Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈಕೆ 11ರ ಬಾಲಕಿ, ಆದರೆ ಬರೋಬ್ಬರಿ 6 ಅಡಿ 7 ಇಂಚು ಉದ್ದವಿದ್ದಾಳೆ!
ಹುಡುಗ ಅಥವಾ ಹುಡುಗಿ ಎತ್ತರವಾಗಿದ್ದರೆ ಆಗ ಎಲ್ಲರ ಕಣ್ಣು ಅವರತ್ತ ಹೊರಳುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಜನರ ನಡುವಿಯೂ ಇವರು ಎದ್ದು ಕಾಣುವರು. ಆದರೆ ಮಿತಿಗಿಂತಲೂ ಹೆಚ್ಚು ಉದ್ದನೆ ಬೆಳೆದರೆ ಆಗ ಹೇಗಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ.

ಇಲ್ಲೊಬ್ಬಳು 11ರ ಹರೆಯದ ಬಾಲಕಿಯು ಈಗಲೇ 6 ಅಡಿ 7 ಇಂಚು ಉದ್ದ ಬೆಳೆದಿದ್ದಾಳೆ. ಆಕೆ ಈಗಾಗಲೇ ದಾಖಲೆ ಕೂಡ ಮಾಡಿದ್ದಾಳೆ. ಆದರೆ ಇದನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನವರು ಗುರುತಿಸಲು ಬಾಕಿಯಿದೆ.

ಉದ್ದದ ಹುಡುಗಿ ಎನ್ನುವ ವಿಶ್ವ ದಾಖಲೆಯನ್ನು ಮುರಿದಿದ್ದಾಳೆ
ಜಾಂಗ್ ಝಿಯು ಎಂಬ ಬಾಲಕಿ ಈಗ ವಿಶ್ವದಾಖಲೆ ಹೊಂದಿರುವ ಇಂಗ್ಲೆಂಡ್ನ ಸೌಥ್ ಹ್ಯಾಪ್ಟನ್ ನ 12ರ ಹರೆಯದ ಸೊಫಿ ಹೊಲ್ಲಿನ್ಸ್ ಗಿಂತ ಉದ್ದವಿದ್ದಾಳೆ. ಸೊಫಿಯನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಈಗಾಗಲೇ ಗುರುತಿಸಿದೆ ಮತ್ತು ಆಕೆ ಸುಮಾರು 6 ಅಡಿ 2 ಇಂಚು ಉದ್ದವಿದ್ದಾಳೆ. ಈಗೆ ಜಾಂಗ್ ಗಿಂತ ಕೆಲವು ಇಂಚು ಗಿಡ್ಡಗಿದ್ದಾಳೆ. ಜಾಂಗ್ ನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸದೆ ಇರುವ ಕಾರಣದಿಂದ ಆಕೆಯ ಕುಟುಂಬವು ಇದಕ್ಕಾಗಿ ಮನವಿ ಮಾಡಿದೆಯಾ ಇಲ್ಲವಾ ಎಂದು ತಿಳಿದಿಲ್ಲ.

ಅನುವಂಶೀಯತೆ ಕಾರಣ
ಜಾಂಗ್ ಉದ್ದಗೆ ಬೆಳೆಯಲು ಅನುವಂಶೀಯತೆಯು ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ. ಯಾಕೆಂದರೆ ಆಕೆಯ ಪೋಷಕರು ಸುಮಾರು ಆರು ಅಡಿ ಉದ್ದವಿದ್ದಾರೆ.

ಆಕೆ ಅತೀ ಉದ್ದಗಿನ ಹುಡುಗಿ
ಮೊದಲ ದರ್ಜೆಯಲ್ಲಿ ಕಲಿಯುತ್ತಿರುವಾಗಲೇ ಜಾಂಗ್ ಐದು ಅಡಿ 3 ಇಂಚು ಉದ್ದವಿದ್ದಳು. ಆರನೇ ದರ್ಜೆಯ ಚೀನಾದ ಹುಡುಗಿಯರು ಸಾಮಾನ್ಯವಾಗಿ ನಾಲ್ಕು ಅಡಿ ಆರು ಇಂಚು ಉದ್ದವಿದ್ದಾರೆ.

ಆಕೆ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಲು ಬಯಸಿದ್ದಾಳೆ
ತನ್ನ ಐದನೇ ವಯಸ್ಸಿನಿಂದಲೇ ಜಾಂಗ್ ಬಾಸ್ಕೆಟ್ ಬಾಲ್ ನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದಾಳೆ. ಜಾಂಗ್ ತಾಯಿ ಯು ಯಿಂಗ್ ಕೂಡ ಚೀನಾ ರಾಷ್ಟ್ರೀಯ ತಂಡದ ಮಾಜಿ ವೃತ್ತಿಪರ ಬಾಸ್ಕೆಟ್ ಬಾಲ್ ಆಟಗಾರ್ತಿ. ಈಗ ಅವರು ಶಾಂನ್ ಡಾಂಗ್ ನ ಪ್ರಾಂತೀಯ ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ.

ಆಕೆಯನ್ನು ಮಹಿಳಾ ಯೊ ಮಿಂಗ್ ಎಂದು ಕರೆಯಲಾಗುತ್ತದೆ
ಜಾಂಗ್ ಈಗಾಗಲೇ ತನಗೆ ಪ್ರೇರಣೆಯಾಗಿದ್ದ ಲೆಬ್ರೊನ್ ಜೇಮ್ಸ್ ಅವರಿಗಿಂತ ಎರಡು ಇಂಚು ಉದ್ದ ಬೆಳೆದಿದ್ದಾರೆ ಮತ್ತು ಎನ್ ಬಿಎ ಆಟಗಾರರ ಸರಾಸರಿ ಉದ್ದಗಿಂತ ಮೂರು ಇಂಚು ಉದ್ದಗಿದ್ದಾರೆ. ಆಕೆಯನ್ನು ಈಗಾಗಲೇ ಮಹಿಳಾ ಯೊ ಮಿಂಗ್ ಎಂದು ಕರೆಯಲಾಗುತ್ತಿದೆ.

ಆಕೆಗೂ ಸ್ಪರ್ಧೆಯಿದೆ
ಚೀನಾಚ ಸಿಚುಯಾನ್ ಪ್ರಾಂತ್ಯದ ಲೆಶನ್ ಎನ್ನುವ ಪ್ರದೇಶದಿಂದ 11ರ ಹರೆಯದ ರೆನ್ ಕೆಯು ಎಂಬ ಬಾಲಕ ಈಗಾಗಲೇ ಆರು ಅಡಿ 9 ಇಂಚು(2.06ಮೀ.) ಉದ್ದಗಿದ್ದಾನೆ. ಜಾಂಗ್ ಉದ್ದಗೆ ಬೆಳೆಯುತ್ತಿರುವ ವೇಗವನ್ನು ನೋಡಿದರೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಗುರುತಿಸಿಕೊಳ್ಳಲು ಆಕೆಗೆ ಸ್ಪರ್ಧೆಯಿದೆ. ಈ ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಸೆಕ್ಸನ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
