For Quick Alerts
ALLOW NOTIFICATIONS  
For Daily Alerts

  ಕನ್ಯಾ ರಾಶಿಯ ಜೂನ್ ತಿಂಗಳ ಭವಿಷ್ಯ

  |

  ಕನ್ಯಾರಾಶಿಯವರಿಗೆ ಜೂನ್ ತಿಂಗಳು ಜೀವನದ ಸಮತೋಲನದ ಬಗ್ಗೆ ಅರಿವು ಮೂಡಿಸುತ್ತದೆ ಎನ್ನಲಾಗುವುದು. ಏಕೆಂದರೆ ಇವರು ಈ ತಿಂಗಳಲ್ಲಿ ಗರಿಷ್ಟ ಮಟ್ಟದ ಜೀವನ ಹಾಗೂ ಕನಿಷ್ಠ ಮಟ್ಟದ ಸನ್ನಿವೇಶಗಳನ್ನು ಸಮನಾಗಿ ಅನುಭವಿಸಲಿದ್ದಾರೆ. ಇವರಿಗೆ ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗಿದ್ದರೂ ಸಹ ಕಷ್ಟದ ಸಂದರ್ಭದಲ್ಲಿ ಸನ್ನಿವೇಶವನ್ನು ಎದುರಿಸುವ ಸಾಮಥ್ರ್ಯವನ್ನು ಗ್ರಹಗತಿಗಳು ಕರುಣಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಲ್ಲದೆ ಅನಾವಶ್ಯಕವಾಗಿ ಕಾಡುವ ವಿವಾದಗಳನ್ನು ತಪ್ಪಿಸಲು ಇಂದು ನಿಮಗೆ ಗ್ರಹಗತಿಗಳು ಸಹಾಯ ಮಾಡುವವು.

  ಕೆಲವು ಸನ್ನಿವೇಶಗಳಲ್ಲಿ ನೀವು ಋಣಾತ್ಮಕ ಅನುಭವವನ್ನು ಅನುಭವಿಸಬೇಕಾಗುವುದು. ದುಷ್ಟಜನರಿಂದ ಅಥವಾ ವಂಚಕರಿಂದ ಆದಷ್ಟು ದೂರವಿರಿ. ಅವರು ನಿಮ್ಮ ಸ್ವಾಭಿಮಾನಕ್ಕೆ ಕುಂದುಂಟುಮಾಡುವರು. ನಿಮ್ಮ ಕರ್ಮಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುವುದು. ತಿಂಗಳ ಕೊನೆಯ ಭಾಗದಲ್ಲಿ ನೀವು ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಒಲವು ತೋರುವಿರಿ. ಇದರಿಂದ ಮಾನಸಿಕವಾಗಿ ಶಾಂತಿಯು ದೊರೆಯುವುದು. ನಿಮ್ಮ ಪೋಷಕರು ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಳ್ಳಲು ಸಹಾಯ ಮಾಡುತ್ತಾರೆ.

  Virgo Monthly Horoscope

  ತಿಂಗಳ ಮೊದಲಾರ್ಧದಲ್ಲಿ ಸೂರ್ಯನಿಂದಾಗಿ ಪ್ರಮುಖ ಬದಲಾವಣೆಯನ್ನು ಜೀವನದಲ್ಲಿ ಕಾಣುವಿರಿ. ಹೊಸದನ್ನು ಪ್ರಯತ್ನಿಸುವುದಕ್ಕೆ ಹಿಂಜರಿಯದಿರಿ. ಸಮಯಕ್ಕೆ ಅನುಗುಣವಾಗಿ ನೀವು ಸಾಗುವುದರಿಂದ ಉತ್ತಮ ಬಹುಮಾನವನ್ನು ಹಾಗೂ ಹೆಸರನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ನೀವು ನಿಮ್ಮ ಆರೋಗ್ಯ ಸ್ಥಿತಿ, ಹಣಕಾಸಿನ ಮಟ್ಟ, ಪ್ರೀತಿಯ ಜೀವನ ಹಾಗೂ ವೃತ್ತಿ ಬದುಕಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

  ಆರೋಗ್ಯ ಸ್ಥಿತಿ

  ಸಮಸ್ಯೆಗಳಿಂದ ಉಂಟಾಗುವ ಒತ್ತಡ ಹಾಗೂ ಆತಂಕವು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ. ಬಿಡುವಿಲ್ಲದ ಪರಿಸ್ಥಿತಿಯ ನಡುವೆಯೂ ನೀವು ಆರೋಗ್ಯಕರ ಆಹಾರಗಳ ಸೇವನೆಯನ್ನು ಮರೆಯಬಾರದು. ಸ್ವಯಂ ಔಷಧಿಗಳಿಂದ ಆರೋಗ್ಯ ಸಮಸ್ಯೆ ಗುಣಮುಖವಾಗದೆ ಇದ್ದರೆ ವೈದ್ಯರ ತಪಾಸಣೆಗೆ ಮೊರೆ ಹೋಗಲೇ ಬೇಕು. ಏಕೆಂದರೆ ಸಮಸ್ಯೆ ಎಂದಿಗೂ ನೀವು ಅಂದುಕೊಂಡಂತೆ ಇರುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

  ದೀರ್ಘ ಸಮಯದವರೆಗೆ ವಾಹನ ಚಲಿಸದಿರಿ. ಅಪಘಾತಗಳು ಸಂಭವಿಸುವುದರ ಮೂಲಕ ವಿಶ್ರಾಂತಿ ತೆಗೆದುಕೊಳ್ಳುವ ಪರಿಸ್ಥಿತಿ ಒದಗಬಹುದು. ನಿಮ್ಮ ದೇಹದ ತೂಕದ ಬಗ್ಗೆಯೂ ನೀವು ಕಾಳಜಿ ವಹಿಸಬೇಕಾಗುವುದು. ಉತ್ತಮ ಆರೋಗ್ಯವನ್ನು ಹೊಂದಲು ನಿಮಗಿರುವ ಉಪಾಯಗಳು ಎಂದರೆ ಸೂಕ್ತ ರೀತಿಯ ಆಹಾರ ಸೇವನೆ. ಸೊಪ್ಪು, ಹಣ್ಣು, ತರಕಾರಿಗಳನ್ನು ಸೇವಿಸುವುದು ಹಾಗೂ ಕ್ರಮಬದ್ಧವಾದ ವ್ಯಾಯಾಮ ಮಾಡುವುವುದು.

  Virgo Monthly Horoscope

  ವೃತ್ತಿ ಜೀವನ

  ನಿಮ್ಮ ವೃತ್ತಿ ಜೀವನವು ಈ ತಿಂಗಳು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಏಕೆಂದರೆ ನಿಮ್ಮ ಕೆಲಸದಲ್ಲಿ ನೀವು ಭಾರಿ ಪ್ರಗತಿಯನ್ನು ಕಾಣುವಿರಿ. ಅನೇಕ ಯೋಜನೆಗಳನ್ನು ಒಂದೇ ಸಮಯದಲ್ಲಿ ಕೈಗೊಂಡಿದ್ದರೂ ಸಹ ನೀವು ಪ್ರತ್ಯೇಕ ಗಮನಗಳನ್ನು ನೀಡಬೇಕಾಗುತ್ತದೆ. ನಿಮ್ಮ ಅನಗತ್ಯ ಭಾಷಣವು ಸಹೋದ್ಯೋಗಿಗಳ ಮೇಲೆ ಪ್ರಭಾವ ಬೀರುವುದು ಅಥವಾ ತೊಂದರೆಯನ್ನುಂಟುಮಾಡಬಹುದು. ನಿಮ್ಮ ಶ್ರಮದಾಯಕ ಕೆಲಸಕ್ಕೆ ಮನ್ನಣೆ ಸಿಗಲಿಲ್ಲವೆಂದು ಚಿಂತಿಸದಿರಿ. ತಾಳ್ಮೆಯಿಂದ ಇದ್ದರೆ ಎಲ್ಲವೂ ನಿಮ್ಮೆಡೆಗೆ ಸಕಾರಾತ್ಮಕವಾಗಿ ಒಲಿದು ಬರುತ್ತವೆ. ವ್ಯಾಪಾರ ವಹಿವಾಟು ನಡೆಸುವಾಗ ನೀವು ಸರಿಯಾಗಿ ಬುದ್ಧಿ ಉಪಯೋಗಿಸಿ ಕೆಲಸ ಹಾಗೂ ನಿರ್ಣಯವನ್ನು ಕೈಗೊಳ್ಳಬೇಕಾಗುವುದು. ಪಾಲುದಾರಿಕೆಯಲ್ಲಿ ಕೆಲಸ ಕೈಗೊಂಡಿದ್ದರೆ ಉತ್ತಮ ಲಾಭ ಅನುಭವಿಸಲು ಸುಲಭ ಮಾರ್ಗವಾಗಿರುತ್ತದೆ.

  ಆರ್ಥಿಕ ಸ್ಥಿತಿ

  ಆಸ್ತಿಗೆ ಸಂಬಂಧಿಸಿದ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುವಂತಹ ತಿಂಗಳು ಇದಾಗುತ್ತದೆ. ನೀವು ಆಸ್ತಿಯನ್ನು ಖರೀದಿಸಲು ಅಥವಾ ಮಾರಲು ಉತ್ತಮವಾದ ಸಮಯ ಎಂದು ಹೇಳಲಾಗುತ್ತದೆ. ಹೂಡಿಕೆಗೆ ಸಂಬಂಧಿಸಿದಂತೆ ನಿಮ್ಮ ಪಾಲುದಾರರು ಸೂಕ್ತ ಮಾರ್ಗಗಳನ್ನು ಸೂಚಿಸುವರು. ಹಾಗಾಗಿ ನೀವು ಅವರೆಡೆಗೆ ಹಾಗೂ ಅವರ ಮಾತಿಗೆ ಸೂಕ್ತ ಗಮನವನ್ನು ನೀಡಬೇಕು. ಈ ತಿಂಗಳು ನೀವು ಯಾವುದೇ ಬಗೆಯ ಪ್ರವಾಸ ಅಥವಾ ಪ್ರಯಾಣ ಕೈಗೊಂಡಿದ್ದರೂ ಅದು ನಿಮಗೆ ಲಾಭವನ್ನು ತಂದುಕೊಡುವುದು. ಆರ್ಥಿಕವಾಗಿಯೂ ಉತ್ತಮ ಫಲ ನೀಡುವುದು. ಸಾರಿಗೆ ಉದ್ಯಮದಲ್ಲಿ ಇರುವವರಿಗೆ ಈ ತಿಂಗಳು ಅತ್ಯುತ್ತಮ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ..

  ಪ್ರೀತಿಯ ಜೀವನ

  ಪ್ರೀತಿಯಲ್ಲಿ ಹುಚ್ಚರಾಗುವಂತೆ ಮಾಡುವ ಸಮಯವಿದು. ಉತ್ತಮ ಸಂಬಂಧವು ನಿಮ್ಮ ಕೈಗೂಡಿಬರುವುದು. ಪ್ರೀತಿಯ ವಿಚಾರದಲ್ಲಿ ಇಬ್ಬರು ಒಂದೇ ಭಾವನೆಯನ್ನು ತಳೆದಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ವೃತ್ತಿ ಜೀವನದ ಜೊತೆಗೆ ಪ್ರೀತಿ ಪಾತ್ರರಿಗೆ ಅಥವಾ ಸಂಗಾತಿಗೂ ಒಂದಿಷ್ಟು ಸಮಯವನ್ನು ಮೀಸಲಿಡಲು ನೀವು ವೇಳಾಪಟ್ಟಿಯನ್ನು ನಿಗದಿಪಡಿಸಿಕೊಳ್ಳಬೇಕು.  ಇದರಿಂದ ಭಾವನಾತ್ಮಕ ಬೆಂಬಲ ದೊರೆಯುವುದು. ಮಾನಸಿಕ ನೆಮ್ಮದಿ ದೊರೆಯುವುದು. ನಿಮ್ಮ ಪ್ರೀತಿಯನ್ನು ಸಂಗಾತಿಯನ್ನಾಗಿ ಪರಿವರ್ತಿಸಿ ಮನೆಗೆ ಕರೆತರುವುದರಿಂದ ಉತ್ತಮ ಜೀವನವನ್ನು ಕಾಣುವಿರಿ. ಸಂಬಂಧದ ವಿಚಾರ ಬಂದಾಗ ಆದಷ್ಟು ಹೃದಯದ ಮಾತಿಗೆ ಆದ್ಯತೆ ನೀಡಿದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಿ.

  ಅದೃಷ್ಟದ ಬಣ್ಣ ಮತ್ತು ಸಂಖ್ಯೆ

  ಜೂನ್ ತಿಂಗಳ ಅದೃಷ್ಟದ ಬಣ್ಣ ಕೆಂಪು ಮತ್ತು ಕಂದು ಬಣ್ಣದ ಕೆಂಪು.

  ಅದೃಷ್ಟದ ಸಂಖ್ಯೆ 3 ಮತ್ತು 7

  English summary

  Virgo Monthly Horoscope for June 2018

  There may be a lot of times in life where you will be faced with two options. It is always better to avoid uncertainties when it comes to decision making. Keep away from negative people who will just try to lower your self esteem. Do not take it upon yourself to handle them, karma will definitely do its job. You will be a bit spiritually inclined towards religious activities at the end of the month. Pursuing them will give you mental peace. It is also a good time to help your parents embark on a spiritual journey.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more