Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೀಪಾವಳಿಗೆ ಈ ವಸ್ತುಗಳನ್ನು ಮನೆಗೆ ತನ್ನಿ, ನಿಮ್ಮ ಅದೃಷ್ಟ ಖುಲಾಯಿಸುತ್ತದೆ
ಸಂಪತ್ತು, ಶಾಂತಿ ಹಾಗೂ ಸಮೃದ್ಧಿಯ ಸಂಕೇತ ಲಕ್ಷ್ಮಿ ದೇವಿ ಸಮೇತ ವಿವಿಧ ದೇವತೆಗಳ ಆರಾಧನೆ ಮಾಡುವ ದೀಪಾವಳಿ ಹಬ್ಬದಲ್ಲಿ ಮನೆಮನಗಳಲ್ಲಿ ಸಂಪತ್ತು,ಸಮೃದ್ಧಿಯ ಬೆಳಕು ಚೆಲ್ಲಲಿ ಎಂದು ಹಿಂದೂ ಸಂಪ್ರದಾಯದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ವರ್ಷ ಅಕ್ಟೋಬರ್ 25ರಿಂದ ಆರಂಭವಾಗುವ ದೀಪಾವಳಿ ಹಬ್ಬವು ಮೊದಲನೇ ದಿನ ಗೋಪೂಜೆಯ ಮೂಲಕ ಆರಂಭಗೊಂಡು,ನಂತರ 26ರಂದು ಯಮ್ ದೀಪಮ್, 27ರಂದು ಕರ್ನಾಟಕದಲ್ಲಿ ಪ್ರಮುಖವಾಗಿ ಅಚರಿಸುವ ನರಕ ಚತುರ್ದಶಿ, 28ರಂದು ಅಮಾವಾಸ್ಯೆ ಲಕ್ಷ್ಮೀ ಪೂಜೆ ಹಾಗೂ ಅಂತಿಮ ದಿನವಾದ 29ರಂದು ಬಾಯ್ ದೋಜಾ ಹಬ್ಬದ ಮೂಲಕ ದೀಪಾವಳಿ ಅಂತ್ಯವಾಗುತ್ತದೆ.

ದುಷ್ಟ ಶಕ್ತಿಗಳು ದೂರಾಗಿ ಐಶ್ವರ್ಯ ಮತ್ತು ಸಂಪತ್ತನ್ನು ಮನೆಗೆ ಬರಮಾಡಿಕೊಳ್ಳುಲ್ಲೆಂದೇ ಆಚರಿಸುವ ದೀಪಾವಳಿಯಂದು ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಮನೆಗೆ ಅದೃಷ್ಟ ಒಲಿಯುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಈ ದೀಪಾವಳಿಯಂದು ಅದೃಷ್ಟ ಮತ್ತು ಹಣವನ್ನು ಆಕರ್ಷಿಸಲು ನೀವು ಮನೆಗೆ ತರಬೇಕಾದ ಕೆಲವು ಬಜೆಟ್ ಸ್ನೇಹಿ ವಸ್ತುಗಳು ಯಾವುವು ಗೊತ್ತೆ, ಇಲ್ಲಿದೆ ನೋಡಿ ಪಟ್ಟಿ. ದೀಪಾವಳಿ ಹಬ್ಬ 2019: ದಿನ, ಶುಭಮುಹೂರ್ತ ಹಾಗೂ ಮಹತ್ವ

1. ನವಿಲು ಗರಿ
ನೀವು ನವಿಲು ಗರಿಯನ್ನು ಪೂಜೆ ಮಾಡುವ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನೀವು ನವಿಲು ಗರಿಗಳನ್ನು ಮನೆ ಅಥವಾ ಅಂಗಡಿಯ ಆಗ್ನೇಯ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದ ಇದು ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿಯನ್ನು ದೂರವಿರಿಸುತ್ತದೆ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ.

2. ಬೆಳ್ಳಿ ಅಥವಾ ಚಿನ್ನದ ನಾಣ್ಯಗಳು
ಹೆಚ್ಚಿನ ಭಾರತೀಯರು ಚಿನ್ನದ ಆಭರಣಗಳನ್ನು ಧನತ್ರಯೋದಶಿಯ ದಿನದಂದು ಖರೀದಿಸುತ್ತಾರೆ. ಆಭರಣಗಳ ಹೊರತಾಗಿಯೂ ಬೆಳ್ಳಿ ಅಥವಾ ಚಿನ್ನದ ನಾಣ್ಯಗಳನ್ನು ಅಂದು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಚಿನ್ನ ಹಾಗೂ ಬೆಳ್ಳಿ ಮನೆ ಅಥವಾ ವ್ಯಾಪಾರದ ಸ್ಥಳದಲ್ಲಿ ಇಟ್ಟರೆ ಅದು ಅದೃಷ್ಟವನ್ನು ತರುತ್ತದೆ ಅಲ್ಲದೆ ನಮ್ಮನ್ನು ಕೆಟ್ಟದ್ದರಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.ದೀಪಾವಳಿ 2019 : ಪಟಾಕಿ ಪರಿಸರ, ಆರೋಗ್ಯ, ಪ್ರಾಣಿಗಳ ಮೇಲೆ ಎಷ್ಟಲ್ಲಾ ಮಾರಕ ಗೊತ್ತೆ? ತಪ್ಪದೇ ಒಮ್ಮೆ ಓದಿ

3. ಲೋಹದ ಆಮೆ
ಲೋಹದ ಆಮೆಯು ನಮ್ಮ ಬಳಿ ಇರುವ ಹಣಕ್ಕೆ ಸ್ಥಿರತೆ ಒದಗಿಸುತ್ತದೆ, ಅಂದರೆ ನಮ್ಮಲ್ಲೇ ನೆಲೆಸುವಂತೆ ಕಾಪಾಡುತ್ತದೆ. ಅಲ್ಲದೇ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ನಮ್ಮ ಸುತ್ತಲಿನ ಪರಿಸರವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ಎಲ್ಲರೂ ಸಮಾರಸ್ಯದಿಂದ ಇರುವಂತೆ ಆಮೆಯು ಮಾಡುತ್ತದೆ ಎನ್ನಲಾಗುತ್ತದೆ. ಇತ್ತೀಚೆಗೆ ಹಲವರು ಮನೆಗಳಲ್ಲಿ ಆಮೆಗಳನ್ನು ಸಾಕುವುದನ್ನು ಕಾಣಬಹುದು. ವಾಸ್ತು ಪ್ರಕಾರ, ಆಮೆಯು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ.

4. ಹಿತ್ತಾಳೆ ಪಿರಮಿಡ್
ಮನಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಲು ಈ ದೀಪಾವಳಿಗೆ ಹಿತ್ತಾಳೆಯ ಪಿರಮಿಡ್ ಅನ್ನು ಮನೆಗೆ ತನ್ನಿ. ಹಿತ್ತಾಳೆ ಪಿರಮಿಡ್ ನ ಶಕ್ತಿ ಏನೆಂದರೆ ಸೆಳೆತ ಅಥವಾ ಗುಣಪಡಿಸುವ ಶಕ್ತಿಯನ್ನು ಹೊಂದಿದ್ದು, ಶುದ್ಧೀಕರಣವನ್ನು ಸೂಚಿಸುತ್ತದೆ. ವಾಸ್ತು ಪ್ರಕಾರ, ಹಿತ್ತಾಳೆ ಪಿರಮಿಡ್ ಅತೀಂದ್ರಿಯ ಗುಣಪಡಿಸುವ ಗುಣಗಳನ್ನು ಹೊಂದಿದೆ.ಶಾಸ್ತ್ರದ ಪ್ರಕಾರ ಇಂತಹ ವಸ್ತುಗಳನ್ನು ದೀಪಾವಳಿಯಲ್ಲಿ ಉಡುಗೊರೆಯಾಗಿ ನೀಡಲೇಬಾರದು!

5. ಲೋಹದ ಮೀನು
ಮನೆಯಲ್ಲಿ ಲೋಹದ ಮೀನು ಇಟ್ಟರೆ ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನಲಾಗುತ್ತದೆ. ಆದ್ದರಿಂದ, ಈ ದೀಪಾವಳಿಯಂದು ಶಕ್ತಿ, ಅದೃಷ್ಟ, ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳಲು ಲೋಹದ ಮೀನನ್ನು ಖರೀದಿಸಿ ಮನೆಯಲ್ಲಿಡಿ.

6. ಲಕ್ಷ್ಮಿ ವಿಗ್ರಹಗಳು
ದೀಪಾವಳಿಗೆ ಲಕ್ಷ್ಮಿ ವಿಗ್ರಹಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯ ಅಥವಾ ವ್ಯಾಪಾರ ಮಾಡುವ ಸ್ಥಳದ ಪೂಜಾ ಸ್ಥಳದಲ್ಲಿ ಲಕ್ಷ್ಮೀ ವಿಗ್ರಹವನ್ನು ಇಡುವುದರಿಂದ ಅದೃಷ್ಟ ಮತ್ತು ಸಮೃದ್ಧಿ ನಿಮ್ಮದಾಗುತ್ತದೆ.



Click it and Unblock the Notifications
