Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಪಾಕಿಸ್ತಾನ ಪ್ರೇಮಿಗಳ ದಿನವನ್ನು 'ಸಹೋದರಿ ದಿನ' ವನ್ನಾಗಿ ಆಚರಿಸಲು ನಿರ್ಧರಿಸಿದೆಯಂತೆ!!

ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿ ಹಲವಾರು ದಶಕಗಳು ಕಳೆದಿದ್ದರೂ ಅವರ ಕೆಲವೊಂದು ಪದ್ಧತಿ ಹಾಗೂ ಆಚರಣೆಗಳು ನಮ್ಮಲ್ಲೂ ಈಗಲೂ ಉಳಿದುಕೊಂಡಿದೆ. ಅದರಲ್ಲೂ ನಾವು ಸಂಪೂರ್ಣವಾಗಿ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿರುವುದು ಕೂಡ ಒಂದು. ಇಷ್ಟು ಮಾತ್ರವಲ್ಲದೆ ಬ್ರಿಟಷರ ಕೆಲವೊಂದು ಆಚರಣೆಗಳು ಇಂದಿಗೂ ನಾವು ಆಚರಿಸಿಕೊಂಡು ಬರುತ್ತಿದ್ದೇವೆ. ಇದರಲ್ಲಿ ಮುಖ್ಯವಾಗಿ ವ್ಯಾಲೆಂಟೈನ್ಸ್ ಡೇ(ಪ್ರೇಮಿಗಳ ದಿನ). ಇದು ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಇತರ ಕೆಲವೊಂದು ದೇಶಗಳಲ್ಲಿ ಕೂಡ ಆಚರಿಸಲ್ಪಡುತ್ತಿದೆ.

ಈ ದಿನವನ್ನು ಆಚರಣೆ ಮಾಡಲು ಸಂಪೂರ್ಣ ವಿಶ್ವವೇ ಕೆಂಪು ಬಣ್ಣವನ್ನು ಆರಿಸುವುದು. ಇದು ಪಾಶ್ಚಾತ್ಯ ಸಂಪ್ರದಾಯ ಎಂದು ಕೆಲವು ಇದನ್ನು ವಿರೋಧಿಸುತ್ತಲೂ ಇದ್ದಾರೆ. ಇದರಿಂದಾಗಿ ಈ ದಿನದ ಆಚರಣೆ ಬಗ್ಗೆ ಗೊಂದಲ ಹಾಗೂ ಕೆಲವೊಮ್ಮೆ ಗಲಾಟೆಗಳು ನಡೆದಿರುವುದು ಇದೆ. ವ್ಯಾಲೆಂಟೈನ್ಸ್ ಡೇ ಇನ್ನು ಕೆಲವೇ ದಿನಗಳಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ನೆರೆಯ ಪಾಕಿಸ್ತಾನದ ವಿಶ್ವ ವಿದ್ಯಾನಿಯಲವೊಂದು ಈ ದಿನವನ್ನು ಸೋದರಿಯ ದಿನವನ್ನಾಗಿ ಆಚರಣೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಬಗ್ಗೆ ನೀವು ಇನ್ನಷ್ಟು ಮಾಹಿತಿ ತಿಳಿಯಿರಿ.

ಈ ವಿಶ್ವವಿದ್ಯಾನಿಲಯವು ವ್ಯಾಲೆಂಟೈನ್ಸ್ ಡೇ ಯನ್ನು `ಸಹೋದರಿ ದಿನ’ವನ್ನಾಗಿ ಮಾರ್ಪಾಡು ಮಾಡಿಕೊಳ್ಳುತ್ತಿದೆ
ಪಾಕಿಸ್ತಾಣದ ಪಂಜಾಬ್ ಪ್ರಾಂತ್ಯದಲ್ಲಿ ಇರುವಂತಹ ಫೈಸಲಾಬಾದ್ ನ ಕೃಷಿ ವಿಶ್ವವಿದ್ಯಾನಿಲಯವು ವ್ಯಾಲೆಂಟೈನ್ಸ್ ಡೇ ಯನ್ನು ಸೋದರಿಯ ದಿನವನ್ನಾಗಿ ಮರು ನಾಮಕರಣ ಮಾಡಲು ನಿರ್ಧರಿಸಿದೆ. ಈ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮಾಡುವುದನ್ನು ತಪ್ಪಿಸಲು ಮತ್ತು ಪಾಕಿಸ್ತಾನದ ಸಂಸ್ಕೃತಿ ಮತ್ತು ಇಸ್ಲಾಂನ ಪದ್ಧತಿಯ ಆಚರಣೆಗೆ ಯುವಕರನ್ನು ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ.

ವಿಶ್ವ ವಿದ್ಯಾನಿಲಯದ ನಂಬಿಕೆ
ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಜಾಫರ ಇಕ್ಬಾಲ್ ಅವರು ತಮ್ಮ ಸಂಸ್ಥೆಯ ವೆಬ್ ಸೈಟ್ ನಲ್ಲಿ ಹೇಳಿಕೊಳ್ಳುವ ಪ್ರಕಾರ, `` ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರು ಹೆಚ್ಚು ಅಧಿಕಾರ ಹೊಂದಿರುವರು ಮತ್ತು ಇದರಿಂದಾಗಿ ಅವರು ಸೋದರಿಯಾಗಿ, ತಾಯಿಯಾಗಿ, ಮಗಳು ಮತ್ತು ಪತ್ನಿ ಆಗಿಯೂ ಗೌರವ ಪಡೆಯುವರು."

ಯುವ ಜನತೆ ಸಂಸ್ಕೃತಿಯನ್ನು ಮರೆಯುತ್ತಿದೆ
ಈ ದಿನವನ್ನು ಮರು ನಾಮಕರಣ ಮಾಡಿರುವ ಬಗ್ಗೆ ಮತ್ತಷ್ಟು ಬರೆದಿರುವ ಅವರು, ಯುವ ಜನತೆಯು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯು ನಮ್ಮ ಸಮಾಜದ ಬೇರನ್ನು ಅಲುಗಾಡಿಸುತ್ತಿದೆ. ಇದರಿಂದಾಗಿ ಈ ದಿನವನ್ನು ಸ್ಕಾರ್ಪ್, ಶಾಲು ಮತ್ತು ಗೌನ್ ಗಳನ್ನು ನೀಡಿ ಆಚರಣೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇವೆಲ್ಲದರಲ್ಲೂ ವಿಶ್ವವಿದ್ಯಾನಿಲಯದ ಹೆಸರನ್ನು ಮುದ್ರಿಸಲಾಗಿದೆ.

ಈ ಬಗ್ಗೆ ನಿಮ್ಮ ಅನಿಸಿಕೆ ಏನು?
ಪ್ರೇಮಿಗಳ ದಿನವನ್ನು ಸೋದರಿಯ ದಿನವನ್ನಾಗಿ ಮಾರ್ಪಾಡು ಮಾಡಿ ಆಚರಣೆ ಮಾಡಲು ಆಡಳಿತವು ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಇದಕ್ಕಾಗಿ ದೇಣಿಗೆ ಸಂಗ್ರಹಣೆ ಮಾಡಿಕೊಂಡಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಇತರ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವದೆಲ್ಲೆಡೆಯಲ್ಲೂ ಇದನ್ನು ವಿರೋಧಿಸಲಾಗುತ್ತಿದೆ.
ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications