Just In
Don't Miss
- Sports
ಅತಿರೇಕದ ಸಂಭ್ರಮಾಚರಣೆ: ಐಪಿಎಲ್ ದುಬಾರಿ ಆಟಗಾರನಿಗೆ ಬಿತ್ತು ದಂಡ
- Automobiles
ದೇಶದಲ್ಲಿ ಅಬ್ಬರಿಸಲು ಮತ್ತೆ ಬರುತ್ತಿದೆ LML: ಅದು EV ಸ್ಕೂಟರ್ನೊಂದಿಗೆ.. ಎಲ್ಲ ದಾಖಲೆ ಪುಡಿಪುಡಿ?
- News
Budget 2023; ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಮಾನ ಅವಕಾಶ : ಸಚಿವ ಸುನಿಲ್ ಕುಮಾರ್
- Technology
ಅಬ್ಬಬ್ಬಾ... ಈ ಅಂಬ್ರೇನ್ ಪವರ್ ಬ್ಯಾಂಕ್ನ ಬ್ಯಾಕಪ್ ಎಷ್ಟಿದೆ ಗೊತ್ತಾ!?
- Finance
Union Budget 2023: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಗೆ PAN, ಏನಿದು ತಿಳಿಯಿರಿ
- Movies
ಘೋಸ್ಟ್ ಚಿತ್ರದ ಶಿವಣ್ಣನ ವಿಂಟೇಜ್ ಪೋಸ್ಟರ್ 1983ರ ಅಮೆರಿಕನ್ ಚಿತ್ರದ ಕಾಪಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಕ್ಕಳಲ್ಲಿ ಸಾಧಿಸುವ ಛಲ ಹುಟ್ಟಿಸುವಂಥ ಪ್ರೇರಣಾತ್ಮಕ ಹೇಳಿಕೆಗಳು
ಮಕ್ಕಳು ಎಳೆಯ ಸಸಿಗಳಂತೆ ನಾವು ಹೇಗೆ ಅವರನ್ನು ಬೆಳೆಸುತ್ತೇವೆಯೋ ಮುಂದೆ ಹಾಗೇ ಅವರು ಫಲ ನೀಡುತ್ತಾರೆ. ಪೋಷಕರು ಮಕ್ಕಳಲ್ಲಿ ಸದಾ ಸಕಾರಾತ್ಮಕತೆ, ಪ್ರೇರಣೆ ತುಂಬುವಂಥ ಮಾತುಗಳ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು.
ಸೋತಾಗ ಮತ್ತೆ ಎದ್ದು ಬರಲು, ಪ್ರಯತ್ನ ವಿಫಲವಾದಾಗ ನಿರಾಶೆಯಾಗದೆ ಮತ್ತೆ ಮತ್ತೆ ಪ್ರಯತ್ನಿಸಲು, ಗೆದ್ದಾಗ ಅತಿಯಾಗಿ ಬೀಗದೆ ಸದಾ ಆತ್ವವಿಶ್ವಾಸದಿಂದ ಇರಲು, ಹೊಸತನ್ನು ಪ್ರಯತ್ನಿಸಲು ಅವರನ್ನು ಪ್ರೇರೇಪಿಸಬೇಕು.
ಇದಕ್ಕಾಗಿ ನಾವು ವಿಶೇಷವಾಗಿ ಏನು ಮಾಡಬೇಕಿಲ್ಲ ನಮ್ಮ ಮಗುವನ್ನು ಗಮನಿಸುತ್ತಿರಬೇಕು ಅವರಿಗೆ ಅವಶ್ಯವಾದಾಗ ಪ್ರೇರಣಾತ್ಮಕ ಮಾತುಗಳ ಮೂಲಕ ಹುರಿದುಂಬಿಸಬೇಕು. ಯಾರಿಗೆ ಗೊತ್ತು ಒಂದು ಸಣ್ಣ ಪ್ರೇರಣೆಯ ಮಾತು ನಾಳೆ ನಿಮ್ಮ ಮಕ್ಕಳನ್ನು ಏನು ಸಾಧನೆ ಮಾಡಲು ಪ್ರೇರೇಪಿಸುತ್ತದೆಯೋ....?
ಮಕ್ಕಳಲ್ಲಿ ಸಕಾರಾತ್ಮಕತೆ ತುಂಬುವಂಥ, ಅವರಿಗೆ ಬದುಕಿನಲ್ಲಿ ಛಲ ಹುಟ್ಟಿಸುವಂಥ ಕೆಲವು ಹೇಳಿಕೆಗಳನ್ನು ಇಲ್ಲಿ ನೀಡಿದ್ದೇವೆ, ಇಂಥಾ ಹೇಳಿಕೆಗಳು ನಿಮ್ಮ ಮಕ್ಕಳ ಬಾಳಲ್ಲೂ ಬೇಳಕಿನ ಕಿಡಿ ಹೊತ್ತಿಸಬಹುದು....

1. ಬದಲಾವಣೆ
ಮಕ್ಕಳೇ ಜಗತ್ತಿನಲ್ಲಿ ನೀವು ನೋಡಲು ಬಯಸುವ ಬದಲಾವಣೆ ನೀವೇ ಆಗಿರಿ.

ಆತ್ಮಸ್ಥೈರ್ಯ
ನೀವು ಒಳ್ಳೆಯ ಆಲೋಚನೆಗಳನ್ನು ಹೊಂದಿದ್ದರೆ ಅವು ನಿಮ್ಮ ಮುಖದಿಂದ ಸೂರ್ಯನ ಕಿರಣಗಳಂತೆ ಹೊಳೆಯುತ್ತವೆ ಮತ್ತು ನೀವು ಯಾವಾಗಲೂ ಆತ್ಮಸ್ಥೈರ್ಯದಿಂದ ಕಾಣುತ್ತೀರಿ.

ಧೈರ್ಯಶಾಲಿ
ನೀವು ಎಲ್ಲರಿಗಿಂತ ವಿಭಿನ್ನವಾಗಿರುವುದು ಕೆಟ್ಟ ವಿಷಯವಲ್ಲ, ಇದರರ್ಥ ನೀವು ನೀವೇ ಆಗಲು ಸಾಕಷ್ಟು ಧೈರ್ಯಶಾಲಿಗಳು.

ನಂಬಿಕೆ ಇರಲಿ
ನೀವು ನಂಬುವುದಕ್ಕಿಂತ ಧೈರ್ಯಶಾಲಿಗಳು, ನೀವು ತೋರುತ್ತಿರುವುದಕ್ಕಿಂತ ಬಲಶಾಲಿಗಳು ಮತ್ತು ನೀವು ಯೋಚಿಸುವುದಕ್ಕಿಂತ ಬುದ್ಧಿವಂತರು. ಮೊದಲು ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ

ಪ್ರಯತ್ನ
ನೀವು ಹಲವು ಬಾರಿ ಸೋಲಬಹುದು ಆದರೆ ಪ್ರಯತ್ನ ಬಿಡದ ಹೊರತು ನೀವು ಎಂದೂ ಸೋಲುವುದಿಲ್ಲ.

ಉತ್ತಮ
ನೀವು ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ ಬೇಡ, ಆದರೆ ನೀವು ಮಾಡುವ ಸಣ್ಣ ಕೆಲಸಗಳನ್ನೇ ಉತ್ತಮ ರೀತಿಯಲ್ಲಿ ಮಾಡಬಹುದು.

ಜಗತ್ತು
ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಜಗತ್ತನ್ನೇ ಬದಲಾಯಿಸಬಹುದು.

ಇತಿಹಾಸ
ಮುದುಕರು ಯುದ್ಧ ಮಾಡಬಹುದು, ಆದರೆ ಇತಿಹಾಸ ನಿರ್ಮಿಸುವವರು ಮಾತ್ರ ಮಕ್ಕಳು.

ಅನುಕರಣೆ
ಮಕ್ಕಳು ತಮ್ಮ ಹಿರಿಯರ ಮಾತನ್ನು ಕೇಳದೇ ಇರಬಹುದು, ಆದರೆ ಅವರನ್ನು ಅನುಕರಿಸುವಲ್ಲಿ ಮಾತ್ರ ಅವರು ಎಂದಿಗೂ ವಿಫಲರಾಗುವುದಿಲ್ಲ.

ಕೀಳು
ನೀವು ಯಾರಿಗೆ ಸಹಾಯ ಮಾಡದ ಹೊರತು ಯಾರನ್ನೂ ಕೀಳಾಗಿ ನೋಡಬೇಡಿ.

ಯಶಸ್ಸು
ಕೆಲವೊಮ್ಮೆ ಯಶಸ್ಸಿನ ಮಾರ್ಗವು ಅಷ್ಟು ಸುಲಭವಾಗಿರುವುದಿಲ್ಲ.

ನಮ್ಮ ಅದೃಷ್ಟ
ನಮ್ಮೊಳಗೇ ಇರುತ್ತದೆ, ನೀವು ಅದನ್ನು ಕಂಡುಕೊಳ್ಳಲು ಸಾಕಷ್ಟು ಧೈರ್ಯವನ್ನು ಹೊಂದಿರಬೇಕು ಅಷ್ಟೇ.

ನೀವು ಹಿಂದೇ
ಆಗ ಘಟನೆಗಳು ಮತ್ತು ಬಿಟ್ಟುಹೋದದ್ದನ್ನು ಕೇಂದ್ರೀಕರಿಸಿದರೆ, ಮುಂದೆ ಏನಾಗುತ್ತದೆ ಎಂಬುದನ್ನು ನೀವು ಎಂದಿಗೂ ಊಹೆ ಸಹ ಮಾಡಲು ಸಾಧ್ಯವಿಲ್ಲ.