For Quick Alerts
ALLOW NOTIFICATIONS  
For Daily Alerts

ಎಲಾ ಇವನ! ತನ್ನ ಅಪ್ಪಣೆಯಿಲ್ಲದೇ ತನ್ನನ್ನು ಈ ಜಗತ್ತಿಗೆ ಹೇಗೆ ತಂದಿರಿ ಎಂದು ತಂದೆತಾಯಿಯರನ್ನೇ ಕಟಕಟೆಗೆ ತಂದನಲ್ಲಾ?

|

ಮಾತಾಪಿತರು ತಮ್ಮ ಮಕ್ಕಳಿಗೆ ಮಾಡುವ ಸೇವೆಯನ್ನು ಯಾವುದೇ ಋಣದ ಮೂಲಕ ತೀರಿಸಲು ಸಾಧ್ಯವಿಲ್ಲ. ಒಂದು ಮಗು ಜನ್ಮ ತಳೆದ ಬಳಿಕ ಆ ಮಗುವಿನ ಆರೈಕೆ, ಲಾಲನೆ ಪಾಲನೆ, ಶಿಕ್ಷಣ ಮತ್ತು ಸಂಸ್ಕೃತಿಯ ಮೂಲಕ ಸಭ್ಯ ವ್ಯಕ್ತಿಯನ್ನಾಗಿ ಬೆಳೆಸುವ ತಂದೆತಾಯಿಯರ ಪ್ರೀತಿಯನ್ನು ಬೇರೆಲ್ಲೂ ಪಡೆಯಲು ಸಾಧ್ಯವಿಲ್ಲ. ಆದರೆ ಮುಂಬೈನ ಒರ್ವ ತರುಣನಾದ ರಫಾಯೆಲ್ ಸಾಮ್ಯುಯೆಲ್ ಎಂಬ ವ್ಯಕ್ತಿ ತನ್ನನ್ನು ತನ್ನ ಅಪ್ಪಣೆಯಿಲ್ಲದೇ ಈ ಜಗತ್ತಿಗೆ ತಂದುದನ್ನು ಪ್ರಶ್ನಿಸಿ ತನ್ನ ತಂದೆತಾಯಿಯರನ್ನೇ ನ್ಯಾಯಾಲಯಕ್ಕೆ ಎಳೆದಿದ್ದಾನೆ. ಈತನ ಪ್ರಕಾರ ಈ ಜಗತ್ತಿನಲ್ಲಿ ಯಾವುದೇ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಗೆ 'ಬಲವಂತವಾಗಿ ಜೀವ ಕೊಡುವ' ಅಧಿಕಾರವಿರುವುದಿಲ್ಲ.

ನ್ಯಾಯಾಲಯಕ್ಕೆ ಎಳೆದಿದ್ದಾನೆ ಎಂಬ ಮಾಹಿತಿಯಿಂದ ಈತ ತನ್ನ ತಂದೆ ತಾಯಿಯರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡಿಲ್ಲ ಎಂದು ಅರ್ಥವಲ್ಲ. ಆದರೆ ಯಾವುದೇ ದಂಪತಿಗಳು ಕೇವಲ ತಮ್ಮ ದೈಹಿಕ ಕಾಮನೆಯನ್ನು ತಣಿಸಿಕೊಳ್ಳುವ ಪರಿಣಾಮವಾಗಿ ಜೀವವೊಂದನ್ನು ಈ ಜಗತ್ತಿಗೆ ತರುವುದು ಮಾತ್ರ ಈತನ ದೃಷ್ಟಿಯಲ್ಲಿ ಅಪರಾಧವಾಗಿದೆ.

Mumbai man on why he wants to sue parents for his birth

Most Read: ಮದುವೆಯಾದ ಮೂರೇ ನಿಮಿಷಕ್ಕೆ ಪತಿಗೆ ವಿಚ್ಛೇದನ ನೀಡಿದ ಮಹಿಳೆ!

ಮಾಧ್ಯಮಗಳಿಗೆ ನೀಡಿದ ವಿವರಗಳಲ್ಲಿ ಈತನ ಮಾತುಗಳು ಇಂತಿವೆ: "ನಾನು ಈ ಮೂಲಕ ಭಾರತದ ಎಲ್ಲಾ ಮಕ್ಕಳಲ್ಲಿ ನಿವೇಸಿಕೊಳ್ಳುವುದೇನೆಂದರೆ ಇವರಾರೂ ತಮ್ಮ ತಂದೆತಾಯಿಯರಿಗೆ ಏನನ್ನೂ ನೀಡಬೇಕಾಗಿಲ್ಲ. ನಾನು ನನ್ನ ತಂದೆ ತಾಯಿಯರನ್ನು ಪ್ರೀತಿಸುತ್ತೇನೆ ಹಾಗೂ ನಮ್ಮಲ್ಲಿ ಅದ್ಭುತವಾದ ಬಾಂಧವ್ಯವೂ ಇದೆ, ಆದರೆ ನಾನು ನನ್ನ ತಂದೆತಾಯಿಯರ ದೈಹಿಕ ಕಾಮನೆಗಳ ಸಂತೃಪ್ತಿಯ ಉತ್ಪನ್ನವಾಗಿದ್ದೇನೆ. ಆದರೆ ನಾನಾಗಿಯೇ ಕೇಳಿಕೊಳ್ಳದೇ ನನ್ನನ್ನು ಈ ಜಗತ್ತಿಗೆ ಕರೆತಂದು ಶಾಲೆಗೆ ಹೋಗಿ ಇಷ್ಟವಿಲ್ಲದ ವಿಷಯಗಳನ್ನು ಕಲಿತು ಇಷ್ಟವಿಲ್ಲದ ಕೆಲಸವನ್ನು ನಿರ್ವಹಿಸುವ ಹೊರೆಗಳನ್ನು ಹೊರಿಸುವುದಾದರೂ ಏಕೆ?"

Most Read: ತನ್ನ ಕೈಬಿಟ್ಟ ಮಾಜಿ ಪ್ರಿಯತಮೆಗೆ ಆತ ಹೀಗೆ ಬುದ್ಧಿ ಕಲಿಸಿದ!

ಈತ ಫೇಸ್ ಬುಕ್ ನಲ್ಲಿ ಒಂದು ಖಾತೆಯನ್ನು ಹೊಂದಿದ್ದು 'ನಿಹೀಲಾನಂದ್' ('Nihiilanand')ಎಂಬ ಹೆಸರಿನಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಈತನ ಪ್ರತಿಕ್ರಿಯೆಗಳು ಈ ತರಹ ಇರುತ್ತವೆ: "ಒಂದು ಮಗುವನ್ನು ಕೇಳದೆಯೇ ಈ ಜಗತ್ತಿಗೆ ಕರೆತರುವುದು ಮತ್ತು ತನ್ನದೇ ಆದ ಜೀವನೋಪಾಯ ಹೊಂದುವಂತೆ ಮಾಡುವುದು ಒಂದು ಬಗೆಯ ಗುಲಾಮಗಿರಿ ಅಥವಾ ಅಪಹರಣವಲ್ಲದೇ ಮತ್ತೇನು?"

ಆದರೆ ಈ ವ್ಯಾಜ್ಯದಿಂದೇನಾಯಿತು? ಯಾವ ತೀರ್ಪು ನೀಡಲ್ಪಟ್ಟಿತು ಎಂಬ ಬಗ್ಗೆ ಇನ್ನೂ ಮಾಹಿತಿಗಳು ಬರಬೇಕಾಗಿದೆ. ಆದರೆ ಈ ಇಡಿಯ ಪ್ರಹಸನವೇ ನಮಗೆ ಗೊಂದಲಭರಿತವಾಗಿದೆ ಹಾಗೂ ನಮ್ಮ ನಂಬಿಕೆಗಳನ್ನೇ ಅಲ್ಲಾಡಿಸುವಷ್ಟು ವೈರುಧ್ಯ ಹೊಂದಿದೆ. ನಿಮಗೇನನಿಸುತ್ತದೆ?

English summary

Mumbai man on why he wants to sue parents for his birth

A Mumbai man says he wants to sue his parents for giving birth to him without asking for his consent. Raphael Samuel, 27, describes himself as an anti-natalist on Facebook and has posted a video on YouTube explaining his decision to sue his parents. Anti-natalists believe it is morally wrong for people to procreate. In fact one of the pictures shared by Samuel on Facebook says “procreation is the root of all evil. Stop. Having. Babies.”
Story first published: Tuesday, February 12, 2019, 16:54 [IST]
X
Desktop Bottom Promotion