For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಗ್ಗೆ ಇರುವ ಈ ವಿಷಯಗಳನ್ನು ನಿಮ್ಮಲ್ಲಿ ಯಾರೂ ಹೇಳುವುದಿಲ್ಲ!

By Deepu
|

ಸಾಮಾನ್ಯವಾಗಿ ಲೈಂಗಿಕ ಮಾಹಿತಿಗಳನ್ನು ನೀಡುವಾಗ ನಾವೆಲ್ಲರೂ ಮಡಿವಂತಿಕೆಯನ್ನು ಅನುಸರಿಸುತ್ತೇವೆ ಹಾಗೂ ಭಾರತದಲ್ಲಿ ಈ ಬಗ್ಗೆ ಮುಕ್ತವಾಗಿ ಚರ್ಚಿಸುವುದನ್ನು ಇಂದಿಗೂ ಒಂದು ಬಗೆಯ ಸ್ವಚ್ಛಂದತೆಯೆಂದೇ ಪರಿಗಣಿಸಲಾಗುತ್ತದೆ. ಆದರೆ ಲೈಂಗಿಕ ಮಾಹಿತಿಯ ಕೊರತೆಯಿಂದಾಗಿಯೇ ಈ ವಿಶ್ವದಲ್ಲಿ ಪ್ರತಿ ನಿಮಿಷಕ್ಕೂ ಸಂಭವಿಸುವ ಅತ್ಯಾಚಾರ ಪ್ರಕರಣಗಳ ಬಗ್ಗೆ ನೋಡಿದಾಗ ಈ ಮಡಿವಂತಿಕೆಯನ್ನು ಮೀರುವುದು ಅಗತ್ಯ ಎನಿಸುತ್ತವೆ.

ಇಂದಿನ ಲೇಖನದಲ್ಲಿ ಜನಸಾಮಾನ್ಯರು ಲೈಂಗಿಕ ವಿಷಯದ ಬಗ್ಗೆ ಎಂದಿಗೂ ಚರ್ಚಿಸದ, ಆದರೆ ಲೈಂಗಿಕ ಜೀವನಕ್ಕೆ ಅತಿ ಅಗತ್ಯವಾದ ಕೆಲವು ಸಂಗತಿಗಳನ್ನು ವಿವರಿಸಲಾಗಿದೆ. ಪ್ರತಿಯೊಬ್ಬರೂ ಈ ವಿಷಯಗಳನ್ನು ತಿಳಿದುಕೊಂಡಿರಬೇಕಾಗಿರುವುದು ಅಗತ್ಯವಾಗಿದೆ. ಯಾರೋ ಹೇಳಿದ, ಎಲ್ಲೋ ಓದಿದ ಮಾಹಿತಿಗಳು ಅರ್ಧಂಬರ್ಧ ಅರ್ಥವಾಗಿ ಇದೇ ಸ್ಥಿತಿಯಲ್ಲಿ ಲೈಂಗಿಕ ಕ್ರಿಯೆಗೆ ಮುಂದಾದರೆ ಎಡವಟ್ಟು ಖಂಡಿತಾ! ಬನ್ನಿ, ಯಾರೂ ಇದುವರೆಗೆ ಹೇಳದ ಈ ಕಡ್ಡಾಯ ಮಾಹಿತಿಗಳನ್ನು ಅರಿಯೋಣ ಹಾಗೂ ಹಂಚಿಕೊಳ್ಳೋಣ....

ಮೊದಲ ಬಾರಿ ಸೆಕ್ಸ್ ನಲ್ಲಿ ರಕ್ತದ ಕಲೆಗಳಿರಬೇಕೆಂದಿಲ್ಲ

ಮೊದಲ ಬಾರಿ ಸೆಕ್ಸ್ ನಲ್ಲಿ ರಕ್ತದ ಕಲೆಗಳಿರಬೇಕೆಂದಿಲ್ಲ

ಈ ವಿಷಯದ ಬಗ್ಗೆ ಈಗಾಗಲೇ ಹಲವಾರು ಮಾಹಿತಿಗಳು ಸ್ಪಷ್ಟಪಡಿಸಿದ್ದರೂ ಜನಸಾಮಾನ್ಯರಲ್ಲಿ ಹಾಗೂ ಹಲವಾರು ಸಂಪ್ರದಾಯಗಳಲ್ಲಿ ಇಂದಿಗೂ ಪ್ರಥಮ ಮಿಲನದಲ್ಲಿ ಹಾಸಿಗೆಯಲ್ಲಿ ರಕ್ತದ ಕಲೆಗಳು ಇದ್ದೇ ಇರಬೇಕೆಂಬ ಮಿಥ್ಯಯನ್ನು ಅನುಸರಿಸುತ್ತಿದ್ದಾರೆ. ಆದರೆ ಪ್ರಥಮ ಸೆಕ್ಸ್ ನಲ್ಲಿ ರಕ್ತಸ್ರಾವ ಆಗಲೇಬೇಕೆಂಬ ನಿಯಮವಿಲ್ಲ ಹಾಗೂ ರಕ್ತಸ್ರಾವವಾಗದೇ ಇದ್ದಲ್ಲಿ ಇದು ಪ್ರಥಮ ಸಮಾಗಮವಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಇಂದಿಗೂ ಎಷ್ಟೋ ಸಂಪ್ರದಾಯಗಳಲ್ಲಿ ಇಂದಿಗೂ ಪ್ರಥಮ ಮಿಲನದಲ್ಲಿ ಪರಿಣಾಮ ರಕ್ತಸ್ರಾವದ ಮೂಲಕವೇ ಪ್ರಕಟಗೊಳ್ಳಬೇಕು ಎಂದು ತಿಳಿದುಕೊಂಡು ವಧೂವರರು ಮಲಗಿದ ಹಾಸಿಗೆಯಲ್ಲಿ ರಕ್ತದ ಕಲೆಗಳನ್ನು ಹುಡುಕಲಾಗುತ್ತದೆ! ಆದರೆ ವೈಜ್ಞಾನಿಕವಾಗಿ ಪ್ರತಿ ಸಂದರ್ಭದಲ್ಲಿಯೂ ಹೀಗೇ ಆಗಬೇಕೆಂದು ಇಲ್ಲ ಹಾಗೂ ಪ್ರಥಮ ಸೆಕ್ಸ್ ನಲ್ಲಿ ರಕ್ತಸ್ರಾವ ಆಗಲೇಬೇಕೆಂದೂ ಇಲ್ಲ. ರಕ್ತಸ್ರಾವ ಆಗದೇ ಇದ್ದುದು ಇದು ಪ್ರಥಮ ಸಮಾಗಮವಲ್ಲ ಎಂಬುದಕ್ಕೆ ಸಾಕ್ಷಿಯೂ ಅಲ್ಲ!

ಲೈಂಗಿಕೆ ಕ್ರಿಯೆಯ ಬಳಿಕ ಅಸ್ತವ್ಯಸ್ತವಾಗುವುದು ಸಾಮಾನ್ಯ

ಲೈಂಗಿಕೆ ಕ್ರಿಯೆಯ ಬಳಿಕ ಅಸ್ತವ್ಯಸ್ತವಾಗುವುದು ಸಾಮಾನ್ಯ

ಲೈಂಗಿಕ ಕ್ರಿಯೆ ಕೇವಲ ಮೋಜಿಗಾಗಿ ಅಲ್ಲ, ಬದಲಿಗೆ ಪರಸ್ಪರ ಒಳಗೊಳ್ಳುವ ಕ್ರಿಯೆಯಾಗಿದೆ. ಈ ಕಾರ್ಯದಲ್ಲಿ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದ್ದು ಬಳಿಕ ಸ್ವಚ್ಛತೆ ಹಾಗೂ ಒಪ್ಪ ಓರಣವಾಗಿಸಿಯೇ ನಿರ್ಗಮಿಸುವುದು ಅಗತ್ಯ. ಸಾಮಾನ್ಯವಾಗಿ ದಂಪತಿಗಳಿಬ್ಬರೂ ಪರಸ್ಪರರ ಪ್ರೀತಿಯಿಂದ ನಿರೀಕ್ಷಿಸುವ ಯಾವುದೇ ಚಟುವಟಿಕೆಗೆ ತಡೆಯಿಲ್ಲದೇ ನೀಡುವ ಸಹಕಾರಕ್ಕಾಗಿ ಓರಣದ ಬಗ್ಗೆ ಗಮನ ನೀಡಲು ಸಾಧ್ಯವಿಲ್ಲ. ಆದರೆ ಆಪ್ತಸಮಯ ಕಳೆದ ಬಳಿಕ ಮಾತ್ರ ಮೊದಲಿನ ಓರಣದಲ್ಲಿ ಇರಿಸಲು ಮಾತ್ರ ಮರೆಯಬಾರದು.

ಪ್ರತಿ ಬಾರಿಯೂ ಸಂಭೋಗವೇ ಆಗಬೇಕೆಂದಿಲ್ಲ!

ಪ್ರತಿ ಬಾರಿಯೂ ಸಂಭೋಗವೇ ಆಗಬೇಕೆಂದಿಲ್ಲ!

ದಂಪತಿಗಳ ನಡುವೆ ಅನ್ಯೋನ್ಯತೆಗೆ ಲೈಂಗಿಕ ಸಂಪರ್ಕವೇ ಎಲ್ಲವೂ ಅಲ್ಲ! ಅಲ್ಲದೇ ದೈಹಿಕ ಸಂಪರ್ಕದಲ್ಲಿ ಪರಸ್ಪರ ಅಪ್ಪುಗೆ, ತೀಡನೆ ಹಾಗೂ ದೇಹದ ಇತರ ಭಾಗಗಳ ಮರ್ದನ ಹಾಗೂ ಚಂದ್ರನಾಡಿತೀಡನೆಯಿಂದಲೂ ಲೈಂಗಿಕ ಪರಾಕಾಷ್ಠೆಯನ್ನು ಪಡೆಯಬಹುದು.

ಇಬ್ಬರಲ್ಲಿ ಒಬ್ಬರೇ ಮುಲುಗಬೇಕೆಂದಿಲ್ಲ

ಇಬ್ಬರಲ್ಲಿ ಒಬ್ಬರೇ ಮುಲುಗಬೇಕೆಂದಿಲ್ಲ

ಸಾಮಾನ್ಯವಾಗಿ ಮುಲುಕಾಟದ ಸದ್ದು ಬಂದರೆ ಮಾತ್ರವೇ ಲೈಂಗಿಕ ತೃಪ್ತಿ ಸಿಕ್ಕ ರಸೀದಿ ಎಂದು ಹಲವರು ಭಾವಿಸಿದ್ದಾರೆ. ಆದರೆ ಸಮಾಗಮದ ಸಮಯದಲ್ಲಿ ಮುಲುಕಾಟದ ಸದ್ದಿಗಿಂತಲೂ ಸವರುವ, ಬೆರಳಾಟ ಮೊದಲಾದ ಸದ್ದುಗಳು ಮನಸ್ಸಿಗೆ ಮುದವನ್ನೂ ನೀಡುತ್ತವೆ ಹಾಗೂ ಸಂಗಾತಿಯ ಗಮನವನ್ನು ಸೆಳೆಯಲೂ ನೆರವಾಗುತ್ತದೆ.

ಒಂದೇ ಭಂಗಿಯೇ ಆಗಬೇಕೆಂದಿಲ್ಲ!

ಒಂದೇ ಭಂಗಿಯೇ ಆಗಬೇಕೆಂದಿಲ್ಲ!

ಇಬ್ಬರಿಗೂ ಹಿತವೆನಿಸುವ ಯಾವುದೇ ಭಂಗಿಗಳನ್ನು ಅನುಸರಿಸುವುದು ಸೂಕ್ತವಾಗಿದೆ. ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ನೋಡಿರುವುದಕ್ಕಿಂತಲೂ ಇದು ಹೆಚ್ಚು ಕ್ಲಿಷ್ಟವಾಗಿದ್ದು ಸಾಮಾನ್ಯ ಚಲನಗಳಲ್ಲಿ ಮೊಣಕೈ ಸಂಗಾತಿಯ ಮುಖಕ್ಕೆ ಬಡಿಯುವುದೋ, ತಲೆ ಹಿಂದಿನ ಗೋಡೆಗೆ ಹೊಡೆಯುವುದೋ, ಜಾರಿ ಬಿದ್ದು ಪೆಟ್ಟಾಗುವುದೋ ಮೊದಲಾದ ಅಪಾಯಗಳು ಎದುರಾಗಬಹುದು ಹಾಗೂ ಇದು ಲೈಂಗಿಕ ಕ್ರಿಯೆಯ ಸರಸವನ್ನೇ ಕುಂದಿಸಬಹುದು. ಸಾಮಾನ್ಯವಾಗಿ ಇಂತಹ ಅಪಘಾತಗಳಿಗೆ ಎದುರಾದವರು ಗೋಪ್ಯತೆಯನ್ನು ಕಾಪಾಡಿಕೊಳ್ಳುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರ ಹೊರತಾಗಿ ಇತರರಿಗೆ ಹೀಗಾಗಿರುವುದೇ ಗೊತ್ತಿರುವುದಿಲ್ಲ.

ಲೈಂಗಿಕ ಕ್ರಿಯೆಯಲ್ಲಿ ವಾಸನೆಯೂ ಅನಿವಾರ್ಯ!!

ಲೈಂಗಿಕ ಕ್ರಿಯೆಯಲ್ಲಿ ವಾಸನೆಯೂ ಅನಿವಾರ್ಯ!!

ಲೈಂಗಿಕ ಕ್ರಿಯೆಯಲ್ಲಿ ದೇಹದಿಂದ ಸ್ರವಿಸುವ ಕೆಲವಾರು ಸ್ರಾವಗಳು ತಮ್ಮದೇ ಆದ ಕಮಟು ವಾಸನೆಯನ್ನು ಹೊಂದಿರುತ್ತವೆ ಹಾಗೂ ಇವು ಗಾಳಿಯಲ್ಲಿ ಪಸರಿಸುತ್ತವೆ. ಇದು ಕೆಟ್ಟ ವಾಸನೆಯೇನೂ ಅಲ್ಲದಿದ್ದರೂ ಈ ವಾಸನೆಯನ್ನು ಗ್ರಹಿಸಿದವರು ಕೊಂಚ ಹೊತ್ತಿನ ಹಿಂದೆ ಈ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆದಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾಗಿ ಲೈಂಗಿಕ ಕ್ರಿಯೆಯ ಬಳಿಕ ನಿಮ್ಮ ಮನೆಗೆ ಅತಿಥಿಗಳು ಅಥವಾ ಕೋಣೆಯನ್ನು ಹಂಚಿಕೊಳ್ಳುವ ಸಹವರ್ತಿಗಳು ಆಗಮಿಸುವವರಿದ್ದರೆ ಈ ಬಗ್ಗೆ ಎಚ್ಚರವಿರಲಿ.

ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ

ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜನೆ ಅಗತ್ಯ

ಹೌದು! ಇದು ತುಂಬಾ ಅಗತ್ಯವಾಗಿದೆ. ಈ ಮೂಲಕ ಅನಗತ್ಯ ಹಾಗೂ ಸೋಂಕುಕಾರಕ ಬ್ಯಾಕ್ಟೀರಿಯಾಗಳು ಮಹಿಳೆಯ ಗರ್ಭಕೋಶದತ್ತ ತೆರಳದಂತೆ ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಲೈಂಗಿಕ ಕ್ರಿಯೆಯ ಬಳಿಕ ಮೂತ್ರವಿಸರ್ಜಿಸುವುದು ಅನಿವಾರ್ಯ. ವಿಶೇಷವಾಗಿ ಪ್ರತಿ ಮಹಿಳೆಯೂ ಲೈಂಗಿಕ ಕ್ರಿಯೆಯ ಬಳಿಕ ಕಡ್ಡಾಯವಾಗಿ ಮೂತ್ರ ವಿಸರ್ಜಿಸಲೇಬೇಕು. ಸಾಮಾನ್ಯವಾಗಿಮಿಲನದ ಸಮಯದಲ್ಲಿ ಎಷ್ಟು ಬೇಡವೆಂದರೂ, ಯಾವುದೇ ಕ್ರಮ ಕೈಗೊಂಡರೂ ಕೆಲವಾರು ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸಿಯೇ ಇರುತ್ತವೆ. ಈ ಭಾಗ ತೇವಭರಿತವಾಗಿರುವ ಕಾರಣ ಬ್ಯಾಕ್ಟೀರಿಯಾಗಳಿಗೆ ಸೂಕ್ತ ಮನೆ ದೊರತಂಗಾಗುತ್ತದೆ ಹಾಗೂ ಇವು ಶೀಘ್ರವಾಗಿ ಅಭಿವೃದ್ದಿಗೊಂಡು ಜನನಾಂಗದ ಮೂಲಕ ದೇಹದ ಇನ್ನಷ್ಟು ಒಳಭಾಗವನ್ನು ಪ್ರವೇಶಿಸಿ ಭಾರೀ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ಈ ಬ್ಯಾಕ್ಟೀರಿಯಾಗಳನ್ನು ಬಾಗಿಲ ಹೊಸ್ತಿಲಿನಿಂದಲೇ ಒದ್ದು ಓಡಿಸಲು ಸುಲಭವಾದ ಮಾರ್ಗವೆಂದರೆ ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜಿಸುವುದು. ಈ ಕೆಲಸ ಇನ್ನಷ್ಟು ಸುಲಭವಾಗಿಸಲು ಮಿಲನಕ್ಕೂ ಅರ್ಥ ಅಥವಾ ಒಂದು ಘಂಟೆ ಮುನ್ನ ಚೆನ್ನಾಗಿ ನೀರು ಕುಡಿಯಬೇಕು.

ಲೈಂಗಿಕ ಕ್ರಿಯೆಯಲ್ಲಿ ಮುಖದಲ್ಲಿ ವ್ಯಂಗ್ಯ ಸೂಚಿಸುವುದು

ಲೈಂಗಿಕ ಕ್ರಿಯೆಯಲ್ಲಿ ಮುಖದಲ್ಲಿ ವ್ಯಂಗ್ಯ ಸೂಚಿಸುವುದು

ಕೆಲವೊಮ್ಮೆ ಲೈಂಗಿಕ ಕ್ರಿಯೆಯ ಸಮಯದಲ್ಲಿ ಸಂಗಾತಿಯ ಮುಖದಲ್ಲಿ ಬಗೆಬಗೆಯ ಭಾವನೆಗಳು ವ್ಯಕ್ತವಾಗುತ್ತಿದ್ದು ಇವುಗಳಲ್ಲಿ ವ್ಯಂಗ್ಯದ ಭಾವನೆಯೂ ಇದ್ದರೆ ಇದು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದ್ದರಿಂದ ಈ ಸಮಯದಲ್ಲಿ ಕತ್ತಲಿರುವಂತೆ ನೋಡಿಕೊಳ್ಳುವುದು ಅವಶ್ಯ.ಈ ಲೇಖನದ ವಿವರಗಳು ಇಷ್ಟವಾಯಿತೇ? ಇಂತಹ ಇನ್ನಷ್ಟು ರೋಚನ ಮಾಹಿತಿಗಳಿಗಾಗಿ ಈ ಪುಟವನ್ನು ಆಗಾಗ ಗಮನಿಸುತ್ತಿರಿ.

English summary

Secrets Things Nobody Told You Ever About Sex

There are many things that people do not reveal about sex. This is because talking or discussing about the issue is still considered to be a taboo, in a world where rape happens every other minute. Here, in this article, we are about to share some of the things that people never discuss about sex and lovemaking. These are the things that everyone needs to know about the act before they indulge in it with half knowledge! Check out on some of these untold facts about lovemaking...
X
Desktop Bottom Promotion