For Quick Alerts
ALLOW NOTIFICATIONS  
For Daily Alerts

  ಮುಂಬರಲಿರುವ ತಿಂಗಳಿನಲ್ಲಿ ಯಾವ್ಯಾವ ರಾಶಿಯವರಿಗೆ ಕಷ್ಟ ಬರಲಿದೆ ನೋಡಿ...

  By Deepu
  |

  2018ನೇ ವರ್ಷದಲ್ಲಿ ನೀವು ತುಂಬಾ ನಕಾರಾತ್ಮಕವಾಗಿ ಯೋಚನೆ ಮಾಡಿಕೊಂಡು ಸಮಸ್ಯೆಗೆ ಸಿಲುಕಿರಬಹುದು. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನಿಮಗೆ ಗೋಚರಕ್ಕೆ ಬರದೇ ಇರುಂತಹ ಕಾರಣವೆಂದರೆ ಅದು ರಾಶಿಚಕ್ರಗಳು. ಹೌದು, ರಾಶಿಚಕ್ರಗಳಿಗೆ ಅನುಗುಣವಾಗಿ ಈ ವರ್ಷದಲ್ಲಿ ಕೆಲವು ತಿಂಗಳುಗಳು ಕೆಲವುರಾಶಿಯವರಿಗೆ ತುಂಬಾ ಕೆಟ್ಟದನ್ನು ಉಂಟು ಮಾಡಲಿದೆ. ಈ ತಿಂಗಳಲ್ಲಿ ಅವರ ಪರವಾಗಿ ಯಾವುದೇ ಕೆಲಸವು ಆಗುವುದಿಲ್ಲ.

  ಪ್ರತೀ ರಾಶಿಯವರ ಕೆಟ್ಟ ಸಮಯ ಮತ್ತು ಕೆಟ್ಟ ತಿಂಗಳುಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ. ಇಂತಹ ಪರಿಸ್ಥಿತಿ ತಡೆಯಲು ಕೆಲವರು ತುಂಬಾ ಪ್ರಯತ್ನ ಮಾಡಬಹುದು. ಆದರೆ ಅದರೊಳಗಿಂದ ಹೊರಬರುವುದು ಅವರಿಗೆ ಸಾಧ್ಯವಾಗದು. ಪ್ರತೀ ರಾಶಿಚಕ್ರದವರಿಗೆ ತುಂಬಾ ಕೆಟ್ಟದಾಗಿರುವಂತಹ ತಿಂಗಳುಗಳ ಬಗ್ಗೆ ತಿಳಿಯಿರಿ....

  ಮೇಷ: ಮಾ.21-ಎಪ್ರಿಲ್19(ಜೂನ್)

  ಮೇಷ: ಮಾ.21-ಎಪ್ರಿಲ್19(ಜೂನ್)

  ಈ ರಾಶಿಯವರಿಗೆ ಜೂನ್ ತಿಂಗಳು ತುಂಬಾ ಕಠಿಣವಾಗಿರಲಿದೆ. ಯಾಕೆಂದರೆ ಇವರ 6ನೇ ಮನೆಯಾದ ಆರೋಗ್ಯ ಮತ್ತು ದೈನಂದಿನ ಖರ್ಚುಗಳು ಹೆಚ್ಚಾಗಲಿದೆ. ಇವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಮತ್ತು ಬೇಕಾದಷ್ಟು ವಿಶ್ರಾಂತಿ ಪಡೆಯಬೇಕಾಗಿದೆ. ಇವರು ಪ್ರತಿಯೊಂದನ್ನು ಮಾಡಲು ಬಯಸುವ ಕಾರಣದಿಂದಾಗಿ ಮಂದಗತಿಯಲ್ಲಿ ಸಾಗಲು ದ್ವೇಷಿಸುವರು. ಇವರಿಗೆ ನೆರವಾಗಲು ಧ್ಯಾನದ ಅಗತ್ಯವಿದೆ.

  ವೃಷಭ: ಎ.20-ಮೇ 20(ಸಪ್ಟೆಂಬರ್)

  ವೃಷಭ: ಎ.20-ಮೇ 20(ಸಪ್ಟೆಂಬರ್)

  ಈ ರಾಶಿಯವರ ಜನ್ಮಕುಂಡಲಿ ಮೇಲೆ ಯುರೇನಸ್ ಪ್ರಭಾವ ಬೀರುವ ಕಾರಣದಿಂದಾಗಿ ಸಪ್ಟೆಂಬರ್ ತಿಂಗಳು ಇವರಿಗೆ ತುಂಬಾ ಕಠಿಣವಾಗಿರಲಿದೆ. ಇವರು ತುಂಬಾ ತಾಳ್ಮೆಯಿಂದ ಇರಬೇಕು.

  ಮಿಥುನ: ಮೇ 21-ಜೂನ್ 20 (ಆಗಸ್ಟ್)

  ಮಿಥುನ: ಮೇ 21-ಜೂನ್ 20 (ಆಗಸ್ಟ್)

  ಈ ರಾಶಿಯವರ ಏಳನೇ ಮನೆಯಾಗಿರುವಂತಹ ಪ್ರೀತಿ ಮತ್ತು ಸಂಬಂಧವು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿರುವ ಕಾರಣದಿಂದ ಅಗಸ್ಟ್ ತಿಂಗಳು ಕಠಿಣವಾಘಿರುವುದು. ಒಂದು ಕಾಲಕ್ಕೆ ಇವರಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ಆದರೆ ತಿಂಗಳ ಅಂತ್ಯಕ್ಕೆ ಇದು ಸರಿಯಾಗುವುದು. ಇನ್ನು ಶನಿಗ್ರಹವು ಮಕರ ರಾಶಿಗೆ ಸ್ಥಳಾಂತರಿಸುವ ಕಾರಣದಿಂದ ಈ ವರ್ಷವು ನಿಮಗೆ ಕಠಿಣವಾದ ವರ್ಷ ಆಗುವುದು. ನಿಮ್ಮ ಎಂಟನೇ ಮನೆಯ ಹಣ, ಸಂಭೋಗ, ಸಾವು, ಸಾಲಗಳು ಮತ್ತು ಅನ್ಯೋನ್ಯತೆಗೆ ಸಂಬಂಧಿಸಿದಂತೆ ನೋವು ಅಥವಾ ಬೇಸರವನ್ನು ಅನುಭವಿಸಬೇಕಾಗುವುದು. ಜನರಿಂದ ಹೇಗೆ ದೂರವಾಗುತ್ತೀರಿ ಅಥವಾ ಮಂದಿಯೊಂದಿಗೆ ಹೇಗೆ ಬೆರೆಯಬೇಕು ಎನ್ನುವುದರ ಬಗ್ಗೆ ನೀವೇ ತಿಳಿದುಕೊಳ್ಳುವಿರಿ. ಎಂಟನೆಯ ಮನೆ ವಿಷಯಗಳು ವಿನೋದವನ್ನು ನೀಡುವುದಿಲ್ಲ. ಬದಲಿಗೆ ಆಳವಾದ ಭೀತಿ ಮತ್ತು ನೋವನ್ನು ನೀಡುತ್ತದೆ.

  ಕರ್ಕಾಟಕ: ಜೂನ್ 21-ಜುಲೈ 22(ಮಾರ್ಚ್)

  ಕರ್ಕಾಟಕ: ಜೂನ್ 21-ಜುಲೈ 22(ಮಾರ್ಚ್)

  ಮಾರ್ಚ್ ತಿಂಗಳು ಇವರಿಗೆ ತುಂಬಾ ಕಠಿಣವಾಗಿರುವುದು. ಯಾಕೆಂದರೆ ಇವರು ಸಂವಹನ ಕೌಶಲ್ಯದ ಅಪಾಯ ಎದುರಿಸಲು ಬಯಸುವುದಿಲ್ಲ. ಇವರು ತುಂಬಾ ನಿಧಾನವಾಗಿರಬೇಕು ಮತ್ತು ಈ ಸಮಯದಲ್ಲಿ ಏನು ಮಾತನಾಡುತ್ತಾರೆಂದು ಗಮನಹರಿಸಬೇಕು. ಇಲ್ಲಿ ತಪ್ಪುತಿಳುವಳಿಕೆಯನ್ನು ಸರಿಪಡಿಸಲು ಆಗಲ್ಲ. ಇನ್ನು ಶನಿಯು ಈ ವರ್ಷ ನಿಮ್ಮ 7ನೇ ಮನೆಯಲ್ಲಿ ಸಂಚರಿಸುತ್ತಾನೆ. ಈ ಪರಿಣಾಮದಿಂದ ನೀವು ಎಷ್ಟು ಬದ್ಧತೆಯನ್ನು ಪಡೆದುಕೊಳ್ಳುವಿರಿ ಎನ್ನುವ ಪರೀಕ್ಷೆಗೆ ಒಳಗಾಗುತ್ತೀರಿ. ನಿಮ್ಮ ಸ್ವಂತ ಯೋಗಕ್ಷೇಮಕ್ಕೆ ಇತರರ ಮೇಲೆ ಅವಲಂಭಿತರಾಗುವ ಸಾಧ್ಯತೆಗಳಿವೆ. ಆದಷ್ಟು ನಿಮ್ಮ ವಿವೇಕಯುತವಾದ ವರ್ತನೆಯನ್ನು ತೋರುವುದು ಸೂಕ್ತ. ಕೆಲವು ಕೆಟ್ಟ ಆಲೋಚನೆಗಳು ನಿಮ್ಮ ದಾರಿಯನ್ನು ತಪ್ಪಿಸಬಹುದು. ಅದರ ಬಗ್ಗೆ ನೀವು ಸೂಕ್ತರೀತಿಯಲ್ಲಿ ತಿಳಿದುಕೊಳ್ಳಬೇಕು. ಬೇರೆಯವರು ಎಷ್ಟೇ ನೋವಿನಲ್ಲಿದ್ದರೂ ನೀವು ಎಲ್ಲರೂ ಒಮ್ಮೆ ನೋವಿನ ಭಾವನೆಗೆ ಒಳಗಾಗುತ್ತಾರೆ ಎನ್ನುವ ಭಾವನೆಯನ್ನು ತಳೆದಿರುತ್ತೀರಿ. ಬೇರೆಯವರು ಹೇಗಿದ್ದಾರೆ ಎನ್ನುವುದರ ಬಗ್ಗೆ ನೀವು ಚಿಂತಿಸದಿರಿ. ನಿಮ್ಮಿಂದ ಬೇರೆಯವರಿಗೆ ಎಷ್ಟು ಸಗಹಾಯವಾಗುವುದು? ನಿಮ್ಮ ಸ್ಥಿತಿಯೇನು? ನಿಮ್ಮ ಪರಿಸ್ಥಿತಿಗೆ ನೀವು ಹೇಗಿರಬೇಕು ಎನ್ನುವುದನ್ನು ಮೊದಲು ಅರಿತಿರಬೇಕು. ನೀವು ನಿಮ್ಮನ್ನು ಪ್ರೀತಿಸುವುದು ಹಾಗೂ ಇತರರೊಂದಿಗೆ ಬೆರೆಯುವ ಗುಣವನ್ನು ಕಲಿಯಬೇಕಿದೆ. ಆಗಲೇ ನಿಮ್ಮ ದುಃಖ ಸ್ವಲ್ಪ ಹಗುರವಾಗಲು ಸಾಧ್ಯ.

  ಸಿಂಹ: ಜುಲೈ 23- ಆ.23(ಮಾರ್ಚ್)

  ಸಿಂಹ: ಜುಲೈ 23- ಆ.23(ಮಾರ್ಚ್)

  ಆಗಸ್ಟ್ ಈ ರಾಶಿಯವರು ಜನ್ಮದ ತಿಂಗಳಾದರೂ ಸಹಿತ ಇದು ಬುಧನ ವಿರುದ್ಧಗತಿಯ ಸಮಯವಾಗಿದೆ. ಹುಟ್ಟುಹಬ್ಬದ ಯೋಜನೆ ಮಾಡುವ ವೇಳೆ ಇವರು ಇದನ್ನು ಬುಧನ ವಿರುದ್ಧಗತಿಯ ಮೊದಲು ಅಥವಾ ಬಳಿಕ ಮಾಡುವುದು ಒಳಿತು. ಇದರಿಂದ ಪ್ರೀತಿ ಪಾತ್ರರೊಂದಿಗಿನ ಮನಸ್ತಾಪ ತಪ್ಪುವುದು.

  ಕನ್ಯಾ: ಆ.24-ಸೆ.23(ಡಿಸೆಂಬರ್)

  ಕನ್ಯಾ: ಆ.24-ಸೆ.23(ಡಿಸೆಂಬರ್)

  ಡಿಸೆಂಬರ್ ತಿಂಗಳು ಈ ರಾಶಿಯವರಿಗೆ ತುಂಬಾ ಕಠಿಣವಾಗಿರುವುದು. ಇವರ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಭಿನ್ನಾಭಿಪ್ರಾಯವು ಮೂಡಿಬರಬಹುದು. ಯಾಕೆಂದರೆ ಇವರ 8ನೇ ಮನೆಯು ತುಂಬಾ ಸವಾಲಿನದ್ದಾಗಿರುವುದು. ಇವರು ಸ್ವಲ್ಪ ಆರಾಮ ಮಾಡಿ ತಮ್ಮ ಜೀವನ ಮತ್ತು ಯೋಜನೆಗಳನ್ನು ಸರಳವಾಗಿಡಬೇಕು.

  ತುಲಾ: ಸೆ.24-ಅ.23(ಜನವರಿ)

  ತುಲಾ: ಸೆ.24-ಅ.23(ಜನವರಿ)

  ಈ ರಾಶಿಯವರಿಗೆ ಜನವರಿ ತುಂಬಾ ಸವಾಲಿನದ್ದಾಗಿರುತ್ತದೆ. ಇವರಿಗೆ ಆತಂಕ, ಭೀತಿ, ಒತ್ತಡ ಮತ್ತು ಅತಿಯಾಗಿ ಕೆಲಸ ಮಾಡುವುದರಿಂದ ನಿದ್ರಾಹೀನತೆ ಕಾಡಬಹುದು. ಇವರ ಆರೋಗ್ಯ ಕೆಡಬಹುದು. ಇದರಿಂದಾಗಿ ಇವರು ವೈದ್ಯರನ್ನು ಭೇಟಿಯಾಗಬೇಕಾಗಬಹುದು.

  ವೃಶ್ಚಿಕ: ಅ.24-ನ.22(ಎಪ್ರಿಲ್)

  ವೃಶ್ಚಿಕ: ಅ.24-ನ.22(ಎಪ್ರಿಲ್)

  ಇವರು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿ ಸೂಕ್ಷ್ಮರಾಗಿರುವ ಕಾರಣದಿಂದಾಗಿ ಇವರಿಗೆ ಎಪ್ರಿಲ್ ತಿಂಗಳು ತುಮಬಾ ಕಠಿಣವಾಗಿರುವುದು. ಮಾರ್ಚ್ ನಲ್ಲಿ ವಿರುದ್ಧಗತಿಯ ಸಮಯವಾಗಿರುವ ಕಾರಣದಿಂದಾಗಿ ಅವರು ತಮ್ಮ ಹಿಂದಿನ ಸಂಬಂಧವನ್ನು ಎದುರಿಸಿರಬಹುದು. ಇದರಿಂದ ಅವರಿಗೆ ಎಪ್ರಿಲ್ ತುಂಬಾ ಕಠಿಣ.

   ಧನು: ನ.23-ಡಿ.22(ನವಂಬರ್)

  ಧನು: ನ.23-ಡಿ.22(ನವಂಬರ್)

  ಇವರಿಗೆ ನವಂಬರ್ ತಿಂಗಳು ತಪ್ಪುಗಳನ್ನು ತಿದ್ದಿಕೊಳ್ಳುವಂತಹ ಸಮಯವಾಗಿದೆ. ತಮ್ಮ ಹಿಂದಿನ ತಪ್ಪುಗಳಿಂದಾಗಿ ಎಷ್ಟು ಜವಾಬ್ದಾರಿ ಸ್ವೀಕರಿಸುತ್ತಾರೋ ಅದರಿಂದ ಅವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗುವುದು. ಈ ಸಮಯವು ಅವರಿಗೆ ತುಂಬಾ ಕಠಿಣವಾಗಿರುವುದು. ಈ ರಾಶಿಯವರು ಸಾಮಾನ್ಯವಾಗಿ ಅದೃಷ್ಟವನ್ನು ಹೊಂದಿರುತ್ತಾರೆ. ಇವರು ಗುರುವಿನ ಆಳ್ವಿಕೆಯಲ್ಲಿರುವುದರಿಂದ ಉತ್ತಮ ಫಲಗಳನ್ನು ಅನುಭವಿಸುತ್ತೀರಿ. ಈ ವರ್ಷ ಶನಿಯು ಮಕರ ರಾಶಿಯಲ್ಲಿ ಸಂಚಾರ ಬೆಳೆಸಿರುವುದರಿಂದ ನಿಮ್ಮ ಮೇಲೆ ಕೆಲವು ಕಷ್ಟದ ಪರಿಣಾಮ ಬೀರುವ ಸಾಧ್ಯತೆಗಳಿವೆ. ನೀವು ಇತರರನ್ನು ದ್ವೇಷಿಸುವ ಗೋಜಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಬಹುದು. ಆದರೆ ಅದನ್ನು ತಡೆದು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಯಬೇಕು. ನೀವು ಸಂಪಾದಿಸಿದ ಹಣವನ್ನು ಹೇಗೆ ಕಾಪಾಡಿಕೊಳ್ಳಬೇಕು? ಹೇಗೆ ವ್ಯಯಿಸಬೇಕು ಎನ್ನುವುದರ ಮೇಲೆ ನಿಮ್ಮ ಹಿಡಿತ ಇರಬೇಕಾಗುವುದು. ಇಲ್ಲವಾದರೆ ಪರಿಸ್ಥಿತಿ ಚಿಂತನೆಗೆ ಒಳಗಾಗಿಸುತ್ತದೆ. ಈ ವರ್ಷ ನಿಮಗೆ ಗೆಲವು ನಿಧಾನಗತಿಯಲ್ಲಿ ದೊರೆಯುವುದು. ಹಾಗಾಗಿ ಆದಷ್ಟು ತಾಳ್ಮೆ ಮತ್ತು ಎಚ್ಚರಿಕೆಯಿಂದ ವ್ಯವಹರಿಸಬೇಕು. 2018ರಲ್ಲಿ ಬರುವ ಸಮಸ್ಯೆಗಳನ್ನು ನಿಭಾಯಿಸುವುದರ ಮೂಲಕ ನಿಮ್ಮ ಜೀವನದಲ್ಲಿ ಯಾವುದು ಮುಖ್ಯ ಎನ್ನುವುದನ್ನು ನೀವು ಅರಿತುಕೊಳ್ಳುವಿರಿ.

  ಮಕರ: ಡಿ.23-ಜ.20(ಎಪ್ರಿಲ್)

  ಮಕರ: ಡಿ.23-ಜ.20(ಎಪ್ರಿಲ್)

  ಎಪ್ರಿಲ್ ತಿಂಗಳು ಬುಧನ ವಿರುದ್ಧಗತಿಯ ಸಮಯವಾಗಿದೆ. ಇದರಿಂದ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು. ಇದರ ಬಗ್ಗೆ ಎಚ್ಚರಿಕೆಯಿಂದ ಇರುವುದ ಅಗತ್ಯ. ಇವರು ಹೆಚ್ಚಿನ ಶ್ರಮ ವಹಿಸಿದಷ್ಟು ವಿರುದ್ಧಗತಿಯ ಪರಿಣಾಮ ಕಡಿಮೆಯಾಗುವುದು.

  ಕುಂಭ: ಜ.21-ಫೆ.18(ಜುಲೈ)

  ಕುಂಭ: ಜ.21-ಫೆ.18(ಜುಲೈ)

  ಜುಲೈ ತಿಂಗಳಲ್ಲಿ ಈ ರಾಶಿಯವರ ಆರೋಗ್ಯ ಮತ್ತು ಪ್ರೀತಿಯ ಜೀವನವು ಪರೀಕ್ಷೆಗೊಡ್ಡಲ್ಪಡುವುದು. ಈ ರಾಶಿಯವರಿಗೆ ವರ್ಷದ ಹೆಚ್ಚಿನ ತಿಂಗಳುಗಳು ತುಂಬಾ ಒಳ್ಳೆಯದಾಗಿರುವುದು. ಆದರೆ ಈ ತಿಂಗಳಲ್ಲಿ ಅವರು ಮೂಳೆಗುಂಪಾದಂತೆ ಆಗುವರು. ಇವರು ತಮ್ಮ ಜೀವನದ ಕೆಲವು ವಿಭಾಗಗಳ ಕಡೆ ಗಮನಹರಿಸಬೇಕಾಗಿದೆ.

  ಮೀನ: ಫೆ.19-ಮಾ.20 (ಮೇ)

  ಮೀನ: ಫೆ.19-ಮಾ.20 (ಮೇ)

  ಈ ರಾಶಿ ಚಕ್ರದ ಮೇಲೆ ಮೇ ತಿಂಗಳಲ್ಲಿ ಗುರುವಿನ ಪ್ರಭಾವವಿರುವುದು. ಇದರಿಂದಾಗಿ ಇವರು ಅತಿಯಾದ ವ್ಯಾಮೋಹಕ್ಕೆ ಒಳಗಾಗುವರು. ಇವರು ಸ್ವಲ್ಪ ಸಮಯ ಇದನ್ನು ಮೀರಿ ನಿಲ್ಲಬೇಕು ಮತ್ತು ತಮ್ಮ ತಾಳ್ಮೆ ಕಳೆದುಕೊಳ್ಳಬಾರದು. ಇದರಿಂದಾಗಿ ಪರಿಸ್ಥಿತಿಯು ಕೈಮೀರಿ ಹೋಗಬಹುದು.

  English summary

  Worst Month Of 2018 According To Your Zodiac Sign

  This article is all about helping you to avoid falling into the pit of negative thinking during the tough times of 2018. This year, each zodiac sign will face the worst time as nothing would seem to work in their favour. Find out about the worst phase of each zodiac sign and be prepared to know about the worst month for each of the signs. Sometimes, no matter how hard individuals try to avoid unwanted situations, they would find trouble haunting them during the bad phases. Continue reading to know more about the worst months that each zodiac sign would face.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more