For Quick Alerts
ALLOW NOTIFICATIONS  
For Daily Alerts

ಹೊಸ ವರ್ಷ 2019: ಜನವರಿ ತಿಂಗಳ ರಾಶಿ ಭವಿಷ್ಯ

|

2019ರ ಆರಂಭದ ತಿಂಗಳು ಜನವರಿ. ಪ್ರತಿಯೊಬ್ಬರಿಗೂ ಹೊಸ ವರ್ಷದ ಆರಂಭವು ಉತ್ತಮವಾಗಿದ್ದರೆ ವರ್ಷ ಪೂರ್ತಿ ಉತ್ತಮ ಭವಿಷ್ಯವನ್ನು ಹಾಗೂ ಉತ್ತಮ ಫಲವನ್ನು ಅನುಭವಿಸುತ್ತೇವೆ ಎನ್ನುವ ಭಾವನೆ ಇರುತ್ತದೆ. ಅಂತಹ ಒಂದು ಉತ್ತಮ ಸಮಯ ಅಥವಾ ಅದೃಷ್ಟವು ಕೆಲವೊಮ್ಮೆ ನಿಜವಾಗುತ್ತದೆ. ಕೆಲವೊಮ್ಮೆ ಸುಳ್ಳಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಸಮಯ ಮತ್ತು ಸಂದರ್ಭಗಳು ನಮ್ಮ ಜೀವನ ಹಾಗೂ ಗುರಿಗಳನ್ನು ಬದಲಿಸುತ್ತವೆ ಎಂದು ಹೇಳಬಹುದು. ಪ್ರಪಂಚವನ್ನು ಆಳುವುದು ಒಂದು ವಿಶೇಷ ಶಕ್ತಿ. ಅದನ್ನೇ ನಾವು ಗ್ರಹಗಳು ಹಾಗೂ ದೇವರೆಂದು ಕರೆಯುತ್ತೇವೆ.

ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳು ನಿರಂತರವಾಗಿ ತಮ್ಮದೇ ಆದ ವಿಶೇಷ ಬದಲಾವಣೆಯನ್ನು ಪಡೆದುಕೊಳ್ಳುತ್ತಲೇ ಇರುತ್ತವೆ. ಅವು ನಮ್ಮ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಹೊಸ ವರ್ಷದ ಈ ಸಂದರ್ಭದಲ್ಲಿ ನಮ್ಮ ಜೀವನದ ಮೇಲೆ ಗ್ರಹಗಳು ಯಾವ ರೀತಿಯ ಗಂಭೀರವಾದ ಪ್ರಭಾವ ಬೀರುತ್ತವೆ ಎನ್ನುವ ಕುತೂಹಲ ಇರುತ್ತದೆ. ಹೊಸ ವರ್ಷದ ಆರಂಭದ ಮಾಸದಲ್ಲಿ ಯಾವೆಲ್ಲಾ ಬದಲಾವಣೆಗಳು ನಮ್ಮ ಜೀವನದಲ್ಲಿ ನಡೆಯುತ್ತದೆ? ಅವುಗಳಿಂದ ವರ್ಷವು ನಮ್ಮ ಭವಿಷ್ಯದಲ್ಲಿ ಹೇಗೆ ಸಾಗುವುದು? ನಮ್ಮ ಭವಿಷ್ಯ ಏನು? ಎನ್ನುವ ಕುತೂಹಲಗಳು ನಿಮ್ಮನ್ನು ಕಾಡುತ್ತಿದೆ ಎಂದಾದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರದ ಮಾಸ ಭವಿಷ್ಯವನ್ನು ಅರಿಯಿರಿ.

ಮೇಷ

ಮೇಷ

ಈ ವರ್ಷದ ಆರಂಭದಲ್ಲಿಯೇ ಮೇಷ ರಾಶಿಯವರಿಗೆ ಅತ್ಯುತ್ತಮವಾದ ಕೆಲಸಗಳ ಪ್ರಚೋದನೆ ಆಗುತ್ತದೆ ಎಂದು ಹೇಳಬಹುದು. 2019ರ ರಾಶಿ ಭವಿಷ್ಯವನ್ನು ಆಧರಿಸಿದರೆ ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿಯು ಅತ್ಯುತ್ತಮವಾದ ಬದಲಾವಣೆಯನ್ನು ಪಡೆದುಕೊಳ್ಳುವುದು. ಜನರಿ ತಿಂಗಳ 6ನೇ ತಾರೀಖು ಅತ್ಯುತ್ತಮವಾದ ದಿನವಾಗುವುದು. ಅಂದು ನಿಮ್ಮ ಯಾವುದೇ ಹೊಸ ಯೋಜನೆಗಳ ಆರಂಭವನ್ನು ಮಾಡಬಹುದು. ನೀವು ನಿಮ್ಮ ಮೊಂಡು ಸ್ವಭಾವವನ್ನು ತಡೆಹಿಡಿಯಬೇಕು. ನಿಮ್ಮ ಸಂಗಾತಿಯ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಬೇಕಾಗುವುದು. ನಿಮ್ಮ ಭಾವನೆಗೆ ಅನುಗುಣವಾಗಿ ನಿಮ್ಮ ಸಂಗಾತಿ ಪ್ರಚೋದನೆ ನೀಡುತ್ತಾರೆ ಎಂದಾಗ ಅತಿರೇಕದ ರೂಪದಲ್ಲಿ ಪ್ರಚೋದನೆಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು. 23ರ ನಂತರದ ಸಮಯದಲ್ಲಿ ನೀವು ಹೊಸ ಪ್ರೀತಿಯನ್ನು ಸ್ವಾಗತಿಸಲು ಅತ್ಯುತ್ತಮ ಸಮಯವಾಗಿರುತ್ತದೆ. ನಿಮ್ಮ ಮಾನಸಿಕ ಚಿಂತನೆ ಹಾಗೂ ನಿರ್ಧಾರಗಳನ್ನು ಸೂಕ್ತ ರೀತಿಯಲ್ಲಿ ಕೈಗೊಳ್ಳಬೇಕಾಗುವುದು. ನೀವು ನಿಮ್ಮ ಪ್ರತಿಭೆಯನ್ನು ತೋರ್ಪಡಿಸಲು ಈ ತಿಂಗಳು ಅತ್ಯುತ್ತಮವಾದ ಸಮಯ ಎಂದು ಹೇಳಬಹುದು. ನಿಮ್ಮ ಸಹೋದ್ಯೋಗಿಯೊಂದಿಗೆ ಕೆಲಸ ಮಾಡಲು ಪ್ರಯೋಜನಕಾರಿ ಎಂದು ಸಾಭೀತುಪಡಿಸಬಹುದು. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಆಯ್ಕೆಗಳು ಉತ್ತಮವಾಗಿರುತ್ತವೆ. ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲು ಅವಕಾಶವನ್ನು ಪಡೆದುಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ಅನುಗುಣವಾಗಿ ಪ್ರಶಸ್ತಿಗಳನ್ನು ಸಹ ಪಡೆದುಕೊಳ್ಳುವಿರಿ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕೆಲವು ಯೋಜನೆ ಹಾಗೂ ತಲ್ಲೀನತೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಪ್ರವಾಸದ ಯೋಜನೆಗಳು ನಿಧಾನಗತಿಯನ್ನು ಪಡೆದುಕೊಳ್ಳುವುದು.

ವೃಷಭ

ವೃಷಭ

ಈ ವರ್ಷದ ಆರಂಭದ ಮಾಸವು ನಿಮಗೆ ವೃದ್ಧಿಯನ್ನು ಸೂಚಿಸುತ್ತದೆ. ವೃತ್ತಿ ಕ್ಷೇತ್ರದಲ್ಲಿ ಪ್ರಾಬಲ್ಯ ಹಾಗೂ ಅಭಿವೃದ್ಧಿಯನ್ನು ಪಡೆದುಕೊಳ್ಳುವಿರಿ. ಈ ಹಿನ್ನೆಲೆಯಲ್ಲಿ ಸಾಕಷ್ಟು ವೇಳೆ ಕುಟುಂಬ ಹಾಗೂ ಸಂಬಂಧಗಳ ವಿಚಾರದಲ್ಲಿ ಕೊಂಚ ಹಿನ್ನೆಡೆ ಅಥವಾ ಸಾಕಷ್ಟು ಸಮಯ ಕೊಡಲು ಸಾಧ್ಯವಾಗದೆ ಇರಬಹುದು. ನೀವು ವೃತ್ತಿ ಜೀವನದ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವುದರಿಂದ ಕುಟುಂಬದಲ್ಲಿ ಕೆಲವೊಮ್ಮೆ ಕಲಹಗಳು ಅಥವಾ ಭಿನ್ನಾಭಿಪ್ರಾಯಗಳು ಉದ್ಭವ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ನೀವು ಎಲ್ಲವನ್ನು ಸಮತೋಲನದಲ್ಲಿ ನಿರ್ವಹಿಸುವ ಸಾಮಥ್ರ್ಯವನ್ನು ಪಡೆದುಕೊಳ್ಳಬೇಕಾಗುವುದು. ಅವಿವಾಹಿತರು ಈ ತಿಂಗಳಲ್ಲಿ ವಿವಾಹ ಯೋಗವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಇವರು ವೃತ್ತಿ ಕ್ಷೇತ್ರದಲ್ಲಿ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಸಂಬಂಧವನ್ನು ಪಡೆದುಕೊಳ್ಳಲು ಕಷ್ಟವಾಗುತ್ತದೆ. 23ರ ನಂತರದ ಸಮಯದಲ್ಲಿ ಎಲ್ಲಾ ಸಂಗತಿಗಳ ಬಗ್ಗೆಯೂ ಒಂದು ಸ್ಪಷ್ಟ ಮಾಹಿತಿ ಅಥವಾ ನಿಲುವನ್ನು ಪಡೆದುಕೊಳ್ಳುವಿರಿ. ಕುಟುಂಬದಲ್ಲಿ ಕೆಲವು ಸಮಸ್ಯೆ ಇರುವುದರಿಂದ ಹಿರಿಯರ ನಡುವೆ ಸಾಕಷ್ಟು ವಾದಗಳನ್ನು ಮಾಡುವಿರಿ. ಅಂತಹ ಸಮಯದಲ್ಲಿ ಸಾಕಷ್ಟು ತಿಳಿ ಮನಸ್ಸಿನಿಂದ ವ್ಯವಹರಿಸಲು ಮುಂದಾಗಬೇಕು. ಆಗಲೇ ಸಮಸ್ಯೆಯು ತಿಳಿಯಾಗುವುದು.

Most Read: 2019 ಹೊಸ ವರ್ಷದಲ್ಲಿ ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ ತರಲಿದೆ?

ಮಿಥುನ

ಮಿಥುನ

ಹೊಸ ವರ್ಷದ ಆರಂಭದ ಈ ತಿಂಗಳಲ್ಲಿ ನೀವು ವೃತ್ತಿಪರ ಅಭಿವೃದ್ಧಿ, ಪ್ರಾಪಂಚಿಕ ಮಹತ್ವಾಕಾಂಕ್ಷೆಗಳು ಪರಿಶೀಲನ ಪಟ್ಟಿಯ ಮೇಲೆ ಪ್ರಭಾವ ಬೀರುತ್ತವೆ. ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಆದ್ಯತೆಯನ್ನು ಪಡೆದುಕೊಳ್ಳುವಿರಿ. ಸೂರ್ಯನ ಚಿಹ್ನೆಯನ್ನು ಹೊಂದಿರುವ ಇವರು ಆಕ್ರಮಣಕಾರಿ ಹಾಗೂ ವೃತ್ತಿಯಲ್ಲಿ ಯಶಸ್ಸನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಎಲ್ಲಾ ವಿಷಯದಲ್ಲೂ ನೀವು ಯಶಸ್ಸನ್ನು ಸಾಧಿಸಲು ಸಾಮಾಜಿಕ ಕೌಶಲ್ಯದ ಅಗತ್ಯವಿರುತ್ತದೆ ಎನ್ನುವುದನ್ನು ನೀವು ಮರೆಯಬಾರದು ಎಂದು ಸಲಹೆ ನೀಡಲಾಗುವುದು. ರಾಶಿ ಚಕ್ರಗಳ ಪ್ರಕಾರ ಹಾಗೂ ಗ್ರಹಗತಿಗಳ ಅನುಸಾರ ನಿಮ್ಮ ಸ್ವತಂತ್ರ ಅಭಿವೃದ್ಧಿಗೆ ಹಾಗೂ ವೃತ್ತಿಪರ ಸಾಕಷ್ಟು ಕೊಡುಗೆ ನೀಡುವ ಅಗತ್ಯವಿರುವುದಿಲ್ಲ ಎಂದು ಸೂಚಿಸಲಾಗುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುವ ಹೊಸ ಸ್ನೇಹಿತರನ್ನು ಪಡೆದುಕೊಳ್ಳಲು ಮುಂದಾಗುವಿರಿ. ನೀವು ಹೊಸ ಸಂಬಂಧ ಅಥವಾ ವಿವಾಹ ಆಗುವ ಸಾಧ್ಯತೆಗಳಿರುತ್ತವೆ. ಪ್ರೀತಿ ಹಾಗೂ ಸೌಹಾರ್ದತೆಯನ್ನು ತುಂಬಲ್ಪಡುತ್ತದೆ ಎಂದು ಹೇಳಲಾಗುವುದು. ನಿಮ್ಮ ಸಂಬಂಧ ಹಾಗೂ ಮಕ್ಕಳ ವಿಷಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುವಿರಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಠಿಣ ಪರಿಶ್ರಮವನ್ನು ವಿನಿಯೋಗಿಸಲು ಮತ್ತು ಕೆಲಸ ಮಾಡಲು ಪ್ರೇರೇಪಣೆ ಪಡೆದುಕೊಳ್ಳುವಿರಿ.

ಕರ್ಕ

ಕರ್ಕ

ಈ ತಿಂಗಳ ಭವಿಷ್ಯದ ಪ್ರಕಾರ ಇವರು ಮಹತ್ವಾಕಾಂಕ್ಷೆ ಪಡೆದುಕೊಳ್ಳುವರು. ಕುಟುಂಬ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿಯನ್ನು ಹಾಗೂ ಸಂತಸದ ವಾತಾವರಣವನ್ನು ಪಡೆದುಕೊಳ್ಳುವರು. ಸೂರ್ಯನ ಚಿಹ್ನೆಯನ್ನು ಪಡೆದುಕೊಳ್ಳುವ ಇವರು ಜನರಿಂದ ಶ್ರೇಷ್ಠತೆಯನ್ನು ಸಾಧಿಸಲು ಸಾಕಷ್ಟು ಶ್ರಮವನ್ನು ವಿನಿಯೋಗಿಸುವರು. ಇವರು ತಮ್ಮ ಜೀವನದ ಪ್ರಮುಖ ಸಂಗತಿಗಳ ಬಗ್ಗೆ ಸಾಕಷ್ಟು ಯೋಜನೆ ಹಾಗೂ ಶ್ರಮವನ್ನು ವಿನಿಯೋಗಿಸಲು ಮುಂದಾಗಿರುತ್ತಾರೆ.

ಈ ತಿಂಗಳಲ್ಲಿ ಇವರು ಸಾಕಷ್ಟು ಜನರೊಂದಿಗೆ ಸಹಯೋಗವನ್ನು ಪಡೆದುಕೊಳ್ಳುವರು. ಅಲ್ಲದೆ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚಿನ ಅವಕಾಶವನ್ನು ಪಡೆದುಕೊಳ್ಳುವರು. ಕುಟುಂಬದಲ್ಲಿ ಹಾಗೂ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಪಡೆದುಕೊಳ್ಳುವರು. ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿ ಅದನ್ನು ನಿಭಾಯಿಸುವ ಕಲೆ ತಿಳಿದಿರುವುದರಿಂದ ಸಮಸ್ಯೆಗಳು ಬಹುಬೇಗ ಶಾಂತಿ ಹಾಗೂ ಸೌಹಾರ್ದತೆಯನ್ನು ಪಡೆದುಕೊಳ್ಳುತ್ತದೆ.

ಸಿಂಹ

ಸಿಂಹ

ಈ ತಿಂಗಳಲ್ಲಿ ಇವರು ತಮ್ಮ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ಸಾಮಾಜಿಕ ಕೌಶಲ್ಯವು ಅತ್ಯವಶ್ಯಕ ಎನ್ನುವುದನ್ನು ನೀವು ತಿಳಿದುಕೊಳ್ಳುವಿರಿ. ಇತರರಿಂದ ಅಥವಾ ಜನರಿಂದ ನೀವು ಸುಲಭವಾಗಿ ಯಶಸ್ಸನ್ನು ಪಡೆದುಕೊಳ್ಳುವಿರಿ. ನೀವು ನಿಮ್ಮ ಸುತ್ತಲಿನ ಜನರಿಂದ ಹೇಗೆ ಸಂಬಂಧವನ್ನು ಹೊಂದಬೇಕು ಎನ್ನುವುದನ್ನು ತಿಳಿಯಿರಿ. ಕುಟುಂಬ, ಸ್ನೇಹಿತರು ಹಾಗೂ ಅರಿಚಿತರು ಎನ್ನುವುದನ್ನು ಗುರುತಿಸುವ ಹಾಗೂ ಅವರೊಂದಿಗೆ ಬೆರೆಯುವ ಸಮಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದುಕೊಳ್ಳಬೇಕು. ನೀವು ವೈಯಕ್ತಿಕವಾಗಿವ್ಯಕ್ತಿತ್ವದ ಬಗ್ಗೆ ಬದ್ಧತೆಯನ್ನು ಪಡೆದುಕೊಳ್ಳಬೇಕುಹಣಕಾಸಿನ ಬಿಕ್ಕಟ್ಟು ಉಂಟಾಗುವ ಸಾಧ್ಯತೆಗಳಿರುತ್ತವೆ. ನಿಮ್ಮ ವೃತ್ತಿ ಅಭಿವೃದ್ಧಿಯ ಮೂಲಕ ನಿಮಗೆ ಸಹಾಯ ಮಾಡುವ ವ್ಯಕ್ತಿಯ ಬಗ್ಗೆ ಗಮನ ನೀಡಬೇಕು. ಅವಿವಾಹಿತರು ವಿವಾಹ ಯೋಗವನ್ನು ಹಾಗೂ ವಿವಾಹಿತರು ಹೆಚ್ಚು ಪ್ರೀತಿಯನ್ನು ಪಡೆದುಕೊಳ್ಳುವರು. ಮಹಿಳೆಯರು ಗರ್ಭಧಾರಣೆಯನ್ನು ಪಡೆದುಕೊಳ್ಳುವರು. ಈ ತಿಂಗಳಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ತೊಡಕುಗಳು ಉಂಟಾಗಬಹುದು. ನಿಧಾನಗತಿಯ ವ್ಯಾಪಾರದ ಮೂಲಕ ಹಣಕಾಸಿನ ಹರಿವು ಕಡಿಮೆ ಆಗುವ ಸಾದ್ಯತೆಗಳಿರುತ್ತವೆ.

ಕನ್ಯಾ

ಕನ್ಯಾ

ಈ ರಾಶಿಯವರಿಗೆ ಈ ತಿಂಗಳ ಭವಿಷ್ಯದ ಪ್ರಕಾರ ಭಾವನಾತ್ಮಕ ಮತ್ತು ಕುಟುಂಬದ ವಿಷಯದಲ್ಲಿ ಉತ್ತಮ ಫಲಿತಾಂಶ ಅಥವಾ ಸುದ್ದಿಯನ್ನು ಪಡೆದುಕೊಳ್ಳುವರು. ಕುಟುಂಬದವರು ನಿಮ್ಮ ವ್ಯವಹಾರ ಹಾಗೂ ವೃತ್ತಿ ಜೀವನಕ್ಕೆ ಸಂಬಮಧಿಸಿದಂತೆ ಸಾಕಷ್ಟು ಬೆಂಬಲವನ್ನು ನೀಡುವರು. ಈ ರಾಶಿಯ ವ್ಯಕ್ತಿಗಳು ಸ್ವಲ್ಪ ಆಕ್ರಮಣಕಾರಿ ಹಾಗೂ ಸ್ವತಂತ್ರವನ್ನು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ನೀವು ಇತರರ ಭಾವನೆ ಹಾಗೂ ಸಹಕಾರಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಕಲಿತುಕೊಳ್ಳಬೇಕಾಗುವುದು. ನಿಮ್ಮ ಮೇಲೆ ಶನಿ ಗ್ರಹದ ಪ್ರಭಾವ ಉತ್ತಮವಾಗಿರುವುದರಿಂದ ಸಕ್ರಿಯ ಪ್ರೇಮ ಜೀವನವನ್ನು ಪಡೆದುಕೊಳ್ಳುವಿರಿ. ಸಂಬಂಧ ಹಾಗೂ ಪ್ರೀತಿಯ ವಿಷಯದಲ್ಲಿ ಅದೃಷ್ಟವನ್ನು ಹೊಂದಿರುತ್ತೀರಿ ಎನ್ನಲಾಗುವುದು. ವೃತ್ತಿ ಜೀವನದಲ್ಲಿ ನೀವು ಅಂದುಕೊಂಡಂತೆಯೇ ಯಶಸ್ಸು ಹಾಗೂ ಸಾಧನೆಯನ್ನು ಮಾಡುವಿರಿ. ಅದು ನಿಮಗೆ ಗೌರವ ಹಾಗೂ ಶಂತಿಯನ್ನು ತಂದುಕೊಡುವುದು.

ತುಲಾ

ತುಲಾ

ಇವರು ಈ ತಿಂಗಳಲ್ಲಿ ಭಾವನಾತ್ಮಕವಾಗಿ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಾಭಲ್ಯತೆಯನ್ನು ಪಡೆದುಕೊಳ್ಳುವಿರಿ. ವೃತ್ತಿ ಜೀವನದ ಇತಿಹಾಸದ ಪ್ರಕಾರ ಸ್ವಲ್ಪ ಕಾಲ ಸ್ನೇಹಿತರಿಗೆ ಹಾಗೂ ನಿಮ್ಮವರಿಗಾಗಿ ಒಂದಿಷ್ಟು ಸಮಯ ಹಾಗೂ ಹಣವನ್ನು ಖರ್ಚುಮಾಡಬೇಕಾಗುವುದು. ಸಂಬಂಧ ಅಥವಾ ಕುಟುಂಬದ ವಿಚಾರದಲ್ಲಿ ನೀವು ಸಾಕಷ್ಟು ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ತಲೆದೂರಬಹುದು. ಸೂರ್ಯ ಗ್ರಹಣದ ಪ್ರಭಾವದಿಂದ ಕೆಲವು ತೊಂದರೆ ಉಂಟಾಗಬಹುದು. ಹಾಗಾಗಿ ಆರೋಗ್ಯದ ವಿಷಯದಲ್ಲಿ ಕೊಂಚ ಎಚ್ಚರಿಕೆಯನ್ನು ವಹಿಸಬೇಕು. ಶಿಕ್ಷಣದ ವಿಷಯದಲ್ಲಿ ಉತ್ತಮ ಸಮಯ ನಿಮ್ಮದಾಗಿರುತ್ತದೆ. ಅವಕಾಶಗಳು ನಿಮಗಾಗಿ ಕಾದಿವೆ ಎನ್ನಲಾಗುವುದು.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರಿಗೆ ಈ ತಿಂಗಳಲ್ಲಿ ಸಾಕಷ್ಟು ಅನಾನುಕೂಲತೆಗಳು ಎದುರಾಗಬಹುದು. ಏಕೆಂದರೆ ಈ ತಿಂಗಳಲ್ಲಿ ನಕ್ಷತ್ರಗಳು ಹಾಗೂ ಗ್ರಹಗಳ ಪ್ರಭಾವವು ಅನುಕೂಲಕರವಾಗಿಲ್ಲ ಎಂದು ಹೇಳಲಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ, ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಲು ಅಥವಾ ನಿಮ್ಮ ಗುರಿಗೆ ಅನುಗುಣವಾದ ಯಶ್ಸಸ್ಸನ್ನು ಪಡೆದುಕೊಳ್ಳಲು ಕಷ್ಟವಾಗುವುದು. ಕುಟುಂಬದ ಸದಸ್ಯರ ನಡುವೆಯು ಗಮನಾರ್ಹ ಭಿನ್ನಾಭಿಪ್ರಾಯ ಅಥವಾ ಕಲಹ ಉಂಟಾಗುವ ಸಾಧ್ಯತೆಗಳಿರುತ್ತವೆ. ಎಲ್ಲಾ ವಿಷಯಗಳನ್ನು ಶಾಂತವಾಗಿ ನಿಭಾಯಿಸುವುದು ಹಾಗೂ ಸಮಸ್ಯೆಗಳನ್ನು ಎದುರಿಸುವುದನ್ನು ತಿಳಿಯಬೇಕು.

Most Read: 2019ರಲ್ಲಿ ಈ ಐದು ರಾಶಿಗಳಲ್ಲಿ ಮಹತ್ವದ ಬದಲಾವಣೆಗಳು ಕಾಣಲಿದೆಯಂತೆ!

ಧನು

ಧನು

ಈ ರಾಶಿಯವರಿಗೆ ಹೊಸ ವರ್ಷದ ಮೊದಲ ಮಾಸದಲ್ಲಿಯೇ ವೃತ್ತಿ, ಸಂಬಂಧ, ಹಣಕಾಸು ಸೇರಿದಂತೆ ಇನ್ನಿತರ ವಿಷಯದಲ್ಲಿ ಯಶಸ್ಸನ್ನು ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವರು. ಸಮಯವು ನಿಮ್ಮ ಪರವಾಗಿ ನಿಂತಿರುತ್ತದೆ ಎಂದು ಹೇಳಲಾಗುವುದು. ಕುಟುಂಬದ ವಿಷಯವು ನಿಮಗೆ ಎಲ್ಲಾ ಸಂಗತಿಗಳಿಗಿಂತ ಮೊದಲ ಆದ್ಯತೆಯನ್ನು ಪಡೆದುಕೊಳ್ಳುವುದು. ಭಾವನಾತ್ಮಕ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವಿರಿ. ಕುಟುಂಬ ಮತ್ತು ವೃತ್ತಿಯ ವಿಷಯದಲ್ಲಿ ರಾಶಿಚಕ್ರದ ಚಿಹ್ನೆಯು ಸಕ್ರಿಯವಾಗಿರುತ್ತದೆ. ನೀವು ನಿಮ್ಮ ಕುಟುಂಬ ಹಾಗೂ ಸಂಬಂಧಗಳ ವಿಷಯದಲ್ಲಿ ನೇರವಾದ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವ ಯಾವುದೇ ವ್ಯವಹಾರ ಅಥವಾ ವಿಷಯಗಳನ್ನು ಸುಲಭವಾಗಿ ಬಿಡುವುದಿಲ್ಲ. ಅದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸುವಿರಿ.

ಮಕರ

ಮಕರ

ಈ ವರ್ಷದ ಆರಂಭ ಅಥವಾ ಈ ತಿಂಗಳು ನಿಮಗೆ ಅತ್ಯುತ್ತಮವಾದ ಭವಿಷ್ಯವನ್ನು ನೀಡುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇವರು ವೃತ್ತಿ ಹಾಗೂ ಕುಟುಂಬಕ್ಕೆ ಸೂಕ್ತ ಸಮಯ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳುವರು. ಇದರಿಂದ ವೃತ್ತಿ ಪರ ಬೆಳವಣಿಗೆ ಹಾಗೂ ಕುಟುಂಬದಲ್ಲಿ ಶಾಂತಿಯು ನೆಲೆಸುವುದು. ನಿಮ್ಮ ನಿರೀಕ್ಷೆಗಳಂತೆ ಯೋಜನೆಗಳು ಸಾಗುವುದು. ಸಾಧನೆ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ವೃತ್ತಿ, ಶಿಕ್ಷಣ, ಆರೋಗ್ಯದ ವಿಷಯದಲ್ಲೂ ಉತ್ತಮ ಸ್ಥಿತಿಯನ್ನು ಅನುಭವಿಸುವರು.

ಕುಂಭ

ಕುಂಭ

ಸ್ವತಂತ್ರವನ್ನು ಬಯಸುವ ಈ ರಾಶಿಚಕ್ರದವರಿಗೆ ಜನವರಿ ತಿಂಗಳು ಅತ್ಯುತ್ತಮ ತಿಂಗಳಾಗುವುದು. ಇತರ ಜನರೊಂದಿಗೆ ನಿವರು ವ್ಯವಹರಿಸಲು ಸ್ವಲ್ಪ ಕಷ್ಟವನ್ನು ಅನುಭವಿಸಬಹುದು. ಆದರೆ ಇವರ ಆಸೆಯಂತೆ ಎಲ್ಲಾ ಕೆಲಸಕಾರ್ಯಗಳು ನಿರಾತಂಕವಾಗಿ ಸಾಗುವುದು. ಯಶಸ್ಸು ಹಾಗೂ ಉತ್ತಮ ಫಲಿತಾಂಶವು ನಿಮ್ಮ ಪರವಾಗಿ ನಿಲ್ಲುವುದು. ತಿಂಗಳುದ್ದಕ್ಕೂ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವಿರಿ. ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹಾಗೂ ಕುಟುಂಬದಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವರು. ವೃತ್ತಿ ಕ್ಷೇತ್ರದಲ್ಲೂ ಬಯಸಿದಂತೆಯೇ ಯಶಸ್ಸು ದೊರೆಯುವುದು.

ಮೀನ

ಮೀನ

ಈ ರಾಶಿಯವರ 2019ರ ಮೊದಲ ಮಾಸವು ಉತ್ತಮ ಫಲಿತಾಂಶವನ್ನು ನೀಡುವುದು. ನಿಮ್ಮ ಆಸೆಗಳು ಹಾಗೂ ಕನಸುಗಳು ನನಸಾಗುವುದು. ವೃತ್ತಿಗೆ ಸಂಬಂಧಿಸಿದ ಉದ್ದೇಶ ಹಾಗೂ ಗುರಿಗಳು ಸುಲಲಿತವಾಗಿ ನಡೆಯುವುದು. ಉತ್ತಮ ನಿರ್ಣಯ ಹಾಗೂ ಉತ್ಸಾಹವು ನಿಮ್ಮ ಯಶಸ್ಸು ಸಾಧನೆಗೆ ಸಹಾಯ ಮಾಡುವುದು. ಸಂಗಾತಿಯೊಂದಿಗೆ ಪ್ರೀತಿ-ವಿಶ್ವಾಸದ ಸಂಬಂಧ ಹಾಗೂ ಗರ್ಭಧಾರಣೆಯ ಸುಖವನ್ನು ಅನುಭವಿಸುವರು. ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವ ಇವರು ವೃತ್ತಿಕ್ಷೇತ್ರದ ಸಾಧನೆಯಲ್ಲಿ ಮುಂದಾಗುವರು. ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತಮ ವಿದ್ಯಾಭ್ಯಾಸಕ್ಕೆ ವಿಶಾಲವಾದ ಅವಕಾಶಗಳು ಒದಗಿ ಬರುವುದು. ಎಲ್ಲಾ ಚಿಂತನೆಗಳು ಸಕಾರಾತ್ಮಕ ರೂಪದಲ್ಲಿ ಕೈಗೂಡಿ ಬರುವುದು.

English summary

January 2019 monthly horoscope

Choose your zodiac sign and enjoy the horoscope. In our horoscopes you will discover the perfect opportunities, weaknesses and challenges that are drawn by an invisible hand of fate on the life's journey of each of us.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more