Just In
Don't Miss
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫಿಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- News
ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
- Movies
ನಿರ್ದೇಶನ, ನಿರ್ಮಾಣದ ನಂತರ ವಿತರಕರಾದ ನಾಗತಿಹಳ್ಳಿ ಚಂದ್ರಶೇಖರ್
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಡತನದ ಬೇಗೆ ತಾಳರಾದರೆ ತನ್ನ ವೃಷಣಗಳನ್ನೇ ಮಾರಾಟಕ್ಕಿಟ್ಟ ಭೂಪ!
ನಾವು ಶ್ರೀಮಂತರಾಗಬೇಕು ಎನ್ನುವ ಆಸೆ ಕನಸು ಎಲ್ಲರಿಗೂ ಇದ್ದೇ ಇರುತ್ತದೆ . ಆದರೆ ಅಂದುಕೊಂಡ ಹಾಗೆ ತೀರ್ಮಾನಿಸಿದ ತಕ್ಷಣ ಯಾರೂ ಶ್ರೀಮಂತರಾಗುವುದಿಲ್ಲ . ಏಕೆಂದರೆ ಒಂದೇ ಬಾರಿಗೆ ಶ್ರೀಮಂತರಾಗುವುದು ಅಷ್ಟು ಸುಲಭದ ಮಾತೇ ಅಲ್ಲ. ಜೀವನದ ಪ್ರತಿ ದಿನವೂ ಪ್ರತಿ ಹಂತವೂ ಹೋರಾಟವೇ.ಅದಕ್ಕಾಗಿ ಕಷ್ಟ ಪಟ್ಟು ದುಡಿಯಬೇಕು. ದುಡಿದ ಹಣವನ್ನು ಉಳಿಸಬೇಕು .ಇಲ್ಲವೆಂದರೆ ತಲೆತಲಾಂತರದಿಂದ ಶ್ರೀಮಂತರಾಗಿ ಬೆಳೆದುಬಂದ ಪರಂಪರೆಯಿರಬೇಕು ಅದೂ ಇಲ್ಲವೆಂದರೆ ಎಲ್ಲೋ ಕೆಲವರಿಗೆ ಅದೃಷ್ಟ ಕೈ ಹಿಡಿದು ಯಾವುದಾದರೂ ಒಂದು ರೀತಿಯಲ್ಲಿ ದಿಢೀರನೆ ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ.
ಹಣ ಸಂಪಾದನೆ ಮಾಡಿ ಸಿರಿವಂತರಾಗಲು ಜನರು ಏನೇನೋ ಆಲೋಚನೆಗಳನ್ನು ಉಪಾಯಗಳನ್ನು ಮಾಡುತ್ತಾರೆ. ಅದರಂತೆ ಪ್ರಯತ್ನ ಕೂಡ ಪಡುತ್ತಾರೆ. ಅದರಲ್ಲೂ ಕೆಲವರಂತೂ ತಾವು ಶ್ರೀಮಂತರಾಗಲು ವಿಚಿತ್ರವಾದ ಬಗೆಬಗೆಯ ಆಲೋಚನೆಗಳನ್ನು ಮಾಡಿ ಹೇಗಾದರೂ ಸರಿ ಜನರ ಗಮನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ.
ಈಗ ನಾವು ಹೇಳಹೊರಟಿರುವ ಕಥೆಯಲ್ಲಿ ಈ ವ್ಯಕ್ತಿ ಇಂಥದೇ ಒಂದು ತೀರ್ಮಾನ ತೆಗೆದುಕೊಂಡು ಬಹಳ ಪ್ರಸಿದ್ದಿ ಪಡೆದಿದ್ದಾನೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ . ಅವನ ಹೆಸರು ಇಯಾನ್ ಹಾರ್ರಿಯೆಲ್ ಕೋವಿಟಿ. 27 ವರ್ಷದ ಈತ ಕೀನ್ಯಾ ದೇಶದ ಮಿಗೋರಿ ಕೌಂಟಿಯ ಉರಿರಿ ಪ್ರಾಂತ್ಯದವನು.ಈತನ ಈ ಒಂದು ನಿರ್ಧಾರದಿಂದ ಇಡೀ ಕೀನ್ಯಾ ದೇಶವೇ ವಿಶ್ವವ್ಯಾಪಿ ಪ್ರಖ್ಯಾತಿ ಪಡೆದಿದೆ.ಅಂತಹ ದೇಶ ಮೆಚ್ಚುವ ಕೆಲಸ ಏನು ಮಾಡಿದ್ದಾನೆ ಈತ ಎಂದು ಯೋಚಿಸುತ್ತಿದ್ದೀರಾ ? ಹಾಗಾದರೆ ಮುಂದೆ ಓದಿ .
ಇಯಾನ್ ಹಾರ್ರಿಯೆಲ್ ಕೋವಿಟಿ ಹುಟ್ಟುತ್ತಲೇ ಕಡು ಬಡವ. ಹೇಗಾದರೂ ಸರಿ ಶ್ರೀಮಂತನಾಗುವಷ್ಟು ಹಣ ಒಮ್ಮಿಂದೊಮ್ಮೆಲೆ ಸಂಪಾದಿಸಬೇಕೆಂದು ದೀರ್ಘವಾಗಿ ಆಲೋಚನೆ ಮಾಡಿ ಕೊನೆಗೆ ಒಂದು ಗಟ್ಟಿ ನಿರ್ಧಾರ ಮಾಡಿಯೇಬಿಟ್ಟ .ಅವನ ಆ ನಿರ್ಧಾರ ಒಂದು ರೀತಿ ವಿಚಿತ್ರವಾಗಿತ್ತು ಮತ್ತು ಮಕ್ಕಳಿಲ್ಲದವರಿಗೆ ಬಹಳ ಪ್ರಯೋಜನಕಾರಿಯಾಗಿತ್ತು. ಇದೇನಿದು ? ವಿಚಿತ್ರ ಆಲೋಚನೆ ಎಂದು ಹೇಳುತ್ತಿದ್ದಾರೆ .ಇದು ಎಲ್ಲಿಯಾದರೂ ಇನ್ನೊಬ್ಬರಿಗೆ ಸಹಕಾರಿಯೇ ಎಂದು ನಿಮಗೆ ನೀವೇ ಆಲೋಚಿಸುತ್ತಿದ್ದೀರಾ? ಹೌದು ಇವನು ಯೋಚಿಸಿದ ಬಗೆಯೇ ಹಾಗೆ. ಹೇಗೂ ಇವನಿಗೂ ದುಡ್ಡು ಬೇಕಿತ್ತು. ಅದಕ್ಕಾಗಿ ಇವನು ಮಾಡಿದ ಕೆಲಸ ಏನು ಗೊತ್ತೇ ? ತನ್ನ ವಂಶಾಭಿವೃದ್ದಿಗೆ ಸಹಕಾರಿಯಾಗುವ ತನ್ನ ವೃಷಣವನ್ನೇ ಮಾರಾಟ ಮಾಡಲು ಮುಂದಾದ. ಇವನ ಈ ಆಲೋಚನೆ ನಿಜಕ್ಕೂ ವಿಚಿತ್ರ. ಹೌದಲ್ಲವೇ?

ಬಡತನವೆಂಬ ಮುಳ್ಳಿನ ಹಾದಿಯಲ್ಲಿ ನಡೆದು ಸಾಕಾಗಿ ತನ್ನ ವೃಷಣವನ್ನೇ ಮಾರಲು ಮುಂದಾದ !!!
ಕೋವಿಟಿಗೆ ಹಣದ ಅವಶ್ಯಕತೆ ತುಂಬಾ ಇತ್ತು .ಏಕೆಂದರೆ ಈತ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲೂ ಕೂಡ ಮುಂದಾಗಿದ್ದ . ಅದಕ್ಕಾಗಿ ತನ್ನ ಒಂದು ಮೂತ್ರಪಿಂಡವನ್ನು ಬರೋಬ್ಬರಿ 1.5 ಮಿಲಿಯನ್ ಹಣಕ್ಕೆ ಮಾರಾಟ ಮಾಡಲು ಬಯಸಿದ್ದ. ಆದರೆ ತೆಗೆದುಕೊಳ್ಳಲು ಬಂದಿದ್ದ ವ್ಯಕ್ತಿಯೇ ಈತನಿಗೆ ನಮ್ಮ ದೇಶಕ್ಕಿಂತ ಬೇರೆ ದೇಶದವರಿಗೆ ಮಾರಿದರೆ ಇನ್ನೂ ಮೂರು ಪಟ್ಟು ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಸಲಹೆ ಕೊಟ್ಟಿದ್ದನಂತೆ.

ಕೋವಿಟಿಯ ಈ ಒಂದು ಬಲವಾದ ನಂಬಿಕೆ
ಈತನು ತನ್ನ ದೇಶದಲ್ಲಿ ತನ್ನ ಸುತ್ತಮುತ್ತ ಇರುವ ಜನರು ಒಂದಿಲ್ಲೊಂದು ಕಾರಣದಿಂದ ಮಕ್ಕಳಿಲ್ಲದೆ ಕೊರಗುವುದನ್ನು ಕಣ್ಣಾರೆ ಕಂಡಿದ್ದ.ಆಗ ಈತನ ತಲೆಗೆ ಒಂದು ಆಲೋಚನೆ ಬಂತು. ನಾನು ಯಾಕೆ ನನ್ನ ಒಂದು ವೃಷಣವನ್ನು ಇಂತಹವರಿಗೆ ಮಾರಾಟ ಮಾಡಿ ಅವರ ನೋವನ್ನು ಪರಿಹರಿಸಬಾರದು ? ಇದರಿಂದ ನನಗೂ ದುಡ್ಡು ಸಿಕ್ಕಂತಾಗುತ್ತದೆ. ಹೇಗೂ ಮನುಷ್ಯನಿಗೆ ಒಂದು ವೃಷಣವನ್ನು ಬೇರೆಯವರಿಗೆ ಕೊಟ್ಟರೆ ಯಾವ ತೊಂದರೆಯೂ ಉಂಟಾಗುವುದಿಲ್ಲ ಇನ್ನೊಂದು ವೃಷಣದಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ಆಲೋಚಿಸಿ ತಡ ಮಾಡದೆ ಈ ಕೆಲಸಕ್ಕೆ ಮುಂದಾದ.
Most Read: ರಿಯಲ್ ಸ್ಟೋರಿ: ಮಾವನ ಹಿಂಸೆಯ ವಿಡಿಯೋ ಮಾಡಿ, ಸರಿಯಾಗಿ ಬುದ್ಧಿ ಕಲಿಸಿದ ಸೊಸೆ!

ಈತ ಬರೀ ತನ್ನ ವೃಷಣವೊಂದನ್ನೇ ಮಾರಲು ಮುಂದಾಗಿರಲಿಲ್ಲ
ಕೋವಿಟಿಗೆ ಹಣ ಸಂಪಾದಿಸಿ ತಾನು ಶ್ರೀಮಂತನಾಗಬೇಕೆಂಬ ಬಯಕೆಯ ಜೊತೆಗೆ ಮಾನವೀಯತೆಯೂ ಮತ್ತು ಸಾಮಾಜಿಕ ಕಳಕಳಿಯೂ ಬಹಳಷ್ಟಿತ್ತು. ಇವನ ಕಣ್ಣ ಮುಂದೆ ಒಬ್ಬರು ಕಷ್ಟ ಪಡುತ್ತಿದ್ದರೆ ಇವನ ಹೃದಯ ಕರಗುತ್ತಿತ್ತು ಮತ್ತು ಅವರಿಗಾಗಿ ಮನ ಮಿಡಿಯುತ್ತಿತ್ತು. ಜನರು ತಮ್ಮ ಮೂತ್ರಪಿಂಡವನ್ನು ಕಳೆದುಕೊಂಡು ಡಯಾಲಿಸಿಸ್ ಗಾಗಿ ಹಣ ಹೊಂದಿಸಲಾರದೆ ಪಡುವ ಪಾಡನ್ನು ಕಷ್ಟವನ್ನು ಕೋವಿಟಿಯು ಕಂಡು ಮನಸ್ಸಿನಲ್ಲೇ ದುಃಖ ಪಡುತ್ತಿದ್ದ.
ಇದಕ್ಕಾಗಿ ಏನಾದರೂ ಮಾಡಲೇಬೇಕಲ್ಲ ಎಂದುಕೊಂಡು ಕೊನೆಗೆ ಈತನ ಕುಟುಂಬದ ವೈದ್ಯರ ಬಳಿಯಲ್ಲಿಯೂ ತಾನು ತನ್ನ ಮೂತ್ರಪಿಂಡವನ್ನು ಅವರಿಗೆ ಕೊಡಲು ತಯಾರಿದ್ದೇನೆ ಎಂದು ಹೇಳಿ ವ್ಯದ್ಯರ ಬಳಿ ಸಲಹೆ ಕೂಡ ಕೇಳಿದ್ದನಂತೆ . ಅದಕ್ಕೆ ವೈದ್ಯರು ಮನುಷ್ಯ ಆರೋಗ್ಯವಾಗಿ ಜೀವಿಸಲು ಒಂದು ಮೂತ್ರಪಿಂಡ ಸಾಕು. ನೀನು ಒಪ್ಪಿ ಕೊಡುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದ್ದರಂತೆ.
Most Read: ಒಬ್ಬನೇ ಬಾಯ್ ಫ್ರೆಂಡ್ನ್ನು ಹಂಚಿಕೊಂಡ ಅವಳಿ ಸಹೋದರಿಯರು!

ವೈದ್ಯರ ನಿರ್ಧಾರ
ಕೋವಿಟಿಯು ತನ್ನ ಒಂದು ವೃಷಣದಿಂದ ನೆಮ್ಮದಿಯ ಆರೋಗ್ಯದ ಲೈಂಗಿಕ ಜೀವನ ನಡೆಸುತ್ತಾನಾದರೂ ಆಸ್ಪತ್ರೆಯಲ್ಲಿನ ವೈದ್ಯರ ತಂಡ ವೃಷಣದ ಆಪರೇಷನ್ ಮಾಡಲು ಸುತಾರಾಂ ಒಪ್ಪಿರಲಿಲ್ಲ. ಹೀಗೆ ಜನರು ತಮ್ಮ ವಿಚಿತ್ರ ಆಲೋಚನೆಗಳಿಂದ ಶ್ರೀಮಂತರಾಗಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯಗಳೇನಾದರೂ ಇದ್ದರೆ ಕೆಳಗೆ ಸೂಚಿಸಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.