For Quick Alerts
ALLOW NOTIFICATIONS  
For Daily Alerts

ದೀಪಾವಳಿ 2019 : ಪಟಾಕಿ ಪರಿಸರ, ಆರೋಗ್ಯ, ಪ್ರಾಣಿಗಳ ಮೇಲೆ ಎಷ್ಟೆಲ್ಲಾ ಮಾರಕ ಗೊತ್ತೆ? ತಪ್ಪದೇ ಒಮ್ಮೆ ಓದಿ

|
Deepavali 2019 : Why do we burst crackers? What are the ill effects of fire crackers?

ಪಟಾಕಿ ಇಲ್ಲದ ದೀಪಾವಳಿಯನ್ನು ಇಂದು ಊಹಿಸುವುದೇ ಕಷ್ಟ. ಮೂಲತಃ ಕೇವಲ ದೀಪಗಳ ಬೆಳಗುವಿಕೆಯಿಂದ ಸುಂದರಗೊಳ್ಳುತ್ತಿದ್ದ ಸಂಜೆಗೆ ಯಾವಾಗ ಪಟಾಕಿ ತಳಕು ಹಾಕಿಕೊಂಡಿತೋ ಗೊತ್ತಿಲ್ಲ. ಆದರೆ ಕೆಲವು ನಿಮಿಷಗಳ ಸಂಭ್ರಮವನ್ನು ಮಾತ್ರ ನೀಡುವುದಂತೂ ನಿಜ. ಆದರೆ ಈ ಸಂಭ್ರಮದ ಬಳಿಕ ಪಟಾಕಿಯ ಹೊಗೆ, ವಿಷಕಾರಿ ಅನಿಲಗಳು, ವಿಷಕಾರಿ ವಸ್ತುಗಳು, ಸದ್ದು ಮೊದಲಾದವು ಹಲವು ರೀತಿಯಲ್ಲಿ ಮುಂದಿನ ಕಾಲದಲ್ಲಿ ವಾತಾವರಣವನ್ನು ಕಲುಷಿತಗೊಳಿಸುತ್ತದೆ, ಕಲುಷಿತಗೊಳುತ್ತಲೇ ಹೋಗುತ್ತದೆ. ಇಂದು ಪಟಾಕಿ ಸಂಭ್ರಮಕ್ಕಿಂತಲೂ ಹೆಚ್ಚಾಗಿ ಪೈಪೋಟಿ, ಪ್ರತಿಷ್ಠೆ, ಗ್ರಾಹಕರನ್ನು ಆಕರ್ಷಿಸಲು ಹಾಗೂ ದೊಡ್ಡ ವಹಿವಾಟುಗಳಿಗೆ ಮಣೆ ಹಾಕುವ ನಿಟ್ಟಿನಲ್ಲಿಯೇ ಬಳಕೆಯಾಗುತ್ತಿದೆಯೇ ಹೊರತು ನಿಜವಾದ ಹಬ್ಬದ ಸಂಭ್ರಮ ಕಮರಿ ಹೋಗಿದೆ. ಅಲ್ಲದೇ ಪಟಾಕಿಯ ದುಬಾರಿ ದರಗಳು ಮಧ್ಯಮವರ್ಗದ ಜನತೆಗೆ ಕೊಳ್ಳಲೂ ಆಗದೇ, ಮಕ್ಕಳನ್ನು ನಿರಾಶೆಗೊಳಿಸಲೂ ಆಗದೆ ದ್ವಂದ್ವಕ್ಕೆ ದೂಡುವ ರಾಕ್ಷಸನೂ ಆಗಿದೆ.

Deepavali

ಪಟಾಕಿ ಸುಟ್ಟಾಗ ದೊರಕುವ ಬೆಳಕು ಹಾಗೂ ಸದ್ದು ಆಕ್ಷಣಕ್ಕೆ ಸಂಭ್ರಮ ಮೂಡಿಸಿದರೂ, ಈ ಬೆಳಕು ಅಡಗಿದ ಬಳಿಕ ಏಳುವ ಹೊಗೆ ಅತ್ಯಂತ ವಿಷಕಾರಿಯಾಗಿದ್ದು ಈ ಹೊಗೆಯಲ್ಲಿ ಸೊಳ್ಳೆ, ನೊಣಗಳು ಉಸಿರಾಡದೇ ಸತ್ತೇ ಹೋಗುತ್ತವೆ. ಒಳ್ಳೆಯದೇ ಆಯಿತು ಎಂದು ಕುಹಕವಾಡುವವರಿಗೆ ಇಲ್ಲೊಂದು ಸತ್ಯ ಹೇಳಲೇಬೇಕು. ಸೊಳ್ಳೆ ಸಾಯುವುದಕ್ಕಿಂತಲೂ ಮೊದಲು ನಮಗೆ ಅನ್ನ ನೀಡುವ ಸಸ್ಯಗಳ ಪರಾಗಸ್ಪರ್ಷಕ್ಕೆ ಅಗತ್ಯವಾಗಿರುವ ಇತರ ಅತ್ಯಂತ ಚಿಕ್ಕ ಕೀಟಗಳು ಮತ್ತು ಕ್ರಿಮಿಗಳು ಸತ್ತು ಹೋಗುತ್ತವೆ. ಆಗ ಬೆಳೆ ಎಲ್ಲಿಂದ ಬರಬೇಕು? ಈ ವಿಷಯವನ್ನು ಇಂದು ವಿಜ್ಞಾನ ಹಲವು ಪುರಾವೆಗಳ ಮೂಲಕ ಸಾಬೀತುಪಡಿಸಿದ್ದು ಹಲವಾರು ಪ್ರಗತಿಪರ ರಾಷ್ಟ್ರಗಳಲ್ಲಿ ವೃತ್ತಿನಿರತರ ಹೊರತು ಇತರರಿಗೆ ಪಟಾಕಿ ನೀಡುವುದನ್ನೇ ನಿಷೇಧಿಸಿವೆ. ಏಕೆಂದರೆ ಈ ಹೊಗೆಯಲ್ಲಿರುವ ವಿಷಕಾರಕ ಅಂಶಗಳು ಉಸಿರಾಟದ ಮೂಲಕ ದೇಹ ಸೇರುವ ಮೂಲಕ ಸಕಲ ಜೀವಿಗಳಿಗೆ ಅಪಾಯವನ್ನೊಡ್ಡುತ್ತವೆ.

ಇವುಗಳಲ್ಲಿ ಮುಖ್ಯವಾದ ಅಂಶಗಳು ಯಾವುವು ಗೊತ್ತೆ?

ಇವುಗಳಲ್ಲಿ ಮುಖ್ಯವಾದ ಅಂಶಗಳು ಯಾವುವು ಗೊತ್ತೆ?

ತಾಮ್ರ: ಉಸಿರಾಟದ ನಾಳಗಳಲ್ಲಿ ಉರಿ ತರಿಸುತ್ತದೆ

ಕ್ಯಾಡ್ಮಿಯಂ: ರಕ್ತದಲ್ಲಿ ಸೇರಿ ರಕ್ತ ಆಮ್ಲಜನಕವನ್ನು ಹೊರುವ ಕ್ಷಮತೆಯನ್ನು ಕುಗ್ಗಿಸುತ್ತದೆ, ತನ್ಮೂಲಕ ರಕ್ತಹೀನತೆ ಎದುರಾಗುತ್ತದೆ.

ಸೀಸ: ನರವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ

ಮೆಗ್ನೀಶಿಯಂ: ಇದರ ಹೊಗೆಯನ್ನು ಸೇವಿಸಿದರೆ metal fume fever ಎಂಬ ಜ್ವರ ಎದುರಾಗುತ್ತದೆ.

ಸತು: metal fume fever ಜ್ವರ ಹಾಗೂ ವಾಂತಿ ಎದುರಾಗುತ್ತದೆ.

ಸೋಡಿಯಂ: ಇದೊಂದು ಕ್ಷಿಪ್ರವಾಗಿ ವಿಕಿರಣ ಸೂಸುವ ಧಾತುವಾಗಿದ್ದು ಆರೋಗ್ಯಕ್ಕೆ ಮಾರಕ ಹಾಗೂ ನೀರಿನೊಂದಿಗೆ ಬೆರೆತಾಗ ಸಿಡಿದು ಬೊಬ್ಬೆಗಳನ್ನೆಬ್ಬಿಸುತ್ತದೆ.

ಪಟಾಕಿಯಿಂದ ಎದುರಾಗುವ ಅನಾರೋಗ್ಯಗಳು

ಪಟಾಕಿಯಿಂದ ಎದುರಾಗುವ ಅನಾರೋಗ್ಯಗಳು

ಪಟಾಕಿಯ ಹೊಗೆ ಮೊತ್ತ ಮೊದಲಾಗಿ ವಾಯುವನ್ನು ಪ್ರದೂಷಿತಗೊಳಿಸುತ್ತದೆ ಹಾಗೂ ಈಗಾಗಲೇ ಗಾಳಿಯಲ್ಲಿ ತೇಲುತ್ತಿರುವ ಕಣಗಳಿಗೆ ಅಂಟಿಕೊಂಡು ಇವುಗಳ ಸಾಂದ್ರತೆ ಹಾಗೂ ತೀವ್ರತೆಯನ್ನು ಹೆಚ್ಚಿಸುತ್ತವೆ. ಪಟಾಕಿ ಸಿಡಿದ ಬಳಿಕ ಹರಡುವ ಕಣಗಳು ನೆಲದಲ್ಲಿ ಉಳಿದು ತಮ್ಮಲ್ಲಿರುವ ಗಂಧಕದ ಆಕ್ಸೈಡ್ ಮತ್ತು ನೈಟ್ರೋಜೆನ್ ಆಕ್ಸೈಡ್, ಲೋಹದ ಪುಡಿ ಮತ್ತು ಇತರ ಸಾವಯವ ಪ್ರದೂಶಕಗಳು ಅಂದರೆ ಮಣ್ಣಿನೊಡನೆ ಬೆರೆತು ಮಣ್ಣಿನ ಗುಣವನ್ನೇ ಬದಲಿಸುವ ಮೂಲಕ ನೆಲವನ್ನೂ ನಿಸ್ಸಾರಗೊಳಿಸುತ್ತವೆ.

ಸಾಮಾನ್ಯವಾಗಿ ದೊಡ್ಡ ಸದ್ದು ಮಾಡುವ ಪಟಾಕಿಗಳಿಗಿಂತ ಪುಟ್ಟ ಸುರುಸುರು ಬತ್ತಿ, ಹೂಕುಂಡ, ನೆಲಚಕ್ರ ಮೊದಲಾದವು ಅಷ್ಟೇ ಏಕೆ, ಕೇವಲ ಪಟಾಕಿ ಪಿಸ್ತೂಲಿಗೆ ಹಾಕಿ ಹೊಡೆಯುವ ಪುಟ್ಟ ಮದ್ದು ಸಹಾ ತಮ್ಮ ಪಾಲಿನ ಪ್ರದೂಷಣೆಯನ್ನು ವಾತಾವರಣಕ್ಕೆ ನೀಡುತ್ತವೆ. ಈ ಪುಟ್ಟ ಮದ್ದಿನ ಹೊಗೆಯೂ ಪುಟ್ಟ ಮಗುವಿನ ಉಸಿರಾಟಕ್ಕೆ ಮಾರಕವಾಗಬಹುದು.

ದೀಪಾವಳಿ ಬಂದಾಕ್ಷಣ ಪ್ರತಿ ಮನೆಯಲ್ಲಿಯೂ ಹೊಡೆಯಲಾಗುವ ಪಟಾಕಿಯಿಂದ ಗಾಳಿಯಲ್ಲಿ ಹೊಗೆ ಕಣ್ಣಿಗೆ ಕಾಣುವಷ್ಟು ದಟ್ಟವಾಗಿ ಮೇಳೈಸುತ್ತದೆ. ಮಹಾನರಗಳಲ್ಲಂತೂ ನಗರಕ್ಕೇ ಬೆಂಕಿ ಬಿದ್ದಂತೆ ಹೊಗೆ ಏಳುತ್ತದೆ. ಈ ಸಮಯದಲ್ಲಿ ಗಂಟಲು, ಮೂಗು, ಕಣ್ಣುಗಳಲ್ಲಿ ಉರಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು ಮುಂದಿನ ದಿನಗಳಲ್ಲಿ ಇದು ಉಲ್ಬಣಗೊಂಡು ವಿಷಮಸ್ಥಿತಿಯನ್ನೂ ತಲುಪಬಹುದು.

ಪಟಾಕಿಯ ಹೊಗೆ ಮತ್ತು ವಿಷಕಾರಿ ವಸ್ತುಗಳು ದೇಹ ಸೇರಿದರೆ ಇದರಿಂದ ಹೃದಯ, ಶ್ವಾಸವ್ಯವಸ್ಥೆ ಹಾಗೂ ರಕ್ತಪರಿಚಲನೆಯಲ್ಲಿ ಪ್ರಮುಖವಾದ ತೊಂದರೆಗಳು ಎದುರಾಗುತ್ತವೆ. ಒಂದು ವೇಳೆ ಈಗಾಗಲೇ ಶೀತ, ಅಲರ್ಜಿ, ಕೆಮ್ಮು ಮೊದಲಾದ ತೊಂದರೆಗಳಿದ್ದವರಿಗೆ ಈ ಹೊಗೆ ಈಗಿರುವ ಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗಬಹುದು. ಶೀತದಿಂದ ಕಟ್ಟಿದ್ದ ಮೂಗು ಇನ್ನಷ್ಟು ಕಟ್ಟಿಕೊಂಡು, ಕಫ ಇನ್ನಷ್ಟು ಗಟ್ಟಿಯಾಗಿ ಉಸಿರಾಟವೇ ಕಷ್ಟವಾಗಬಹುದು.

ಮಣ್ಣಿನಲ್ಲಿ ಬೆರೆತ ಕಣಗಳು ಇದರ ಮೇಲೆ ಬಿದ್ದ ನೀರಿನಲ್ಲಿ ಕರಗಿ ಕುಡಿಯುವ ನೀರಿನ ಸೆಲೆಗೆ ಸೇರಿಕೊಳ್ಳಬಹುದು ಹಾಗೂ ಇದನ್ನು ಕುಡಿಯುವವರಿಗೂ ಅಪಾಯ ತಪ್ಪಿದ್ದಲ್ಲ. ಹೊಗೆಯ ಮೂಲಕ ಮೇಲೇಳುವ ಸೂಕ್ಷ್ಮ ಕಣಗಳು ನೀರಿನ ಪಸೆಯೊಂದಿಗೆ ಬೆರೆತು ಮೋಡವಾಗಿ ಈ ಮೋಡ ಮಳೆಯಾದರೆ ಇದು ಆಮ್ಲಮಳೆಗೂ ಕಾರಣವಾಗಬಹುದು.

ಪಟಾಕಿಯ ಹೊಗೆಯಲ್ಲಿ ಹಲವಾರು ಅಂಶಗಳಿದ್ದರೂ ಇದರಲ್ಲಿ ಅತ್ಯಂತ ಅಪಾಯಕಾರಿ ಅಂಶಗಳೆಂದರೆ ಗಂಧಕ ಮತ್ತು ಆರ್ಸೆನಿಕ್ ಅಂಶಗಳು, ವಿಶೇಷವಾಗಿ ಹಸಿರು ಬಣ್ಣದ ಜ್ವಾಲೆ ಮೂಡಲು ಉಪಯೋಗಿಸುವ ಬೇರಿಯಂ ಎಂಬ ಧಾತು ಅತ್ಯಂತ ವಿಷಕಾರಿ ಹಾಗೂ ವಿಕಿರಣಶೀಲವೂ ಆಗಿದೆ. ನೀಲಿ ಬಣ್ಣ ಬರಲು ಬಳಸುವ ತಾಮ್ರವನ್ನು ಸುಟ್ಟಾಗ ಬಿಡುಗಡೆಗೊಳ್ಳುವ ಡೈಯಾಕ್ಸಿನ್ ಎಂಬ ಅಂಶ ಕ್ಯಾನ್ಸರ್ ನೊಂದಿಗೆ ನೇರವಾದ ಸಂಬಂಧ ಹೊಂದಿದೆ.

ಪಟಾಕಿಯಿಂದ ಪರಿಸರಕ್ಕೆ ಎದುರಾಗುವ ಅಪಾಯಗಳು

ಪಟಾಕಿಯಿಂದ ಪರಿಸರಕ್ಕೆ ಎದುರಾಗುವ ಅಪಾಯಗಳು

ಅಗ್ನಿ ಅನಾಹುತ: ಪಟಾಕಿ ಸುಟ್ಟಾಗ ಇದರಿಂದ ಒಣಹುಲ್ಲು ಅಥವಾ ಒಣಗಿರುವ ಯಾವುದೇ ಬೆಂಕಿ ಹತ್ತಿಕೊಳ್ಳಬಹುದಾದ ಭಾಗಕ್ಕೆ ಬೆಂಕಿ ಹರಡಿ ದೊಡ್ಡ ಅಗ್ನಿ ಅನಾಹುತಕ್ಕೆ ಮೂಲವಾಗಬಹುದು.

ಶಬ್ದ ಮಾಲಿನ್ಯ: ಅನುಮೋದಿತ ಡೆಸಿಬೆಲ್ ಗಿಂತಲೂ ದೊಡ್ಡ ಸದ್ದಿನ ಪಟಾಕಿಗಳಿಂದ ಎದುರಾಗುವ ಶಬ್ದಮಾಲಿನ್ಯ ಕಿವುಡುತನಕ್ಕೆ ಕಾರಣವಾಗಬಹುದು.

ವಾಯುಮಾಲಿನ್ಯ: ಪಟಾಕಿಯ ಹೊಗೆ ಗಾಳಿಯೊಂದಿಗೆ ಬೆರೆತಾಗ ವಾಯುಮಾಲಿನ್ಯ ಖಚಿತ. ಇದರ ಸೇವನೆ ಅಪಾಯಕಾರಿ ಮಾತ್ರವಲ್ಲ, ನೋಟವನ್ನೂ ಮಬ್ಬಾಗಿಸುತ್ತದೆ. ಭಾರತೀಯ ಪ್ರದೂಷಣೆ ನಿಯಂತ್ರಣ ಇಲಾಖೆ ಪಟಾಕಿ ಹೊಡೆದ ಸ್ಥಳದಿಂದ ನಾಲ್ಕು ಮೀಟರ್ ದೂರದಲ್ಲಿ 125 ಡೆಸಿಬೆಲ್ ಗಿಂದ ದೊಡ್ಡ ಸದ್ದು ಮಾಡುವ ಪಟಾಕಿಗಳನ್ನು ನಿಷೇಧಿಸಿದೆ.

ಪಟಾಕಿಗಳಿಂದ ಪ್ರಾಣಿಗಳಿಗೆ ಎದುರಾಗುವ ಕುತ್ತು

ಪಟಾಕಿಗಳಿಂದ ಪ್ರಾಣಿಗಳಿಗೆ ಎದುರಾಗುವ ಕುತ್ತು

ಪಟಾಕಿಯ ಸದ್ದು ಪ್ರಾಣಿಗಳನ್ನು ಬೆದರಿಸುತ್ತದೆ. ಬೆದರಿದ ಪ್ರಾಣಿಗಳು ಓಡಿದಾಗ ಮುಂದೆ ಏನು ಬಂದರೂ ಲೆಕ್ಕಿಸುವುದಿಲ್ಲ. ಇದು ದಾರಿಯಲ್ಲಿರುವ ಮಕ್ಕಳು, ವೃದ್ಧರಿಗೆ ಮಾತ್ರವಲ್ಲದೇ ಇತರ ಯಾವುದೇ ವ್ಯಕ್ತಿಗಳಿಗೆ ಅಪಾಯಕಾರಿಯಾಗಬಲ್ಲುದು. ಅಲ್ಲದೇ ಅತಿ ಸೂಕ್ಷ್ಮ ಘ್ರಾಣ ಮತ್ತು ಸದ್ದುಗಳನ್ನು ಆಲಿಸಬಲ್ಲ ನಾಯಿ ಹಾಗೂ ಇತರ ಪ್ರಾಣಿಗಳಿಗೆ ಈ ಭಾರೀ ಸದ್ದು ಸಹಿಸಿಕೊಳ್ಳಲು ಸಾಧ್ಯವಾಗದೇ ವಿಲವಿಲ ಒದ್ದಾಡುತ್ತವೆ. ಥಾಣೆಯಲ್ಲಿರುವ Society for Protection of Cruelty to Animals (SPCA) ಎಂಬ ಪ್ರಾಣಿದಯಾ ಸಂಸ್ಥೆಯ ಅಧ್ಯಕ್ಷೆಯಾಗಿರುವ ಶಕುಂತಲಾ ಮುಜುಂದಾರ್ ರವರು ವಿವರಿಸುವಂತೆ "ನಾಯಿಗಳು 67Hz ನಿಂದ 45kHz ವರೆಗಿನ ಧ್ವನಿ ತರಂಗಳನ್ನು ಆಲಿಸಬಲ್ಲವು. ಮಾನವರಾದ ನಾವು ಗರಿಷ್ಟ 20kHz ವರೆಗೆ ಮಾತ್ರವೇ ಆಲಿಸಬಲ್ಲೆವು. ಆದರೆ ಪಟಾಕಿಗಳ ಸದ್ದು ಈ ಎಲ್ಲಾ ತರಂಗಗಳ ಮಿತಿಗಳನ್ನು ಒಳಗೊಂಡಿರುವ ಕಾರಣ ಇವುಗಳ ಮಂದ್ರಸ್ತರದ ಸದ್ದು ಸಹಾ ಸಾಕುಪ್ರಾಣಿಗಳಿಗೆ ಮಾರಕವಾಗಬಹುದು"

ಪಟಾಕಿ ಮತ್ತು ಬಾಲಕಾರ್ಮಿಕರು

ಪಟಾಕಿ ಮತ್ತು ಬಾಲಕಾರ್ಮಿಕರು

ಪಟಾಕಿಗಳನ್ನು ನಿರ್ಮಿಸುವ ಎಷ್ಟೋ ಕಾರ್ಖಾನೆಗಳಲ್ಲಿ ಇಂದಿಗೂ ನಿಕೃಷ್ಟ ವೇತನ ಹಾಗೂ ಯಾವುದೇ ಸುರಕ್ಷತೆ ಇಲ್ಲದೇ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಕೆಲಸದ ಸಮಯದಲ್ಲಿ ಇವರು ಅಪಾಯಕಾರಿ ಮತ್ತು ವಿಷಕಾರಿ ವಸ್ತುಗಳನ್ನು ಉಸಿರಿನ ಮೂಲಕ ಸೇವಿಸುತ್ತಾರೆ. ಈ ಮೂಲಕ ಹಲವಾರು ಬಗೆಯ ರೋಗಗಳಿಗೆ ಇವರು ಶೀಘ್ರವೇ ತುತ್ತಾಗುತ್ತಾರೆ. ಇವರಿಗೆ ವೈದ್ಯಕೀಯ ನೆರವೂ ದೊರಕುವುದಿಲ್ಲ ಹಾಗೂ ಸೂಕ್ತ ಚಿಕಿತ್ಸೆಯೂ ಲಭಿಸದ ಕಾರಣ ಎಷ್ಟೋ ಮಕ್ಕಳು ತಾರುಣ್ಯ ಬರುವ ವಯಸ್ಸಿನಲ್ಲಿಯೇ ತೀರಿಕೊಳ್ಳುತ್ತಾರೆ.

ಪಟಾಕಿ ಸುಡುವ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಪಟಾಕಿ ಸುಡುವ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

* ಪಟಾಕಿ ಕೊಳ್ಳದೇ ಇರುವುದೇ ನೀವು ಮಾಡಬಹುದಾದ ಅತಿ ದೊಡ್ಡ ಉಪಕಾರ.

* ಅನಿವಾರ್ಯ ಎನಿಸಿದರೆ ಅತಿ ಕಡಿಮೆ ಸದ್ದಿನ ಮತ್ತು ಸುಲಭವಾದ ಪಟಾಕಿಗಳನ್ನು ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರವೇ ಕೊಳ್ಳಿ.

* ಎಂದಿಗೂ ಪಟಾಕಿಯನ್ನು ಕೈಯಲ್ಲಿಯೇ ಸುಡಬೇಡಿ.

ಸಾಕುಪ್ರಾಣಿಯನ್ನು ಹೇಗೆ ರಕ್ಷಿಸುವಿರಿ?

ಸಾಕುಪ್ರಾಣಿಯನ್ನು ಹೇಗೆ ರಕ್ಷಿಸುವಿರಿ?

ನಿಮ್ಮ ಸಾಕುಪ್ರಾಣಿ ಅತೀ ಸಂವೇದಿಯಾಗಿದ್ದರೆ ತಕ್ಷಣವೇ ಪಶುವೈದ್ಯರ ಬಳಿ ಕರೆತನ್ನಿ, ವೈದ್ಯರು ಇದರ ಉನ್ಮಾದವನ್ನು ಕಡಿಮೆಗೊಳಿಸಿ ಹೆದರಿಕೆಯನ್ನು ಇಳಿಸಲು ಕೆಲವು ಔಷಧಿಗಳನ್ನು ನೀಡಬಹುದು.

ಸದ್ದು ಎದುರಾದರೂ ತಾನು ಸುರಕ್ಷಿತ ಎಂಬ ಭಾವನೆ ಮೂಡುವ ಸ್ಥಳದಲ್ಲಿ ಪ್ರಾಣಿಯನ್ನು ಕಟ್ಟಿಹಾಕಿ. ಉದಾಹರಣೆಗೆ ಮಂಚದ ಅಡಿಯಲ್ಲಿ.

ಸದ್ದಿನಿಂದ ವಿಚಲಿತನಾಗದಂತೆ ನಿಮ್ಮ ಸಾಕುಪ್ರಾಣಿಯ ಗಮನವನ್ನು ಬೇರೆಡೆಗೆ ಸೆಳೆಯುವ ಕೆಲವು ಚಟುವಟಿಕೆಯನ್ನು ಹಮ್ಮಿಕೊಳ್ಳಿ. ಉದಾಹರಣೆಗೆ ವಸ್ತುವೊಂದನ್ನು ಜಗಿಯಲು ನೀಡುವುದು ಇತ್ಯಾದಿ.

English summary

Deepavali 2019: The Ill-Effects of Firecrackers

One of them, the more scientific one, is that the fumes produced by the crackers would kill insects and mosquitoes found after the rains. Today, simple sparklers have given way to elaborate fireworks that can light up the entire sky above your home. Unfortunately the fumes that these crackers produce are harmful to the the environment and us.
X
Desktop Bottom Promotion