For Quick Alerts
ALLOW NOTIFICATIONS  
For Daily Alerts

  2018 ಜೂನ್ ತಿಂಗಳ ವೃಶ್ಚಿಕ ರಾಶಿಯ ಭವಿಷ್ಯ

  |

  ಭವಿಷ್ಯ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಏನೋ ಒಂದು ಬಗೆಯ ಕುತೂಹಲ ಹಾಗೂ ಏನಾದರೂ ಒಳ್ಳೆಯದಾಗಬಹುದು ಎನ್ನುವ ಹಂಬಲ. ಹೌದು, ವೃಶ್ಚಿಕ ರಾಶಿಯವರ ಜೂನ್ ತಿಂಗಳ ಭವಿಷ್ಯ ಅನುಕೂಲಕರವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮ ಮಾರ್ಗದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಎದುರಾಗಬಹುದು. ಆದರೆ ಅವು ಬಹಳ ಸುಲಭವಾಗಿ ನಿವಾರಣೆಯಾಗುತ್ತವೆ. ಈ ತಿಂಗಳ ಧನಾತ್ಮಕ ಫಲಿತಾಂಶ ಎಂದರೆ ನಿಮ್ಮ ಸಾಂದ್ರತೆಯು ಗಮನಾರ್ಹವಾಗಿ ಸುಧಾರಣೆಗೊಳ್ಳುತ್ತವೆ.

  ನಿಮ್ಮ ಭವಿಷ್ಯ ಹಾಗೂ ಪರಿಸ್ಥಿತಿಯ ಅಡಿಯಲ್ಲಿ ನೀವು ಎಷ್ಟು ವಿಶಾಲವಾದ ಮನಃಸ್ಥಿತಿಯನ್ನು ಹೊಂದಿರುತ್ತೀರಿ ಎನ್ನುವುದರ ಮೇಲೆ ನಿಮ್ಮ ಸಂತೋಷದ ಜೀವನ ನಿರ್ಣಯವಾಗುವುದು. ನೀವು ವಿಷಯಗಳನ್ನು ಹೇಗೆ ಸ್ವೀಕರಿಸುತ್ತೀರಿ? ಹಾಗೂ ಅದರ ನಿರ್ವಹಣೆಗೆ ನಿಮ್ಮ ಮನಃಸ್ಥಿತಿ ಹೇಗಿರುತ್ತದೆ ಎನ್ನುವುದರ ಆಧಾರದ ಮೇಲೆ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಬರುವ ಕಠಿಣ ಸಂದರ್ಭಗಳು ಸಲೀಸಾಗಿ ನಿರ್ವಹಣೆ ಹೊಂದುವವು. ನಿಮ್ಮ ಸಂವಹನ ಮಾರ್ಗವು ಸಹ ಉತ್ತಮವಾಗಿರುತ್ತದೆ.

  ಅಲ್ಲದೆ ಜೀವನದಲ್ಲಿ ಬಾಕಿ ಇರುವ ಕೆಲಸ ಕಾರ್ಯಗಳ ಮೇಲೂ ಗಮನ ಹರಿಸಬಹುದು. ನಿಮ್ಮ ಅಧೀನದಲ್ಲಿರುವ ಸದಸ್ಯರೊಂದಿಗೆ ಹಾಗೂ ಮೇಲಾಧಿಕಾರಿಗಳೊಂದಿಗೂ ಮೃದುವಾದ ಸಂಬಂಧವನ್ನು ನಿರ್ವಹಿಸುವಿರಿ. ನಿಮ್ಮ ಆರೋಗ್ಯ, ಆರ್ಥಿಕ ಸ್ಥಿತಿ, ಪ್ರೀತಿಯ ಜೀವನ ಹಾಗೂ ವೃತ್ತಿ ಕ್ಷೇತ್ರದಲ್ಲಿ ಯಾವೆಲ್ಲಾ ಬದಲಾವಣೆಯನ್ನು ಕಾಣುವಿರಿ ಎನ್ನುವುದನ್ನು ಈ ಮುಂದಿರುವ ವಿವರಣೆಯನ್ನು ಓದಿ ತಿಳಿಯಿರಿ...

  Scorpion

  ಆರೋಗ್ಯ ಸ್ಥಿತಿ

  ನಿಮ್ಮ ಆರೋಗ್ಯ ಸ್ಥಿತಿಯು ಈ ತಿಂಗಳು ಸ್ವಲ್ಪ ಮಟ್ಟಿಗೆ ಕುಸಿತವನ್ನು ಕಾಣುತ್ತದೆ ಎನ್ನಬಹುದು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಮನೆಯವರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆಯೂ ಚಿಂತೆ ಮಾಡುವ ಅವಶ್ಯಕತೆ ಇರುವುದು. ಎಲ್ಲರಿಗೂ ನಿಯಮಿತವಾದ ಆರೋಗ್ಯ ತಪಾಸಣೆ ಮಾಡಿಸುವುದು ಸೂಕ್ತ. ಆದಷ್ಟು ದೈಹಿಕ ವಿಶ್ರಾಂತಿ ಪಡೆದುಕೊಳ್ಳುವುದರ ಬಗ್ಗೆ ಚಿಂತಿಸಿ. ಬಹಳ ಒತ್ತಡದ ಕೆಲಸದ ವೇಳಾಪಟ್ಟಿಯನ್ನು ಹೊಂದಿದ್ದರೆ ಸ್ವಲ್ಪ ಮಟ್ಟಿಗೆ ಸಡಿಲ ಅಥವಾ ವಿಶ್ರಾಂತಿ ಪಡೆಯಲು ಮರೆಯದಿರಿ. ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದವರು ಕೆಲವು ಪರಿಹಾರಗಳನ್ನು ಕಂಡುಕೊಳ್ಳುವರು. ನೀವು ಕೆಲವು ನೈಜ ಕಾಳಜಿಗಳ ಬಗ್ಗೆ ಸೂಕ್ತ ಗಮನ ನೀಡಬೇಕು. ಆಗ ಸ್ವಲ್ಪ ಚೇತರಿಕೆ ಕಾಣುವಿರಿ. ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ನಿಮಗೊಂದು ಆಸ್ತಿ ಎನ್ನುವುದನ್ನು ಮರೆಯದಿರಿ. ಈ ನಿಟ್ಟಿನಲ್ಲಿ ಸಮಸ್ಯೆ ಇರುವಾಗ ನಿಮ್ಮ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ಹಾಗೂ ಆರೈಕೆಗೆ ಒಳಗಾಗುವುದು ಉತ್ತಮ.

  ವೃತ್ತಿ ಜೀವನ

  ಈ ತಿಂಗಳು ವೃತ್ತಿ ಜೀವನದಲ್ಲಿ ನಿಮಗೆ ಕೊಂಚ ಸಂತೋಷ ನೀಡುವುದು. ಏಕೆಂದರೆ ನಿಮ್ಮ ಕೆಲಸಗಳಿಗೆ ಹಾಗೂ ಹೊಸ ಯೋಜನೆಗಳಿಗೆ ಸಾಕಷ್ಟು ಅವಕಾಶಗಳು ದೊರೆಯುವುದು. ನಿಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚಿನ ಬೆಳವಣಿಗೆ ಹಾಗೂ ಸುಧಾರಣೆಯನ್ನು ಕಾಣುವಿರಿ. ಕಚೇರಿಯ ಕೆಲಸದಲ್ಲಿ ಭಾರವಾದ ಬದಿಯನ್ನು ನೀವು ಹೊಂದಿರುವುದಿಲ್ಲ. ಏಕೆಂದರೆ ಅವುಗಳು ನಿಮ್ಮ ಕೆಲಸದಲ್ಲಿ ಹೊರೆ ಎನಿಸಿಕೊಳ್ಳುವುದಿಲ್ಲ. ನೀವು ನಿರೀಕ್ಷಿಸಿದಂತೆ ಫಲ ದೊರೆಯದೆ ಇರಬಹುದು. ಆದರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ.ನಿಮ್ಮ ವೃತ್ತಿ ಜೀವನದಲ್ಲಿ ಈ ತಿಂಗಳು ಒಂದು ವಿಚಲನೆಯನ್ನು ಕಾಣುವಿರಿ. ಆ ಸಮಯದಲ್ಲಿ ನೀವು ಪರಿಣಿತಿಯನ್ನು ಹೊಂದಲು ಪ್ರಚೋದನೆಗೆ ಒಳಗಾಗಬಹುದು. ಈ ತಿಂಗಳು ನಿಮ್ಮ ಅದೃಷ್ಟವು ಅಷ್ಟಾಗಿ ಉತ್ತಮವಾಗಿರದೆ ಇರಬಹುದು. ಅಂದರೆ ನಿಮ್ಮ ನಕ್ಷತ್ರವು ನಿಮಗೆ ಅಷ್ಟು ಅನುಕೂಲಕರ ಪರಿಣಾಮವನ್ನು ನೀಡದು. ಹೊಸ ಯೋಜನೆಯನ್ನು ಕೈಗೊಳ್ಳುವ ಮೊದಲು ಸೂಕ್ತ ಚಿಂತನೆ ಹಾಗೂ ಸಂದರ್ಭಗಳ ನಿಭಾಯಿಸುವುದರ ಬಗ್ಗೆ ಸಿದ್ಧರಾಗಿ. ಹೊಸ ವ್ಯವಹಾರ ಪ್ರಾರಂಭಿಸುವ ಮೊದಲು ಹಿರಿಯರ ಸಲಹೆಯನ್ನು ಪಡೆಯಲು ಮರೆಯದಿರಿ.

  Scorpion

  ಆರ್ಥಿಕ ಸ್ಥಿತಿ

  ಈ ತಿಂಗಳು ಹಣಕಾಸಿನ ವಿಚಾರದಲ್ಲಿ ನಿಮಗೆ ಅಷ್ಟು ಅನುಕೂಲಕರವಾದ ಸಮಯವಲ್ಲ ಎನ್ನಬಹುದು. ಈ ತಿಂಗಳು ಹಿಂದಿನ ತಿಂಗಳಿಗಿಂತ ಸ್ವಲ್ಪ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ಈಗಾಗಲೇ ನೀವು ಯೋಜಿಸಿರುವ ರೀತಿಯಲ್ಲಿ ಹಣಕಾಸಿನ ಸ್ಥಿತಿ ಇರದು. ವ್ಯಾಪಾರ ಮತ್ತು ವಿತ್ತೀಯ ಪ್ರಯೋಜನಗಳಿಗಾಗಿ ಸಾಕಷ್ಟು ಶ್ರಮಿಸಬೇಕಾಗುವುದು. ಕೆಲವು ಪ್ರಮುಖ ವಹಿವಾಟಿನಲ್ಲಿ ಹಿನ್ನೆಡೆಯನ್ನು ಅನುಭವಿಸಬೇಕಾಗುವುದು.ವಿದೇಶ ವ್ಯವಹಾರ ಅಥವಾ ಆಮದು ರಫ್ತುಗಳ ವ್ಯವಹಾರದಿಂದ ದೂರ ಇರುವುದು ಕ್ಷೇಮ. ನೀವು ಹಣವನ್ನು ಹೇಗೆ ವ್ಯಯಿಸಬೇಕು ಎನ್ನುವುದು ತಿಳಿದಿದೆಯಾದರೂ ನಿಮ್ಮ ನಿಯಂತ್ರಣದಲ್ಲಿರದೆ ಹಣ ಖರ್ಚಾಗುವುದು. ಸಾಲವನ್ನು ಮರುಪಾವತಿಸಲು ನೀವು ಮುಂದಾಗುವಿರಿ. ಆ ಕೆಲಸವು ಅನಿರೀಕ್ಷಿತ ರೀತಿಯಲ್ಲಿ ಕೈಗೂಡುವ ಸಾಧ್ಯತೆಗಳಿವೆ. ಅನಿರೀಕ್ಷಿತ ಲಾಭವು ದೊರೆಯುವ ಸಾಧ್ಯತೆಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರ ಊಹಿಸುತ್ತದೆ.

  ಪ್ರೀತಿಯ ಜೀವನ

  ಪ್ರೀತಿಯ ಜೀವನದಲ್ಲಿ ಅಥವಾ ಸಂಬಂಧಗಳಲ್ಲಿ ನೀವು ಒಂದಿಷ್ಟು ಬದ್ಧತೆಯನ್ನು ಹೊಂದಿರುವಿರಿ. ಗ್ರಹಗತಿಗಳ ಸಹಕಾರ ಅಷ್ಟಾಗಿ ಅನುಕೂಲಕರವಾಗಿರದೆ ಇರುವುದರಿಂದ ಸಂಗಾತಿಯೊಂದಿಗೆ ನಿರಾಶೆಗೆ ಒಳಗಾಗುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ನಡುವೆ ತುಸು ವೈಮನಸ್ಸು ಅಥವಾ ಕಹಿಯಾದ ಸ್ಥಿತಿ ಉಂಟಾಗಬಹುದು. ನಿಮ್ಮ ನಡವಳಿಕೆಯು ನಿಮ್ಮ ಸಂಬಂಧದಲ್ಲಿ ಒತ್ತಡವನ್ನು ಉಂಟುಮಾಡಬಹುದು. ಇಬ್ಬರಿಂದಲೂ ನಕಾರಾತ್ಮಕ ವರ್ತನೆ ಇರುವುದರಿಂದ ಕೊಂಚ ಬೇಸರ ಉಂಟಾಗಬಹುದು. ನಿಮ್ಮ ಭಾವನೆಗಳನ್ನು ಸ್ವಲ್ಪ ನಿಯಂತ್ರಣದಲ್ಲಿ ಇಡಬೇಕು. ಸಂದರ್ಭಗಳನ್ನು ಅರಿತು ನಡೆಯುವುದನ್ನು ಅರಿಯಬೇಕಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಒಂದಿಷ್ಟು ಸಮಯ ನೀಡುವುದು ಉತ್ತಮ. ಪ್ರೀತಿಯ ಕುರಿತು ವ್ಯವಹರಿಸುವಾಗ ವಿವಿಧ ದೃಷ್ಟಿಕೋನಗಳಿಂದ ಚಿಂತಿಸುವುದು ಸೂಕ್ತ.

  ಅದೃಷ್ಟದ ಬಣ್ಣ ಹಾಗೂ ಸಂಖ್ಯೆಗಳು

  ಜೂನ್ ತಿಂಗಳ ಅದೃಷ್ಟದ ಸಂಖ್ಯೆ 9, 10 ಮತ್ತು 11

  ಅದೃಷ್ಟದ ಬಣ್ಣಗಳು ಕೆಂಪು ಮತ್ತು ಕಡುಗೆಂಪು.

  English summary

  Monthy Prediction - June Scorpion

  The month of June, 2018 looks to be somewhat favorable for you if you are a Scorpio. While there may be a few minor glitches and issues that will come your way, you will overcome them with ease, so don’t worry too much about this. Another positive outcome from this month would be that your concentration will improve significantly and this will help you in understanding the inner meaning of life. Considering how broad-minded you are, you will be able to effortlessly handle tough situations, both in your professional and personal life. Read on for what the stars have in store for you in terms of your health fortune, career, finances and love life.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more