Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಅನಾಹುತ ಸಂಭವಿಸುವ ಕೆಲವೇ ಕ್ಷಣಕ್ಕೂ ಮುನ್ನಾ ತೆಗೆದ ಚಿತ್ರಗಳಿವು!
ಕೆಲವು ಚಿತ್ರಗಳು ಒಂದು ಕಥೆಯನ್ನು ಹೇಳಬಲ್ಲಷ್ಟು ಪ್ರಬಲವಾದ ಸಂದೇಶವನ್ನು ಹೊಂದಿರುತ್ತವೆ. ಕೆಲವು ಚಿತ್ರಗಳು ಐತಿಹಾಸಿಕವಾಗಿದ್ದು ಶಾಶ್ವತವಾಗಿ ಕಾಣಿಸಿಕೊಳ್ಳುವ ಅರ್ಹತೆ ಪಡೆದುಕೊಳ್ಳುತ್ತವೆ. ಅಂತೆಯೇ ಕೆಲವು ಅನಾಹುತ ಸಂಭವಿಸುವ ಕ್ಷಣಕ್ಕೂ ಮುನ್ನ ತೆಗೆದ ಚಿತ್ರಗಳೂ ಮುಂದೇನಾಯಿತು ಎಂಬ ಕುತೂಹಲವನ್ನು ಮೂಡಿಸುವ ಮೂಲಕ ಅಚ್ಚರಿಯನ್ನು ತಮ್ಮೊಂದಿಗೆ ಅಡಗಿಸಿಟ್ಟುಕೊಳ್ಳುತ್ತವೆ.
ಇಂತಹ ಕೆಲವು ಚಿತ್ರಗಳು ಅಂತರ್ಜಾಲದಲ್ಲಿ ಭಾರೀ ಪ್ರಚಾರ ಪಡೆದುಕೊಂಡಿದ್ದು ಇಂದಿನ ಲೇಖನದಲ್ಲಿ ಪ್ರಮುಖವಾದವುಗಳನ್ನು ಒದಗಿಸಲಾಗಿದೆ. ಚಿತ್ರ ತೆಗೆದವರಿಗೂ ಮುಂದೆ ಸಂಭವಿಸುವ ಅನಾಹುತದ ಬಗ್ಗೆ ಯಾವುದೇ ಮುನ್ಸೂಚನೆಯಿಲ್ಲದೇ ತೆಗೆದ ಕಾರಣ ಇವು ಅತ್ಯಂತ ನೈಜವಾಗಿ ಮೂಡಿಬಂದಿವೆ. ಕೆಲವು ನಗು ಬರಿಸಿದರೆ ಕೆಲವು ಆತಂಕವನ್ನೂ ವ್ಯಾಕುಲತೆಯನ್ನೂ ಏಕಕಾಲದಲ್ಲಿ ಉಂಟುಮಾಡುತ್ತವೆ. ಬನ್ನಿ, ನೋಡೋಣ:
ಹಾರುವ ಮನುಷ್ಯ?
ಸ್ವತಃ ಹಾರುತ್ತಿದ್ದಂತೆಯೇ ಕಾಣುವ ಈ ಮನುಷ್ಯ ಬೈಸಿಕಲ್ ವೇಗದಿಂದ ಧಾವಿಸಿ ಉಬ್ಬಿನಲ್ಲಿ ಹಾದುಹೋದ ಕಾರಣ ಗಾಳಿಯಲ್ಲಿದ್ದಾನೆಯೇ ಹೊರತು ನಿಜವಾಗಿಯೂ ಹಾರುತ್ತಿಲ್ಲ.
ಸ್ನೇಹಿತರೆಂದರೆ ಸದಾ ಮಜಾವೇ ಸರಿ
ಈ ಯುವಕನಲ್ಲಿ ಬಂದೂಕು ಅಥವಾ ಕತ್ತಿ ಇಲ್ಲವೆಂದೇ ನಾವು ಭಾವಿಸೋಣ!
ಅನಾವಶ್ಯಕ ಮೂಗು ತೂರಿಸದಿರಿ, ಕ್ರೀಡಾಂಗಣದಲ್ಲಿದ್ದರೂ ಸರಿ,
ಈಕೆಗೆ ಈ ಹಿತವಚನ ಈ ಕ್ಷಣಕ್ಕೂ ಮೊದಲು ತಿಳಿದಿರಲಿಕ್ಕಿಲ್ಲ
Most Read: 2019ರಲ್ಲಿ ಗುರು ಗ್ರಹದ ಪ್ರಭಾವ-ಯಾವ್ಯಾವ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ ನೋಡಿ
ವ್ಹೀಲಿಂಗ್ ಮಾಡಿ ಮೆಚ್ಚುಗೆ ಪಡೆಯುವ ಹುನ್ನಾರ ಅಪಾಯಕಾರಿಯೇ ಸರಿ
ಸೈಕಲ್ ಸವಾರಿಯ ವೇಳೆ ಮೊಬೈಲ್ ಬಳಸುವುದೇ ತಪ್ಪು, ಇದರ ಜೊತೆಗೇ ಮುಂದಿನ ಚಕ್ರ ಎತ್ತಿ ವ್ಹೀಲಿಂಗ್ ಎಂಬ ಚಾಕಚಕ್ಯತೆ ತೋರಿಸಿ ಹೆಂಗಳೆಯರ ಗಮನ ಸೆಳೆಯಲು ಯತ್ನಿಸಿದವನಿಗೆ ಮುಂದೇನಾಯಿತು ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಕ್ಯಾಮೆರಾದತ್ತ ಕಣ್ಣಿನ ಗುರಿ ಇಡಿ ಎಂದರೆ ಈತ ಚೆಂಡನ್ನೇ ಗುರಿಯಿಟ್ಟಿದ್ದ
ಈ ಬಾಲಕ ಚೆಂಡನ್ನು ಬೇಕೆಂದೇ ಕ್ಯಾಮೆರಾದತ್ತ ಹಾರಿಸಿರಲಿಕ್ಕಿಲ್ಲ, ಆದರೆ ಚೆಂಡು ಕ್ಯಾಮೆರಾ ಲೆನ್ಸ್ ಗೆ ತಗಲುವ ಮುನ್ನವೇ ಕ್ಲಿಕ್ ಆಗಿದ್ದು ಈ ಚಿತ್ರ ಮೂಡಿದೆ. ಬಹುಶಃ ಈ ಲೆನ್ಸ್ ಮೂಲಕ ತೆಗೆದ ಈ ಚಿತ್ರ ಅಂತಿಮವಾಗಿರಲೂ ಸಾಕು.
ಈಜುಕೊಳಕ್ಕೆ ಹಾರಿ ಬಂದ ಕಾಲ್ಚೆಂಡು
ಕಾಲ್ಚೆಂಡಿಗೆ ಈಜುಕೊಳದಲ್ಲೇನು ಕೆಲಸ? ಈತ ಈಜುಕೊಳದ ನಡುವಣ ಕಂಭದ ಮೇಲೆ ಕುಳಿತು ನೀರಿನಲ್ಲಿ ಈಜುತ್ತಿರುವ ಸೌಂದರ್ಯವನ್ನು ಆಸ್ವಾದಿಸುವುದನ್ನು ಸಹಿಸಲಾಗದೇ ಯಾರೋ ಗುರಿಯಿಟ್ಟು ಕಾಲ್ಚೆಂಡನ್ನು ಈತನ ಮುಖಕ್ಕೆ ಒದ್ದಂತಿದೆ?
Most Read: ದೇಹದ ಈ ಭಾಗದಲ್ಲಿ ಮಚ್ಚೆ ಇರುವವರು ತುಂಬಾನೇ ಅದೃಷ್ಟವಂತರಂತೆ!
ದೇವರೇ ಈಗ ಬೇಸಿಗೆಯಾಗಿರಲಪ್ಪಾ!
ಕನಿಷ್ಟ ಉಡುಗೆಯಲ್ಲಿ ಈ ಯುವತಿ ಪವಡಿಸಿರುವುದನ್ನು ನೋಡಿದರೆ ಇದು ಬೇಸಿಗೆಯಂತೆಯೇ ಅನ್ನಿಸುತ್ತದೆ. ಆದರೆ ಆತ ಎಸೆದಿರುವ ನೀರು ಅತಿ ಶೀತಲ ನೀರಾಗಿದ್ದರೆ?
ಬಾರ್ಬೆಕ್ಯೂ ಎಲ್ಲರಿಗೂ ಇಷ್ಟವೇ ಹೌದು, ಹಾಗೆಂದು?
ಸೈಕಲ್ ನಿಯಂತ್ರಣ ತಪ್ಪಿ ಈತ ನೇರವಾಗಿ ಬಾರ್ಬೆಕ್ಯೂ ಮಾಡುತ್ತಿರುವ ಕೆಂಡದ ಒಲೆಯ ಮೇಲೆ ಬಿದ್ದು ತಾನೇ ಖಾದ್ಯವಾಗುವಂತಿದೆ ಈ ಚಿತ್ರ.
Most Read: ಮುಖ ನೋಡಿದ ತಕ್ಷಣ ನಿಮ್ಮ ಮದುವೆ ಬಗ್ಗೆ ಹೇಳಬಹುದು!
ಇಲ್ಲಿ ಅಗ್ಗವಾಗಿರುವುದು ಯಾವುದು? ಮಗ್ ಅಥವಾ ಬಿಯರ್?
ಚಿಯರ್ಸ್ ಹೇಳಿ ಮಗ್ ಗಳನ್ನು ಪರಸ್ಪರ ಕುಟ್ಟುವ ರಭಸ ಅತಿಯಾಯಿತೋ ಅಥವಾ ಏರಿದ್ದ ಅಮಲು ಅತಿಯಾಯಿತೋ ಏನೋ
ಅಜ್ಜಿಯ ಹಿತವಚನ ಎಂದಿಗೂ ಸಲ್ಲುವ ಸತ್ಯ
ಈ ಆಲ್ ಟೆರೈನ್ ವೆಹಿಕಲ್ ಎಂಬ ರಕ್ಕಸ ವಾಹನದಲ್ಲಿ ಗಾಂಚಾಲಿ ಬೇಡ ಎಂದು ಅಜ್ಜಿ ಎಷ್ಟು ಸಲ ಹೇಳಿಲ್ಲ? ಈಗ ಅನುಭವಿಸಿ.
ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಹೀಗೆ ಹೊಟ್ಟೆಯ ಮೇಲೆ ಬೀಳುವುದೇ?
ಈಜುಕೊಳದಲ್ಲಿ ಧುಮುಕುವಾಗ ಒಂದೇ ತಲೆ ಇಲ್ಲಾ ಕಾಲು ಮೊದಲು ನೀರಿಗೆ ತಾಕಬೇಕು. ಹೊಟ್ಟೆ ಹಸಿದಿದೆ ಎಂದು ಹೀಗೆ ಅಡ್ಡಲಾಗಿ ಬಿದ್ದರೆ ಬೀಳುವ ಹೊಡೆತ ನೂರು ಚಾಟಿ ಹೊಡೆದಷ್ಟು ರಭಸವಿರುತ್ತದೆ. ಬೇಕಿದ್ದರೆ ಈ ವ್ಯಕ್ತಿಯನ್ನೇ ಕೇಳಿ ನೋಡಿ.