Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮೆದುಳೇ ಇಲ್ಲದೆ ಹುಟ್ಟಿದ ಹುಡುಗ! ಆದರೆ ಇವನ ಜೀವನದಲ್ಲಿ ನಡೆಯಿತು ಪವಾಡ!
ಕೆಲವೊಮ್ಮೆ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ನಿಮ್ಮ ತಲೆಯಲ್ಲಿ ಮೆದುಳೇ ಇಲ್ಲವಾ ಎನ್ನುವ ಪ್ರಶ್ನೆ ಮಾಡುವರು. ಯಾಕೆಂದರೆ ತುಂಬಾ ದಡ್ಡರಾಗಿ ಇರುವಂತಹ ವಿದ್ಯಾರ್ಥಿಗಳು ಒಂದಲ್ಲಾ ಒಂದು ದಿನ ಈ ಪ್ರಶ್ನೆಯನ್ನು ಖಂಡಿತವಾಗಿಯೂ ಎದುರಿಸಿರುವರು. ನಾವು ತಮಾಷೆಗಾಗಿಯೂ ಈ ಮಾತನ್ನು ಬಳಸುತ್ತೇವೆ. ಆದರೆ ನಿಜವಾಗಿಯೂ ತಲೆಯಲ್ಲಿ ಮೆದುಳೇ ಇಲ್ಲದೆ ಜನಿಸಿದರೆ ಆಗ ಹೇಗಿರಬಹುದು ಎಂದು ಊಹಿಸಲು ಸಾಧ್ಯ. ಆದರೆ ಅಪರೂಪದಲ್ಲಿ ಅಪರೂಪಕ್ಕೆ ಇಂತಹ ಘಟನೆಗಳು ನಡೆಯುವುದು. ವೈದ್ಯಕೀಯ ಲೋಕಕ್ಕೂ ಇದೊಂದು ಸವಾಲಾಗಿರುವುದು. ಯಾವುದೇ ವೈದ್ಯಕೀಯ ಸಮಸ್ಯೆಯಿದ್ದರೂ ಕೆಲವು ಜನರು ಅದನ್ನು ಮೀರಿ ಬದುಕುತ್ತಿರುವರು. ಕೆಲವೊಂದು ಪ್ರಕರಣಗಳನ್ನು ನೋಡಿದಾಗ ನಿಜವಾಗಿಯೂ ಇವರು ಬದುಕುತ್ತಿರುವುದು ಒಂದು ಅದ್ಭುತವೇ ಸರಿ ಎಂದು ಅನಿಸುವುದು ಅಥವಾ ಇದು ಸೃಷ್ಟಿಕರ್ತನ ಪವಾಡವೇ ಎಂಬ ಪ್ರಶ್ನೆಯು ಬರುವುದು.
ಅದೇ ರೀತಿಯಾಗಿ ಇಲ್ಲೊಬ್ಬ ಹುಡುಗನು ತುಂಬಾ ವಿಚಿತ್ರವಾಗಿರುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾನೆ. ಅದೇ ತುಂಬಾ ಅಪರೂಪದಲ್ಲಿ ಅಪರೂಪದ ವೈದ್ಯಕೀಯ ಪರಿಸ್ಥಿತಿ. ನೊಹಾ ವಾಲ್ ಎಂಬ ಬಾಲಕ ಜನಿಸುವಾಗಲೇ ಮೆದುಳಿಲ್ಲದೆ ಹುಟ್ಟಿದವನು ಮತ್ತು ಆತನ ಪಯಣವನ್ನು ಇಲ್ಲಿ ದಾಖಲಿಸಿಕೊಳ್ಳಲಾಗಿದೆ. ಆತನ ಬದುಕು ಮತ್ತು ಅದರ ಹಿಂದಿನ ಕಥೆಯನ್ನು ನೀವು ಓದಿಕೊಳ್ಳಿ...

ಬಾಲಕನ ಪೋಷಕರಿಗೆ ಈ ಪರಿಸ್ಥಿತಿ ಬಗ್ಗೆ ತಿಳಿಸಲಾಯಿತು
ಇಂಗ್ಲೆಂಡ್ ನ ಕುಂಬ್ರಿಯಾದ ಶೆಲ್ಲಿ ವಾಲ್ ಮತ್ತು ರಾಬ್ 20 ವಾರಗಳ ಗರ್ಭಧಾರಣೆ ವೇಳೆ ಸ್ಕ್ಯಾನಿಂಗ್ ಗೆ ಹೋದಾಗ ಅವರಿಗೆ ತುಂಬಾ ಕೆಟ್ಟ ಸುದ್ದಿಯು ಎದುರಾಗಿತ್ತು. ಹೊಟ್ಟೆಯಲ್ಲಿರುವ ಮಗುವಿಗೆ ಪ್ರಾಣಾಪಾಯವಾಗುವ ವೈದ್ಯಕೀಯ ಪರಿಸ್ಥಿತಿ ಇದೆ ಎಂದು ವೈದ್ಯರು ದಂಪತಿಗೆ ತಿಳಿಸಿದರು.

ನೊಹಾ ಪರಿಸ್ಥಿತಿ
ನೊಹಾಗೆ ಸ್ಪಿನಾ ಬೈಫಿಡಾ ಎನ್ನುವ ವೈದ್ಯಕೀಯ ಪರಿಸ್ಥಿತಿ ಇತ್ತು. ಇಷ್ಟು ಮಾತ್ರವಲ್ಲದೆ ಜಲಮಸ್ತಿಷ್ಕ ರೋಗ ಕೂಡ ಇತ್ತು. ಇದು ತಲೆಬುರುಡೆಯಲ್ಲಿ ನೀರನ್ನು ತುಂಬುವಂತೆ ಮಾಡಿ ತಲೆಯು ಊದಿಕೊಳ್ಳುವ ಪರಿಸ್ಥಿತಿ. ಸಣ್ಣ ಮಗುವು ಬದುಕುಳಿಯುವುದು ಎಂದು ವೈದ್ಯರಿಗೆ ತಿಳಿದಿರಲಿಲ್ಲ.

ಗರ್ಭಧಾರಣೆ ವೇಳೆ ವೈದ್ಯರು ಐದು ಸಲ ಗರ್ಭಪಾತ ಮಾಡಿಸಲು ಸೂಚಿಸಿದರು
ಹಲವಾರು ವೈದ್ಯಕೀಯ ಪರಿಸ್ಥಿತಿಯಿಂದಾಗಿ ಗರ್ಭಪಾತ ಮಾಡಿಸಿಕೊಳ್ಳಿ ಎಂದು ವೈದ್ಯರು ಐದು ಸಲ ದಂಪತಿಗೆ ಸಲಹೆ ಮಾಡಿದ್ದರು. ಆದರೆ ದಂಪತಿಯು ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದರು.

ನೊಹಾ ಜನಿಸಿದ ವೇಳೆ…
ಮಗು ಹುಟ್ಟಿದ ವೇಳೆ ವೈದ್ಯರು ಮಗುವಿನ ತಲೆಬುರುಡೆಯಲ್ಲಿ ದ್ರವ ಶೇಖರಣೆಯಾಗುವುದನ್ನು ತಡೆಯಲು ಶಂಟ್ ಅಳವಡಿಸಲು ನಿರ್ಧರಿಸಿದರು. ಇದರಿಂದ ಅತಿಯಾದ ದ್ರವವನ್ನು ಹೀರಿಕೊಳ್ಳಲು ಸಾಧ್ಯವಾಗುವುದು ಮತ್ತು ಮೆದುಳಿನ ಅಂಗಾಂಶಗಳ ಮೇಲೆ ಒತ್ತಡ ಬೀಳುವುದು ಕಡಿಮೆಯಾಗುವುದು. ಮಗುವಿನ ತಲೆಯಲ್ಲಿ ಶೇ.2ರಷ್ಟು ಮಾತ್ರ ಮೆದುಳು ಇರುವುದು ಎಂದು ವೈದ್ಯರು ಸೂಚಿಸಿದಾಗ ಆ ದಂಪತಿಯು ಕುಸಿದು ಹೋದರು.

ಆತ ತಿನ್ನಲು ಹಾಗೂ ಕುಡಿಯಲು ಯೋಗ್ಯನಾಗಿದ್ದ
ಮೆದುಳಿನ ಕಾಂಡವು ಸರಿಯಾಗಿ ಕ್ರಿಯಾಶೀಲವಾಗಿದ್ದ ಕಾರಣದಿಂದ ನೊಹಾ ತಿನ್ನಲು ಮತ್ತು ಕುಡಿಯಲು ಯೋಗ್ಯನಾಗಿದ್ದ. ಇದರ ಬಳಿಕ ಆತನ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ದಾಖಲಿಸಿಕೊಳ್ಳಲು ವೈದ್ಯಕೀಯ ಲೋಕವು ನಿರ್ಧಾರ ಮಾಡಿಕೊಂಡಿತು.

ಒಂದು ದಿನ ವೈದ್ಯರಿಗೆ ಅಚ್ಚರಿಯಾಗುವ ಘಟನೆ ನಡೆಯಿತು
ನೊಹಾ ಮೂರು ವರ್ಷದ ಮಗುವಾಗಿ ಬೆಳೆದಾಗ ಆತನ ಮೆದುಳು ಶೇ.80ರಷ್ಟು ಬೆಳೆದಿರುವುದನ್ನು ಕಂಡು ವೈದ್ಯರು ಅಚ್ಚರಿಗೊಂಡರು. ದ್ರವ ಹೀರಿಕೊಳ್ಳಲು ಮಗುವಿನ ತಲೆಬುರುಡೆಯಲ್ಲಿ ಅಳವಡಿಸಲಾಗಿರುವಂತಹ ಶಂಟ್, ಮೆದುಳಿನ ಕೋಶಗಳು ಬೆಳವಣಿಗೆಯಾಗಲು ಜಾಗ ಮಾಡಿಕೊಟ್ಟಿರಬಹುದು ಎಂದು ವೈದ್ಯರು ನಂಬಿದ್ದಾರೆ. ಆದರೆ ಜೈವಿಕ ಶಾಸ್ತ್ರದ ಪ್ರಕಾರ ಮೆದುಳು ದ್ವಿಗುಣಗೊಳ್ಳುವುದು ಹೇಗೆ ಎಂದು ಇದುವರೆಗೂ ಪತ್ತೆಯಾಗಿಲ್ಲ. ಈ ಪ್ರಕರಣದಲ್ಲಿ ಇದು ಒಂದು ರೀತಿಯಲ್ಲಿ ಪವಾಡ ಎಂದೇ ಪರಿಗಣಿಸಲಾಗಿದೆ.

ಸಣ್ಣ ಮಗು ತನ್ನ ಸಂಕಷ್ಟಗಳಿಂದ ಮೇಲೆದ್ದು ಬಂದಿದ್ದಾನೆ
ಈ ವರ್ಷಗಳಲ್ಲಿ ಸಣ್ಣ ಮಗು ನೊಹಾ ಹಲವಾರು ವಿಚಾರಗಳನ್ನು ಕಲಿತುಕೊಂಡಿದೆ. ಇದರಲ್ಲಿ ಮುಖ್ಯವಾಗಿ ತನ್ನ ಹೆಸರು ಬರೆಯುವುದು ಮತ್ತು ಯಾವುದೇ ಭೀತಿಯಿಲ್ಲದೆ ತುಂಬಾ ಜನರ ಮುಂದೆ ಮಾತನಾಡುವುದು ಇತ್ಯಾದಿ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಅದೊಂದು ಪವಾಡ! ನೀವು ಇದರ ಬಗ್ಗೆ ಏನು ಹೇಳುತ್ತೀರಿ. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
