For Quick Alerts
ALLOW NOTIFICATIONS  
For Daily Alerts

  ಮೇ 28ರಿಂದ ಜೂನ್ 3ರ ವರೆಗೆ ಯಾವ್ಯಾವ ರಾಶಿಯವರ ಅದೃಷ್ಟ ಹೇಗಿದೆ ನೋಡಿ...

  By Hemanth Amin
  |

  ಜ್ಯೋತಿಷ್ಯದ ಮೇಲೆ ನಂಬಿಕೆ ಹೊಂದಿರುವ ಹೆಚ್ಚಿನ ಮಂದಿ ದಿನ ಭವಿಷ್ಯ, ವಾರ ಭವಿಷ್ಯ ಮತ್ತು ವರ್ಷ ಭವಿಷ್ಯ ನೋಡುತ್ತಾರೆ. ದಿನಭವಿಷ್ಯವಾದರೆ ನಾವು ಪ್ರತಿನಿತ್ಯ ನೋಡಬೇಕಾಗುತ್ತದೆ. ಇದನ್ನು ನೋಡುವ ಕೆಲವು ಮಂದಿ ಅದರಂತೆ ನಡೆದುಕೊಳ್ಳುವರು.

  ಆದರೆ ಇನ್ನು ಕೆಲವು ಮಂದಿ ವಾರ ಭವಿಷ್ಯಕ್ಕಾಗಿ ಕಾಯುತ್ತಲಿರುವರು. ನನ್ನ ಈ ವಾರದ ಭವಿಷ್ಯ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಹುದು ಎನ್ನುವುದು ಅವರ ಉದ್ದೇಶ. ಹೀಗಾಗಿ ವಾರಭವಿಷ್ಯಕ್ಕೆ ಕೆಲವರು ಒತ್ತು ನೀಡುವರು. ಈ ಲೇಖನದಲ್ಲಿ ಪ್ರತಿಯೊಂದು ರಾಶಿಗಳ ವಾರಭವಿಷ್ಯ ನಿಮಗೆ ತಿಳಿಸಿಕೊಡಲಿದ್ದೇವೆ....

  ಮೇಷ: ಮಾ.21-ಎಪ್ರಿಲ್ 19

  ಮೇಷ: ಮಾ.21-ಎಪ್ರಿಲ್ 19

  ಮೇಷ ರಾಶಿಯವರಿಗೆ ಈ ವಾರ ಉದ್ಯೋಗದ ಕಡೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗಬಹುದು. ಕೆಲವೊಂದು ಅನಿರೀಕ್ಷಿತ ಕರೆಗಳಿಂದಾಗಿ ಅವರು ತಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಮರುಚಿಂತಿಸ ಬೇಕಾಗಬಹುದು. ಯಾರಾದರೊಬ್ಬರು ಆಸಕ್ತಿದಾಯಕ ಕರೆ ಮಾಡಬಹುದು. ಇದರಿಂದಾಗಿ ಅವರೊಳಗಿನ ಭಾವನೆಗಳು ತಾನಾಗಿಯೇ ಹೊರಬರಬಹುದು. ಇನ್ನೊಂದು ಕಡೆಯಲ್ಲಿ ಅವರು ತಮ್ಮ ಪ್ರೀತಿಪಾತ್ರರೊಂದಿಗೆ ಹಾಕಿಕೊಂಡಿರುವ ಯೋಜನೆಗಳನ್ನು ರದ್ದುಗೊಳಿಸಬಹುದು. ಇನ್ನು ಮೇಷ ರಾಶಿಯವರಿಗೆ ಈ ವರ್ಷ ಸಂಪತ್ತಿನ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿ ಇರುತ್ತೀರಿ. ಆದಾಗ್ಯೂ, ನೀವು ಊಹಾಪೋಹಗಳಿಗೆ ಹೂಡಿಕೆ

  ಮಾಡಲು ಅಥವಾ ಸಾಲಗಳನ್ನು ನೀಡಲು ಬಯಸಿದರೆ ಹಿರಿಯ ಅಥವಾ ಅನುಭವಿ ವ್ಯಕ್ತಿಯ ಸಲಹೆಯನ್ನು ತೆಗೆದುಕೊಳ್ಳಿ. ಮಾರುಕಟ್ಟೆಯಲ್ಲಿ ಹಣ ಹೂಡಿಕೆಯ ಆಲೋಚನೆಯಲ್ಲಿದ್ದರೆ ಜ್ಯೋತಿಷ್ಯಿಗಳ ಅನುಮತಿ ಪಡೆದುಕೊಳ್ಳುವುದು ಉತ್ತಮ. ಗ್ರಹಗತಿಗಳ ಅನಾನುಕೂಲವನ್ನು ತಿಳಿದು ಮುಂದುವರಿದರೆ ಉತ್ತಮ ಲಾಭ ಪಡೆಯಬಹುದು.

  ವೃಷಭ: ಎಪ್ರಿಲ್ 20-ಮೇ 20

  ವೃಷಭ: ಎಪ್ರಿಲ್ 20-ಮೇ 20

  ಇವರು ಸಣ್ಣದಾದರೂ ಕೆಲವೊಂದು ಮಹತ್ವದ ಮಾಹಿತಿ ಸಂಗ್ರಹಿಸಲಿರುವರು. ಇವರಿಗೆ ಹಿಂದಿಗಿಂತಲೂ ಹೆಚ್ಚಿನ ಸಂಪನ್ಮೂಲ ಸಿಗಲಿದೆ. ಸಂಶೋಧನೆ ಮಾಡುವಂತಹ ಗುಣ ಹೊಂದಿರುವವರಿಗೆ ಇದು ತುಂಬಾ ಒಳ್ಳೆಯ ವಾರ. ಇವರು ತಮ್ಮ ತಮಾಷೆಯ ಪ್ರವೃತ್ತಿಯಿಂದ ಸುತ್ತಲಿನವರನ್ನು ಸಂತೋಷವಾಗಿಡುವರು. ಪ್ರೀತಿಪಾತ್ರರ ಜತೆ ರಾಜತಾಂತ್ರಿಕ ಸಂಬಂಧ ಹಂಚಿಕೊಳ್ಳುವರು. ಇನ್ನು ಮುಂಬರಲಿರುವ ದಿನಗಳಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಇರುವುದಿಲ್ಲ. ಈ ತಿಂಗಳಲ್ಲಿ ನೀವು ಇತರ ಸಮಯಕ್ಕಿಂತಲೂ ಹೆಚ್ಚೇ ಕಷ್ಟಪಡುತ್ತೀರಿ ಹಾಗೂ ಲಾಭ ಪಡೆಯಲು ಶ್ರಮಿಸುತ್ತೀರಿ. ಜೊತೆಯಲ್ಲಿ ಹೆಚ್ಚಿನ ಸಮಯ ಪ್ರಯಾಣದಲ್ಲಿಯೂ ಕಳೆಯುತ್ತೀರಿ. ಅಲ್ಲದೇ ಒಂದು ವೇಳೆ ಹೊಸ ಯೋಜನೆಗಳಿಗಾಗಿ ಹಣವನ್ನು ಹೂಡುವ ಬಗ್ಗೆ ಕೆಲವು ಕ್ರಮಗಳನ್ನೂ ಕೈಗೊಳ್ಳುವುದಾದರೆ ಈ ತಿಂಗಳು ಇದಕ್ಕೆ ಸರ್ವಥಾ

  ಸೂಕ್ತಕಾಲವಲ್ಲ! ನಿಮ್ಮ ಹೂಡಿಕೆಗಳನ್ನು ಮುಂದೂಡುವುದು ಅನಿವಾರ್ಯ! ಪರಿಸ್ಥಿತಿ ತಿಳಿಯಾಗುವವರೆಗೂ ಆದಷ್ಟೂ ಸರಳ ಜೀವನವನ್ನು ನಡೆಸುವುದೇ ಸೂಕ್ತ.

  ಮಿಥುನ: ಮೇ 21- ಜೂನ್ 20

  ಮಿಥುನ: ಮೇ 21- ಜೂನ್ 20

  ಮಿಥುನ ರಾಶಿಯವರಿಗೆ ಈ ವಾರದಲ್ಲಿ ಬಿಡುವಿರುವುದಿಲ್ಲ. ಇವರು ತಮ್ಮ ಆದ್ಯತೆ ಮಧ್ಯೆ ಗೊಂದಲಕ್ಕೆ ಸಿಲುಕುವರು. ಇನ್ನೊಂದು ಬದಿಯಲ್ಲಿ ಇವರು ತಮ್ಮ ತಾಳ್ಮೆ ಕಳೆದುಕೊಳ್ಳಬಾರದು. ಇದನ್ನು ಹೊರತುಪಡಿಸಿ ಭಾವನಾತ್ಮಕ ವಿಚಾರದಲ್ಲೂ ಹಣವನ್ನು ಪರಿಗಣಿಸಬೇಕಾಗುತ್ತದೆ. ಸಾಮಾನ್ಯವಾಗಿ ಮಿಥುನ ರಾಶಿಯವರು ಯಾವಾಗಲೂ ಸಮತೋಲನ ಕಂಡುಹಿಡಿಯುವ ಮತ್ತು ತಮ್ಮ ಘರ್ಷಣೆಗಳು ಪರಿಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಹಲವಾರು

  ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎನ್ನಲಾಗುವುದು. ಈ ರಾಶಿಚಕ್ರದವರು ಓದುವುದು, ವಿಶ್ಲೇಷಣೆ ನಡೆಸುವುದು ಮತ್ತು ಅವರ ಲಾಭಕ್ಕಾಗಿ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ಚತುರತೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು.

  ಕರ್ಕಾಟಕ: ಜೂನ್ 21-ಜುಲೈ 22

  ಕರ್ಕಾಟಕ: ಜೂನ್ 21-ಜುಲೈ 22

  ಈ ವಾರದಲ್ಲಿ ಕರ್ಕಾಟಕ ರಾಶಿಯವರು ಅನಿರೀಕ್ಷಿತ ಜವಾಬ್ದಾರಿ ನಿರ್ವಹಿಸಲು ಸಮರ್ಥರಾಗಿದ್ದೇವೆಂದು ಅವರು ಭಾವಿಸುವುದಿಲ್ಲ. ಇವರ ಸುತ್ತಲಿನ ಪ್ರತಿಯೊಂದು ಕೂಡ ತುಂಬಾ ಸಾಕಷ್ಟು ಬೇಡಿಕೆಯನ್ನುಂಟು ಮಾಡುವುದು. ಇನ್ನೊಂದು ಕಡೆ ಬೇರೆಯವರ ಕುತಂತ್ರಕ್ಕೆ ಇವರು ತಮ್ಮನ್ನು ಒಳಪಡಿಸಲು ಬಯಸುವುದಿಲ್ಲ. ವಾರ ಸಾಗಿದಂತೆ ರೋಮ್ಯಾನ್ಸ್ ಇವರಲ್ಲಿ ಹೆಚ್ಚಾಗಲಿದೆ.

  ಸಿಂಹ: ಜುಲೈ 23- ಆ.23

  ಸಿಂಹ: ಜುಲೈ 23- ಆ.23

  ಹಿಂದಿನ ಕೆಲವೊಂದು ಬದ್ಧತೆಗಳು ಸಮಯ ತೆಗೆದುಕೊಳ್ಳುತ್ತಿವೆ ಮತ್ತು ತಮ್ಮ ಆರಾಮದಾಯಕ ವೇಳಾಪಟ್ಟಿಗೆ ಇದು ಅಡ್ಡಿಯುಂಟು ಮಾಡುತ್ತಿದೆ ಎಂದು ಸಿಂಹ ರಾಶಿಯವರು ಭಾವಿಸುತ್ತಾರೆ. ಇದರಿಂದಾಗಿ ಇವರು ಹೆಚ್ಚುವರಿ ಕೆಲಸದ ನಿರೀಕ್ಷೆಯಲ್ಲಿರುವರು.

  ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಈ ವಾರ ಕನ್ಯಾ ರಾಶಿಯವರು ಹೆಚ್ಚಿನ ಶಾಪಿಂಗ್ ನಲ್ಲಿ ತೊಡಗಿಕೊಳ್ಳುವ ಶ್ರೇಷ್ಠ ವಾರವಾಗಲಿದೆ. ತುಂಬಾ ಸೂಕ್ಷ್ಮವಾಗಿರುವ ಜನರೊಂದಿಗೆ ಇವರು ಚತುರತೆಯಿಂದ ಕೆಲಸ ಮಾಡಬೇಕಾಗಿದೆ. ಸಂಬಂಧದ ವಿಚಾರಕ್ಕೆ ಬಂದರೆ ಇವರದ್ದು ತುಂಬಾ ಸಾಮಾನ್ಯವಾಗಿರುವ ಸಂಬಂಧವಾಗಿರಲಿದ್ದು, ಕೆಲವೊಂದು ಸಲ ವಾಗ್ವಾದ ನಡೆಯಬಹುದು. ಇದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗಿದೆ.

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ತುಲಾ ರಾಶಿಯವರಲ್ಲಿ ಈ ವಾರ ಕೆಲವೊಂದು ಕ್ರಿಯಾತ್ಮಕ ಆಲೋಚನೆಗಳು ಬರಲಿದೆ. ನಿರ್ಧಾರ ತೆಗೆದುಕೊಳ್ಳುವವರ ಮೇಲೆ ಇವರು ಪ್ರಭಾವ ಬೀರಬಹುದು. ಆದರೆ ಇತರ ಕೆಲವೊಂದು ಅಗತ್ಯತೆಗಳಿಗೆ ಹಣ ಖರ್ಚು ಮಾಡಿದರೆ ಇವರು ಹೆಚ್ಚು ಗಂಭೀರವಾಗಬಾರದು. ಹಣದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಇವರು ತಮ್ಮ ಸಂಗಾತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ಇವರ ಕ್ರಿಯಾತ್ಮಕ ಆಲೋಚನೆಗಳು ನಿರ್ಧಾರ ಮಾಡುವವರ ಮೇಲೆ ಪ್ರಭಾವ ಬೀರಲಿದೆ. ಇವರು ಕೆಲವೊಂದು ವಿಚಾರವನ್ನು ತಾವೇ ಕೈಗೆತ್ತಿಕೊಂಡು ಸಮಯ ಉಳಿಸಬೇಕು. ಹಣದ ವಿಚಾರದಲ್ಲಿ ಇವರು ಹೆಚ್ಚು ಗಂಭೀರವಾಗಿ ಇರಬಾರದು. ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯ ಅಭಿಪ್ರಾಯ ಕೇಳಿ.

  ಧನು: ನ.23-ಡಿ.22

  ಧನು: ನ.23-ಡಿ.22

  ದೊಡ್ಡ ಯಶಸ್ಸು ಪಡೆಯುವ ಬಗ್ಗೆ ಧನು ರಾಶಿಯವರು ಚಿಂತೆ ಮಾಡಬೇಕಿಲ್ಲ. ಈ ವಾರದಲ್ಲಿ ಭಾವನಾತ್ಮಕವಾಗಿ ಅವರು ಅಜೀರ್ಣಕ್ಕೆ ಒಳಗಾಗುವ ಕಾರಣದಿಂದ ಸಮಸ್ಯೆಗೆ ಒಳಗಾಗುವರು. ಆರ್ಥಿಕ ಸ್ಥಿತಿ ಕೂಡ ನಿರಾಶದಾಯಕವಾಗಿರಲಿದೆ. ಪ್ರಮುಖ ವಿಚಾರದಲ್ಲಿ ಇವರು ಧನಾತ್ಮಕ ಪರಿಣಾಮ ಬೀರುವರು.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ಮಕರ ರಾಶಿಯವರಿಗೆ ಈ ವಾರವು ಅನಿಶ್ಚಿತತೆಯಿಂದ ಕೂಡಿರಲಿದೆ. ಆದರೆ ಎಷ್ಟೇ ನಿರಾಶೆ ಮೂಡಿಸಿದರೆ ಪರಿಸ್ಥಿತಿ ಮಾತ್ರ ಅವರ ಪರಿವಾಗಿರಲಿದೆ. ಈ ವಾರದಲ್ಲಿ ಆದಾಯ ಮತ್ತು ಖರ್ಚಿನ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಇನ್ನೊಂದು ಕಡೆಯಲ್ಲಿ ಸಾಮಾಜಿಕ ಗುರಿಗಳು ತುಂಬಾ ಶ್ರಮ ಉಂಟುಮಾಡಿದರೂ ವಾರದ ಮಧ್ಯದಲ್ಲಿ ಇದು ಈಡೇರುವುದು.

  ಕುಂಭ: ಜ.21-ಫೆ.18

  ಕುಂಭ: ಜ.21-ಫೆ.18

  ಈ ವಾರ ಕುಂಭ ರಾಶಿಯವರು ತುಂಬಾ ಭಿನ್ನವಾಗಿರುವುದನ್ನು ಮಾಡುವ ಮನಸ್ಥಿತಿಯಲ್ಲಿ ಇರುವರು. ಇವರಿಗೆ ಸ್ಪಷ್ಟತೆ ಇಲ್ಲದೆ ಇರುವ ವಿಚಾರವನ್ನು ಇವರು ಆರಿಸಿಕೊಳ್ಳುವರು. ಇನ್ನೊಂದು ಕಡೆ ಇವರು ತಮ್ಮ ವ್ಯಾಪ್ತಿ ವಿಸ್ತರಿಸುವವರೊಂದಿಗೆ ನಡೆಸುವ ಮಾತುಕತೆ ಫಲಪ್ರದವಾಗಲಿದೆ.

  ಮೀನ: ಫೆ.19-ಮಾ.20

  ಮೀನ: ಫೆ.19-ಮಾ.20

  ಈ ವಾರ ಮೀನ ರಾಶಿಯವರು ಕೆಲವೊಂದು ಅಕಾರಣವಾಗಿರುವಂತಹ ಬೇಡಿಕೆಗಳನ್ನು ಎದುರಿಸಲಿರುವರು. ಉದ್ಯೋಗದ ಕಡೆಯಲ್ಲಿ ಇವರು ತಮಗಿಂತ ಹೆಚ್ಚು ದೇಣಿಗೆ ನೀಡಲಿರುವರು. ಇವರಿಗೆ ಹಣದ ವಿಚಾರದಲ್ಲಿ ಸಮಸ್ಯೆಯು ಎದುರಾಗುವುದು, ಇದು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದ್ದಾಗಿರುವುದು.

  English summary

  Weekly Predictions For 28th May-3rd June

  What is the one thing that you expect the most on a Monday? We're sure, it is all about the weekly predictions that we await so eagerly! Here, in this article, we are revealing to you the details about the zodiac signs, and their weekly predictions.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more