For Quick Alerts
ALLOW NOTIFICATIONS  
For Daily Alerts

18-11-2018: ಭಾನುವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಭಾನುವಾರದ ದಿನದ ವಿಶೇಷವಾಗಿ ಕರೆಯುವ ಸೂರ್ಯ, ಆದಿತ್ಯ, ರವಿ,ದಿನಕರ, ದಿವಾಕರ, ದ್ಯುಮಣಿ, ಭಾಸ್ಕರ, ಅಹಸ್ಕರ, ವಿಭಾಕರ, ಅರ್ಕ , ಪ್ರಭಾಕರ ಮುಂತಾಗಿ ನೂರಾರು ಹೆಸರುಗಳಿಂದ ಕರೆಸಿಕೊಳ್ಳುವವ ಸೂರ್ಯ. ಸೌರಕೇಂದ್ರ ವ್ಯವಸ್ಥೆಯೇ ಸತ್ಯ ಎಂಬುದು ಸಾಬೀತಾದ ಮೇಲೆ ಸೂರ್ಯನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಜಗತ್ತಿನ ಪ್ರತಿ ಆಗುಹೋಗಿಗೂ ಪ್ರತ್ಯಕ್ಷ ಸಾಕ್ಷಿಯಾದವನು ಸೂರ್ಯ.

ಅಂಥ ಸೂರ್ಯನು ಅನೇಕ ಗ್ರಹಗಳಿಗೆ ಅಧಿಪತಿಯಾಗಿದ್ದಾನೆ. ಹಾಗೂ ಹನ್ನೆರೆಡು ರಾಶಿಗಳಿಗೂ ಕುತೂಹಲಕಾರಿ ಸಂಗತಿಗಳನ್ನು ನೀಡುತ್ತಾನೆ. ಇದರಿಂದ ಈ ದಿನ ರವಿವಾರದ ದಿನ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807.

ಮೇಷ

ಮೇಷ

ವರ್ಚಸ್ಸನ್ನು ವಿಸ್ತರಿಸಿಕೊಳ್ಳಲು ಅನುಕೂಲವಾಗುವ ಒಳ್ಳೆಯ ಅವಕಾಶಗಳು ನಿಮಗೆ ಹೇರಳವಾಗಿ ದೊರೆಯುವವು. ಬರುವ ಅವಕಾಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಿ ಒಳಿತಾಗುವುದು.

ಕಾರ್ಯಗಳು ಸುಗಮವಾಗಿ ನಡೆಯುವವು. ಸಂಗಾತಿಯ ಸಕಾಲಿಕ ಸಹಕಾರವು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುವುದು. ಬಂಧುಗಳು ನಿಮ್ಮಕುರಿತು ಪ್ರಶಂಸೆಯ ಮಾತುಗಳನ್ನು ಆಡುವರು.ಸಣ್ಣಪುಟ್ಟ ವಿಚಾರಗಳೇ ಬೃಹದಾಕಾರವಾಗಿ ಬೆಳೆದು ತಲೆನೋವು ಉಂಟು ಮಾಡುವವು. ಹಾಗಾಗಿ ಸಣ್ಣ ವಿಚಾರಗಳನ್ನು ಕೆದಕಿ ದೊಡ್ಡ ರಂಪಾಟ ಮಾಡಿಕೊಳ್ಳದೆ ಅದನ್ನು ಮೂಲದಲ್ಲಿಯೇ ಚಿವುಟಿ ಹಾಕಿ. ಇದರಿಂದ ಒಳಿತಾಗುವುದು.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಗುರುವಿನ ಒಲುಮೆ ಇರುವಾಗ ಯಾವ ಭಯವೂ ಇಲ್ಲ. ಧೈರ್ಯವಾಗಿ ಮುನ್ನುಗ್ಗಿ ಕಾರ್ಯ ಪ್ರವೃತ್ತರಾಗಿ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆ ಮೀರಿ ಆದಾಯ ಬರುವ ಸಾಧ್ಯತೆ ಇದೆ. ನೇರವಾಗಿ ಬರುವ ಅನಿಷ್ಟಗಳನ್ನು ಎದುರಿಸಬಹುದು. ಆದರೆ ಹಿಂದಿನಿಂದ ಬರುವುದನ್ನು ತಪ್ಪಿಸಿಕೊಳ್ಳಲಾರಿರಿ. ಆದಾಗ್ಯೂ ದೈವಬಲದಿಂದ ನಿಮಗೆ ಕಾಲಕಾಲಕ್ಕೆ ಉತ್ತಮ ಪರಿಹಾರ ಮಾರ್ಗಗಳು ಗೋಚರಿಸುವುದರಿಂದ ಅನುಕೂಲವಾಗುವುದು. ಬರುತ್ತಿರುವ ನಿರಂತರ ಆದಾಯಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಆದರೆ ಗುರು ಹಿರಿಯರ ಆಶೀರ್ವಾದದಿಂದ ನಿಮ್ಮ ಜೀವನದ ಮೇಲೆ ದುಷ್ಟ ಪ್ರಭಾವ ಬೀರುವುದಿಲ್ಲ.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ವಿಶೇಷವಾದ ಕಾರ್ಯ ರೂಪಿಸಿಕೊಳ್ಳಲು ಹಿರಿಯರಿಂದ ಬೆಂಬಲ ದೊರೆಯುವುದು. ದುಡಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಇಲ್ಲವೆ ಮುಂದಿನ ದಿನಗಳಲ್ಲಿ ಕಷ್ಟಪಡಬೇಕಾಗುವುದು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯ ಅರ್ಥ ನಿಮಗಿಂದು ಅರಿವಿಗೆ ಬರುವುದು. ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುತ್ತೇವೆಂದು ಹೇಳಿದ್ದ ಶ್ರೀಮಂತ ಸ್ನೇಹಿತ ನಿಮ್ಮಿಂದ ದೂರ ಸರಿಯುವನು. ಸದಾಕಾಲವೂ ಕಷ್ಟವೇ ಇರುವುದಿಲ್ಲ. ನಿಮ್ಮ ತಿಳಿವಳಿಕೆಗೆ ಮೀರಿದ ಉತ್ತಮ ಶಕ್ತಿಯೊಂದು ನಿಮ್ಮನ್ನು ಅನುಗ್ರಹಿಸಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಸಂತೋಷ ದೊರೆಯುವುದು.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಗೆಳೆಯರ ಜೊತೆಯಲ್ಲಿ ಕಷ್ಟ ಹಂಚಿಕೊಳ್ಳಿ. ಆದರೆ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಇರಲಿ. ನಿಮಗೆ ಪರೀಕ್ಷೆಯ ಕಾಲ. ಭಗವಂತನ ಅನುಗ್ರಹದಿಂದ ಎದುರಾಗುವ ಸಂಕಟದಿಂದ ಪಾರಾಗುವಿರಿ. ನಿಮ್ಮ ಕುಟುಂಬದವರ ಜತೆ ಸಂತೋಷದಿಂದ ಇರಲು ಕಾಲ ಸಹಕಾರಿಯಾಗಿದೆ. ನಿಮ್ಮ ಮನೋಕಾಮನೆಗಳು ಒಂದರ ನಂತರ ಮತ್ತೊಂದು ಪೂ0ರ್ಣವಾಗುವವು. ಈ ಬಗ್ಗೆ ಚಿಂತೆ ಬೇಡ. ಮನುಜ ಬಯಸುವುದು ಒಂದು ಆದರೆ ದೈವ ಬಗೆಯುವುದು ಮತ್ತೊಂದು ಎನ್ನುವಂತೆ ಎಲ್ಲವೂ ಸರಿ ಇದೆ ಎನ್ನುವಾಗಲೇ ದಿಢೀರನೆ ಸಂಕಟವೊಂದು ಎದುರಾಗುವುದು. ಧೈರ್ಯಗೆಡದಿರಿ.

ಅದೃಷ್ಟ ಸಂಖ್ಯೆ:4

ಸಿಂಹ

ಸಿಂಹ

ನಿಮ್ಮ ಮನಸ್ಸಿಗೆ ಆನಂದವಾದ ಸಂಗತಿ ದೊರೆಯುವುದು. ನಿಮ್ಮ ವ್ಯವಹಾರಗಳಿಗೆ ಬೆಂಬಲ ನೀಡುವ ಪಕ್ಕಾ ವ್ಯವಹಾರಸ್ಥರೇ ನಿಮಗೆ ದೊರೆಯುವರು. ಹಾಗಾಗಿ ಸ್ವಲ್ಪ ನೆಮ್ಮದಿಯ ವಾತಾವರಣ ಮೂಡುವುದು.

ನೆರೆಹೊರೆಯವರ ಪ್ರಶಂಸೆಗೆ ಪಾತ್ರರಾಗುವಿರಿ. ಜನಪ್ರಿಯತೆಯಿಂದ ಮನಸ್ಸು ಪ್ರಫುಲ್ಲವಾಗುವುದು. ಮಕ್ಕಳ ಮದುವೆ ವಿಚಾರದಲ್ಲಿ ಒಂದು ನಿರ್ಣಾಯಕ ಹಂತ ತಲುಪಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಆರ್ಥಿಕ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ದೀರ್ಘಕಾಲಿನ ಹಣ ಹೂಡಿಕೆಗೆ ಸಕಾಲವಲ್ಲ. ವಿದೇಶಿ ಬಂಡವಾಳ ತೊಡಗಿಸಿ ಮಾಡುವ ವಹಿವಾಟಿಗೆ ಅವಸರ ಬೇಡ.

ಅದೃಷ್ಟ ಸಂಖ್ಯೆ:5

ಕನ್ಯಾ

ಕನ್ಯಾ

ಹತ್ತಿರದವರಿಂದಲೇ ಮೋಸ ಹೋಗಿ ಮನಸ್ಸಿಗೆ ಆಘಾತವಾಗುವ ಸಂಭವವಿದೆ. ಈ ಬಗ್ಗೆ ಎಚ್ಚರದಿಂದ ಇರಿ. ಯಾರನ್ನೇ ಆಗಲಿ ದಿಢೀರನೇ ನಂಬದಿರಿ. ಗುರುವಿನ ಕೃಪೆಯಿಂದ ಹೆಚ್ಚಿನ ಹಾನಿ ಆಗುವುದಿಲ್ಲ. ವಂಶಪಾರಂಪರ‍್ಯದಿಂದ ಬಂದ ವೃತ್ತಿಯಲ್ಲಿ ಗೌರವ ಕೀರ್ತಿ ಪಡೆಯುವಿರಿ. ಸಾಮಾಜಿಕ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ. ಗುರುವಿನ ಸ್ತೋತ್ರ ಪಠಿಸಿ. ಗುರು ಹಿರಿಯರ ಅಶೀರ್ವಾದ ಪಡೆಯಿರಿ. ನಿಮ್ಮನ್ನು ಬೆಸ್ತು ಬೀಳಿಸುವ ಸಾಧ್ಯತೆಗಳು ಹೇರಳವಾಗಿವೆ. ಹಾಗಾಗಿ ಅನಗತ್ಯ ವಿಷಯಗಳ ಬಗ್ಗೆ ಹೆಚ್ಚು ಕುತೂಹಲ ಬೆಳಸಿಕೊಳ್ಳದಿರಿ. ದಿನನಿತ್ಯದ ಕಾಯಕದಲ್ಲಿ ತಲ್ಲೀನರಾದಲ್ಲಿ ಹೆಚ್ಚಿನ ತೊಂದರೆ ಇಲ್ಲ.

ಅದೃಷ್ಟ ಸಂಖ್ಯೆ:6

ತುಲಾ

ತುಲಾ

ಬಂಧುಗಳ ಜತೆ ಈ ಹಿಂದೆ ಮಾಡಿದ ಹಣಕಾಸಿನ ವ್ಯವಹಾರದಿಂದಾಗಿ ಮನಸ್ತಾಪ ಬರುವ ಸಾಧ್ಯತೆ ಇದೆ. ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಕುಳಿತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ಎಲ್ಲಾ ಕೆಲಸಗಳು ಕೊನೆಯ ಹಂತದವರೆಗೂ ಬಂದು ಕೊನೆ ಹಂತದಲ್ಲಿ ನಿರಾಶೆಯನ್ನುಂಟು ಮಾಡುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗತಿಗಳು ನಿಮ್ಮ ಪರವಾಗಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಜಾಣತನದಿಂದ ವರ್ತಿಸಿ, ಮೋಸ ಹೋಗುವ ಜನರು ಇರುವಾಗ ಮೋಸ ಮಾಡುವ ಜನರು ಬಹಳಷ್ಟು ಮಂದಿ ಇರುತ್ತಾರೆ. ಹಾಗಾಗಿ ನೇರಾನೇರ ವ್ಯವಹಾರದಲ್ಲಿ ಪಾಲ್ಗೊಳ್ಳಿ. ದಿಢೀರನೆ ಶ್ರೀಮಂತರಾಗಬೇಕೆಂಬ ಬಯಕೆಯಿಂದ ಅನ್ಯರ ಬಳಿ ಹಣ ಹೂಡದಿರಿ.

ಅದೃಷ್ಟ ಸಂಖ್ಯೆ:7

ವೃಶ್ಚಿಕ

ವೃಶ್ಚಿಕ

ಶಿಸ್ತುಳ್ಳ ಮನುಜಂಗೆ ಶಿವನೂ ತಲೆಬಾಗುತ್ತಾನೆ. ಅಂತೆಯೇ ಈಗಿನ ಗ್ರಹಗತಿಗಳು ನಿಮ್ಮ ಜೀವನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ. ಹಾಗಾಗಿ ನವಗ್ರಹಗಳಿಗೆ ಶರಣಾಗಿ ಕಾರ್ಯ ಪ್ರವೃತ್ತರಾಗಿ. ಯಾಕೋ ನಾನು ಬಯಸಿದ್ದು ಒಂದೂ ಆಗುತ್ತಿಲ್ಲ ಎನ್ನುವ ಭಾವ ಮನೆ ಮಾಡಿದಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಗುರುವು ತನ್ನ ಬೆಂಬಲ ಹಿಂಪಡೆದಿರುವುದರಿಂದ ಹೀಗಾಗುವುದು ಸಹಜ. ಶರಣಾಗತವತ್ಸಲ ಭಗವಂತನ ಮೊರೆಹೋಗಿ. ಸುತ್ತಿ ಬಳಸಿ ಹೋಗುವ ದಾರಿಯನ್ನು ಕೈಬಿಡಿ. ತಾಳ್ಮೆಯಿಂದ ಇದ್ದರೆ ನೇರ ದಾರಿ ಸಿಗಲಿದೆ. ಇದರಿಂದ ಮನಸ್ಸಿಗೂ ಮುದ ನೀಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಅದೃಷ್ಟ ಸಂಖ್ಯೆ:8

ಧನುಸ್ಸು

ಧನುಸ್ಸು

ಪದೇ ಪದೆ ಸೋಲುಗಳು ಎಂಬ ನಿರಾಶಾವಾದದಿಂದ ದಿನ ಆರಂಭಿಸದಿರಿ. ಎಲ್ಲದಕ್ಕೂ ಕಾಲನಾಮಕ ಪರಮಾತ್ಮ ಕಾರಣನಾದ್ದರಿಂದ ಆತನನ್ನು ಅನನ್ಯ ಭಕ್ತಿಯಿಂದ ಭಜಿಸಿ. ಒಳಿತಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಯಶಸ್ಸಿಗೆ ಅಡ್ಡಮಾರ್ಗ ಎಂಬುದಿಲ್ಲ. ನೇರವಾದ ಮಾರ್ಗದಿಂದ ಯಶಸ್ಸು ಹೊಂದುವಿರಿ. ಇದರಿಂದ ನಿಮ್ಮ ಪ್ರತಿಭೆಗೆ ಹೆಚ್ಚಿನ ಪ್ರಶಂಸೆಗಳು ಕೇಳಿ ಬರುವವು.

ನಿಷ್ಠುರವಾದಿ ಲೋಕಕ್ಕೆ ವಿರೋಧಿ ಎಂಬುದು ಜನಜನಿತವಾಗಿದೆ. ಹಾಗಾಗಿ ನೀವು ನಿಮ್ಮ ವಿಚಾರಗಳನ್ನು ಪರರ ಮುಂದೆ ಹೇಳುವಾಗ ಎರಡು ಬಾರಿ ಚಿಂತಿಸಿ ವಿಚಾರಗಳನ್ನು ಮಂಡಿಸಿ. ಇಲ್ಲದೆ ಇದ್ದಲ್ಲಿ ವೃಥಾ ಅಪವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ.

ಅದೃಷ್ಟ ಸಂಖ್ಯೆ:8

ಮಕರ

ಮಕರ

ಐಷಾರಾಮಿ ಜೀವನ ಸಾಗಿಸುವ ಕನಸಿರಲಿ. ಆದರೆ ಅದಕ್ಕೆ ಶ್ರಮದ ಬೆವರಿನ ಹನಿ ಹರಿಸಿದಾಗ ಮಾತ್ರ ಸುಖ ದೊರೆಯುವುದು. ಒಂದು ದೃಢ ನಿರ್ಧಾರದಿಂದ ಕಾರ್ಯ ಪ್ರವೃತ್ತರಾಗಿ. ಒಳಿತಾಗುವುದು. ನೀವು ಜೀವನದ ಮಧುರವಾದ ಕ್ಷ ಣಗಳನ್ನು ಕಾಣುವಿರಿ. ವೈಯಕ್ತಿಕ ಹಾಗೂ ಕೌಟುಂಬಿಕವಾಗಿ ಉನ್ನತ ಸ್ಥಾನಕ್ಕೆ ಏರಲು ನಿಮಗೆ ವಿಫುಲ ಅವಕಾಶಗಳು ದೊರೆಯುತ್ತವೆ. ತಾಯಿ ವರ್ಗದವರ ಆರೋಗ್ಯದ ಕಡೆ ಗಮನ ನೀಡಿ. ಹೊಸ ಉತ್ಸಾಹದೊಂದಿಗೆ ಕೆಲಸ ಆರಂಭ ಮಾಡುವಿರಿ. ಆದರೆ ಹಿಂದಿನ ಅನುಭವಗಳ ಸಾಧಕ ಬಾಧಕಗಳನ್ನು ಅರಿತು ಮುಂದುವರೆಯುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ.

ಅದೃಷ್ಟ ಸಂಖ್ಯೆ:2

ಕುಂಭ

ಕುಂಭ

ಸಾಫಲ್ಯತೆಗಳು ಒಂದೇ ಏಟಿಗೆ ಸಿಗಬೇಕೆಂಬ ನಿಮ್ಮ ಯೋಜನೆ ಸಾಧುವಾದರೂ ಅದಕ್ಕೆ ಪೂರಕವಾದ ಕ್ರಿಯಾಶೀಲತೆ ರೂಢಿಸಿಕೊಳ್ಳಿ. ಮಕ್ಕಳು ಮತ್ತು ಮಡದಿ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಕಷ್ಟದಲ್ಲಿರುವವರಿಗೆ ಪುಕ್ಕಟೆ ಸಲಹೆ ಕೊಡುವವರು ಅನೇಕ ಮಂದಿ. ಆದರೆ ನಿಮ್ಮ ಕಷ್ಟಕ್ಕೆ ಮರುಗಿ ಸಹಕಾರ ನೀಡುವ ಜನ ವಿರಳ. ಆದರೆ ದೈವದ ಅನುಗ್ರಹದಿಂದ ನಿಮಗೆ ಒಳಿತಾಗುವುದು. ಕಷ್ಟ ಬಂದಾಗ ವೆಂಕಟರಮಣನನ್ನು ಧ್ಯಾನಿಸುವುದು ಸಹಜ. ಅಂತೆಯೆ ಭಗವಂತನು ಸಹ ತನ್ನ ಭಕ್ತರನ್ನು ಕೈಬಿಡುವುದಿಲ್ಲ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ವಿಷ್ಣು ಮಂದಿರಕ್ಕೆ ತುಳಸಿ ಮಾಲೆ ಅರ್ಪಿಸಿ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಹೋರಾಟದಲ್ಲಿ ಗುರುತಿಸಿಕೊಳ್ಳುವ ಜವಾಬ್ದಾರಿ ಬರಬಹುದು. ಸಾಧಕ ಬಾಧಕಗಳನ್ನು ಚಿಂತಿಸಿ ಜವಾಬ್ದಾರಿಯನ್ನು ವಹಿಸಿಕೊಳ್ಳಿ ಮತ್ತು ವಹಿಸಿಕೊಂಡ ಕೆಲಸದಲ್ಲಿ ಯಶಸ್ಸು ಹೊಂದುವಿರಿ. ಅತಿಥಿಗಳ ಆದರಾತಿಥ್ಯದಲ್ಲಿ ದಿನದ ಬಹುಪಾಲು ಕಳೆಯುವ ಸಾಧ್ಯತೆಗಳು ಇರುತ್ತದೆ. ಅದರ ಸಂಗಡ ನಿಮ್ಮ ವೈಯಕ್ತಿಕ ಆಗುಹೋಗುಗಳ ಕಡೆಯೂ ಲಕ್ಷ ್ಯ ಕೊಡುವುದು ಒಳ್ಳೆಯದು. ಖರ್ಚು ಹೆಚ್ಚಾಗುವ ಸಂಭವವಿದೆ.

ಹೊಸ ಹೊಸ ಸಾಹಸಗಳಿಗೆ ಕೈಹಾಕುವುದರಿಂದ ಅದರಲ್ಲಿ ಯಶಸ್ಸನ್ನು ಕಾಣುವಿರಿ. ಬಂಧು ಬಾಂಧವರು ನಿಮ್ಮ ಸಹಕಾರಕ್ಕೆ ನಿಲ್ಲುವರು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಒಳಿತಾಗುವುದು.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-18-November-2018

Know what astrology and the planets have in store for you today. Choose your zodiac sign and read the details...
Story first published: Sunday, November 18, 2018, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more