಚ್ಚು ಇಷ್ಟವಾಗಬಹುದು. ಮಗುವಿಗೆ ಇಷ್ಟವಾಗದೆ ಇರುವಂತಹ ಆಹಾರವನ್ನು ಅದು ತಿನ್ನದು. ಮಗುವಿಗೆ ಬಾಳೆಹಣ್ಣು, ಸೇಬು ನೀಡಬಹುದು. ಮೊದಲು ಹಣ್ಣುಗಳನ್ನು ಸರಿಯಾಗಿ ಜಜ್ಜಿಕೊಂಡು ಮಗುವಿಗೆ ತಿನ್ನಲು ಸುಲಭವಾಗುವಂತೆ ಕೊಡಬೇಕು. ಬಟಾಟೆ ಮತ್ತು ಕ್ಯಾರೆಟ್‌ನ್ನು ಮಗುವಿಗೆ ನೀಡಿ.
Most Read: ಮಗುವಿಗೆ ನೆಗಡಿ, ಕೆಮ್ಮು ಇದ್ದಾಗ ಲಸಿಕೆಯನ್ನು ಹಾಕಿಸಬಹುದೇ?

8-12 ತಿಂಗಳು
ಈ ಹಂತದಲ್ಲಿ ಮಗು ಹೆಚ್ಚು ಘನ ಆಹಾರ ಸೇವನೆ ಮಾಡುವುದು. ಇದರಿಂದ ಸಂಪೂರ್ಣವಾಗಿ ಹಾಲಿನ ಮೇಲೆ ಅವಲಂಬಿತವಾಗುವುದು ತಪ್ಪುವುದು. ಮಗುವಿಗೆ ಬೇಕಾಗಿರುವಂತಹ ಪೋಷಕಾಂಶಗಳು ಸಿಗುವಂತಹ ಆಹಾರವನ್ನು ಅದು ಸೇವಿಸುವುದು. ಹಣ್ಣುಗಳು ಮತ್ತು ತರಕಾರಿ ಬದಲಿಗೆ ಬೇರೆ ಘನ ಆಹಾರ ಕೂಡ ಅದು ಸೇವಿಸುವುದು. ತುಂಬಾ ಗಟ್ಟಿ ಮತ್ತು ಖಾರವಾಗಿರುವ ಆಹಾರವನ್ನು ಮಗುವಿಗೆ ನೀಡಬೇಡಿ. ಸರಿಯಾಗಿ ನಯವಾಗಿಸಿರುವ ಆಹಾರ ನೀಡಿ. ಮಗುವಿನ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವಂತಹ ಆಹಾರ ನೀಡಲು ಹೋಗಬೇಡಿ. ಮೊಸರು, ಹಣ್ಣುಗಳು ಮತ್ತು ಬೇರೆ ತರಕಾರಿಗಳನ್ನು ನೀಡಬಹುದು. ಆದರೆ ಎದೆಹಾಲನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಡಬೇಡಿ. ಮಗು ಸರಿಯಾಗಿ ಎದೆ ಹಾಲು ಸೇವಿಸುವಂತೆ ಮಾಡಿ.