For Quick Alerts
ALLOW NOTIFICATIONS  
For Daily Alerts

ಜೂನ್ 4 ರಿಂದ 10ರ ನಡುವಿನ ವಾರ ಭವಿಷ್ಯ

By Deepu
|

ಮುಂದಿನ ವಾರ ಏನು ಮಾಡಬೇಕು? ಎನ್ನುವುದನ್ನು ಮೊದಲೇ ನಾವು ಯೋಜಿಸಿಕೊಳ್ಳುತ್ತೇವೆ. ನಮ್ಮ ಯೋಜನೆಯಂತೆಯೇ ಕೆಲಸ ಕಾರ್ಯಗಳು ನೆರವೇರಿದರೆ ಅದು ನಮ್ಮ ಅದೃಷ್ಟ ಎನಿಸಿಕೊಳ್ಳುವುದು. ಹಾಗೆಯೇ ನಾವು ಅಂದುಕೊಂಡಿದ್ದು ನೆರವೇರದೆ ಇದ್ದಾಗ ಅದು ನಮ್ಮ ದುರ್ದೈವ ಎನಿಸಿಕೊಳ್ಳುವುದು. ಸಮಯ ಎನ್ನುವುದು ಮನುಷ್ಯನಿಗೆ ಜೀವನದ ಅರ್ಥ ಮತ್ತು ಪಾಠವನ್ನು ಕಲಿಸಿಕೊಡುತ್ತದೆ. ಹಾಗಾಗಿ ವ್ಯಕ್ತಿ ಯಾರಿಗೂ ಹೆದರದಿದ್ದರೆ ಸಮಯ ಎನ್ನುವುದಕ್ಕಾದರೂ ಹೆದರಲೇ ಬೇಕು.

ಹೌದು, ಜೀವನದ ಪ್ರತಿ ಹಂತದಲ್ಲೂ ಪಾಠವನ್ನು ಹೇಳಿಕೊಡುವುದು ಸಮಯ. ಈ ಸಮಯವೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ನಿಮಗೆ ನಿಮ್ಮ ವಾರ ಭವಿಷ್ಯವನ್ನು ತಿಳಿಯಬೇಕು ಹಾಗೂ ಯಾವೆಲ್ಲಾ ಯೋಜನೆಗೆ ಸಿದ್ಧವಾಗಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದೆ ಎಂದಾದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಈ ರಾಶಿಯವರು ಈ ವಾರ ತಮ್ಮ ಮನೋಭಾವವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಯಾವುದೋ ವ್ಯಕ್ತಿಯಿಂದ ಮುಂಬರುವ ನಿಮ್ಮ ಭವಿಷ್ಯ ನಿರ್ಧಾರವಾಗುವುದು. ಇವರ ವೃತ್ತಿಪರ ಜೀವನವು ಅನಿರೀಕ್ಷಿತವಾಗಿರುತ್ತದೆ ಮಧ್ಯದ ವಾರದಲ್ಲಿ ನೀವು ತಪ್ಪು ಗ್ರಹಿಕೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದ ಒಂದಿಷ್ಟು ಮಾತನಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು. ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಚೈತನ್ಯವನ್ನು ಹೊಂದಿರುತ್ತಾರೆ. ಅವರ ನಾಯಕತ್ವ ಕೌಶಲ್ಯಗಳನ್ನು ಬಹಳ ಸುಂದರವಾಗಿ ನಿಭಾಯಿಸಬಲ್ಲರು. ಸೂರ್ಯನ ಚಿಹ್ನೆಯನ್ನು

ಹೊಂದಿರುವ ಈ ರಾಶಿಯ ವ್ಯಕ್ತಿಗಳು ಬಹಳ ಸ್ವಾಭಿಮಾನಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಹಿರಿಯರು ಹಾಗೂ ದೈವ ಶಕ್ತಿಯಲ್ಲಿ ನಂಬಿಕೆ ಇಡುವ ಇವರು ಮುಂಗೋಪಿಗಳು ಹೌದು.ಜೂನ್ ತಿಂಗಳಲ್ಲಿ ನಡೆಯುವ ಕೆಲವು ಗ್ರಹಗತಿಗಳ ಚಲನೆ ಹಾಗೂ ಬದಲಾವಣೆಗಳು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 2018ರ ಜೂನ್ ತಿಂಗಳು ಈ ರಾಶಿಯವರಿಗೆ ಸಿನಿಮಾದ ರೀತಿಯಲ್ಲಿ ಬದಲಾವಣೆಯನ್ನು ಕಾಣುವರು ಎಂದು ಹೇಳಲಾಗುತ್ತದೆ. ನಿಮ್ಮ ಆಕ್ರಮಣ ಶೀಲ ಗುಣವು ಹಿಮ್ಮುಖ ಚಲನೆಗೆ ಎಡೆಮಾಡಿಕೊಡುವುದು. ಅಲೆಗಳು ಅದೆಷ್ಟು ಏರಿಳಿತಗಳ ಅಬ್ಬರ ತಂದರು ಕಾಲನ್ನು ಗಟ್ಟಿಯಾಗಿ ಮಣ್ಣಿನಲ್ಲಿ ಹಿಡಿದಿಟ್ಟುಕೊಳ್ಳಬೇಕು.

ವೃಷಭ

ವೃಷಭ

ಈ ವಾರ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಯಾವುದಾದರೂ ಸಮಾಲೋಚನೆ ಅಥವಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರೆ ಹೆಚ್ಚಿನ ಗಮನ ಹರಿಸಬೇಕಾಗುವುದು. ಇನ್ನೊಂದೆಡೆ ಇನ್ನೊಂದು ಸಂಬಂಧವನ್ನು ಪಡೆಯುವ ಉದ್ದೇಶದಿಂದ ವ್ಯಕ್ತಿಯೊಬ್ಬರನ್ನು ನೀವುಯ ಬಳಸಿಕೊಳ್ಳಬಹುದು. ಇನ್ನು ಈ ರಾಶಿಚಕ್ರದ ಅಡಿಯಲ್ಲಿ ಗ್ರಹಗಳ ಉತ್ತಮ ಸಹಕಾರದಿಂದ ವೃತ್ತಿ ಜೀವನದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತದೆ. ನಿಮ್ಮನ್ನು ನೀವು ಟೀಕೆಗೆ ಒಳಗಾಗದಂತೆ ನೋಡಿಕೊಳ್ಳಿ. ನಿಮ್ಮ ಯೋಜನೆಯಲ್ಲಿ ಉಂಟಾಗುವ ವಿಳಂಬವು ನಿರಾಶೆಯನ್ನು ಉಂಟು ಮಾಡಬಹುದು. ಆದರೆ ಅದನ್ನು ನೀವು ಸವಾಲನ್ನಾಗಿ ಸ್ವೀಕರಿಸಿ. ಜೊತೆಗೆ ಅದರ ಸುತ್ತಲು ಸಾಕಷ್ಟು ಏಕಾಗೃತೆಯೊಂದಿಗೆ ಶ್ರಮಿಸಿ ಆಗ ಉತ್ತಮ ಫಲ ದೊರೆಯುವುದು.

ಮಿಥುನ

ಮಿಥುನ

ಈ ವಾರ ನಿಮಗೆ ಉತ್ತಮ ಭಾವನೆ ಹೊಂದಲು ಸಾಧ್ಯವಾಗದೆ ಇರಬಹುದು. ಆದರೆ ಪರಿಶ್ರಮದಿಂದ ಕೂಡಿರುವ ಕೆಲಸದಿಂದ ಎಲ್ಲವನ್ನೂ ಮರೆಯುತ್ತಾರೆ. ಇವರು ಹೂಡುವ ಹೊಸ ತಂತ್ರಗಳಿಂದ ಲಾಭವನ್ನು ಪಡೆದುಕೊಳ್ಳುವರು. ಅಲ್ಲದೆ ಹೊಸ ಹವ್ಯಾಸಗಳಿಗೆ ಸಮಯವನ್ನು ನೀಡುವರು. ಸ್ನೇಹಿತರೊಂದಿಗೆ ಸಮಯ ಕಳೆಯಲು ಸಮಯವನ್ನು ಹೊಂದುವಿರ. ಇನ್ನು ಜೂನ್ ತಿಂಗಳಲ್ಲಿ ಮಿಥುನ ರಾಶಿಯವರು ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಬೇಕಾಗುವುದು. ತಿಂಗಳ ಹೆಚ್ಚಿನ ಸಮಯ ಕೌಟುಂಬಿಕ ವಿಚಾರಗಳು ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತವೆ. ವಿವಿಧ ಗ್ರಹಗಳ ಸಂಚಾರ ಹಾಗೂ ಬದಲಾವಣೆಗಳು ವೃತ್ತಿ ಜೀವನವನ್ನು ತಳ್ಳಲು ಸಹಾಯ ಮಾಡುವುದು. ಅಲ್ಲದೆ ವೃತ್ತಿ ಜೀವನದಲ್ಲಿ ಸಾಕಷ್ಟು ವಿಶೇಷ ಬದಲಾವಣೆಯನ್ನು ಕಾಣುವಿರಿ.

ಕರ್ಕ

ಕರ್ಕ

ಈ ವ್ಯಕ್ತಿಗಳು ತಮ್ಮ ವೈಯಕ್ತಿಕ ರಹಸ್ಯಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಇವರು ಕೆಲವೊಂದು ವಿಚಾರದಲ್ಲಿ ನಿರಾಶೆಗೆ ಒಳಗಾಗಬೇಕಾಗುವುದು. ಇವರು ಹೆಚ್ಚು ಮಾತುಕತೆಯಲ್ಲಿ ತೊಡಗಿರುವಾಗ ಆದಷ್ಟು ಎಚ್ಚರಿಕೆಯ ಮಾತುಗಳನ್ನು ಆಡಬೇಕಾಗುವುದು. ಅಸಹನೆ ಹೆಚ್ಚಿನ ಅನಾಹುತ ಸೃಷ್ಟಿಸಬಹುದು. ಹಾಗಾಗಿ ಆದಷ್ಟು ಎಚ್ಚರಿಕೆಯಲ್ಲಿ ಇರಬೇಕಾಗುತ್ತದೆ.

ಸಿಂಹ

ಸಿಂಹ

ಈ ವಾರದಲ್ಲಿ ಸಿಂಹ ರಾಶಿಯವರು ನವೀಕೃತ ಭಾವನಾತ್ಮಕ ಶಕ್ತಿಯನ್ನು ಅನುಭವಿಸುತ್ತಾರೆಂದು ತೋರುತ್ತದೆ. ಅದರಲ್ಲಿ ಕೆಲವು ಭಾವನೆಗಳು ಮಿತಿಮೀರಿದವು ಆಗಿರುತ್ತವೆ. ಹಾಗಾಗಿ ಅವುಗಳೊಂದಿಗೆ ತಮ್ಮ ತನವನ್ನು ಕರೆದೊಯ್ಯಬಾರದರು ಎಂದು ಹೇಳಲಾಗುವುದು. ಇದರೊಂದಿಗೆ ಇತರರ ದೃಷ್ಟಿಕೋನವನ್ನ ಅರ್ಥಮಾಡಿಕೊಳ್ಳಲು ಸ್ವಲ್ಪ ಪ್ರಯತ್ನಿಸಬೇಕಾಗುವುದು.

ಕನ್ಯಾ

ಕನ್ಯಾ

ಈ ರಾಶಿಯವರು ಹೊಸ ಪ್ರಣಯದ ಜೀವನವನ್ನು ಹೊಂದಬಹುದು ಅಥವಾ ಸಂಗಾತಿಯೊಂದಿಗೆ ಪ್ರಣಯ ಲೋಕದಲ್ಲಿ ಮುಳುಗಬಹುದು ಎಂದು ಹೇಳಲಾಗುತ್ತದೆ. ಅಸಮಾನ್ಯ ಅಥವಾ ಸಂಪ್ರದಾಯ ಬದ್ಧವಲ್ಲದ ಪ್ರಣಯ ಸನ್ನಿವೇಶಗಳು ಈ ವಾರದಲ್ಲಿ ಗೊಂದಲವನ್ನು ಉಂಟುಮಾಡಬಹುದು. ಹಾಗಾಗಿ ಇವುಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಕೈಗೊಳ್ಳಬೇಕಾಗುವುದು.

ತುಲಾ

ತುಲಾ

ಮುಂದೆ ಬರುವ ಹೊಸ ಮಟ್ಟದ ಕೆಲಸ ಹಾಗೂ ಸನ್ನಿವೇಶಗಳನ್ನು ಎದುರಿಸಲು ಗಮನವನ್ನು ಕೇಂದ್ರೀಕರಿಸಬೇಕಾದ ಅನಿವಾರ್ಯತೆ ಒದಗಿ ಬರುವುದು. ಅದು ಸಂಬಂಧಗಳ ನಡುವೆ, ಉದ್ಯೋಗದ ವಿಚಾರವಾಗಿ ಅಥವಾ ವೈಯಕ್ತಿಕ ವಿಚಾರವಾಗಿಯೇ ಆಗಿರಬಹುದು. ಇನ್ನೊಂದೆಡೆ ಮನೆಯ ನವೀಕರಣಕ್ಕಾಗಿ ಸ್ವಲ್ಪ ಸಮಯವನ್ನು ವಿನಿಯೋಗಿಸಬೇಕಾಗುವುದು.

ವೃಶ್ಚಿಕ

ವೃಶ್ಚಿಕ

ಈ ವಾರ ವೃಶ್ಚಿಕ ರಾಶಿಯವರಿಗೆ ಹಣದ ವಿಚಾರವು ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುವುದು. ಈ ವಾರ ತಮ್ಮ ಜೀವನದಲ್ಲಿ ಏನನ್ನು ಹೊಂದಿದ್ದಾರೆ? ಏನನ್ನು ಹೊಂದಬೇಕು? ಎನ್ನುವ ಭಾವನೆಗಳನ್ನು ಬಲವಾಗಿ ಹೊಂದಿರುತ್ತಾರೆ. ಪ್ರಬಲವಾದ ಇವರ ವ್ಯಕ್ತಿತ್ವವು ಆರ್ಥಿಕ ಸ್ಥಿತಿ ಹಾಗೂ ವೈಯಕ್ತಿಕ ಸಂಬಂಧಗಳ ಮೇಲೆ ಪ್ರಭಾವ ಬೀರುವುದು.

ಧನು

ಧನು

ಈ ರಾಶಿಯವರು ತಮ್ಮ ಮೇಲಾಧಿಕಾರಿಗಳಿಗೆ ಅನುಕೂಲಕರವಾದ ಪ್ರಭಾವವನ್ನು ತೋರುವರು. ಇವರು ಸಧ್ಯದಲ್ಲಿಯೇ ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಂಡಿದ್ದಾರೆ. ಹಾಗಾಗಿ ಈ ವಾರ ತಮಗೆ ಬೇಕಾದ ವಿಚಾರದೆಡೆಗೆ ಸಾಗಲು ಇದೊಂದು ಸೂಕ್ತ ಸಮಯವಾಗಿರುತ್ತದೆ.

ಮಕರ

ಮಕರ

ಈ ರಾಶಿಯವರು ತಮ್ಮ ಕೆಲಸದೊಂದಿಗೆ ವೈಯಕ್ತಿಕ ವಿಚಾರಗಳಿಗೂ ಸಾಕಷ್ಟು ಸಮಯವನ್ನು ಕೊಡಲು ಸೂಕ್ತವಾದ ಸಮಯವಾಗಿರುತ್ತದೆ. ಇವರ ದೈಹಿಕ ಅಭಿವ್ಯಕ್ತನೆಯಿಂದ ಉನ್ನತಮಟ್ಟಕ್ಕೆ ತಲುಪಬಹುದು ಎಂದು ತೋರುತ್ತದೆ. ಇವರು ತಮ್ಮ ಭಾವನೆಗಳನ್ನು ಸಂಗೀತ ಹಾಗೂ ನೃತ್ಯದ ಮೂಲಕ ವ್ಯಕ್ತಪಡಿಸಿಕೊಳ್ಳುವರು.

ಕುಂಭ

ಕುಂಭ

ಈ ವಾರ ಕುಂಭರಾಶಿಯವರು ಕೆಲವು ಒತ್ತಡಕ್ಕೆ ಒಳಗಾಗಬಹುದು. ಇದರಿಂದ ನಿರಾಶೆಯನ್ನು ಅನುಭವಿಸುವರು. ಈ ವಾರ ಅವರು ವಿಶ್ರಾಂತಿ ಮತ್ತು ಆನಂದವನ್ನು ಪಡೆದು ಕೊಳ್ಳುವರು. ಕೆಲವು ವಿಚಾರಗಳಿಗೆ ಆಳವಾದ ನಿಟ್ಟುಸಿರನ್ನು ಪಡೆದುಕೊಳ್ಳಬೇಕಾಗುವುದು. ಇದು ಸಾಮಾನ್ಯ ಸಂಗತಿಯಂತೆ ನೆರವೇರುವುದು.

 ಮೀನ

ಮೀನ

ಮೀನರಾಶಿಯ ವ್ಯಕ್ತಿಗಳು ತಮ್ಮ ಸಾಮಾಜಿಕ ಚಟುವಟಿಕೆಯನ್ನು ಪ್ರಾರಂಭಿಸುವರು. ಹಾಗಾಗಿ ಇವರು ಮುಂದಿನ ಭವಿಷ್ಯದ ನೋಟದಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಇವರು ತಮ್ಮ ಸತ್ಯತನವನ್ನು ವ್ಯಕ್ತಪಡಿಸಲು ಇದೊಂದು ಸೂಕ್ತವಾದ ಸಮಯ ಎಂದು ಹೇಳಲಾಗುವುದು. ಇನ್ನೊಂದೆಡೆ ಅವರ ಸಂಬಂಧಗಳು ವಾರದಲ್ಲಿ ಹೆಚ್ಚುವರಿ ತೀವ್ರತೆಯನ್ನು ತೋರುತ್ತವೆ. ಅದು ಆರಾಮದಾಯಕ ಅನುಭವವನ್ನು ಹೊಂದಬಹುದು.

English summary

Weekly Predictions For June 4th-10th

The weekly predictions can help us get forewarned about a positive or negative aspect of the stars on our zodiacs. These predictions are based on our sun signs. So, go ahead and check out on what does your zodiac sign have in store for you.
Story first published: Monday, June 4, 2018, 17:36 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more