For Quick Alerts
ALLOW NOTIFICATIONS  
For Daily Alerts

ರಾಶಿಚಕ್ರಗಳ ಅನುಸಾರ ಯಾವ ರೀತಿಯ ಅಪರಾಧಿ ಭಾವನೆ ಕಾಡುವುದು ನೋಡಿ...

|

ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ತಪ್ಪು ಮಾಡದೆಯೇ ಅದು ತಪ್ಪು ಎನ್ನುವುದು ಅರಿವಿಗೆ ಬರುವುದಿಲ್ಲ. ತಪ್ಪು ಎಂದು ತಿಳಿದ ಮೇಲೂ ಅದೇ ತಪ್ಪನ್ನು ಪುನಃ ಪುನಃ ಮಾಡುತ್ತಿದ್ದರೆ ಅಪರಾಧ ಎನಿಸಿಕೊಳ್ಳುವುದು. ಕೆಲವೊಮ್ಮೆ ನಮ್ಮ ಅರಿವಿಗೆ ಬರದೆಯೇ ಎಷ್ಟೋ ತಪ್ಪುಗಳು ನಡೆದು ಹೋಗುತ್ತವೆ. ಆ ತಪ್ಪು ಸಂಭವಿಸಿದ ಬಳಿಕ ಈ ರೀತಿ ಮಾಡಬಾರದಿತ್ತು ಎನ್ನುವ ಭಾವನೆ ನಮ್ಮನ್ನು ಕಾಡುವುದು. ಚಿಕ್ಕ ಮಕ್ಕಳು ತಪ್ಪು ಮಾಡಿದಾಗ ಅದು ಅಪರಾಧ ಎನಿಸಿಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಬುದ್ಧಿವಂತಿಕೆಯ ಸಾಮಥ್ರ್ಯ ಅಷ್ಟಾಗಿ ಇರುವುದಿಲ್ಲ. ಅದೇ ವಯಸ್ಕರು ಮನ ಬಂದಂತೆ ತಪ್ಪು ಮಾಡುತ್ತಿದ್ದರೆ ಅದು ಅನುಚಿತ ಸಂಗತಿ ಎನಿಸಿಕೊಳ್ಳುವುದು.

ವಯಸ್ಕರು ಅಥವಾ ಪ್ರೌಢರು ಎಂದಾಗ ಅವರಲ್ಲಿ ಸಾಮಾನ್ಯವಾಗಿ ಯಾವುದು ಸರಿ? ಯಾವುದು ತಪ್ಪು? ಎನ್ನುವ ಕಾಳಜಿ ಹಾಗೂ ಭಾವನೆಗಳು ಇರುತ್ತವೆ. ಈ ನಿಟ್ಟಿನಲ್ಲಿಯೇ ಸಾಕಷ್ಟು ಬಾರಿ ಸಮಾಜದ ಎದುರು ಬಹಳ ಸಂಭಾವಿತರಂತೆ ವರ್ತಿಸುತ್ತಾರೆ. ಅವರ ಬಗ್ಗೆ ಇತರರ ಕಲ್ಪನೆಯಲ್ಲೂ ಒಳ್ಳೆಯ ವ್ಯಕ್ತಿ ಎನ್ನುವ ಭಾವನೆ ಮೂಡುವಂತೆ ಮಾಡುತ್ತಾರೆ. ಸಮಾಜದ ದೃಷ್ಟಿಯ ಮರೆಯಲ್ಲಿ ಮಾಡುವ ಅನುಚಿತ ಸಂಗತಿಗಳನ್ನು ಮಾಡಿದ್ದೇನೆ ಎನ್ನುವಂತಹದ್ದು ವ್ಯಕ್ತಿಯ ಮನಸ್ಸಿಗೆ ತಿಳಿದಿರುತ್ತದೆ. ಅಂತಹ ಅಪರಾಧಗಳು ಅಥವಾ ತಪ್ಪುಗಳು ವ್ಯಕ್ತಿಯ ಮನಸ್ಸಿನಲ್ಲಿ ದೀರ್ಘ ಸಮಯಗಳ ಕಾಲ ಉಳಿದುಕೊಂಡಿರುತ್ತವೆ. ಅದು ಬೇರೆಯವರಿಗೆ ತಿಳಿಯದೆ ಹೋದರೂ ಆ ವ್ಯಕ್ತಿಯ ಮನಸ್ಸಿಗೆ ಆಗಾಗ ಕಾಡುತ್ತಿರುತ್ತದೆ.

ವ್ಯಕ್ತಿಯ ಶರೀರದಲ್ಲಿ ಅಡಕವಾಗಿರುವ ಆತ್ಮ

ವ್ಯಕ್ತಿಯ ಶರೀರದಲ್ಲಿ ಅಡಕವಾಗಿರುವ ಆತ್ಮ

ವ್ಯಕ್ತಿಯ ಶರೀರದಲ್ಲಿ ಅಡಕವಾಗಿರುವ ಆತ್ಮ ಎನ್ನುವುದು ದೇವರಿಗೆ ಸಮಾನ. ನಾವು ಮಾಡುವ ತಪ್ಪು ಒಪ್ಪುಗಳು ಇತರರಿಗೆ ತಿಳಿಯದೆ ಹೋದರು ಮನಃಸಾಕ್ಷಿ ಅಥವಾ ಆತ್ಮ ಎನ್ನುವುದಕ್ಕೆ ಅದರ ಅರಿವಿರುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸ-ಕಾರ್ಯಗಳಿಗೂ ಆತ್ಮ ಎನ್ನುವುದು ಎಚ್ಚರಿಸುತ್ತಿರುತ್ತದೆ. ಯಾವುದು ತಪ್ಪು? ಯಾವುದು ಸರಿ? ಎನ್ನುವುದನ್ನು. ಆದರೂ ಕೆಲವೊಮ್ಮೆ ವ್ಯಕ್ತಿ ತನ್ನ ಸ್ವಾರ್ಥ ಹಾಗೂ ಆಸೆಗೋಸ್ಕರ ತಪ್ಪು ಮಾಡುತ್ತಾನೆ. ಆ ತಪ್ಪುಗಳನ್ನು ಮರೆಮಾಚಲು ಸಾಕಷ್ಟು ಸುಳ್ಳುಗಳ ಸಹಾಯ ಪಡೆದುಕೊಳ್ಳುವನು. ಅಂತಿಮವಾಗಿ ತಾನು ಸಭ್ಯ ಎಂದು ತೋರಿಸಿಕೊಂಡರು, ಆತ್ಮಸಾಕ್ಷಿ ಎನ್ನುವುದು ನೀನು ತಪ್ಪು ಮಾಡಿದ್ದೀಯಾ... ಎನ್ನುವುದನ್ನು ಮನಸ್ಸಿಗೆ ಪದೇ ಪದೇ ಹೇಳುತ್ತಲೇ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರು ಒಂದೊಂದು ಬಗೆಯ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅವರಿಂದ ಆದ ತಪ್ಪಿನ ಬಗ್ಗೆ ಸಾಕಷ್ಟು ಅಪರಾಧದ ಭಾವನೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಅವರಲ್ಲಿ ಕಾಡುವ ಅಪರಾಧದ ಭಾವನೆಯು ಕೆಲವೊಮ್ಮೆ ಸಾಕಷ್ಟು ಮಾನಸಿಕ ನೆಮ್ಮದಿಯನ್ನು ಕಾಡುವುದು. ನೀವು ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವ ಬಗೆಯ ಅಪರಾಧಿ ಭಾವನೆಗೆ ಒಳಗಾಗುವಿರಿ? ಅದರ ಪ್ರಭಾವ ನಿಮ್ಮ ಮೇಲೆ ಎಂತಹ ಪರಿಣಾಮ ಬೀರುವುದು? ಎನ್ನುವುದನ್ನು ತಿಳಿದುಕೊಳ್ಳಲು ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಈ ರಾಶಿಯ ವ್ಯಕ್ತಿಗಳು ನಿರಂತರವಾಗಿ ಸಕ್ರಿಯವಾಗಿರಲು ಹೊಸ ಮಾರ್ಗಗಳನ್ನು ಹುಡುಕುತ್ತಾರೆ. ಆದರೆ ಅವರು ತಮಗೆ ಸಿಗುವ ಬಿಡುವಿನ ಸಮಯದಲ್ಲಿ ಹೇಗೆ ಇರಲು ಪ್ರೀತಿಸುತ್ತಾರೆ ಎನ್ನುವುದನ್ನು ತಿಳಿದರೆ ಜನರು ಆಶ್ಚರ್ಯಪಡುತ್ತಾರೆ. ಇವರು ತಮ್ಮ ಸಾಹಸಮಯವಾದ ಖ್ಯಾತಿಯನ್ನು ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಇವರು ಒಂದೇ ಬಟ್ಟೆಯಲ್ಲಿ ಸಾಕಷ್ಟು ದಿನವನ್ನು ಕಳೆಯಬಲ್ಲರು. ಅವರು ಮಾಡುವ ಆ ತಪ್ಪುಗಳನ್ನು ಇತರರ ಮುಂದೆ ತೋರಿಸಿಕೊಳ್ಳಲು ಅಥವಾ ಹೇಳಲು ಬಯಸುವುದಿಲ್ಲ. ಆ ಭಾವನೆಗಳನ್ನು ಮರೆಮಾಚುತ್ತಲೇ ಇರುತ್ತಾರೆ. ಇದು ಅವರನ್ನು ಆಗಾಗ ಕಾಡುವ ಸಮಸ್ಯೆ ಆಗಿರುತ್ತದೆ.

ವೃಷಭ

ವೃಷಭ

ಈ ರಾಶಿಯ ವ್ಯಕ್ತಿಗಳು ಹೆಚ್ಚು ನಿರ್ವಹಣಾ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ತಮ್ಮವರು ಅಥವಾ ಸ್ನೇಹಿತರಿಗಾಗಿ ಉತ್ತಮ ಊಟಕೊಡಿಸುವುದು ಅಥವಾ ತಾವೇ ಹೊಂದುವುದು ಎಂದರೆ ಎಲ್ಲಿಲ್ಲದ ಖುಷಿಯಾಗುತ್ತದೆ. ಆದರೆ ಅವರಿಗೆ ಹೆಚ್ಚಾಗಿರುವುದನ್ನು ಉಳಿಸಬೇಕು. ಅಥವಾ ಮಿತವಾಗಿ ಬಳಸ ಬೇಖು, ಆಹಾರ ಪದಾರ್ಥಗಳನ್ನು ಹೆಚ್ಚು ಹಾಳುಮಾಡಬಾರದು ಎನ್ನುವುದರ ಬಗ್ಗೆ ಚಿಂತಿಸುವುದಿಲ್ಲ. ಅವರು ಮಾಡುವ ಈ ಸಾಮಾನ್ಯ ತಪ್ಪುಗಳ ಬಗ್ಗೆ ಸಾಕಷ್ಟು ಅಪರಾಧ ಭಾವನೆಯಾಗಿ ಕಾಡುವುದು.

Most Read: ಮುಖ ನೋಡಿದ ತಕ್ಷಣ ನಿಮ್ಮ ಮದುವೆ ಬಗ್ಗೆ ಹೇಳಬಹುದು!

ಮಿಥುನ

ಮಿಥುನ

ಈ ರಾಶಿಯ ವ್ಯಕ್ತಿಗಳು ಅತಿಯಾಗಿ ಪುಸ್ತಕ ಓದಲು ಬಯಸುತ್ತಾರೆ. ಅದರ ಬಗ್ಗೆ ಯಾವುದೇ ತಪ್ಪಿತಸ್ಥ ಭಾವನೆಯನ್ನು ಹೊಂದಿರುವುದಿಲ್ಲ. ಅನುಚಿತ, ಗಾಸಿಪ್ ವಿಷಯಗಳ ಪುಸ್ತಕವಾಗಿರುತ್ತದೆ. ಅದನ್ನು ಓದಲು ಸಾಕಷ್ಟು ಸಮಯವನ್ನು ಸಹ ತೆಗೆದುಕೊಳ್ಳುವರು. ಅದು ಇತರರ ಗಮನಕ್ಕೆ ಬರದಂತೆ ರಹಸ್ಯವನ್ನು ಕಾಪಾಡುವರು.

ಕರ್ಕ

ಕರ್ಕ

ಸ್ವಲ್ಪ ನಾಚಿಕೆ ಸ್ವಭಾವದವರಾದ ಇವರು ಅಪರಿಚಿತರೊಂದಿಗೆ ದೂರ ಸರಿಯಲು ಬಯಸುತ್ತಾರೆ. ತೆರೆಮರೆಯಲ್ಲಿ ಉಳಿಯಲು ಬಯಸುವ ಇವರು ಸಾಮಾಜಿಕ ತಾಣದಲ್ಲಿ ಸಾಕಷ್ಟು ವಿಷಯಗಳನ್ನು ಪೋಸ್ಟ್ ಮಾಡುವರು. ಅದರ ಬಗ್ಗೆ ಸಾಕಷ್ಟು ಕಾಳಜಿಯಿಂದ ಕೆಲಸ ನಿರ್ವಹಿಸುವರು. ಇವರು ಕೆಲವು ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಉದಾಹರಣೆಗೆ ಅದೊಂದು ಸಿಹಿ ತಿಂಡಿಯೇ ಆಗಿರಬಹುದು. ಇಲ್ಲ ಎನ್ನುವ ಉತ್ತರ ನೀಡುವರು. ಬಳಿಕ ಅವರ ತಪ್ಪಿನ ಭಾವಕ್ಕೆ ಒಳಗಾಗುವರು.

ಸಿಂಹ

ಸಿಂಹ

ಇವರು ಸಾಮಾನ್ಯವಾಗಿ ಹೊಸ ಉಡುಗೆ, ಶೂ ಗಳನ್ನು ಪದೇ ಪದೇ ಹೊಂದಲು ಬಯಸುತ್ತಾರೆ. ಅಂತೆಯೇ ಖರೀದಿಸುತ್ತಾರೆ ಸಹ. ಆದರೆ ಕೇಳುಗರ ಹತ್ತಿರ ಅವಶ್ಯಕತೆ ಇತ್ತು ಅಥವಾ ಯಾವುದೋ ಅವಮಾನಕ್ಕೆ ಒಳಗಾಗಿದ್ದೆ, ಅದಕ್ಕಾಗಿ ಇದನ್ನು ಖರೀದಿಸಿದೆ ಎನ್ನುವಂತಹ ಸುಳ್ಳನ್ನು ಹೇಳುತ್ತಾರೆ. ಇದು ಅವರಲ್ಲಿಯೇ ತಪ್ಪು ಭಾವನೆಯನ್ನು ಮೂಡಿಸಿ ಕಾಡುವುದು.

ಕನ್ಯಾ

ಕನ್ಯಾ

ಇವರು ಯಾರಾದರೂ ಏನಾದರೂ ವಿಶೇಷ ಅಥವಾ ಗಂಭೀರ ಸಂಗತಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದರೆ ಇವರು ಅದನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಬದಲಿಗೆ ತಮ್ಮ ವೈಯಕ್ತಿಕ ಸಂತೋಷಕ್ಕಾಗಿ ಸಮಯ ಕಳೆಯಲು ಬಯಸುವರು. ಯಾರು ಇಲ್ಲದ ಸಮಯದಲ್ಲಿ ತಮಗೆ ಇಷ್ಟವಾದ ರೀತಿಯ ವರ್ತನೆ ಹಾಗೂ ಕೆಲಸವನ್ನು ಕೈಗೊಳ್ಳುತ್ತಾರೆ. ಇದು ಅವರಲ್ಲಿ ಆಗಾಗ ಅಪರಾಧಿ ಭಾವನೆ ಮೂಡಿಸುವುದು.

Most Read: ದೇಹದ ಈ ಭಾಗದಲ್ಲಿ ಮಚ್ಚೆ ಇರುವವರು ತುಂಬಾನೇ ಅದೃಷ್ಟವಂತರಂತೆ!

ತುಲಾ

ತುಲಾ

ಇವರು ಸಾಮಾನ್ಯವಾಗಿ ಹತ್ತಿರದ ಗೆಳೆಯರೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಏಕೆಂದರೆ ಅವರು ಉತ್ತಮ ಅಭಿರುಚಿ ಹೊಂದಿದದ್ದಾರೆ ಎನ್ನುವ ಕಾರಣಕ್ಕಾಗಿ ಆಗಿರುತ್ತದೆ. ಇವರು ಶಾಪಿಂಗ್ ಮಾಡಲು ಇಷ್ಟ ಪಡುವುದಿಲ್ಲ. ಆದರೆ ಅವರು ಆಯ್ಕೆ ಮಾಡುವುದು ಅಷ್ಟಾಗಿ ಸಮಂಜಸವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಸ್ನೇಹಿತರೊಂದಿಗೆ ಇರಲು ಬಯಸುತ್ತಾರೆ. ಅದಕ್ಕಾಗಿಯೇ ಕೆಲವೊಮ್ಮೆ ತಮ್ಮ ತಪ್ಪಿನ ಬಗ್ಗೆ ಅಪರಾಧಿ ಭಾವನೆಗೆ ಒಳಗಾಗುವರು.

ವೃಶ್ಚಿಕ

ವೃಶ್ಚಿಕ

ಇವರಿಗೆ ತಮ್ಮ ಜೀವನಕ್ಕೆ ಯಾವುದು ಮುಖ್ಯ ಎನ್ನುವುದನ್ನು ತಿಳಿದಿದ್ದಾರೆ. ಅದಕ್ಕೆ ಕೆಲವು ಸ್ಫೂರ್ತಿಯನ್ನು ಪಡೆದುಕೊಲ್ಳಬೇಕಾಗುವುದು. ತಮ್ಮ ಅವಶ್ಯಕತೆ ಹಾಗೂ ನಿರೀಕ್ಷೆಗಳಿಗಾಗಿ ಸದಾ ಸಿದ್ಧರಾಗಿರುತ್ತಾರೆ. ಇದು ಕೆಲವೊಮ್ಮೆ ಅವರಿಗೆ ಬೇಸರವನ್ನುಂಟುಮಾಡುವ ಸಂಗತಿಯಾಗಿರುತ್ತದೆ. ಅದು ಅವರು ಮಾಡುವ ತಪ್ಪು ಎನ್ನುವುದನ್ನು ತಿಳಿದುಕೊಳ್ಳುತ್ತಾರೆ.

ಧನು

ಧನು

ಇವರು ತಮಗಾಗಿಯೇ ಕೆಲವು ಸೂಕ್ತ ಸಮಯವನ್ನು ಹೊಂದಲು ಬಯಸುತ್ತಾರೆ. ಆದರೆ ಸಾಂಪ್ರದಾಯಿಕವಾಗಿ ಸೋಮಾರಿ ತನದಿಂದ ಕೂಡಿದ ದಿನದಲ್ಲಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಇವರಲ್ಲಿ ಅಪರಾಧಿ ಭಾವನೆ ಕಾಡುವ ಸಂಗತಿ ಎಂದರೆ ಎಲ್ಲಾ ಸಮಯದಲ್ಲೂ ಊಟ ಹಾಗೂ ಪರಿಶೋಧನೆಗಾಗಿಯೇ ಮೀಸಲಾಗಿರುವುದರ ಬಗ್ಗೆ ಆಗಿರುತ್ತದೆ.

ಮಕರ

ಮಕರ

ಇವರು ತಮ್ಮ ದೈನಂದಿನ ಶಿಸ್ತಿನ ಜೀವನಕ್ಕೆ ಹೆಚು ಪ್ರಾಶ್ತ್ಯ ನೀಡುವರು. ಅಂತೆಯೇ ಐಶಾರಾಮಿಯ ಕಡುಬಯಕೆಯನ್ನು ಈಡೇರಿಸುವ ಅನಿವಾರ್ಯತೆ ಇರುತ್ತದೆ. ಇವರಿಗೆ ದುಬಾರಿ ವಸ್ತು ಅಥವಾ ಉಡುಗೆಗಾಗಿ ಅಧಿಕ ಹಣವನ್ನು ಖರ್ಚುಮಾಡಲು ಇಷ್ಟವಾಗುವುದಿಲ್ಲ. ಅದು ಅವರಿಗೆ ಕೆಲವೊಮ್ಮೆ ಬೇಸರವನ್ನು ಉಂಟುಮಾಡುವುದು.

Most Read: 2019ರಲ್ಲಿ ಗುರು ಗ್ರಹದ ಪ್ರಭಾವ-ಯಾವ್ಯಾವ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ ನೋಡಿ

ಕುಂಭ

ಕುಂಭ

ಇವರು ಯಾವಾಗಲು ಹೊಸ ಆಲೋಚನೆ ಹಾಗೂ ಕ್ರಿಯಾಶೀಲತೆಗೆ ಹೆಸರುವಾಸಿಯಾದ ವ್ಯಕ್ತಿಗಳಾಗಿರುತ್ತಾರೆ. ಕೆಲವು ಸಂದರ್ಭದಲ್ಲಿ ಇಷ್ಟ ಸ್ನೇಹಿತರು ಅಥವಾ ಬಂಧುಗಳೊಂದಿಗೆ ಸಮಯವನ್ನು ಕಳೆಯಲು ಬಯಸುತ್ತಾರೆ. ಆದರೆ ಅವರಿಗೆ ಅರಿವಿಲ್ಲದೆಯೇ ತಮ್ಮ ಪಾಡಿಗೆ ಉಳಿದುಕೊಳ್ಳಬಹುದು. ಜೊತೆಗೆ ಕೆಲವೊಮ್ಮೆ ಅತಿಯಾದ ನಿದ್ರೆಗೆ ಜಾರುವರು. ಈ ಸಂಗತಿಯು ಅವರಿಗೇ ಕೆಲವೊಮ್ಮೆ ತಪ್ಪಿನ ಅರಿವನ್ನು ಮೂಡಿಸುವುದು.

ಮೀನ

ಮೀನ

ಈ ರಾಶಿಯ ವ್ಯಕ್ತಿಗಳು ತಮ್ಮ ಸೃಜನಶೀಲತೆಗೆ ಹೆಸರಾದವರು. ಅದ್ಭುತ ಕಲ್ಪನೆಯಿಂದ ಭಾವನೆಯನ್ನು ನಿಯಂತ್ರಿಸುತ್ತಾರೆ. ಇವರು ಮಧ್ಯ ರಾತ್ರಿಯಲ್ಲಿ ಹೊರಗೆ ಹೋಗುವುದು ಅಥವಾ ಯಾವುದಾದರೂ ಸಂಗೀತ ಕಾರ್ಯಕ್ರಮಗಳಲ್ಲಿ ಸಮಯ ಕಳೆಯುವುದು ಬಹಳ ಬೇಸರದ ಸಂಗತಿಯಾಗಿರುತ್ತದೆ. ಅದರ ಕುರಿತು ಕೆಲವೊಮ್ಮೆ ತಪ್ಪಿನ ಭಾವಕ್ಕೆ ಒಳಗಾಗುವರು.

English summary

Guilty Pleasure Based On Zodiac Sign

There are so many guilty pleasures that pop in our heads. But have you ever wondered that there are some of the guilty pleasures that each zodiac sign shares? According to experts, there are some common guilty pleasures that define each zodiac sign.Have you ever wondered what can be your secret guilt pleasure? Your sun sign can define your guilt pleasure.
X
Desktop Bottom Promotion