ರಾಶಿ ಭವಿಷ್ಯ: ಬೇಸರದಿಂದ ಇರಲು ರಾಶಿಚಕ್ರಗಳೇ ಕಾರಣ!

Posted By: Hemanth
Subscribe to Boldsky

ಕೆಲವರನ್ನು ಯಾವಾಗ ನೋಡಿದರೂ ತುಂಬಾ ಬೇಸರದಿಂದ ಇರುವರು. ಆದರೆ ಇಂತಹ ವ್ಯಕ್ತಿಗಳು ಬೇಸರದಿಂದ ಇರಲು ಅವರ ರಾಶಿಚಕ್ರಗಳು ಕಾರಣವೆಂದು ಹೇಳಿದರೆ ಆಗ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗಬಹುದು. ಹೌದು, ರಾಶಿಚಕ್ರದಿಂದಾಗಿಯೇ ಕೆಲವರು ತುಂಬಾ ಬೇಸರದಿಂದ ಇರುವರು ಎಂದು ಜ್ಯೋತಿಷ್ಯವು ಹೇಳುವುದು. ಕೆಲವೊಂದು ವ್ಯಕ್ತಿಗಳ ಸಂತೋಷ ಹಾಗೂ ಬೇಸರವು ಸಂಪೂರ್ಣವಾಗಿ ರಾಶಿಚಕ್ರದ ಮೇಲೆ ಅವಲಂಬಿತವಾಗಿರುವುದು. ಇದು ಹೇಗೆ ಎಂದು ನೀವು ಮುಂದಕ್ಕೆ ತಿಳಿಯಿರಿ...

ಮೇಷ: ಮಾರ್ಚ್ 21-ಎಪ್ರಿಲ್ 19

ಮೇಷ: ಮಾರ್ಚ್ 21-ಎಪ್ರಿಲ್ 19

ಬದಲಾಗದೆ ಇರುವಂತಹ ವ್ಯಕ್ತಿಗಳಿಂದ ನಿಮಗೆ ತುಂಬಾ ಕಿರಿಕಿರಿಯಾಗುವುದು. ಆ ವ್ಯಕ್ತಿಯು ನಿಮಗೆ ಕ್ಷಮೆ ನೀಡುವುದಿಲ್ಲವೆಂದು ನೀವು ಯೋಚಿಸುತ್ತಿದ್ದರೆ ಆಗ ಖಂಡಿತವಾಗಿಯೂ ಒತ್ತಡಕ್ಕೆ ಒಳಗಾಗುವಿರಿ. ಅವರು ನೀಡಿರುವಂತಹ ನೋವಿನಿಂದ ನೀವು ಮುಂದಕ್ಕೆ ಸಾಗಬಹುದು. ನೀವು ಅಂತಿಮವಾಗಿ ಅವರನ್ನು ಮರೆತು ಬಿಡುವಿರಿ. ಅವರನ್ನು ದ್ವೇಷಿಸಲು ಕೂಡ ಸಾಧ್ಯವಿಲ್ಲವೆಂದು ನೀವು ಭಾವಿಸುವಿರಿ.

ವೃಷಭ: ಎಪ್ರಿಲ್ 20-ಮೇ 20

ವೃಷಭ: ಎಪ್ರಿಲ್ 20-ಮೇ 20

ಈ ರಾಶಿಯವರು ಹೆಚ್ಚಾಗಿ ವರ್ತಮಾನಕ್ಕಿಂತ ಹೆಚ್ಚಾಗಿ ಭೂತ ಕಾಲದಲ್ಲಿ ಜೀವಿಸುತ್ತಿರುವರು. ನೀವು ಈಗ ಹೇಗೆ ಇದ್ದೀರಿ ಎನ್ನುವುದರ ಬಗ್ಗೆ ಪ್ರಶಂಸೆ ಮಾಡಲು ನಿಮಗೆ ತುಂಬಾ ಕಷ್ಟವಾಗುವುದು. ನೀವು ಏನು ಮಾಡಬೇಕು ಎನ್ನುವ ಬಗ್ಗೆ ಸಿಲುಕಿಹಾಕಿಕೊಂಡಿರುವ ಕಾರಣದಿಂದಾಗಿ ನೀವು ತುಂಬಾ ಇಕ್ಕಟ್ಟಿನಲ್ಲಿರುವಿರಿ. ನೀವು ಯಾವಾಗಲೂ ಒಬ್ಬರ ಅನುಸ್ಥಿತಿಯಲ್ಲಿರುವಿರಿ. ಇದು ನೆನಪು ಅಥವಾ ವ್ಯಕ್ತಿಯಾಗಿರಬಹುದು. ಆದರೆ ಇದು ನಿಮ್ಮನ್ನು ಪದೇ ಪದೇ ಕಾಡುತ್ತಲಿರುವುದು. ನೀವು ಈ ಕ್ಷಣದಲ್ಲಿ ವಾಸಿಸುವುದನ್ನು ಕಲಿಯಿರಿ ಮತ್ತು ವರ್ತಮಾನದ ಬದುಕನ್ನು ಆನಂದಿಸಿ.

ಮಿಥುನ: ಮೇ 21-ಜೂನ್ 20

ಮಿಥುನ: ಮೇ 21-ಜೂನ್ 20

ಕಿರಿಕಿರಿಯು ನಿಮ್ಮನ್ನು ಜೀವಂತವಾಗಿ ಕೊಂದು ಹಾಕುತ್ತಿದೆ. ನೀವು ಏನೋ ದೊಡ್ಡ ಮಟ್ಟದ ದುರ್ಘಟನೆ ನಡೆಯಲು ಕಾಯುತ್ತಲಿರುವಿರಿ. ಸಂತೋಷವು ದೀರ್ಘಕಾಲ ತನಕ ಉಳಿಯಲು ಎಂದು ನೀವು ಭಾವಿಸಿರುವಿರಿ. ನೀವಾಗಿಯೂ ಯಾವುದೇ ಸಂಭ್ರಮದಲ್ಲಿ ಭಾಗಿಯಾಗಲ್ಲ. ವರ್ತಮಾನದಲ್ಲಿ ಬದುಕುವ ಬದಲು ನೀವು ಭವಿಷ್ಯದಲ್ಲಿ ಏನಾಗುತ್ತದೆಯಾ ಎನ್ನುವ ಬಗ್ಗೆ ಯೋಚನೆ ಮಾಡುತ್ತಲಿರುವರಿ.

ಕರ್ಕಾಟಕ: ಜೂ.21-ಜುಲೈ 22

ಕರ್ಕಾಟಕ: ಜೂ.21-ಜುಲೈ 22

ನೀವು ಇತರರ ಕಡೆ ಹೆಚ್ಚಿನ ಗಮನಹರಿಸುತ್ತೀರಿ ಮತ್ತು ಇದರಿಂದಾಗಿ ನಿಮ್ಮ ಕಡೆ ಗಮನ ಹರಿಸಲು ನಿಮಗೆ ಸಮಯವಿರುವುದಿಲ್ಲ. ಕೆಲವೊಂದು ಸಲ ನಿಮ್ಮದೇ ಆಕಾಂಕ್ಷೆಗಳನ್ನು ಕಡೆಗಣಿಸುವಿರಿ. ಯಾಕೆಂದರೆ ನಿಮ್ಮ ಪ್ರೀತಿಪಾತ್ರರ ಆರೈಕೆ ಮಾಡುತ್ತಿರುವಿರಿ ಎಂದು ನೀವು ಭಾವಿಸುತ್ತಿರುವಿರಿ. ಮೊದಲು ಏನು ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಕಡೆ ಹೆಚ್ಚಿನ ಗಮನಹರಿಸಿದರೆ ತುಂಬಾ ಒಳ್ಳೆಯದು.

ಸಿಂಹ: ಜುಲೈ23- ಆ.23

ಸಿಂಹ: ಜುಲೈ23- ಆ.23

ತಪ್ಪುಗಳು ಏನಾದರೂ ನಡೆದರೆ ಅದು ನಿಮ್ಮಿಂದಾಗಿಯೇ ಎಂದು ಭಾವಿಸಿರುವಿರಿ. ನೀವು ಪರಿಸ್ಥಿತಿ ಮೇಲೆ ನಿಯಂತ್ರಣ ಪಡೆಯುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ. ನಿಮ್ಮ ಸುತ್ತಲು ಏನಾದರೂ ತಪ್ಪುಗಳು ನಡೆದರೆ ಅದಕ್ಕೆಲ್ಲವೂ ನೀವೇ ಕಾರಣವೆಂದು ತೀರ್ಮಾನಕ್ಕೆ ಬರುತ್ತೀರಿ. ಆದರೆ ಇದೆಲ್ಲವೂ ನಿಮ್ಮಿಂದಾಗಿ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲ್ಲ. ಕೆಟ್ಟದು ಪ್ರತಿಯೊಬ್ಬರಿಗೂ ಸಂಭವಿಸಬಹುದು ಮತ್ತು ಇದರಿಂದ ನೀವು ಚೇತರಿಕೆ ಪಡೆಯಬಹುದು.

ಕನ್ಯಾ: ಆ.24-ಸೆ.23

ಕನ್ಯಾ: ಆ.24-ಸೆ.23

ನೀವು ನ್ಯಾಯಾಯೋಚಿವಲ್ಲದ ಗುಣಮಟ್ಟದವರು ಎಂದು ಯಾವಾಗಲೂ ಭಾವಿಸುವಿರಿ. ನೀವು ಮಾಡುತ್ತಿರುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ನೀವು ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತಿಲ್ಲವೆಂದು ನೀವು ಭಾವಿಸು ಕಾರಣದಿಂದಾಗಿ ಮಿತಿಯನ್ನು ದಾಟಿ ನೀವು ಪ್ರಯತ್ನಿಸುವಿರಿ. ಆದರೆ ನಿಮ್ಮ ಬಗ್ಗೆ ಇಷ್ಟು ಕಠೋರವಾಗುವುದನ್ನು ನಿಲ್ಲಿಸಬೇಕು. ನೀವು ತುಂಬಾ ಕಠಿಣವಾಗಿ ಕೆಲಸ ಮಾಡುತ್ತಿರುವಿರಿ ಎನ್ನುವುದ ತಿಳಿದು, ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ.

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ನಿಮ್ಮ ಪಯಣವನ್ನು ಯಾವಾಗಲೂ ಅಪರಿಚಿತರಿಗೆ ಹೋಲಿಕೆ ಮಾಡಿಕೊಳ್ಳುವಿರಿ. ನೀವು ಬೇರೆಯವರ ಯಶಸ್ಸಿನ ಬಗ್ಗೆ ಲೆಕ್ಕ ಹಾಕುತ್ತಾ ನೀವು ಅಷ್ಟು ವೇಗವಾಗಿ ಆ ಸಾಧನೆ ಮಾಡಲು ಸಾಧ್ಯವಾಗಲಿಲ್ಲ ಎಂದು ಯೋಚಿಸುವಿರಿ. ಪ್ರತಿಯೊಬ್ಬರಿಗೂ ಯಶಸ್ಸಿಗೆ ಬೇರೆ ಬೇರೆ ಮಾರ್ಗಗಳು ಇರುವುದು ಎಂದು ಎಲ್ಲರಿಗೂ ತಿಳಿದಿರುವುದು. ಆದರೆ ನೀವು ಹಿಂದೆ ಬಿದ್ದಿದ್ದೀರಿ ಎಂದು ಭಾವಿಸುವಿರಿ. ಬೇರೆಯವರ ಯಶಸ್ಸಿನ ಕಡೆ ನೋಡುವುದನ್ನು ಬಿಟ್ಟು, ನೀವು ಒಮ್ಮೆ ಕುಳಿತುಕೊಂಡು ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಿದ್ದೀರಿ ಎನ್ನುವುದನ್ನು ವಿಶ್ಲೇಷಣೆ ಮಾಡಿ.

ವೃಶ್ಚಿಕ: ಅ.24-ನ.22

ವೃಶ್ಚಿಕ: ಅ.24-ನ.22

ನೀವು ಎಲ್ಲವನ್ನು ಒಮ್ಮೆಲೇ ಮೈಮೇಲೆ ಎಳೆದುಕೊಳ್ಳುವ ಕಾರಣದಿಂದಾಗಿ ನೀವು ತುಂಬಾ ಬೇಸರಿಂದ ಇರುವಿರಿ. ನೀವು ಬಹುವಿಧದ ಕಾರ್ಯಗಳನ್ನು ಮಾಡುತ್ತಿರುವ ಕಾರಣದಿಂದ ವಿಶ್ರಾಂತಿ ಪಡೆಯಲು ನಿಮಗೆ ಸಮಯ ಸಿಗುವುದಿಲ್ಲ. ಇದನ್ನು ಹೊರತುಪಡಿಸಿ, ನೀವು ಒಂದೇ ಸಲ ಹಲವಾರು ವಿಷಯಗಳ ಬಗ್ಗೆ ಯೋಚನೆ ಮಾಡುವಿರಿ. ನಿಮಗೆ ಸಂತೋಷ ಬೇಕಿದ್ದರೆ ಆಗ ಒಂದು ಸಲ ಒಂದೇ ಕೆಲಸ ಮಾಡಲು ಪ್ರಯತ್ನಿಸಿ. ನಿಮ್ಮಲ್ಲಿ ಯಾವುದೇ ರೀತಿಯ ಸೂಪರ್ ಮ್ಯಾನ್ ಶಕ್ತಿ ಇಲ್ಲವೆಂದು ತಿಳಿಯಿರಿ. ನಿಮಗೆ ಇಷ್ಟದ ಮತ್ತು ಒಳ್ಳೆಯದೆನಿಸುವುದನ್ನು ಮೊದಲು ಆಯ್ಕೆ ಮಾಡಿಕೊಳ್ಳಿ.

ಧನು: ನ.23- ಡಿ.22

ಧನು: ನ.23- ಡಿ.22

ಜೀವನದಲ್ಲಿ ಏನು ಬೇಕು ಎನ್ನುವ ಬಗ್ಗೆ ನಿಮಗೆ ಸಂಪೂರ್ಣವಾಗಿ ಗೊಂದಲವಿದೆ. ಸಾವಿರಾರು ಪ್ರಶ್ನೆಗಳಿಗೆ ಉತ್ತರ ಸಿಗದೆ ಅದು ನಿಮ್ಮನ್ನು ಕಾಡುತ್ತಲಿದೆ. ನಿಮಗಾಗಿ ಏನೂ ಸಾಧನೆ ಮಾಡಿಲ್ಲವೆಂದು ಯೋಚಿಸುತ್ತಾ ಇರುವಿರಿ. ಆದರೆ ಇದು ಯೋಚನೆಗೆ ಕಾರಣವಲ್ಲ. ನೀವು ಇನ್ನು ಕೂಡ ಮುಂದೆ ಸಾಗಬಹುದು ಎಂದು ಅರ್ಥ ಮಾಡಿಕೊಳ್ಳಿ. ಮನಸ್ಸಿನಲ್ಲಿ ಯಾವುದೇ ರೀತಿಯ ಗುರಿಯಿಲ್ಲದೆ ಇದ್ದರೂ ನೀವು ಯಶಸ್ಸಿನೆಡೆಗೆ ಸಾಗಲು ಸಾಧ್ಯವಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

ಮಕರ: ಡಿ. 23- ಜ.20

ಮಕರ: ಡಿ. 23- ಜ.20

ನೀವು ಹೆಚ್ಚಿನ ಸಮಯದಲ್ಲಿ ತುಂಬಾ ಏಕಾಂಗಿಯಾಗಿರುವಂತೆ ಭಾವಿಸುವಿರಿ. ಹಿಂದೆ ನೀವು ಬೇರೆಯವರಿಂದ ರಕ್ಷಣೆ ಕೂಡ ಪಡೆದಿರಬಹುದು. ಆದರೆ ಏಕಾಂಗಿತನದಲ್ಲಿ ಇದು ನಡೆಯುತ್ತದೆ. ಆದರೆ ನಿಮಗೆ ಕೂಡ ಪ್ರತಿಯೊಬ್ಬರಂತೆ ಪ್ರೀತಿ ಬೇಕಾಗುವುದು. ಭೀತಿಯಿಂದ ನೀವು ತಪ್ಪಿಸಿಕೊಳ್ಳುವ ಬದಲು ಆ ಪರಿಸ್ಥಿತಿಯಲ್ಲಿ ನೀವು ಎದ್ದುನಿಲ್ಲಬೇಕು.

ಕುಂಭ: ಜ. 21-ಫೆ.18

ಕುಂಭ: ಜ. 21-ಫೆ.18

ನೀವು ಹೆಚ್ಚಾಗಿ ಸಾಮಾಜಿಕ ಗುಣಮಟ್ಟಕ್ಕೆ ಒತ್ತು ಕೊಡುವಿರಿ ಹಾಗೂ ಗಮನ ಹರಿಸುವಿರಿ. ಆದರೆ ಸಾಮಾಜಿಕವಾಗಿ ಲೌಕಿಕ ವಸ್ತುಗಳ ಅಗತ್ಯವಿಲ್ಲವೆಂದು ನೀವು ಅರ್ಥ ಮಾಡಿಕೊಳ್ಳಬೇಕು. ಇಂತಹ ವಿಷಯಗಳಿಂದ ನಿಮಗೆ ಸಂತೋಷ ಸಿಗುವುದಿಲ್ಲವೆಂದು ಅರ್ಥ ಮಾಡಿಕೊಳ್ಳಬೇಕು. ನಿಮ್ಮೊಳಗೆ ಆ ಸಂತೋಷವು ಅಡಗಿದೆ.

ಮೀನ: ಫೆ.19-ಮಾ. 20

ಮೀನ: ಫೆ.19-ಮಾ. 20

ಶಾಲಾ ದಿನಗಳಿಂದ ತುಂಬಾ ಜನ ಸ್ನೇಹಿತರನ್ನು ನೀವು ಕಳೆದುಕೊಂಡಿದ್ದೇನೆ ಎಂದು ಭಾವಿಸುವಿರಿ. ಆದರೆ ಸಮಯ ಕಳೆದಂತೆ ಸ್ನೇಹಿತರು ತುಂಬಾ ವ್ಯಸ್ತರಾಗುವರು ಮತ್ತು ಏಕಾಂಗಿತನ ಕಾಡುವುದು. ನಿಮಗೂ ಕೂಡ ಹಾಗೆ ಆಗಿದೆ. ಅವರಿಗೆ ನಿಮ್ಮ ಬಗ್ಗೆ ಕಾಳಜಿ ಇಲ್ಲವೆಂದಲ್ಲ, ಸಮಯದ ಕೊರತೆ ಹೀಗೆ ಮಾಡಿ. ಇದನ್ನು ನೀವು ಅರ್ಥ ಮಾಡಿಕೊಂಡು ಮುಂದೆ ಸಾಗಬೇಕಾಗಿದೆ.

English summary

Zodiac Signs Reveal The Reason Why You Are Unhappy

ಕೆಲವರನ್ನು ಯಾವಾಗ ನೋಡಿದರೂ ತುಂಬಾ ಬೇಸರದಿಂದ ಇರುವರು. ಆದರೆ ಇಂತಹ ವ್ಯಕ್ತಿಗಳು ಬೇಸರದಿಂದ ಇರಲು ಅವರ ರಾಶಿಚಕ್ರಗಳು ಕಾರಣವೆಂದು ಹೇಳಿದರೆ ಆಗ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗಬಹುದು. ಹೌದು, ರಾಶಿಚಕ್ರದಿಂದಾಗಿಯೇ ಕೆಲವರು ತುಂಬಾ ಬೇಸರದಿಂದ ಇರುವರು ಎಂದು ಜ್ಯೋತಿಷ್ಯವು ಹೇಳುವುದು.