For Quick Alerts
ALLOW NOTIFICATIONS  
For Daily Alerts

  ಮನೆಯ ಶಾಂತಿ-ನೆಮ್ಮದಿ ಹೆಚ್ಚಿಸುವ ಪವಿತ್ರ ಆಮೆಯ ಮೂರ್ತಿ

  By Deepu
  |

  ಅನಾದಿ ಕಾಲದಿಂದಲೂ ಭಾರತೀಯರು ಕೆಲವೊಂದು ಪ್ರಮುಖವಾಗಿರುವ ವಿಚಾರಗಳನ್ನು ಪಾಲಿಸಿಕೊಂಡು ಬಂದಿರುವರು. ಇದರಲ್ಲಿ ವಾಸ್ತುಶಾಸ್ತ್ರ ಕೂಡ ಒಂದಾಗಿದೆ. ಭಾರತದಲ್ಲಿ ಮನೆ ಹಾಗೂ ಕಟ್ಟಡವನ್ನು ಕಟ್ಟುವಾಗ ವಾಸ್ತುಶಾಸ್ತ್ರದ ಮೂಲಕ ಅದರ ವಾಸ್ತುಶಿಲ್ಪವನ್ನು ರಚಿಸಲಾಗುತ್ತದೆ. ಪ್ರಕೃತಿಯಲ್ಲಿ ಪ್ರತಿಯೊಂದು ದಿಕ್ಕಿಗೂ ಅದರದ್ದೇ ಆಗಿರುವಂತಹ ಶಕ್ತಿಯಿದೆ. ಇದರಿಂದಾಗಿ ಮನೆಯೊಳಗೆ ಈ ದಿಕ್ಕುಗಳ ಮೂಲವಾಗಿ ಶಕ್ತಿಯು ಹರಿದು ಬರುವುದು.

  ಇದು ಮನೆಯಲ್ಲಿ ವಾಸಿಸುವವರ ಮನಸ್ಥಿತಿ, ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬಿರುವುದು. ಜೀವನದಲ್ಲಿ ಶಕ್ತಿಯ ಪರಿಣಾಮ ಚಕ್ರವು ಚಲಿಸುತ್ತಾ ಇರುವುದು. ಕೆಲವೊಂದು ಸಲ ಜನರು ಇದನ್ನು ಕಡೆಗಣಿಸಿ, ತಮ್ಮ ಇಚ್ಛೆಯಂತೆ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವರು. ಈ ಕಾರಣದಿಂದಾಗಿ ಅವರು ತಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ತಂದುಕೊಳ್ಳುವರು. ಕೆಲವೊಂದು ಜನರು ತಮಗೆ ವಾಸ್ತುಶಾಸ್ತ್ರದ ಮೇಲೆ ನಂಬಿಕೆಯಿಲ್ಲವೆನ್ನುವ ಕಾರಣಕ್ಕಾಗಿ ವಿರುದ್ಧ ದಿಕ್ಕಿನಲ್ಲಿ ಮನೆ ನಿರ್ಮಾಣ ಮಾಡುವರು. ಇಂತಹ ಸಂದರ್ಭದಲ್ಲಿ ಕುಟುಂಬಿಕರಲ್ಲಿ ಜಗಳ, ಮನೆಯಿಂದ ಅನಿಯಂತ್ರಿತವಾಗಿ ಹಣ ಹೊರಹೋಗುವಗುವುದು, ಅನಿಯಮತಿ ಖರ್ಚು ಮತ್ತು ಕೆಲವೊಂದು ಸಲ ಮನೆಯವರ ಅನಾರೋಗ್ಯಕ್ಕೂ ಇದು ಕಾರಣವಾಗುವುದು.

  Sacred Turtle

  ಪ್ರತಿಯೊಂದು ರೋಗಕ್ಕೂ ಮದ್ದಿರುವಂತೆ ಇದಕ್ಕೆ ಕೂಡ ವಾಸ್ತುಶಾಸ್ತ್ರದಲ್ಲಿ ಕೆಲವು ಪರಿಹಾರಗಳು ಇವೆ. ವಾಸ್ತಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳಾದ ಪವಿತ್ರ ಆಮೆ, ಗಾಳಿ ಮದ್ದಲೆಗಳನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರ ಮಾಡಬಹುದು. ಈ ವಸ್ತುಗಳು ಧನಾತ್ಮಕವಾದ ಶಕ್ತಿಯನ್ನು ಮನೆಯೊಳಗೆ ಸೆಳೆದು, ಶಾಂತಿ ಮತ್ತು ಸಮೃದ್ಧಿ ಉಂಟು ಮಾಡುವುದು.

  ವಾಸ್ತುಶಾಸ್ತ್ರ ಮತ್ತು ಫೆಂಗ್ ಶೂಯಿ ಪ್ರಕಾರ ಪವಿತ್ರ ಆಮೆಯ ಮಹತ್ವ

  ವಾಸ್ತುಶಾಸ್ತ್ರದಂತೆ ಚೀನಾದಲ್ಲಿ ಫೆಂಗ್ ಶೂಯಿ ಇದೆ. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರಲು ಪವಿತ್ರ ಆಮೆಯು ತುಂಬಾ ಮಹತ್ವದ್ದು ಎಂದು ಫೆಂಗ್ ಶೂಯಿ ಕೂಡ ಹೇಳುತ್ತದೆ. ಫೆಂಗ್ ಶೂಯಿಯ ಆಮೆಯು ವಿಷ್ಣು ದೇವರಿಗೆ ಸಂಬಂಧಿಸಿದ್ದಾಗಿದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ವಿಷ್ಣು ದೇವರು ಸಮುದ್ರ ಮಂಥನ ಸಮಯದಲ್ಲಿ ಆಮೆಯ ರೂಪ ಧರಿಸಿದ್ದರು ಮತ್ತು ದೇವತೆಗಳಿಗೆ ಸಮುದ್ರ ಮಂಥನದಲ್ಲಿ ಯಶಸ್ವಿಯಾಗಲು ನೆರವಾದರು ಎಂದು ಪುರಾಣಗಳು ಹೇಳುತ್ತವೆ. ಪವಿತ್ರ ಆಮೆ ಕೂಡ ಇದಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ.

  ಆಮೆಯ ಆಕಾರಕ್ಕೆ ಅನುಗುಣವಾಗಿ ಅದರಿಂದ ಸಿಗುವ ಲಾಭಗಳು

  ಮನೆಯಲ್ಲಿ ಈ ಪವಿತ್ರ ಆಮೆಯನ್ನು ಇಡಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ನಿಯಮಗಳನ್ನು ಪಾಲಿಸದೆ ವಿರುದ್ಧ ದಿಕ್ಕಿನಲ್ಲಿ ಇದನ್ನು ಇಟ್ಟರೆ ಆಗ ಇದರಿಂದ ಬರುವಂತಹ ಧನಾತ್ಮಕ ಶಕ್ತಿಯು ನಗಣ್ಯವಾಗುವುದು. ನಿಮಗೆ ವಾಸ್ತುಶಾಸ್ತ್ರ ಪ್ರಕಾರ ಪವಿತ್ರ ಆಮೆ ಮನೆಯಲ್ಲಿ ಇರಿಸಿಕೊಳ್ಳಬೇಕೆಂದರೆ ನಾವು ನಿಮಗೆ ಈ ಮೂಲಕ ನೆರವಾಗುತ್ತೇವೆ.

  1. ಮುಖ್ಯದ್ವಾರದಲ್ಲಿ ಇದನ್ನು ಇಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುವುದು. ಸಣ್ಣಪುಟ್ಟ ಜಗಳಗಳು ಕುಟುಂಬ ಸದಸ್ಯರ ಮಧ್ಯೆ ಉಂಟಾದರೂ ಇದು ದೊಡ್ಡದಾಗದು. ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸದಂತೆ ಇದು ತಡೆಯುವುದು.

  2. ಪೂರ್ವದಲ್ಲಿ ಇದನ್ನು ಇಟ್ಟರೆ ಆಗ ಕುಟುಂಬ ಸದಸ್ಯರ ಆರೋಗ್ಯವು ಉತ್ತಮವಾಗಿರುವುದು.

  3. ಈಶಾನ್ಯವು ಇದನ್ನು ಇಡಬಹುದಾದ ಮತ್ತೊಂದು ಜಾಗ. ಇದರಿಂದ ಮನೆಯಲ್ಲಿ ಹಣದ ಕೊರತೆಯಾಗದು.

  4. ಸ್ಪಟಿಕದ ಆಮೆಯನ್ನು ಮನೆ ಮತ್ತು ಕಚೇರಿಯಲ್ಲಿ ಇಟ್ಟುಕೊಂಡರೆ ಅದರಿಂದ ಹಣದ ಹರಿವು ಉತ್ತಮವಾಗುವುದು.

  5. ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಾ ಇದ್ದರೆ ಆಗ ನೀವು ಮಣ್ಣಿನ ಆಮೆಯನ್ನು ಇಡಬೇಕು.

  6. ಕೆಲವೊಂದು ಸಲ ಎಷ್ಟೇ ಪ್ರಯತ್ನಿಸಿದರೂ ಉದ್ಯೋಗ ಸಿಗುವುದಿಲ್ಲ ಮತ್ತು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲ್ಲ. ಇದಕ್ಕಾಗಿ ಹಿತ್ತಾಳೆಯ ಆಮೆಯನ್ನು ಮನೆಯಲ್ಲಿ ಇಡಬೇಕು. ಇದು ವೃತ್ತಿ ಮತ್ತು ಶೈಕ್ಷಣಿಕವಾಗಿ ನಿಮಗೆ ಯಶಸ್ಸು ಕೊಡುವುದು.

  7. ಸಣ್ಣಪುಟ್ಟ ವಾಗ್ವಾದಗಳು ಪ್ರತಿಯೊಂದು ಮನೆಯಲ್ಲೂ ಇರುವುದು. ಆದರೆ ಈ ವಾಗ್ವಾದವು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಇದನ್ನು ತಡೆಗಟ್ಟಲು ಮತ್ತು ಮನೆಯಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು ಆಮೆಯ ಜೋಡಿಯನ್ನು ಇಡಬೇಕು.

  8. ಹೊಸ ಉದ್ಯಮ ಸ್ಥಾಪಿಸುವ ಮೊದಲು ನಾವು ಶುಭ ಮುಹೂರ್ತ ಕೇಳುತ್ತೇವೆ. ಇದರ ಬಳಿಕ ಹೋಮಹವನ ಮಾಡಿ ನಾವು ಹೊಸ ಉದ್ಯಮವನ್ನು ಆರಂಭಿಸಿ, ಯಶಸ್ಸು ಸಿಗಬೇಕೆಂದು ಪ್ರಯತ್ನಿಸುತ್ತೇವೆ. ಇದಕ್ಕಾಗಿ ನೀವು ತುಂಬಾ ಕಠಿಣ ಪರಿಶ್ರಮ ಪಡುತ್ತಿರುವಂತೆ ನೀವು ಬೆಳ್ಳಿಯ ಆಮೆಯನ್ನು ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇದರಿಂದ ನೀವು ಉದ್ಯಮದಲ್ಲಿ ಆಗುವಂತಹ ನಷ್ಟದಿಂದ ರಕ್ಷಣೆ ಪಡೆದು, ಹೆಚ್ಚಿನ ಲಾಭ ಪಡೆಯಬಹುದು.

  9. ಉದ್ಯಮವು ಬೇಗನೆ ಯಶಸ್ವಿಯಾಗಬೇಕೆಂದಿದ್ದರೆ ಆಗ ನೀವು ಒಂದು ಆಮೆಯ ಮೂರ್ತಿಯನ್ನು ಕಚೇರಿ ಅಥವಾ ಅಂಗಡಿಯಲ್ಲಿ ಇಟ್ಟುಬಿಡಿ. ಮಕ್ಕಳಾಗದೆ ಇರುವಂತಹವರು ಆಮೆಯ ಬೆನ್ನಮೇಲೆ ಆಮೆಯ ಮರಿ ಇರುವ ಮೂರ್ತಿಯನ್ನು ಇಟ್ಟುಕೊಂಡರೆ ಸಂತಾಭಾಗ್ಯ ಸಿಗುವುದು.

  English summary

  The Auspiciousness Of The Sacred Turtle

  Vastu Shastra is one of the ancient disciplines that have originated in India. It relates to the study of architecture of the house or building. It is believed that each direction is associated with some or the other force in nature; this force becomes the reason for certain kind of energy flowing in the house. This energy affects the moods of the inhabitants, which further affects their work or personal life. Thus, the cycle of energy affecting the life goes on. Sometimes, people ignore these simple tips and continue the construction of the house as per their own sweet will.
  Story first published: Saturday, June 2, 2018, 13:16 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more