For Quick Alerts
ALLOW NOTIFICATIONS  
For Daily Alerts

ಶಾಸ್ತ್ರದ ಪ್ರಕಾರ ಇಂತಹ ವಸ್ತುಗಳನ್ನು ದೀಪಾವಳಿಯಲ್ಲಿ ಉಡುಗೊರೆಯಾಗಿ ನೀಡಲೇಬಾರದು!

|
Deepavali 2019 : ದೀಪಾವಳಿ ಹಬ್ಬದ ದಿನ ಮನೆಗೆ ತರಬೇಕಾದ ವಸ್ತುಗಳು | ಈ ದಿನ ನೀಡಬಾರದ ಉಡುಗೊರೆಗಳು

ದೀಪಗಳ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮನೆ ತುಂಬಾ ದೀಪಗಳಿಂದ ಅಲಂಕರಿಸಿ ಸಂಭ್ರಮಿಸುವ ಸಡಗರದ ಹಬ್ಬ ಇದು. ಬಂಧುಬಾಂಧವರೊಂದಿಗೆ ಉಡುಗೊರೆಗಳನ್ನು ಹಂಚಿಕೊಳ್ಳುತ್ತಾ, ಹೊಸ ಬಟ್ಟೆ ತೊಟ್ಟು, ತರಹೇವಾರಿ ಸಿಹಿತಿನಿಸುಗಳನ್ನು ಮಾಡಿ ಸಂಭ್ರಮಿಸುವ ಸುದಿನ. ಈ ವರ್ಷ ಅಕ್ಟೋಬರ್ 27ಕ್ಕೆ ದೀಪಾವಳಿ ಹಬ್ಬದ ಸಂಭ್ರಮ ದೇಶದಾದ್ಯಂತ ಕಳೆಗಟ್ಟಲಿದೆ. ಮಹಾಲಕ್ಷ್ಮೀಯನ್ನು ಮನೆತುಂಬಿಸಿಕೊಂಡು ಆಕೆಯ ಪೂಜೆ ಮಾಡಿ ದೀಪ ಬೆಳಗಿ ನಿನ್ನ ಕೃಪೆ ಯಾವಾಗಲೂ ನಮ್ಮ ಮನೆಯ ಮೇಲಿರಲಿ ತಾಯಿ ಎಂದು ಬೇಡಿಕೊಳ್ಳುವ ಹಬ್ಬ ದೀಪಾವಳಿ.

ದೀಪಾವಳಿಯ ತಯಾರಿ ಬಹಳ ಮುಂಚೆಯೇ ಪ್ರಾರಂಭವಾಗಿ ಬಿಡುತ್ತದೆ. ಬೆಂಗಳೂರಿನ ಬೀದಿಗಳಲ್ಲಿ ಈಗಾಗಲೇ ದೀಪಗಳು, ಹಣತೆಗಳು, ದೀಪಾವಳಿ ಹಬ್ಬದ ವಸ್ತುಗಳ ಮಾರಾಟ ಪ್ರಾರಂಭವಾಗಿ ಆಗಿದೆ. ಲಕ್ಷ್ಮೀ ದೇವಿಯ ಆಗಮನಕ್ಕಾಗಿ ಜನರು ತಮ್ಮ ಮನೆಯನ್ನು ಸ್ವಚ್ಛಗೊಳಿಸಿ ಅಲಂಕರಿಸಲು ಈಗಾಗಲೇ ಸಿದ್ಧತೆ ಶುರು ಮಾಡಿಬಿಟ್ಟಿದ್ದಾರೆ.

Deepawali

ದೀಪಾವಳಿಯಲ್ಲಿ ಬಂಧುಗಳನ್ನು ಕರೆಸಿ ಉಪಚರಿಸಿ ಅವರಿಗೆ ಉಡುಗೊರೆಗಳನ್ನು ನೀಡುವ ಸಂಪ್ರದಾಯ ಕೂಡ ಜಾರಿಯಲ್ಲಿದೆ. ಕೆಲವು ಕಡೆ ಸ್ನೇಹಿತರಿಗೆ, ನೆರೆಹೊರೆಯವರಿಗೆ, ಸಂಬಂಧಿಗಳಿಗೆ ಉಡುಗೊರೆ ನೀಡುವುದು ದೀಪಾವಳಿ ಆಚರಣೆಯ ಒಂದು ಭಾಗವೇ ಆಗಿದೆ. ಆದರೆ ಕೆಲವು ಉಡುಗೊರೆಗಳನ್ನು ನೀಡುವುದು ಧರ್ಮಗ್ರಂಥದ ಪ್ರಕಾರ ನಿಷಿದ್ಧ ಎಂಬ ವಿಚಾರ ನಿಮಗೆ ತಿಳಿದಿದೆಯೇ?.

ಹೌದು ಶಾಸ್ತ್ರದ ಪ್ರಕಾರ ಕೆಲವು ಉಡುಗೊರೆಗಳನ್ನು ಸ್ವೀಕರಿಸುವುದು ಮತ್ತು ನೀಡುವುದು ಅಮಂಗಳಕರ ಎಂದು ಹೇಳಲಾಗುತ್ತದೆ. ಹಾಗಾದ್ರೆ ದೀಪಾವಳಿಯಲ್ಲಿ ಯಾವ ಉಡುಗೊರೆಗಳನ್ನು ನೀಡಬಾರದು ಮತ್ತು ಸ್ವೀಕರಿಸಬಾರದು ಎಂಬ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೆವೆ, ಮುಂದೆ ಓದಿ.

ಗೀತೆಯ ಪುಸ್ತಕದ ಉಡುಗೊರೆ ನಿಷಿದ್ಧ

ಗೀತೆಯ ಪುಸ್ತಕದ ಉಡುಗೊರೆ ನಿಷಿದ್ಧ

ಕುರುಕ್ಷೇತ್ರ ಯುದ್ಧದಲ್ಲಿ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯನ್ನು ಸಾರುತ್ತಿರುವ ಚಿತ್ರವಿರುವ ಪುಸ್ತಕವನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಅಥವಾ ಅದನ್ನು ಮನೆಯ ಗೋಡೆಯ ಮೇಲೂ ನೇತುಹಾಕಬಾರದು. ಇದು ಧರ್ಮಗ್ರಂಥದ ಪ್ರಕಾರ ನಿಷಿದ್ಧವೆನ್ನಲಾಗಿದೆ.

ಉಗ್ರಸ್ವರೂಪಿ ದೇವತೆಗಳ ಫೋಟೋ ಉಡುಗೊರೆ ಬೇಡ

ಉಗ್ರಸ್ವರೂಪಿ ದೇವತೆಗಳ ಫೋಟೋ ಉಡುಗೊರೆ ಬೇಡ

ದೀಪಾವಳಿಯ ಸಂದರ್ಭದಲ್ಲಿ ದೇವತೆಗಳ ಚಿತ್ರಗಳನ್ನು ನೀಡುವುದು ರೂಢಿಯಲ್ಲಿದೆ. ಆದರೆ ದೇವತೆಗಳು ಹೋರಾಟ ನಡೆಸುತ್ತಿರುವುದು ಅಥವಾ ಉಗ್ರಸ್ವರೂಪಿಯಾಗಿರುವ ಚಿತ್ರಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಎನ್ನುತ್ತದೆ ಶಾಸ್ತ್ರ. ಹಾಗಂತ ಇದು ದೀಪಾವಳಿಗೆ ಮಾತ್ರವೇ ಸೀಮಿತವಲ್ಲ. ಬದಲಾಗಿ ನೀವು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿರಬೇಕಾಗಿರುವ ಸಂಗತಿ.

ಇವುಗಳೂ ಕೂಡ ನಿಷಿದ್ಧ

ಇವುಗಳೂ ಕೂಡ ನಿಷಿದ್ಧ

ಧರ್ಮ ಗ್ರಂಥಗಳಲ್ಲಿ ರಾಮಾಯಣ, ಮಹಾಭಾರತ, ಗ್ರಹಣ, ಕಾಡು,ಪ್ರಾಣಿಗಳು, ಕ್ಷಾಮ ಮತ್ತು ಸೂರ್ಯಾಸ್ತದ ಚಿತ್ರಣಗಳಿರುವ ಉಡುಗೊರೆಗಳನ್ನು ಯಾರಿಗೂ ನೀಡಬಾರದು ಮತ್ತು ನೀವು ಕೂಡ ಯಾರಿಂದಲೂ ಇಂತಹ ಉಡುಗೊರೆಗಳನ್ನು ಪಡೆಯಬಾರದು.

ಕುಳಿತ ಲಕ್ಷ್ಮೀಯ ಫೋಟೋ ಮಾತ್ರ ಒಳ್ಳೇದು

ಕುಳಿತ ಲಕ್ಷ್ಮೀಯ ಫೋಟೋ ಮಾತ್ರ ಒಳ್ಳೇದು

ದೀಪಾವಳಿ ಸಂದರ್ಭದಲ್ಲಿ ತಾಯಿ ಮಹಾಲಕ್ಷ್ಮೀಗಾಗಿ ಎಲ್ಲರೂ ಕಾಯುತ್ತಾರೆ. ಹೀಗಿರುವಾಗ ಯಾರಾದರೂ ನಿಮಗೆ ಲಕ್ಷ್ಮೀ ದೇವಿಯ ಫೋಟೋ ಉಡುಗೊರೆಯಾಗಿ ನೀಡಲು ಬಂದರೆ ಮೊದಲು ಲಕ್ಷ್ಮೀ ದೇವಿ ಕುಳಿತ ಸ್ಥಿತಿಯಲ್ಲಿದ್ದಾಳೆಯೇ ಎಂಬುದನ್ನು ಪರೀಕ್ಷಿಸಿ. ಶಾಸ್ತ್ರದ ಪ್ರಕಾರ ಲಕ್ಷ್ಮೀ ದೇವಿ ಮನೆಯಲ್ಲಿ ಕುಳಿತುಕೊಳ್ಳುವುದು ಶ್ರೇಯಸ್ಕರ ಎಂದು ಹೇಳಲಾಗಿದೆ. ನಿಂತ ಸ್ಥಿತಿಯಲ್ಲಿರುವ ಲಕ್ಷ್ಮೀಯ ಫೋಟೋ ಉಡುಗೊರೆಯಾಗಿ ಪಡೆಯದೇ ಇರುವುದೇ ಒಳಿತು.

ಜಲಪಾತದ ನೀರಿನ ಫೋಟೋ ಬೇಡವೇ ಬೇಡ

ಜಲಪಾತದ ನೀರಿನ ಫೋಟೋ ಬೇಡವೇ ಬೇಡ

ಪ್ರಕೃತಿ ಸೌಂದರ್ಯದ ಪೇಯಿಟಿಂಗ್ ಅಥವಾ ಫೋಟೋಗಳನ್ನು ಉಡುಗೊರೆಯಾಗಿ ಕೆಲವರು ನೀಡುತ್ತಾರೆ. ಆದರೆ ಜಲಪಾತದ ನೀರಿನ ಫೋಟೋವನ್ನು ಯಾರಿಂದಲೂ ಉಡುಗೊರೆಯಾಗಿ ಪಡೆಯಬೇಡಿ ಮತ್ತು ನೀವೂ ಕೂಡ ಯಾರಿಗೂ ಇಂತಹ ಫೋಟೋಗಳನ್ನು ಉಡುಗೊರೆಯಾಗಿ ನೀಡಬೇಡಿ.

ಮುಳ್ಳು ಸಸ್ಯಗಳ ಫೋಟೋ ಉಡುಗೊರೆ ಬೇಡ

ಮುಳ್ಳು ಸಸ್ಯಗಳ ಫೋಟೋ ಉಡುಗೊರೆ ಬೇಡ

ಕಳ್ಳಿ ಸಸ್ಯಗಳು, ಬೊನ್ಸಾಯ್ ಸಸ್ಯಗಳ ಫೋಟೋಗಳ ಉಡುಗೊರೆಯನ್ನು ಯಾರಿಗೂ ನೀಡಬೇಡಿ. ಖಂಡಿತ ಇದು ತೆಗೆದುಕೊಳ್ಳುವವರಿಗೆ ಮತ್ತು ಪಡೆಯುವವರಿಗೆ ಅಸಹ್ಯಕರವಾಗಿರುತ್ತದೆ. ಕಳ್ಳಿ ಸಸ್ಯಗಳು ಮುಳ್ಳಿರುವ ಸಸ್ಯಗಳು. ಮುಳ್ಳು ಎಂದರೆ ಕಷ್ಟದ ಸಂಕೇತದಂತೆ ಬಿಂಬಸಲಾಗುತ್ತದೆ. ಹಾಗಾಗಿ ಲಕ್ಷ್ಮೀ ದೇವಿಯ ಆವಾಹನೆಯ ಸಂದರ್ಭದಲ್ಲಿ ಇಂತಹ ಸಸ್ಯಗಳ ಫೋಟೋಗಳು ಅಷ್ಟೇನು ಶ್ರೇಯಸ್ಕರವಲ್ಲವೆನ್ನುತ್ತದೆ ಶಾಸ್ತ್ರ.

ತೀಕ್ಷ್ಣ ವಿಚಾರಗಳ ಅದಲು-ಬದಲು

ತೀಕ್ಷ್ಣ ವಿಚಾರಗಳ ಅದಲು-ಬದಲು

ಉಡುಗೊರೆಯಲ್ಲಿ ತೀಕ್ಷ್ಣ ವಿಚಾರಗಳ ವಿನಿಮಯ ಮಾಡಿಕೊಳ್ಳುವವರ ನಡುವೆ ಕಹಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಉಡುಗೊರೆ ನೀಡುವುದೇ ಆದಲ್ಲಿ ಆದಷ್ಟು ಉತ್ತಮ ವಸ್ತುಗಳನ್ನು ಆಯ್ದು ಉಡುಗೊರೆ ನೀಡುವುದಕ್ಕೆ ಪ್ರಯತ್ನಿಸಿ. ಇನ್ನೊಬ್ಬರ ಜೀವನಕ್ಕೆ ತೊಂದರೆ ಉಂಟು ಮಾಡುವ ಅಥವಾ ಶಾಸ್ತ್ರ ಅಸಮ್ಮತಿಸುವ ವಸ್ತುಗಳನ್ನು ಖರೀದಿಸದೇ ಸರ್ವೇ ಜನಃ ಸುಖಿನೋ ಭವಂತು ಎಂದರೆ ಎಲ್ಲರಿಗೂ ಶ್ರೇಯಸ್ಸು.

English summary

Do Not Share These Type Of Gift During Deepawali

Diwali is almost synonymous with gifts these days. Gifts, actually, are beautiful. They convey to the receiver that you were on their minds, invested time in thinking what they would like and have gone out of your way to buy those things. However, most of us would agree that Diwali gifts hardly fall in this bracket. More often than not they range from the clueless to the stupid and even bordering on insulting.
X
Desktop Bottom Promotion