For Quick Alerts
ALLOW NOTIFICATIONS  
For Daily Alerts

ದೀಪಾವಳಿ ಹಬ್ಬ 2019: ದಿನ, ಶುಭಮುಹೂರ್ತ ಹಾಗೂ ಮಹತ್ವ

|

ಅಂದಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ. ಎಲ್ಲೆಲ್ಲೂ ಬೆಳಕನ್ನು ಚೆಲ್ಲುತ್ತಾ, ಸಂಭ್ರಮದ ವಾತಾವರಣವನ್ನು ಕಲ್ಪಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. ಐದು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ವಿಶೇಷವಾದ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿದೆ. ಪ್ರದೇಶದಿಂದ ಪ್ರದೇಶಕ್ಕೆ ಈ ಹಬ್ಬದ ಆಚರಣೆಯಲ್ಲಿ ಕೊಂಚ ವಿಭಿನ್ನತೆ ಇರುವುದನ್ನು ಕಾಣಬಹುದು. ಈ ಬಗ್ಗವು ಸಾಮಾನ್ಯವಾಗಿ ಧನತ್ರಯೋದಶಿ (ಧಂತೇರಸ್) ಆಚರಣೆಯಿಂದ ಪ್ರಾರಂಭವಾಗಿ ಭೈಯಾ ದೋಜ್ನಲ್ಲಿ ಕೊನೆಕೊಳ್ಳುತ್ತದೆ.

Deepavali

ಐದು ದಿನದ ಹಬ್ಬಗಳ ಆಚರಣೆಯಲ್ಲಿ ವಿವಿಧ ಆಚರಣೆಗಳನ್ನು ಅನುಸರಿಸಲಾಗುವುದು. ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ ವಿವಿಧ ದೇವತೆಗಳಿಗೂ ಪೂಜೆ ಸಲ್ಲಿಸಲಾಗುವುದು. ದೀಪಾವಳಿ ಹಬ್ಬದ ಅಮವಾಸ್ಯೆಯ ದಿನವನ್ನು ಅತ್ಯಂತ ಮಹತ್ವದ ದಿನ ಎಂದು ಪರಿಗಣಿಸಲಾಗುವುದು. ಅದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು. ಇದನ್ನು ಸಾಮಾನ್ಯವಾಗಿ ಲಕ್ಷ್ಮಿ ಪೂಜೆ, ಲಕ್ಷ್ಮಿ -ಗಣೇಶ ಪೂಜೆ ಅಥವಾ ದೀಪಾವಳಿ ಪೂಜೆ ಎಂದು ಸಹ ಕರೆಯಲಾಗುತ್ತದೆ.

ಸುಖ, ಸಮೃದ್ಧಿಯ ಹಬ್ಬ

ಸುಖ, ಸಮೃದ್ಧಿಯ ಹಬ್ಬ

ದೀಪಾವಳಿ ಹಬ್ಬದ ಸಡಗರ ಹಾಗೂ ಆಚರಣೆಯು ಕೇವಲ ಮನೆಗಳಲ್ಲಿ ಮಾತ್ರ ಆಚರಿಸುವುದಿಲ್ಲ. ಬದಲಿಗೆ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿಯೂ ವಿಶೇಷವಾಗಿ ಆಚರಿಸಲಾಗುತ್ತದೆ. ಕಚೇರಿಗಳಲ್ಲಿ ಪೆನ್ನು, ಪುಸ್ತಕ, ವಿಶೇಷವಾದ ಕಾಗದ ಪತ್ರಗಳ ಫೈಲ್, ದುಡ್ಡಿನ ಪೆಟ್ಟಿಗೆ, ಕೆಲಸಕ್ಕೆ ಸಂಬಂಧಿಸಿದ ಯಂತ್ರಗಳು ಹೀಗೆ ವಿವಿಧ ವಸ್ತುಗಳನ್ನು ಲಕ್ಷ್ಮಿ ಮತ್ತು ಸರಸ್ವತಿಯ ರೂಪ ಎಂದು ಪರಿಗಣಿಸಿ, ಪೂಜಿಸಲಾಗುವುದು. ಐದು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ಗಾಳಿಯಂತಹ ಉತ್ಸಾಹ, ಬೆಳಕಿನ ಕಾಂತಿ, ಸಂತೋಷ, ಸುಖ, ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಹಬ್ಬವು ವ್ಯಕ್ತಿಯ ಜೀವನದಲ್ಲಿ ಈ ಐದು ಸಂಗತಿಗಳನ್ನು ನೀಡಿ, ಜೀವನದಲ್ಲಿ ತೃಪ್ತಿಯ ಅನುಭವ ನೀಡುವುದು ಎನ್ನುವ ನಂಬಿಕೆಯನ್ನು ಒಳಗೊಂಡಿದೆ.

ಪ್ರದೋಷ ಪೂಜೆ ಶ್ರೇಷ್ಠ

ಪ್ರದೋಷ ಪೂಜೆ ಶ್ರೇಷ್ಠ

ದೀಪಾವಳಿ ಹಬ್ಬದ ಪೂಜೆಯು ಸೂರ್ಯಾಸ್ತದ ನಂತರ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ನಂತರದ ಸಮಯವನ್ನು ಪ್ರದೋಷ್ ಎಂದು ಕರೆಯಲಾಗುತ್ತದೆ. ಪ್ರದೋಷ್ ಸಮಯದಲ್ಲಿ ಅಮವಾಸ್ಯೆಯ ತಿಥಿಯ ಆಧಾರದ ಮೇಲೆ ಪೂಜೆಯನ್ನು ನಿರ್ಧರಿಸಲಾಗುವುದು. ದೀಪಾವಳಿ ಹಬ್ಬದ ಪೂಜೆಯು ಪ್ರದೋಷ್ದ ಸಮಯವು ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿರುತ್ತದೆ.

ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುವ ಈ ವಿಶೇಷ ಹಬ್ಬವು ಈ ಬಾರಿ 25 ಅಕ್ಟೋಬರ್ 2019ರಂದು ಶುಕ್ರವಾರದಿಂದ ಆರಂಭವಾಗುವುದು. ಕರ್ನಾಟಕದಲ್ಲಿ ಪ್ರಮುಖವಾಗಿ ನರಕಚತುರ್ದಶಿಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ಕೆಲವು ರಾಜ್ಯದಲ್ಲಿ 28 ಅಕ್ಟೋಬರ್ 2019 ಸೋಮವಾರದಿಂದ ಆಚರಿಸುವರು. 27 ಅಕ್ಟೋಬರ್ 2019ರಂದು ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆ ಮಾಡಲಾಗುವುದು. ಅಂದು ಸಂಜೆ 5:59 ರಿಂದ 8:27ರ ವರೆಗೆ ಪ್ರದೋಷದ ಸಮಯ ಉಳಿದಿರುತ್ತದೆ. ವೃಷಭ ಕಾಲವು ಸಂಜೆ 7:14 ರಿಂದ 9:18ರ ವರೆಗೆ ಇರುತ್ತದೆ.

1. ದೀಪಾವಳಿ ಹಬ್ಬದ ಮೊದಲ ದಿನ- ಗೋವತ್ಸ ದ್ವಾದಶಿ

1. ದೀಪಾವಳಿ ಹಬ್ಬದ ಮೊದಲ ದಿನ- ಗೋವತ್ಸ ದ್ವಾದಶಿ

25 ಅಕ್ಟೋಬರ್ 2019ರಂದು ಗೋವತ್ಸ ದ್ವಾದಶಿ ಆಚರಣೆ ಮಾಡಲಾಗುತ್ತದೆ. ಇದು ದೀಪಾವಳಿ ಹಬ್ಬದ ಮೊದಲ ದಿನ. ಈ ದಿನ ಹಸು ಮತ್ತು ಕರುಗಳಿಗೆ ಪೂಜೆ ಮಾಡಲಾಗುವುದು. ಮಾನವನ ಜೀವಕ್ಕೆ ಅಗತ್ಯವಾದ ವಸ್ತುಗಳ ಕೊಡುಗೆಯನ್ನು ಕಾಮಧೇನು/ ಹಸುಗಳು ನೀಡುತ್ತವೆ. ಅವುಗಳಿಗೆ ಧನ್ಯವಾದ ಹೇಳುವ ರೂಪದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವನ್ನು ನಂದಿನಿ ವ್ರತ ಎಂದು ಸಹ ಕರೆಯಲಾಗುತ್ತದೆ. ಈ ದಿನವು ಹಿಂದೂ ತಿಂಗಳಾದ ಅಶ್ವಿನ್ ಮಾಸದ ದ್ವಾದಶಿಯ ತಿಥಿಯಲ್ಲಿ ಆಚರಿಸಲಾಗುವುದು. ಈ ದಿನವನ್ನು ಮಹಾರಾಷ್ಟ್ರಗಳಲ್ಲಿ ವಾಸು ಬಾರಸ್ ಎಂದೂ ಸಹ ಕರೆಯುತ್ತಾರೆ.

ಗೋವತ್ಸ ದ್ವಾದಶಿಯ ದಿನ ಗೋವು ಗಳಿಗೆ ಪೂಜೆ ಮಾಡಲಾಗುತ್ತದೆ. ಹಸುಗಳು ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಪ್ರಾಣಿಯಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ತಾಯಿಯ ರೂಪದಲ್ಲಿ ಪೋಷಣೆ ನೀಡುವ ದೇವತೆ ಎನ್ನಲಾಗುವುದು. ಈ ದಿನ ಮಹಿಳೆಯರು ತಮ್ಮ ಮಕ್ಕಳ ಅಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ನಂದಿನಿ ವ್ರತವನ್ನು ಆಚರಿಸುತ್ತಾರೆ. ಈ ದಿನದಂದು ಉಪವಾಸ ಹಾಗೂ ಪೂಜೆಯನ್ನು ಕೈಗೊಳ್ಳುವುದರ ಮೂಲಕ ಸಂತಾನವನ್ನು ಪಡೆದುಕೊಳ್ಳಬಹುದು. ಉಪವಾಸದ ಸಮಯದಲ್ಲಿ ಗೋಧಿ ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು. ಈ ಹಬ್ಬವನ್ನು ಸಾಮಾನ್ಯವಾಗಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ. ಇಂದರಿಂದ ದೇವರು ಮನುಕುಲಕ್ಕೆ ಸಮರದ್ಧಿಯನ್ನು ಆಶೀರ್ವಧಿಸುತ್ತಾನೆ ಎನ್ನಲಾಗುತ್ತದೆ.

2. ದೀಪಾವಳಿ ಹಬ್ಬದ ಎರಡನೇ ದಿನ - ಯಮ ದೀಪಮ್

2. ದೀಪಾವಳಿ ಹಬ್ಬದ ಎರಡನೇ ದಿನ - ಯಮ ದೀಪಮ್

26 ಅಕ್ಟೋಬರ್ 2019 ದೀಪಾವಳಿ ಹಬ್ಬದ ಎರಡನೇ ದಿನ. ಈ ದಿನವನ್ನು ಯಮ ದೀಪಮ್ ಎಂದು ಕರೆಯಲಾಗುವುದು. ಈ ದಿನ ಯಮನನ್ನು ಪೂಜಿಸುವ ಉದ್ದೇಶದಿಂದ ಸಣ್ಣ ದೀಪವನ್ನು ಬೆಳಗಿಸುವುದರ ಮೂಲಕ ಯಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಯಮನಿಗೆ ದೀಪ ಬೆಳಗುವುದರ ಮೂಲಕ ಸುರಕ್ಷಿತವಾದ ಜೀವನವನ್ನು ಬೇಡಿಕೊಳ್ಳುತ್ತಾರೆ. ಭಕ್ತರಿಗೆ ಅತ್ಯಂತ ಮಹತ್ವದ ದಿನ ಇದು. ಯಮನಲ್ಲಿ ಕೇಳಿಕೊಳ್ಳುವ ಬೇಡಿಕೆಗಳು ಇಂದು ವಿಶೇಷವಾಗಿ ಈಡೇರುವುದು ಎಂದು ಹೇಳುತ್ತಾರೆ.

ಈ ಆಚರಣೆಗೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಕಥೆ ಇರುವುದನ್ನು ನಾವು ಪರಿಗಣಿಸಬಹುದು. ಕಥೆಯ ಪ್ರಕಾರ ಹಿಮಾ ಎನ್ನುವ ರಾಜನ ಮಗ ತನ್ನ 16ನೇ ವಯಸ್ಸಿನಲ್ಲಿ ಇರುವಾಗ ವಿವಾಹವಾಗಿದ್ದನು. ಅವನ ವೈವಾಹಿಕ ಜೀವನದ ನಾಲ್ಕನೇ ದಿನವೇ ಹಾವು ಕಡಿದು ಸಾಯುತ್ತಾನೆ ಎಂದು ಹೇಳಲಾಗಿತ್ತು. ಆ ನಾಲ್ಕನೇ ದಿನದಂದು ಅವನ ಹೆಂಡತಿಯು ಅವನಿಗೆ ಮಲಗಲು ಬಿಡಲಿಲ್ಲ.

ಕೋಣೆಯ ಪ್ರವೇಶ ದ್ವಾರದಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ತನ್ನ ಎಲ್ಲಾ ಆಭರಣಗಳನ್ನು ರಾಶಿ ಹಾಕಿದಳು. ನಂತರ ಸಣ್ಣ ದೀಪವನ್ನು ಎಲ್ಲೆಡೆ ಬೆಳಗಿದಳು. ತನ್ನ ಪತಿಗೆ ಕಥೆಗಳು ಹಾಗೂ ಹಾಡನ್ನು ಹೇಳಲು ಪ್ರಾರಂಭಿಸಿದಳು. ಆಸಂದರ್ಭದಲ್ಲಿ ಯಮನು ಹಾವಿನ ರೂಪವನ್ನು ತಾಳಿ ಅಲ್ಲಿಗೆ ಬಂದಿದ್ದನು. ಅವಳ ಆಭರಣದಿಂದ ಸೂಸುತ್ತಿದ್ದ ಬೆರಗುಗೊಳಿಸುವ ಬೆಳಕು ಅವನ ಕಣ್ಣುಗಳನ್ನು ಕುಕ್ಕಿದವು. ಅದರಿಂದಾಗಿ ರಾಜಕುಮಾರ ಇರುವ ಕೋಣೆಯನ್ನು ಪ್ರವೇಶಿಸಲು ಯಮನಿಗೆ ಸಾಧ್ಯವಾಗಲಿಲ್ಲ.

ಆಭರಣಗಳಿಂದ ಮಾಡಿದ ಪರ್ವತಗಳ ಮೇಲೆ ಇಡೀ ರಾತ್ರಿ ಯಮನು ಕುಳಿತು ಸಮಯವನ್ನು ಕಳೆದನು. ಕಥೆಗಳನ್ನು ಸ್ದದಿಲ್ಲದೆ ಕೇಳಿಕೊಂಡನು. ನಂತರ ಬೆಳಿಗ್ಗೆ ಸದ್ದಿಲ್ಲದೆ ಹೋದನು. ಈ ರೀತಿಯಾಗಿ ಹೆಂಡತಿ ತನ್ನ ಪತಿಯನ್ನು ರಕ್ಷಿಸಿಕೊಂಡಳು. ಅಂದಿನಿಂದ ಯಮ ದೀಪಮ್ ಎಂದು ಆಚರಿಸಲಾಯಿತು ಎನ್ನಲಾಗುತ್ತದೆ.

3. ದೀಪಾವಳಿ ಹಬ್ಬದ ಮೂರನೇ ದಿನ- ನರಕ ಚತುರ್ದಶಿ

3. ದೀಪಾವಳಿ ಹಬ್ಬದ ಮೂರನೇ ದಿನ- ನರಕ ಚತುರ್ದಶಿ

27 ಅಕ್ಟೋಬರ್ 2019ರಂದು ದೀಪಾವಳಿ ಹಬ್ಬದ ಮೂರನೇ ದಿನ ಹಾಗೂ ನರಕ ಚತುರ್ದಶಿಯ ಆಚರಣೆಯನ್ನು ಮಾಡಲಾಗುತ್ತದೆ. ಕೃಷ್ಣ ಪಕ್ಷದ ಕಾರ್ತಿಕ ಮಾಸದ 14ನೇ ದಿನದಂದು ನರಕ ಚತುರ್ದಶಿಯನ್ನು ಆಚರಿಸಲಾಗುವುದು. ನರಕಾಸುರ ಎಂಬ ರಾಕ್ಷಸನ ವಿರುದ್ಧ ಜಯವನ್ನು ಸಾಧಿಸಿದನು. ಅಂದಿನಿಂದ ಆ ವಿಶೇಷ ದಿನವನ್ನು ನರಕ ಚತುರ್ದಶಿ ಎಂದು ಕರೆಯುತ್ತಾರೆ. ಅಂತೆಯೇ ಕಾಳಿ ಚೌದಾಸ್ ಅಥವಾ ರೂಪ್ ಚೌದಾಸ್ ಎಂದು ಸಹ ಕರೆಯಲಾಗುತ್ತದೆ. ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಇನ್ನಿತರ ಪೌರಾಣಿಕ ಕಥೆಯ ಪ್ರಕಾರ ಈ ದಿನದಂದು ಸಾಕಷ್ಟು ರಾಕ್ಷಸರ ವಧೆ ನಡೆಯಿತು. ಈ ಹಿನ್ನೆಲೆಯಲ್ಲಿಯೇ ಹಬ್ಬದ ಆಚರಣೆ ನೆರವೇರಿತು ಎನ್ನಲಾಗುತ್ತದೆ.

4. ದೀಪಾವಳಿ ಹಬ್ಬದ ನಾಲ್ಕನೇ ದಿನ- ಅಮವಾಸ್ಯೆ ಲಕ್ಷ್ಮಿ ಪೂಜೆ

4. ದೀಪಾವಳಿ ಹಬ್ಬದ ನಾಲ್ಕನೇ ದಿನ- ಅಮವಾಸ್ಯೆ ಲಕ್ಷ್ಮಿ ಪೂಜೆ

28 ಅಕ್ಟೋಬರ್ 2019ರಂದು ದೀಪಾವಳಿ ಹಬ್ಬದ ನಾಲ್ಕನೇ ದಿನದ ಪೂಜೆಯನ್ನು ಕೈಗೊಳ್ಳಲಾಗುವುದು. ಅಂದು ಅಭ್ಯಂಗ ಸ್ನಾನ ಮಾಡುವುದರ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಕುಟುಂಬದ ಸದಸ್ಯರೆಲ್ಲರೂ ಸೂರ್ಯೋದಯಕ್ಕೂ ಮುಂಚೆ ಎಣ್ಣೆ ನೀರನ್ನು ದೇಹಕ್ಕೆ ಹನಿಸಿಕೊಂಡು ಸ್ನಾನ ಮಾಡುತ್ತಾರೆ. ಈ ವಿಧಾನವು ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿಯೂ ಅತ್ಯಂತ ಮಹತ್ವದ ಸಂಗತಿಯನ್ನು ಒಳಗೊಂಡಿದೆ.

ಹಿಂದೂ ಪುರಾಣದಲ್ಲಿನ ಹಬ್ಬಗಳ ಸಂಪೂರ್ಣ ಪರಿಕಲ್ಪನೆಯು ದುಷ್ಟರ ಮೇಲೆ ಒಳ್ಳೆಯದನ್ನು ಗೆಲ್ಲುವುದನ್ನು ಸೂಚಿಸುತ್ತದೆ. ಚೋಟಿ ದೀಪಾವಳಿ ಅಥವಾ ನರಕ್ ಚತುರ್ದಶಿ ಸಹ ಈ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ. ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ, ಶ್ರೀಕೃಷ್ಣ ನರಕಾಸುರನನ್ನು ಕೊಂದಿದ್ದನು. ಆಗ ಅವನ ರಕ್ತವು ಕೃಷ್ಣನ ಹಣೆಯ ಭಾಗಕ್ಕೆ ತಗುಲಿತ್ತು. ಅದನ್ನು ಶುದ್ಧಗೊಳಿಸಲು ಕೃಷ್ಣನ ರಾಣಿಯರು ಸಂಪೂರ್ಣವಾದ ಸ್ನಾನ ಮಾಡಿಸಿದರು. ಅದನ್ನು ಅಭ್ಯಂಗ ಸ್ನಾನ ಎಂದು ಕರೆಯಲಾಯಿತು. ಹಾಗಾಗಿ ಹಬ್ಬದ ದಿನ ಅಭ್ಯಂಗ ಸ್ನಾನ ಮಾಡುವುದು ಶುದ್ಧತೆ ಹಾಗೂ ಆರೋಗ್ಯ ವೃದ್ಧಿಯನ್ನು ಸೂಚಿಸುತ್ತದೆ.

5. ದೀಪಾವಳಿ ಹಬ್ಬದ 5ನೇ ದಿನ- ಬಾಯ್ದೋಜಾ

5. ದೀಪಾವಳಿ ಹಬ್ಬದ 5ನೇ ದಿನ- ಬಾಯ್ದೋಜಾ

28 ನವೆಂಬರ್ 2019ರಂದು ಬಾಯ್ದೋಜಾ ಹಬ್ಬವನ್ನು ಆಚರಿಸುವುದರ ಮೂಲಕ ಹಬ್ಬದ ಕೊನೆಯ ಆಚರಣೆಯನ್ನು ಕೈಗೊಳ್ಳಲಾಗುವುದು. ಕೊನೆಯ ದಿನವಾದ ಇಂದು ಸೋದರ ಮತ್ತು ಸೋದರಿಯರು ಅತ್ಯಂತ ಖುಷಿಯಿಂದ ಹಬ್ಬದ ಆಚರಣೆ ಮಾಡುತ್ತಾರೆ. ಶುಕ್ಲ ಪಕ್ಷ, ಕಾರ್ತಿಕ ಮಾಸದ 15ನೇ ದಿನದಂದು ಆಚರಿಸಲಾಗುವುದು.

ಭಾಯ್ ದೂಜ್ ಅನ್ನು ಏಕೆ ಆಚರಿಸಲಾಗುತ್ತದೆ?

ಭಾಯ್ ದೂಜ್ ಸಹೋದರರು ಮತ್ತು ಸಹೋದರಿಯರ ನಡುವಿನ ಬಾಂಧವ್ಯವನ್ನು ಗೌರವಿಸುವ ಹಬ್ಬವಾಗಿದೆ. ಇದು ಒಬ್ಬ ಸಹೋದರ ಮತ್ತು ಸಹೋದರಿ ಪರಸ್ಪರರ ಪ್ರೀತಿ ಮತ್ತು ಗೌರವ ನೀಡುವ ಉತ್ಸಾಹ ಭರಿತ ಆಚರಣೆಯಾಗಿದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗಾಗಿ ಆರೋಗ್ಯಕರ, ಸಂತೋಷದ ಮತ್ತು ಸುರಕ್ಷಿತ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಅವರು ತಮ್ಮ ಸಹೋದರಿಯರಿಗೆ ತಮ್ಮ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಲು ಉಡುಗೊರೆಗಳನ್ನು ನೀಡುತ್ತಾರೆ. ಸಹೋದರ ಸಹೋದರಿಯರ ಈ ಹಬ್ಬದಲ್ಲಿ ಇಡೀ ಕುಟುಂಬವು ಒಗ್ಗೂಡಿ ಈ ಹಬ್ಬದ ದಿನವನ್ನು ಸಿಹಿತಿಂಡಿಗಳು ಮತ್ತು ಇತರ ರುಚಿಕರವಾದ ಭಕ್ಷ್ಯಗಳನ್ನು ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ.

ಭಾಯ್ ದೂಜ್ ಮೂಲದೊಂದಿಗೆ ಅನೇಕ ದಂತಕಥೆಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ದಿನ ಸಾವಿನ ದೇವರು ಯಮ ತನ್ನ ಸಹೋದರಿ ಯಮಿ ಅಥವಾ ಯಮುನಾಗೆ ಭೇಟಿ ನೀಡಿದ್ದನೆಂದು ನಂಬಲಾಗಿದೆ. ಅವಳು ಅವನನ್ನು 'ಆರತಿ' ಮತ್ತು ಹೂಮಾಲೆಗಳೊಂದಿಗೆ ಸ್ವಾಗತಿಸಿ ಅವನ ಹಣೆಯ ಮೇಲೆ 'ತಿಲಕ್' ಹಾಕಿ, ಸಿಹಿ ತಿಂಡಿಗಳು ಮತ್ತು ವಿಶೇಷ ಭಕ್ಷ್ಯಗಳನ್ನು ಅರ್ಪಿಸಿದಳು. ಪ್ರತಿಯಾಗಿ ಯಮರಾಜ್ ಅವರಿಗೆ ಒಂದು ವಿಶಿಷ್ಟವಾದ ಉಡುಗೊರೆಯನ್ನು ನೀಡಿದರು. ಈ ದಿನ ತಮ್ಮ ಸಹೋದರಿಯಿಂದ ಆರತಿ ಮತ್ತು ತಿಲಕವನ್ನು ಸ್ವೀಕರಿಸುವ ಸಹೋದರರನ್ನು ರಕ್ಷಿಸಲಾಗುವುದು ಮತ್ತು ದೀರ್ಘಾಯುಷ್ಯವನ್ನು ಪಡೆಯುತ್ತಾರೆ ಎಂದು ಘೋಷಿಸಿದರು. ಇದಕ್ಕಾಗಿಯೇ ಈ ದಿನವನ್ನು 'ಯಮ ದ್ವಿತಿಯಾ' ಅಥವಾ 'ಯಮದ್ವಿತೇಯ' ಎಂದೂ ಕರೆಯುತ್ತಾರೆ.

ಮತ್ತೊಂದು ದಂತಕಥೆಯ ಪ್ರಕಾರ, ನರಕಸುರನನ್ನು ಕೊಂದ ನಂತರ ಶ್ರೀಕೃಷ್ಣನು ತನ್ನ ಸಹೋದರಿ ಸುಭದ್ರಾಳನ್ನು ಭೇಟಿ ಮಾಡಿದನು. ಅವಳು ಅವನನ್ನು ಸಿಹಿತಿಂಡಿಗಳು, ಹೂಮಾಲೆಗಳು, ಆರತಿ ಮತ್ತು ತಿಲಕಗಳೊಂದಿಗೆ ಪ್ರೀತಿಯಿಂದ ಸ್ವಾಗತಿಸಿದಳು. ಈ ಹಿನ್ನೆಲೆಯಲ್ಲಿಯೇ ಬಾಯ್ದೋಜಾ ಆಚರಣೆಯನ್ನು ಮಾಡಲಾಗುತ್ತದೆ.

6. ಪಟಾಕಿಗಳಿಂದ ದೂರವಿರಿ

6. ಪಟಾಕಿಗಳಿಂದ ದೂರವಿರಿ

ದೇವರು ತನ್ನ ಪೂಜೆಯನ್ನು ಪಟಾಕಿ ಸಿಡಿಸುವುದರ ಮೂಲಕ ಆಚರಿಸಬೇಕು ಎಂದು ಹೇಳುವುದಿಲ್ಲ. ಭಕ್ತರ ನಿರ್ಮಲವಾದ ಮನಸ್ಸು ಹಾಗೂ ಶುದ್ಧವಾದ ಭಕ್ತಿಯೇ ಅತ್ಯಂತ ಶ್ರೇಷ್ಠವಾದದ್ದು. ಪಟಾಕಿ ಸಿಡಿಸುವುದು ಲಕ್ಷ್ಮಿ ದೇವಿಯಾದ ದುಡ್ಡನ್ನು ಸುಟ್ಟಂತಾಗುವುದು. ಅನಾರೋಗ್ಯವನ್ನು ಸೃಷ್ಟಿಸುವ ಹಾಗೂ ಅಧಿಕ ಅಪಾಯಗಳಿಂದ ಕೂಡಿರುವ ಪಟಾಕಿಗಳನ್ನು ಸಿಡಿಸುವುದನ್ನು ನಿಲ್ಲಿಸಿ. ಭಕ್ತಿಯಿಂದ ದೇವರಿಗೆ ದೀಪವನ್ನು ಬೆಳಗಿ. ಸಂತೋಷವನ್ನು ಹಂಚಿಕೊಳ್ಳಿ. ಅಪಾಯದಿಂದ ಮುಕ್ತರಾಗಿ ಸಂಭ್ರಮದಿಂದ ಹಬ್ಬದ ಆಚರಣೆ ಮಾಡಿ.

English summary

Deepavali 2019 date, time & importance

Deepawali is certainly the largest Hindu festival observed in India. Deepavali can be configured as ‘Deep which means light’ and ‘avali which means a row’, i.e, a row of lights. A festival of Deepavali is marked by the four days of celebrations which illumine the land with its brilliance and dazzles everyone with its joy. Diwali or popularly known as Deepavali is one of the most significant festival in India. Diwali is an Indian festival of light, pyrotechnic display, prayers and celebratory events all across the globe.
X
Desktop Bottom Promotion