For Quick Alerts
ALLOW NOTIFICATIONS  
For Daily Alerts

  ಏಪ್ರಿಲ್ 14: ಗುರುವಾರದ ದಿನ ಭವಿಷ್ಯ

  By Hemanth
  |

  ದೈನಂದಿನ ಜೀವನದಲ್ಲಿ ಕೆಲವೊಮ್ಮೆ ನಮಗೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ ಉಂಟಾಗುವುದು ಇದೆ. ಇಂತಹ ಸಮಯದಲ್ಲಿ ನಾವು ದೈನಂದಿನ ರಾಶಿಚಕ್ರದ ಸ್ಥಿತಿಗತಿ ತಿಳಿದುಕೊಂಡರೆ ನಮಗೆ ಬರುವಂತಹ ಸಮಸ್ಯೆಯನ್ನು ಸ್ವಲ್ಪ ಯೋಚಿಸಿ ನಿವಾರಿಸಬಹುದು. ಎಪ್ರಿಲ್ 14ರ ದಿನಭವಿಷ್ಯ ಹೇಗಿದೆ ಎಂದು ತಿಳಿಯಿರಿ...

  ಮೇಷ: ಮಾರ್ಚ್ 21-ಎಪ್ರಿಲ್ 20

  ಮೇಷ: ಮಾರ್ಚ್ 21-ಎಪ್ರಿಲ್ 20

  ವೈವಾಹಿಕ ಜೀವನದಲ್ಲಿ ನಿಮಗಿಂದು ತುಂಬಾ ಸಾಮಾನ್ಯ ದಿನವಾಗಿರುವುದು. ನೀವು ಯಾವುದೇ ಹಳೆಯ ವಿಷಯ ಕೆದಕಿಕೊಂಡು ಅಥವಾ ಕ್ಷುಲ್ಲಕ ಕಾರಣಕ್ಕಾಗಿ ಸಂಗಾತಿ ಜತೆಗೆ ಜಗಳ ಮಾಡಲು ಹೋಗಬೇಡಿ. ಇದರಿಂದ ದೊಡ್ಡ ಮಟ್ಟದ ವಾಗ್ವಾದ ಉಂಟಾಗಬಹುದು. ಪ್ರೀತಿಸುವವರಿಗೆ ಇದು ಒಳ್ಳೆಯ ದಿನ. ಯಾಕೆಂದೆ ನಿಮ್ಮ ಪ್ರಸ್ತಾವ ಸ್ವೀಕರಿಸುವರು. ಆದರೆ ಈ ಸಂಬಂಧಲ್ಲಿ ನೀವು ಮುಂದುವರಿಯಲು ಬಯಸುತ್ತೀರಾ ಎನ್ನುವುದನ್ನು ಮಾತ್ರ ಮೊದಲು ಯೋಚಿಸಿ. ವೃತ್ತಿಯಲ್ಲಿ ನಿಮಗಿಂದು ದೊಡ್ಡ ಮಟ್ಟಿನ ಯಶಸ್ಸು ಸಿಗಲಿದೆ ಹಾಗೂ ಸಂಪತ್ತು ಗಳಿಸಲು ಇದು ಸುವರ್ಣಾವಕಾಶ. ಇತರರ ಮೇಲೆ ನಿಮ್ಮ ಪ್ರಭಾವ ಹೆಚ್ಚಿಸಿಕೊಳ್ಳಿ.

  ವೃಷಭ: ಎಪ್ರಿಲ್ 21-ಮೇ 21

  ವೃಷಭ: ಎಪ್ರಿಲ್ 21-ಮೇ 21

  ಸಂಗಾತಿಯ ನಡವಳಿಕೆಯು ತುಂಬಾ ಕಿರಿಕಿರಿ ಹಾಗೂ ರಹಸ್ಯವಾಗಿದೆ ಎಂದು ನಿಮಗನಿಸುವುದು. ಯಾವುದೇ ರೀತಿಯ ವಾಗ್ವಾದ ಮಾಡುವ ಮೊದಲು ನಿಮ್ಮ ಸಂಗಾತಿ ಭಾವನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಮನೆಯಲ್ಲಿನ ವಾತಾವರಣವು ಶಾಂತವಾಗಿರುವುದು ಮತ್ತು ನಿಮ್ಮ ಮನಸ್ಸಿಗೆ ಶಾಂತಿ ನೀಡುವುದು. ಖರ್ಚಿನಲ್ಲಿ ಹೆಚ್ಚಳವಾಗಬಹುದು. ನಿಮ್ಮ ಹಳೆಯ ಸಂಪರ್ಕದಿಂದ ನಿಮಗಿಂದು ಲಾಭವಾಗಬಹುದು. ನಿಮ್ಮ ಕೋಪ ಹಾಗೂ ಅಚಲ ಸ್ವಭಾವವು ಸಹೋದ್ಯೋಗಿಗಳು, ಕುಟುಂಬ ಅಥವಾ ಸ್ನೇಹಿತರಿಗೆ ಹಿಡಿಸದು. ನಿಮ್ಮಲ್ಲಿ ಬದಲಾವಣೆ ಅತೀ ಅಗತ್ಯ. ಸಣ್ಣ ತಪ್ಪುಗಳು ಕೂಡ ದೊಡ್ಡ ಮಟ್ಟದ ಪರಿಣಾಮ ಬೀರುವ ಕಾರಣದಿಂದಾಗಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ.

  ಮಿಥುನ: ಮೇ 22-ಜೂನ್ 21

  ಮಿಥುನ: ಮೇ 22-ಜೂನ್ 21

  ಆರ್ಥಿಕವಾಗಿ ನಿಮಗಿಂದು ಒಳ್ಳೆಯ ದಿನ. ತಂದೆಯ ವ್ಯಾಪಾರದಲ್ಲಿ ಕೈಜೋಡಿಸಿದ್ದರೆ ಆಗ ನೀವು ಅವರ ನೆರವಿನಿಂದ ಹೆಚ್ಚಿನ ಲಾಭ ಪಡೆಯಲಿದ್ದೀರಿ. ವ್ಯಾಪಾರದಲ್ಲಿನ ವೃದ್ಧಿಯಿಂದಾಗಿ ಆರ್ಥಿಕ ಸ್ಥಿತಿಯು ಉತ್ತಮವಾಗುವುದು. ವೈವಾಹಿಕ ಜೀವನದಲ್ಲೂ ನಿಮ್ಮ ಪ್ರೀತಿಯು ಉತ್ತುಂಗದಲ್ಲಿರುವ ದಿನವಿದು. ನಿಮ್ಮ ಇಷ್ಟದ ಜಾಗಕ್ಕೆ ಸಂಗಾತಿ ಜತೆಗೆ ರೋಮ್ಯಾಂಟಿಕ್ ಡೇಟ್ ಗೆ ಹೋಗಬಹುದು. ನಿಮ್ಮ ಹಿರಿಯ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಆಗ ಅತ್ಯುತ್ತಮ ಫಲಿತಾಂಶ ಸಿಗುವುದು. ಕುಟುಂಬದಲ್ಲಿ ಒಬ್ಬರ ಆರೋಗ್ಯ ಕೆಡುವುದರಿಂದ ಚಿಂತೆ ಕಾಡುವುದು.

  ಕರ್ಕಾಟಕ: ಜೂನ್ 22- ಜುಲೈ 22

  ಕರ್ಕಾಟಕ: ಜೂನ್ 22- ಜುಲೈ 22

  ಕೌಟುಂಬಿಕ ಜೀವನದಲ್ಲಿ ನೀವು ಇಂದು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬ ಸದಸ್ಯರಿಗೆ ನಿಮ್ಮ ಬಗ್ಗೆ ಅಪರ್ಥ ಉಂಟಾಗಬಹುದು. ಪತ್ನಿಯ ಆರೋಗ್ಯ ಕೆಡುವುದರಿಂದ ನಿಮಗೆ ಸಮಸ್ಯೆಯಾಗಬಹುದು. ಇಂತಹ ಸಮಯದಲ್ಲಿ ನೀವು ವೈದ್ಯರನ್ನು ಭೇಟಿಯಾಗಿ. ನೀವು ಇಂದು ಒಬ್ಬ ಪ್ರಮುಖ ವ್ಯಕ್ತಿಯ ಭೇಟಿಯಾಗಲಿದ್ದೀರಿ. ಪ್ರೀತಿಯಲ್ಲಿ ಇರುವವರು ತಮ್ಮ ಪ್ರಸ್ತಾವ ಮುಂದಿಡಬೇಕಿದ್ದರೆ ಅವರಿಗೆ ಯಶಸ್ಸು ಸಿಗುವುದು. ಆಮದು-ರಫ್ತು, ಜಮೀನಿನ ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಲಾಭ ಬರುವುದು. ಸ್ನೇಹಿತರು ಅಥವಾ ಸೋದರರ ನೆರವಿನಿಂದ ನಿಮ್ಮ ಗುರಿ ಮುಟ್ಟಲಿದ್ದೀರಿ.

  ಸಿಂಹ: ಜುಲೈ 23- ಆ.23

  ಸಿಂಹ: ಜುಲೈ 23- ಆ.23

  ನೀವು ಅತ್ಯುತ್ಸಾಹ, ಚುರುಕುತನ ಮತ್ತು ಕುತೂಹಲಿಗರಾಗಿರುವಿರಿ. ಶಾಂತಿ ಹಾಗೂ ಸಂತೋಷವು ಕುಟುಂಬದಲ್ಲಿ ಕಂಡುಬರಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಸಿಗುವುದು. ಆರ್ಥಿಕವಾಗಿ ನಿಮಗಿಂದು ಒಳ್ಳೆಯ ದಿನ. ಅದಾಗ್ಯೂ, ಅತಿಯಾದ ಖರ್ಚಿನಿಂದ ನಿಮ್ಮ ಆಯವ್ಯಯದ ಸಮತೋಲನ ಕಳೆದುಕೊಳ್ಳುವುದು. ವೈವಾಹಿಕ ಜೀವನವು ಸುಗಮನವಾಗಿರುವುದು. ನಿಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಲು ಜೀವನಸಂಗಾತಿಯು ನಿಮಗೆ ನೆರವಾಗುವರು. ಅಪಘಾತ ಸಂಭವಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ನೀವು ವಾಹನವನ್ನು ತುಂಬಾ ಎಚ್ಚರಿಕೆಯಿಂದ ಚಲಾಯಿಸಿಕೊಂಡು ಹೋಗಿ.

  ಕನ್ಯಾ: ಆ.22- ಸೆ. 23

  ಕನ್ಯಾ: ಆ.22- ಸೆ. 23

  ಅಧಿಕ ರಕ್ತದೊತ್ತಡದಿಂದ ಬಳಲುತ್ತಾ ಇರುವವರು ತುಂಬಾ ಎಚ್ಚರಿಕೆ ವಹಿಸಬೇಕು. ಉದ್ಯೋಗದ ಸ್ಥಳದಲ್ಲಿ ನೀವು ಕೋಪದ ಮೇಲೆ ನಿಯಂತ್ರಣ ಹಾಕಿಕೊಳ್ಳಿ. ನಿಮ್ಮ ವೈವಾಹಿಕ ಜೀವನವು ಒಳ್ಳೆಯದಾಗಿರುವುದು. ಸಂಗಾತಿ ಕಡೆಗೆ ನೀವು ಇಂದು ಆಕರ್ಷಿತರಾಗಿರುವಿರಿ. ಆದಾಯದ ಮೂಲವು ತೆರೆದಿದ್ದು, ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಆರ್ಥಿಕ ದೃಷ್ಟಿಯಿಂದ ಕೈಗೊಂಡಿರುವ ಪ್ರಯಾಣವು ನಿಮಗೆ ಲಾಭ ತರುವುದು.

  ತುಲಾ: ಸೆ. 24-ಅ.23

  ತುಲಾ: ಸೆ. 24-ಅ.23

  ವ್ಯವಹಾರದಲ್ಲಿನ ಜತೆಗಾರಿಕೆಯಿಂದ ನಿಮಗೆ ಹೆಚ್ಚು ಲಾಭವಾಗಲಿದ್ದು, ನಿಮ್ಮ ಜತೆಗಾರನಿಗಿಂತ ನಿಮಗೆ ಲಾಭ ಅಧಿಕ. ಸರ್ಕಾರಿ ಉದ್ಯೋಗಿಗಳಿಗೆ ಇದು ತುಂಬಾ ಸಕಾರಾತ್ಮಕ ದಿನ. ವೈವಾಹಿಕ ಜೀವನವು ನೆನಪಿನಲ್ಲಿ ಉಳಿಯುವಂತದ್ದಾಗಿದೆ. ನಿಮ್ಮ ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲ ಹಾಗೂ ಪ್ರೀತಿ ಪಡೆಯುವಿರಿ. ಪಿತ್ರಾರ್ಜಿತ ಆಸ್ತಿಯಿಂದಾಗಿ ಕುಟುಂಬದಲ್ಲಿ ಕಲಹ ಬರಬಹುದು. ಇದರಿಂದ ನಿಮ್ಮ ಮನಸ್ಸಿನ ನೆಮ್ಮದಿ ಕೆಡಬಹುದು. ಮಾತನಾಡುವ ಶಬ್ದಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳಿ.

  ವೃಶ್ಚಿಕ: ಅ. 24- ನ. 22

  ವೃಶ್ಚಿಕ: ಅ. 24- ನ. 22

  ವೈವಾಹಿಕ ಜೀವನದಲ್ಲಿ ನಿಮಗಿಂದು ತುಂಬಾ ಶುಭದಿನ. ನಿಮ್ಮ ಜೀವನ ಸಂಗಾತಿಗೆ ತುಂಬಾ ಭಾವನಾತ್ಮಕವಾಗಿ ಹೊಂದಿಕೊಳ್ಳಲಿದ್ದೀರಿ. ಕೌಟುಂಬಿಕ ಸಹಕಾರವು ಹೆಚ್ಚಾಗಲಿದೆ. ಅದಾಗ್ಯೂ, ನೀವು ಆರ್ಥಿಕ ಪರಿಸ್ಥಿತಿ ಬಗ್ಗೆ ಗಮನಹರಿಸಬೇಕು. ಹೆಚ್ಚುತ್ತಿರುವ ಖರ್ಚು ನಿರ್ವಹಿಸಲು ನೀವು ಸಾಲ ಕೂಡ ಪಡೆಬಹುದು. ನಿಮಗೆ ತುಂಬಾ ಹತ್ತಿರದವರೆ ಮೋಸ ಮಾಡುವ ಕಾರಣದಿಂದ ಯಾರನ್ನೂ ಕಣ್ಣುಮುಚ್ಚಿ ನಂಬಲು ಹೋಗಬೇಡಿ. ಪ್ರಯಾಣಕ್ಕೆ ಇಂದು ಒಳ್ಳೆಯ ದಿನವಲ್ಲ.

  ಧನು: ನ.23-ಡಿ.22

  ಧನು: ನ.23-ಡಿ.22

  ಅತಿಯಾದ ಕೋಪ ಹಾಗು ಕಿರಿಕಿರಿಯು ನಿಮಗಿಂದ ಸಮಸ್ಯೆಯಾಗಲಿದೆ. ತುಂಬಾ ಶಾಂತರಾಗಿದ್ದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ನೀವು ಕೆಲಸವನ್ನು ಬದಿಗಿಟ್ಟು, ಸ್ವಲ್ಪ ಸಮಯ ವಿಶ್ರಾಂತಿ ಮಾಡುವುದು ಒಳ್ಳೆಯದು. ಆರ್ಥಿಕತೆ ದೃಷ್ಟಿಯಿಂದ ಇದು ನಿಮಗೆ ತುಂಬಾ ಮಿಶ್ರ ದಿನವಾಗಿರಲಿದೆ. ಸಂಗಾತಿ ಜತೆಗೆ ವಾಗ್ವಾದ ಮಾಡಬಹುದು. ನಿಮ್ಮ ಶಬ್ದಗಳ ಬಗ್ಗೆ ಎಚ್ಚರಿಕೆ ವಹಿಸಿ, ಇಲ್ಲವಾದಲ್ಲಿ ಸಂಗಾತಿಯ ಮನಸ್ಸಿಗೆ ತೀವ್ರ ನೋವಾಗಬಹುದು. ಕಾನೂನಿನ ವಿಚಾರಗಳು ನಿಮ್ಮ ಪರವಾಗಿರಲಿದೆ.

  ಮಕರ: ಡಿ. 23- ಜ. 20

  ಮಕರ: ಡಿ. 23- ಜ. 20

  ನೀವು ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಸಿಲುಕಿರುವ ಕಾರಣದಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಜತೆಗಾರರಿಂದ ನೀವು ಇಂದು ದೂರವಿರುವುದು ಉತ್ತಮ. ಯಾಕೆಂದರೆ ಅವರು ನಿಮಗೆ ಮೋಸ ಮಾಡುವ ಸಾಧ್ಯತೆ ಇರುವುದು. ವೈವಾಹಿಕ ಜೀವನವು ಉತ್ತಮವಾಗಿರುವುದ. ಭಾವನೆಗಳ ಮೇಲೆ ನಿಮಗೆ ನಿಯಂತ್ರಣ ನೀಡುವುದು ಮತ್ತು ಸಮಸ್ಯೆಗೆ ಒಳಗಾಗುವುದರಿಂದ ನಿಮ್ಮನ್ನು ತಡೆಯಲಿದೆ. ಹೊರಗಡೆ ಸುತ್ತಾಡಲು ಹೋಗಿ ನಿಮ್ಮ ಮನಸ್ಸನ್ನು ಉಲ್ಲಾಸಿಗೊಳಿಸುವುದು ಒಳ್ಳೆಯದು.

  ಕುಂಭ: ಜ.21- ಫೆ. 19

  ಕುಂಭ: ಜ.21- ಫೆ. 19

  ಮನಸ್ಸಿನಲ್ಲಿ ಯಾವತ್ತಿಗೂ ನಕಾರಾತ್ಮಕ ಆಲೋಚನೆಗಳನ್ನು ತರಬೇಡಿ. ಇದರಿಂದ ನಿಮಗೆ ಯಶಸ್ಸಿಗೆ ಭಂಗವಾಗುವುದು. ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ನೀವು ಯಶಸ್ಸು ಹಾಗೂ ನಿಮ್ಮ ಗುರಿ ಸಾಧಿಸಲಿದ್ದೀರಿ. ಆರ್ಥಿಕ ಸ್ಥಿತಿಗತಿ ಬಗ್ಗೆ ಗಮನವಿರಲಿ. ಹಠಾತ್ ಆಗಿ ಧನನಷ್ಟ ಮತ್ತು ಹಣದ ಹರಿವು ಕಡಿಮೆಯಾಗುವುದು ಸಮಸ್ಯೆಯಾದೀತು. ಕೌಟುಂಬಿಕ ಸಮಸ್ಯೆಗಳನ್ನು ನಿವಾರಣೆ ಮಾಡಲು ಇದು ತುಂಬಾ ಒಳ್ಳೆಯ ದಿನ. ಯಾಕೆಂದರೆ ನಿಮ್ಮ ಸಂಗಾತಿಯು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಳು. ಸಂಬಂಧಗಳಲ್ಲಿ ಬಿರುಕು ಬರದೆ ಇರಲು ನೀವು ವಿವಾದದಿಂದ ದೂರ ಉಳಿಯುವುದು ಒಳ್ಳೆಯದು.

  ಮೀನ: ಫೆ. 20-ಮಾ.20

  ಮೀನ: ಫೆ. 20-ಮಾ.20

  ಅತಿಯಾದ ಕೆಲಸ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ರಜೆ ತೆಗೆದುಕೊಳ್ಳುವುದು ಅಥವಾ ಕುಟುಂಬದೊಂದಿಗೆ ಹೊರಗಡೆ ಸುತ್ತಾಡಲು ಹೋದರೆ ನಿಮಗೆ ಲಾಭವಾಗುವುದು. ನಿಮ್ಮ ಸಂಗಾತಿಯು ಹಿಂದಿನ ಎಲ್ಲಾ ಕಲಹಗಳನ್ನು ಮರೆತು ನಿಮ್ಮ ಜತೆಗಿರಲು ಬರುವರು. ವ್ಯವಹಾರದಲ್ಲಿ ಇರುವವರಿಗೆ ಇದು ತುಂಬಾ ಲಾಭದಾಯಕ ದಿನ. ಹಠಾತ್ ಆಗಿ ಪ್ರಯಾಣ ಕೈಗೊಳ್ಳುವ ಕಾರಣದಿಂದ ನಿಮಗೆ ಗೊಂದಲ ಅಥವಾ ಒತ್ತಡ ಉಂಟಾಗಬಹುದು.

  ವೈವಾಹಿಕ ಜೀವನವು ತುಂಬಾ ಶಾಂತಿ ಹಾಗೂ ಪ್ರೀತಿಯಿಂದ ಕೂಡಿರಲಿದೆ. ಆಧ್ಯಾತ್ಮಿಕ ವಾಗಿ ನೀವು ಇಂದು ಧ್ಯಾನ ಮಾಡಿಕೊಂಡರೆ ಒಳ್ಳೆಯದು. ಇದು ದಿನದ ಜಂಜಾಟದಿಂದ ವಿರಾಮ ನೀಡುವುದು.

  English summary

  your-daily-horoscope-for-14-april-2018

  Check out your daily horoscope for 14 April 2018 and know what exactly the day holds for you!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more