Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವ ರಾಶಿಯವರು!
ಪ್ರೀತಿ ಎನ್ನುವುದು ಸಂಗಾತಿ ಮಧ್ಯೆ ಇರುವುದು ಸಹಜ. ಇದನ್ನು ಅವರು ಪರಸ್ಪರ ವ್ಯಕ್ತಪಡಿಸುವರು. ಆದರೆ ಕೆಲವೊಂದು ಸಲ ಇಬ್ಬರ ಮಧ್ಯೆ ಪ್ರೀತಿಯಿದ್ದರೂ ಅದನ್ನು ವ್ಯಕ್ತಪಡಿಸಲು ಹಿಂಜರಿಯುವರು. ಅದರಲ್ಲೂ ಪ್ರೀತಿ ವ್ಯಕ್ತಪಡಿಸುವುದು ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಎನ್ನುವ ನಂಬಿಕೆಯಲ್ಲಿ ಕೆಲವರು ಇರುತ್ತಾರೆ. ಆದರೆ ಇನ್ನು ಕೆಲವರು ಎಲ್ಲರ ಮುಂದೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವರು. ಅದು ಸಾರ್ವಜನಿಕ ಸ್ಥಳವಾಗಿದ್ದರೂ ಸಹಿತ ಅವರು ಇದಕ್ಕೆ ಹಿಂಜರಿಯಲ್ಲ. ಈ ಲೇಖನದಲ್ಲಿ ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವ ರಾಶಿ ಬಗ್ಗೆ ನಾವಿಲ್ಲಿ ತಿಳಿಸಲಿದ್ದೇವೆ.

ವೃಷಭ: ಎಪ್ರಿಲ್ 20-ಮೇ20
ಇವರು ದಯಾಮಯ ಮತ್ತು ಸಂವೇದನಾಶೀಲವಾದವರು. ಸ್ಪರ್ಶವು ಇವರ ಪ್ರೀತಿಯ ಭಾಷೆ ಮತ್ತು ಇತರರ ಬಗ್ಗೆ ಇದೇ ಭಾಷೆ ಮೂಲಕ ಅವರು ಕಾಳಜಿ ಮಾಡುವರು. ಇದನ್ನು ವ್ಯಕ್ತಪಡಿಸಲು ಅವರು ಯಾವತ್ತೂ ಹಿಂಜರಿಯಲ್ಲ. ಇವರು ತಮ್ಮ ದೈಹಿಕ ಆಕರ್ಷಣೆಯನ್ನು ಖಾಸಗಿ ಅಥವಾ ಸಾರ್ವಜನಿಕವಾಗಿ ವ್ಯಕ್ತಪಡಿಸುವರು. ಇವರ ಸ್ಪರ್ಶ ಮತ್ತು ಆಕರ್ಷಣೆಯು ಸಂಗಾತಿ ಜತೆಗೆ ಭಾಂದವ್ಯ ಉಂಟು ಮಾಡುವುದು. ಇವರು ಭಾವನೆ ವ್ಯಕ್ತಪಡಿಸಲು ತುಂಬಾ ಹಸಿದಿರುವರು. ಇವರು ತಮ್ಮ ಸಂಗಾತಿಯ ಬೆನ್ನನ್ನು ಉಜ್ಜಬಹುದು ಅಥವಾ ಕಿಸ್ ನೀಡಬಹುದು. ಇವರು ತಮ್ಮ ಸಂಗಾತಿಯ ಕೈಯನ್ನು ಸಾರ್ವಜನಿಕವಾಗಿ ಹಿಡಿಯಲು ಹಿಂಜರಿಯಲ್ಲ.
ಇನ್ನು ಇವರು ಇವರು ಗಾಸಿಪ್ ಪ್ರಿಯರು. ಬೇರೆಯವರ ಸಮಸ್ಯೆಯ ಬಗ್ಗೆ ಸ್ವಲ್ಪ ಹೆಚ್ಚಾಗಿಯೇ ಮಾತನಾಡುತ್ತಾರೆ. ಇವರು ಯಾವುದೇ ವಿಚಾರವನ್ನು ಹೇಳುವುದಿಲ್ಲ ಎಂದು ಭರವಸೆ ನೀಡಿದರೂ ಸಹ ಕೆಲವು ಸಂದರ್ಭದಲ್ಲಿ ಬಾಯಿ ಬಿಟ್ಟುಬಿಡುತ್ತಾರೆ.
ತುಲಾ: ಸೆ.24-ಅ.23
ಇವರು ತಾವು ಪ್ರೀತಿಸುತ್ತಿರುವಂತಹ ಜನರಿಗೆ ತುಂಬಾ ಹತ್ತಿರವಾಗಿರಬೇಕೆಂಬ ಆಕಾಂಕ್ಷೆ ಹೊಂದಿರುವರು. ಇವರು ತುಂಬಾ ಸೂಕ್ಷ್ಮ ವ್ಯಕ್ತಿಗಳು ಮತ್ತು ತಮ್ಮ ಭಾವನೆ ತೋರ್ಪಡಿಸಲು ಭೀತಿ ಪಡಲ್ಲ. ಸಾಮಾಜಿಕ ಪರಿಸ್ಥಿತಿಯಲ್ಲಿ ಇವರು ತುಂಬಾ ರೋಮ್ಯಾಂಟಿಕ್, ಆರಾಮವಾಗಿರುವರು. ಬೇರೆ ಜನರು ತಮ್ಮ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎನ್ನುವ ಬಗ್ಗೆ ಇವರು ಚಿಂತಿಸಲ್ಲ. ಇವರು ಯಾವಾಗಲೂ ತಮ್ಮ ಸಂಗಾತಿಯ ಹೆಗಲಿಗೆ ಕೈ ಇಟ್ಟುಕೊಳ್ಳುವುದನ್ನು ಇಷ್ಟಪಡುವರು. ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವುದು ಇವರಿಗೆ ನೈಸರ್ಗಿಕವಾಗಿ ಬಂದಿರುವುದು. ಇನ್ನು ಇವರು ಇವರು ದೊಡ್ಡ ಸಾಮಾಜಿಕ ವಲಯವನ್ನು ಹೊಂದಿದವರಾಗಿರುತ್ತಾರೆ. ಸ್ನೇಹಿತರೊಡನೆ ಕೆಲವು ಸುಳ್ಳು ಯೋಜನೆಯನ್ನು ಮಾಡುವ ಸಾಧ್ಯತೆ ಇರುತ್ತದೆ. ಇವರು ಹೇಳುವ ವಿಚಾರವೆಲ್ಲಾ ದೊಡ್ಡ ಯೋಜನೆಯದ್ದು ಎಂದು ನಂಬುವ ಹಾಗಿರುವುದಿಲ್ಲ.
ವೃಶ್ಚಿಕ: ಅ.24-ನ.22
ಸಾರ್ವಜನಿಕವಾಗಿ ಪ್ರೀತಿ ವ್ಯಕ್ತಪಡಿಸುವಲ್ಲಿ ಈ ರಾಶಿಯವರು ತುಂಬಾ ಮುಂದಿರುವರು. ದೈಹಿಕ ಸಂಪರ್ಕದಲ್ಲಿ ಇವರು ತುಂಬಾ ಶಕ್ತಿಶಾಲಿಯಾಗಿರುವರು. ಇನ್ನೊಂದು ಕಡೆಯಲ್ಲಿ ಈ ವ್ಯಕ್ತಿಗಳು ಕೆಲವೊಂದು ಸಲ ಚಟಕ್ಕೆ ಬೀಳುವರು. ಇದರಿಂದಾಗಿ ಸಮತೋಲದಲ್ಲಿಡುವಂತಹ ಸಂಗಾತಿಯು ಇವರಿಗೆ ಬೇಕಾಗಿದೆ. ಇದರಿಂದ ಸಂಬಂಧದಲ್ಲಿ ಉಂಟಾಗುವ ಗೊಂದಲ ದೂರ ಮಾಡಬಹುದು. ಇನ್ನು ಈ ರಾಶಿಯವರು ಸದಾ ತಮ್ಮ ದ್ವೇಷವನ್ನು ಮನದಲ್ಲಿಟ್ಟುಕೊಂಡಿರುತ್ತಾರೆ. ಇವರು ವರ್ಷಾನುಗಟ್ಟಲೆ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ. ಇವರು ಇಷ್ಟ ಪಡದ ವ್ಯಕ್ತಿಗೆ ಒಂದು ನಗುವನ್ನು ಸಹ ಬೀರುವುದಿಲ್ಲ.
ಇನ್ನು ಈ ರಾಶಿಯ ಜನರು ಅತಿ ತೀಕ್ಷ್ಣಮತಿಗಳಾಗಿದ್ದಾರೆ. ಇವರನ್ನು ಬೇರೆಯವರು ನಿಯಂತ್ರಿಸುವುದು ಇವರಿಗೆ ಇಷ್ಟವಿಲ್ಲ. ಬಲ ಮತ್ತು ಪ್ರಾಬಲ್ಯತೆಯನ್ನು ಹೊಂದಲು ಇಷ್ಟಪಡುವ ಇವರು ಇದಕ್ಕಾಗಿ ಯಾವ ಬಗೆಯಲ್ಲಿ ತಮ್ಮ ಮಾತುಗಳಲ್ಲಿ ಸುಳ್ಳುಗಳನ್ನು ಪೋಣಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ. ಈ ಸುಳ್ಳುಗಳ ಸರಮಾಲೆಯಲ್ಲಿ ಸಿಲುಕಿದವರು ಈ ಗೋಜಲನ್ನು ಅರ್ಥ ಮಾಡುವಷ್ಟರಲ್ಲಿ ಆಗಲೇ ಬಲೆಗೆ ಬಿದ್ದಾಗಿರುತ್ತದೆ. ಸುಳ್ಳು ಎಂದು ಗೊತ್ತಿರುವ ಜಾಹೀರಾತುಗಳನ್ನು ನೋಡಿ ನಾವು ಉತ್ಪನ್ನಗಳನ್ನು ಕೊಳ್ಳುವುದಿಲ್ಲವೇ ಹಾಗೇ. ಅಂತೆಯ ಇವರ ನಿರ್ಯಣಗಳು ಚಂಚಲವಾಗಿದ್ದು ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತವೆ.
ಧನು: ನ.23-ಡಿ.22
ಧನು ರಾಶಿಯವರು ವಿಸ್ತೃತ ಹೃದಯವುಳ್ಳವರು. ಸಮಾಜ ಏನು ಯೋಚಿಸುತ್ತದೆ ಎನ್ನುವ ಬಗ್ಗೆ ಅವರು ಚಿಂತೆ ಮಾಡಲ್ಲ ಮತ್ತು ತಮ್ಮ ಭಾವನೆ ವ್ಯಕ್ತಪಡಿಸಲು ಇವರು ಹಿಂಜರಿಯಲ್ಲ. ಸಾರ್ವಜನಿಕವಾಗಿ ಇವರು ತುಂಬಾ ಸಂವೇದನಾಶೀಲರಾಗಿರುವರು. ಇದನ್ನು ಹೊರತುಪಡಿಸಿ ಇವರು ತಮ್ಮ ಪ್ರೀತಿಯನ್ನು ದೈಹಿಕ ಸ್ಪರ್ಶದ ಮೂಲಕ ತೋರಿಸುವರು. ಇದರಿಂದಾಗಿ ಅವರು ಸಂಗಾತಿಯ ಮೇಲಿನಿಂದ ತಮ್ಮ ಕೈಯನ್ನು ತೆಗೆಯಲ್ಲ. ಈ ಲೇಖನದಲ್ಲಿ ನಿಮ್ಮ ಫೇವರಿಟ್ ರಾಶಿ ಇದೆಯಾ?
ರಾಶಿಗಳ ಬಗ್ಗೆ ಮತ್ತಷ್ಟು ತಿಳಿಯಲು ಈ ಸೆಕ್ಷನ್ ನಲ್ಲಿ ಓದುತ್ತಲಿರಿ. ಇವರು ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಜನರೊಟ್ಟಿಗೆ ಮಾತನಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯಿಂದ ಮೋಸವಾಗಿದೆ ಎಂಬುದು ತಿಳಿದರೆ ಆ ವ್ಯಕ್ತಿಯ ವಿರುದ್ಧ ಇವರು ಸಹ ಮೋಸ ಮಾಡಲು ಇಳಿಯುತ್ತಾರೆ. ಕ್ಷಮೆಯಾಚಿಸಿದಲ್ಲಿ ಇವರು ಸಹ ಪ್ರಾಮಾಣಿಕವಾಗಿ ವರ್ತಿಸುತ್ತಾರೆ.



Click it and Unblock the Notifications

