For Quick Alerts
ALLOW NOTIFICATIONS  
For Daily Alerts

  ಜೂನ್ ತಿಂಗಳಲ್ಲಿ ಈ ನಾಲ್ಕು ರಾಶಿಯವರಿಗೆ ಒಂಟಿತನ ಕಾಡಲಿದೆಯಂತೆ!

  By Deepu
  |

  ಜೀವನದ ಬಗ್ಗೆ ಜೋತಿಷ್ಯವು ಎಲ್ಲವನ್ನು ಹೇಳುವಾಗ ನೀವು ಬೇರೆ ಕಡೆ ಹೋಗುವುದು ಯಾಕೆ? ಈ ತಿಂಗಳಲ್ಲಿ ನೀವು ಒಂಟಿಯಾಗಿರಲಿದ್ದೀರಾ ಅಥವಾ ನಿಮಗೆ ಸಂಗಾತಿಯ ಸಂಗ ಸಿಗಲಿದೆಯಾ ಎನ್ನುವುದನ್ನು ಕೂಡ ಜೋತಿಷ್ಯವು ಹೇಳಲಿದೆ. ಪ್ರತಿಯೊಂದು ಕ್ಷಣದ ಬಗ್ಗೆಯು ಜ್ಯೋತಿಷ್ಯವು ನಿಮಗೆ ಮಾಹಿತಿ ನೀಡಲಿದೆ.

  ನೀವು ಅದನ್ನು ತಿಳಿದುಕೊಂಡು ಸ್ವಲ್ಪ ಮಟ್ಟಿನ ಎಚ್ಚರಿಕೆ ವಹಿಸಬೇಕು. ನಮ್ಮ ಜ್ಯೋತಿಷ್ಯ ತಜ್ಞರ ಪ್ರಕಾರ, ಜೂನ್ ತಿಂಗಳಲ್ಲಿ ಕೆಲವೊಂದು ರಾಶಿಯವರು ಒಂಟಿಯಾಗಿರಲಿದ್ದಾರೆ. ತಜ್ಞರು ಹೇಳುತ್ತಿರುವಂತಹ ರಾಶಿಗಳು ಯಾವುದು ಎಂದು ಈ ಲೇಖನದ ಮೂಲಕ ನೀವು ತಿಳಿಯಿರಿ. ಕೆಳಗೆ ಕೊಟ್ಟಿರುವಂತಹ ರಾಶಿ ಚಕ್ರಗಳ ಬಗ್ಗೆ ನೀವು ಓದಿಕೊಳ್ಳಿ....

  ತುಲಾ: ಸೆ.24-ಅ.23

  ತುಲಾ: ಸೆ.24-ಅ.23

  ತುಲಾ ರಾಶಿಯವರು ತುಂಬಾ ಸರಳವಾಗಿ ಸಾಗುವ ಗುಣ ಹೊಂದಿರುವರು ಮತ್ತು ಅವರ ನೈಸರ್ಗಿಕ ಆದರ್ಶವಾದದಿಂದಾಗಿ ಅವರು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರು. ಆದರೆ ಕೆಲವೊಂದು ಕಾರಣಗಳಿಂದಾಗಿ ಜೂನ್ ತಿಂಗಳಲ್ಲಿ ಈ ರಾಶಿಯವರಿಗೆ ಇದೆಲ್ಲವೂ ಬದಲಾಗಲಿದೆ. ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಕಂಡುಬರುವುದು ಮತ್ತು ಇದನ್ನು ಸರಿಪಡಿಸಲು ನೀವು ತಡಕಾಡುವಿರಿ. ಇದರಿಂದಾಗಿ ನೀವು ಸಂಬಂಧದಿಂದ ದೂರ ಹೋಗಲು ಮತ್ತು ಏಕಾಂಗಿಯಾಗಿರಲು ಬಯಸುವಿರಿ.ಇನ್ನು ಜೂನ್ ತಿಂಗಳಲ್ಲಿ ತುಲಾ ರಾಶಿಯವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಪ್ರಸಿದ್ಧಿಯನ್ನು ಪಡೆದುಕೊಳ್ಳುವರು. ಈ ವರ್ಷಪೂರ್ತಿ ನೀವು ಧನಾತ್ಮಕ ಪರಿಸ್ಥಿತಿಯನ್ನೇ ಹೆಚ್ಚಾಗಿ ಅನುಭವಿಸಲಿದ್ದೀರಿ. ಜೀವನದ ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಆಂತರಿಕವಾಗಿ ತೊಳಲಾಟಕ್ಕೆ ಒಳಗಾಗುವಿರಿ. ಅಂತಹ ಘರ್ಷಣೆಗಳ ಮೂಲ ಕಾರಣವನ್ನು ಅರ್ಥೈಸಿಕೊಂಡು, ಅವುಗಳ ಸುಧಾರಣೆಗೆ ಮುಂದಾಗಬೇಕು. ನಿಮ್ಮ ಜೀವನದಲ್ಲಿ ನೀವು ಯಾವ ದಿಕ್ಕಿಗೆ ಸಾಗಬೇಕು ಎನ್ನುವುದನ್ನು ನಿರ್ಧರಿಸಲು ಇದೊಂದು ಉತ್ತಮವಾದ ಸಮಯ. ನಿಮ್ಮ ಮೃದು ಸ್ವಭಾವವನ್ನು ಅರಿತು ಇತರ ವ್ಯಕ್ತಿಗಳು ಅದರ ಸದುಪಯೋಗ ಪಡಿಸಿಕೊಳ್ಳಲು ಬಿಡದಿರಿ. ನಿಮ್ಮ ಪರಿಪೂರ್ಣ ಸಮತೋಲನ ಸಾಮಥ್ರ್ಯ ಅಥವಾ ಕೌಶಲ್ಯದಿಂದ ವೃತ್ತಿ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ಆಗ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುವುದಿಲ್ಲ. ನಿಮ್ಮ ಅಧೀನದಲ್ಲಿರುವ ಕೆಲಸವನ್ನು ಪೂರ್ಣಗೊಳಿಸಲು ಮುಂದಾಗುವಿರಿ. ಯಾವುದೇ ಅಡೆತಡೆ ಎದುರಾದರೂ ನಿಮ್ಮ ಗುರಿಯನ್ನು

  ಸಾಧಿಸುವುದನ್ನು ಮರೆಯದಿರಿ.

  ಕುಂಭ: ಜ.21-ಫೆ.18

  ಕುಂಭ: ಜ.21-ಫೆ.18

  ಕುಂಭ ರಾಶಿಯವರಲ್ಲಿ ಪ್ರಬಲ ಬುದ್ಧಿ ಮತ್ತು ಅಧಿಕ ಸ್ವಾತಂತ್ರ್ಯವಿದ್ದರೂ ಸಹಿತ ಭಾವನಾತ್ಮಕವಾಗಿ ಅವರು ತುಂಬಾ ಉತ್ಥಾನದಲ್ಲಿರುವರು ಮತ್ತು ಇದರಿಂದಾಗಿಯೇ ಅವರು ಸಮಸ್ಯೆಗೆ ಸಿಲುಕುವರು. ಇದು ಅವರನ್ನು ಭಾವನಾತ್ಮಕವಾಗಿ ಹಿಂಡಿಹಾಕಬಹುದು. ಇದರಿಂದಾಗಿಯೇ ಅವರು ಏಕಾಂಗಿಯಾರಲು ಬಯಸಬಹುದು.

  ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಸಾಮಾಜಿಕವಾಗಿರಲು ಜೂನ್ ತಿಂಗಳು ಕನ್ಯಾ ರಾಶಿಯವರಿಗೆ ಒಳ್ಳೆಯದು. ಈ ತಿಂಗಳಲ್ಲಿ ನೀವು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂಪರ್ಕ ಸಾಧಿಸಿಕೊಂಡು ಸಾಹಸಿ ಜಗತ್ತಿಗೆ ಕಾಲಿಡಬೇಕು. ಹಿಂದಿನ ಕೆಲವು ಸಂಬಂಧಗಳು ಇವರಿಗೆ ದೊಡ್ಡ ಹೊರೆಯಾಗಿದ್ದವು. ಯಾಕೆಂದರೆ ಇವರು ಬಂಡಾಯವೆದ್ದಿದ್ದರು ಮತ್ತು ಇದರಿಂದಾಗಿಯೇ ಸಂಬಂಧ ಮುರಿದಿರಬಹುದು.

  ಕನ್ಯಾ: ಆ.24-ಸೆ.23

  ಕನ್ಯಾ: ಆ.24-ಸೆ.23

  ಇನ್ನು ಕನ್ಯಾ ರಾಶಿಯವರಿಗೆ ಜೂನ್ ತಿಂಗಳು ಜೀವನದ ಸಮತೋಲನದ ಬಗ್ಗೆ ಅರಿವು ಮೂಡಿಸುತ್ತದೆ ಎನ್ನಲಾಗುವುದು. ಏಕೆಂದರೆ ಇವರು ಈ ತಿಂಗಳಲ್ಲಿ ಗರಿಷ್ಟ ಮಟ್ಟದ ಜೀವನ ಹಾಗೂ ಕನಿಷ್ಠ ಮಟ್ಟದ ಸನ್ನಿವೇಶಗಳನ್ನು ಸಮನಾಗಿ ಅನುಭವಿಸಲಿದ್ದಾರೆ. ಇವರಿಗೆ ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗಿದ್ದರೂ ಸಹ ಕಷ್ಟದ ಸಂದರ್ಭದಲ್ಲಿ ಸನ್ನಿವೇಶವನ್ನು ಎದುರಿಸುವ ಸಾಮಥ್ರ್ಯವನ್ನು ಗ್ರಹಗತಿಗಳು ಕರುಣಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಲ್ಲದೆ ಅನಾವಶ್ಯಕವಾಗಿ ಕಾಡುವ ವಿವಾದಗಳನ್ನು ತಪ್ಪಿಸಲು ಇಂದು ನಿಮಗೆ ಗ್ರಹಗತಿಗಳು ಸಹಾಯ ಮಾಡುವವು. ಕೆಲವು ಸನ್ನಿವೇಶಗಳಲ್ಲಿ ನೀವು ಋಣಾತ್ಮಕ ಅನುಭವವನ್ನು ಅನುಭವಿಸಬೇಕಾಗುವುದು. ದುಷ್ಟಜನರಿಂದ ಅಥವಾ ವಂಚಕರಿಂದ ಆದಷ್ಟು ದೂರವಿರಿ. ಅವರು ನಿಮ್ಮ ಸ್ವಾಭಿಮಾನಕ್ಕೆ ಕುಂದುಂಟುಮಾಡುವರು. ನಿಮ್ಮ ಕರ್ಮಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕಾಗುವುದು. ತಿಂಗಳ ಕೊನೆಯ ಭಾಗದಲ್ಲಿ ನೀವು ಆಧ್ಯಾತ್ಮಿಕ ಚಿಂತನೆಗಳ ಕಡೆಗೆ ಒಲವು ತೋರುವಿರಿ. ಇದರಿಂದ ಮಾನಸಿಕವಾಗಿ ಶಾಂತಿಯು ದೊರೆಯುವುದು. ನಿಮ್ಮ ಪೋಷಕರು ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಳ್ಳಲು ಸಹಾಯ ಮಾಡುತ್ತಾರೆ. ತಿಂಗಳ ಮೊದಲಾರ್ಧದಲ್ಲಿ ಸೂರ್ಯನಿಂದಾಗಿ ಪ್ರಮುಖ ಬದಲಾವಣೆಯನ್ನು ಜೀವನದಲ್ಲಿ ಕಾಣುವಿರಿ. ಹೊಸದನ್ನು ಪ್ರಯತ್ನಿಸುವುದಕ್ಕೆ ಹಿಂಜರಿಯದಿರಿ. ಸಮಯಕ್ಕೆ ಅನುಗುಣವಾಗಿ ನೀವು ಸಾಗುವುದರಿಂದ ಉತ್ತಮ ಬಹುಮಾನವನ್ನು ಹಾಗೂ ಹೆಸರನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ಮಕರ ರಾಶಿಯವರು ತುಂಬಾ ಪ್ರಾಯೋಗಿಕ ಮತ್ತು ವಿವೇಕ ಉಳ್ಳವರು ಆಗಿರುವರು. ಕಳೆದ ಕೆಲವು ತಿಂಗಳಲ್ಲಿ ಅವರು ತಮ್ಮ ಖ್ಯಾತಿಗೆ ತಕ್ಕಂತೆ ಬದುಕಿರುವರು. ಜೂನ್ ತಿಂಗಳಲ್ಲಿ ಅವರು ಸ್ವಸಂಶೋಧನೆ ಮಾಡಿಕೊಳ್ಳಬೇಕಾಗಿದೆ. ಇವರು ಏಕಾಂಗಿಯಾಗಿ ಸ್ವಲ್ಪ ಸಮಯ ಕಳೆಯಬೇಕು ಮತ್ತು ಇದಕ್ಕಾಗಿ ಅವರು ಹಿಂದಿನ ಸಂಬಂಧದಿಂದ ಹೊರಬರುವುದಕ್ಕೆ ಹಿಂಜರಿಯಲ್ಲ.

  ಮಕರ: ಡಿ.23-ಜ.20

  ಮಕರ: ಡಿ.23-ಜ.20

  ಈ ತಿಂಗಳಲ್ಲಿ ನೀವು ಕೆಲಸದ ವಿಚಾರವಾಗಿ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಇದರಿಂದಾಗಿ ಹೆಚ್ಚಿನ ಸಮಯವನ್ನು ನೀವು ಕೆಲಸದಲ್ಲಿ ಕಳೆಯುವಿರಿ. ಮನೆ ಮತ್ತು ಕೆಲಸದ ನಡುವಿನ ಪರಿಪೂರ್ಣ ಸಮತೋಲನವನ್ನು ರಚಿಸುವುದರಿಂದ ಎಲ್ಲಾ ವಿಚಾರದಲ್ಲೂ ಪರಿಪೂರ್ಣತೆಯನ್ನು ಕಾಣಲು ಸಾಧ್ಯವಾಗುವುದು. ಕೆಲಸದ ಒತ್ತಡವು ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಇಂಗಿಸುವುದು. ಸೂರ್ಯನು ನಿಮ್ಮ ರಾಶಿಚಕ್ರದ ಮೇಲೆ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಜೀವನದಲ್ಲಿ ಕಠಿಣವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಜೂನ್ 21ರ ನಂತರ ಕೆಲವು ಸಮಸ್ಯೆಗಳು ನಿಮ್ಮನ್ನು ಸುತ್ತಬಹುದು. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಸಂಚು ಮಾಡಬಹುದು. ಈ ಎಲ್ಲಾ ಪ್ರಕ್ರಿಯೆಯು ನಿಮ್ಮ ಮಾನಸಿಕ ಚಿಂತನೆಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸಂಪನ್ಮೂಲಗಳನ್ನು ನೀವೇ ನಾಶಗೊಳಿಸಬಹುದು ಅಥವಾ ವ್ಯರ್ಥಗೊಳಿಸಬಹುದು. ಅದು ಸಮಯ ಅಥವಾ ಹಣವಾಗಿರಬಹುದು. ಯಾವುದಾದರನ್ನೂ ನಾವು ಕಳೆದುಕೊಂಡ ನಂತರವೇ ಅದರ ಬೆಲೆ ಅರ್ಥವಾಗುತ್ತದೆ. ಅಲ್ಲಿಯವರೆಗೂ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ಅದು ವ್ಯಕ್ತಿ ಅಥವಾ ವಸ್ತುವೇ ಆಗಿರಬಹುದು ಎನ್ನುವುದನ್ನು ನೀವು ತಿಳಿದು ಕೊಳ್ಳುವಿರಿ. ಹೆಚ್ಚಿನ ಶ್ರಮವಿಲ್ಲದೆಯೇ ಪ್ರಗತಿಯನ್ನು ಕಾಣುವಿರಿ. ಧನಾತ್ಮಕ ಪರಿಣಾಮವನ್ನು ಅನುಭವಿಸುವ ನಿಮ್ಮ ಬೌದ್ಧಿಕ ಶಕ್ತಿಯು

  ಸರ್ವಕಾಲಿಕವಾಗಿಯೂ ಉನ್ನತ ಮಟ್ಟದಲ್ಲಿ ಇರುತ್ತದೆ. ಅದು ದೀರ್ಘಕಾಲದ ನಿಮ್ಮ ಗುರಿಯನ್ನು ತಲುಪಲು ಸಹಾಯವಾಗುವದು.

  English summary

  These Zodiac Individuals Are Likely Going To Single This June!

  Why look anywhere else, when astrology helps reveal a lot of details about your life? Wondering if you'll end up being single or finally committed this month? Well, astrology can reveal these minute details. According to our astro experts, there are certain zodiac signs, the individuals of which are likely to end up being single for the month of June. Let us find out which of the zodiac signs are our experts mentioning about, and also check if your zodiac sign is listed here.
  Story first published: Saturday, June 2, 2018, 13:38 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more