For Quick Alerts
ALLOW NOTIFICATIONS  
For Daily Alerts

  ಧನು ರಾಶಿಯವರ ಜೂನ್ ತಿಂಗಳ ರಾಶಿಭವಿಷ್ಯ

  |

  ನವೆಂಬರ್ 22 ರಿಂದ ಡಿಸೆಂಬರ್ 21ರ ನಡುವೆ ಜನಿಸಿದವರು ಸಾಮಾನ್ಯವಾಗಿ ಧನು ರಾಶಿಯವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಧನು ರಾಶಿಯ ವ್ಯಕ್ತಿಗಳು ನೈಸರ್ಗಿಕವಾಗಿಯೇ ಸ್ವತಂತ್ರ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಅತ್ಯಂತ ಪ್ರಾಮಾಣಿಕ ಗುಣವನ್ನು ಹೊಂದಿದ ಇವರು ವೈಯಕ್ತಿಕ ಸ್ವಾತಂತ್ರ್ಯದಲ್ಲಿ ದೃಢ ನಂಬಿಕೆಯನ್ನು ಹೊಂದಿರುತ್ತಾರೆ. ಇವರು ಕೆಲವೊಮ್ಮೆ ಪರಸ್ಪರ ಸಂಬಂಧಗಳಲ್ಲಿ ಘರ್ಷಣೆಯನ್ನು ಉಂಟುಮಾಡುತ್ತಾರೆ ಎನ್ನಲಾಗುವುದು.

  ತನ್ನದೇ ಆದ ವಿಶೇಷ ವ್ಯಕ್ತಿತ್ವವನ್ನು ಹೊಂದಿರುವ ಇವರ ಮಾನಸಿಕ ಗುಣವು ವಿಭಿನ್ನತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಜೂನ್ 2018ರಲ್ಲಿ ಗ್ರಹಗಳು ವಿಭಿನ್ನ ಚಲನೆಯನ್ನು ಪಡೆದುಕೊಳ್ಳುತ್ತವೆ. ಇವುಗಳ ಬದಲಾವಣೆಯಿಂದ ಧನು ರಾಶಿಯವರ ಮೇಲೆ ಗಣನೀಯವಾದ ಪ್ರಭಾವ ಉಂಟಾಗುವ ಸಾಧ್ಯತೆಗಳಿವೆ. ಪ್ರೀತಿ, ಸಂಬಂಧ, ಸಂಪಾದನೆ, ಉದ್ಯೋಗ ವಿಚಾರದಲ್ಲಿ ಗಮನೀಯ ರೀತಿಯಲ್ಲಿ ಬದಲಾವಣೆಯನ್ನು ಕಾಣುವ ಸಧ್ಯತೆಗಳಿವೆ. ಹಾಗಾದರೆ ನಿಮ್ಮ ರಾಶಿಚಕ್ರದ ಅನುಸಾರ ಜೂನ್ ತಿಂಗಳಲ್ಲಿ ಯಾವೆಲ್ಲಾ ಬದಲಾವಣೆಯನ್ನು ಕಾಣುವಿರಿ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

  Sagittarius

  ಆರೋಗ್ಯದ ಭವಿಷ್ಯ

  ಧನು ರಾಶಿಯವರಾಗಿದ್ದವರಿಗೆ ಜೂನ್ ತಿಂಗಳಲ್ಲಿ ಸಾಮಾನ್ಯವಾದ ಆರೋಗ್ಯವನ್ನು ಅನುಭವಿಸುತ್ತಾರೆ. ಹಾಗಂತ ಅಧಿಕ ಚಿಂತನೆ ನಡೆಸುವ ಅಗತ್ಯವಿಲ್ಲ. ಜೂನ್ 21ರ ನಂತರ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಉಂಟಾಗುವುದು. ಬಳಲುತ್ತಿರುವ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕು. ಕೆಲವೊಂದು ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕಾಗುವುದು. ಆರೋಗ್ಯದ ಸಮಸ್ಯೆ ದೊಡ್ಡದೇ ಆಗಿರಲಿ ಅಥವಾ ಚಿಕ್ಕದೇ ಆಗಿರಲಿ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಬೇಕು. ಆರೋಗ್ಯದ ಕುರಿತು ಹೆಚ್ಚು ಗಮನ ನೀಡಬೇಕು ಎಂದು ಅತಿಯಾದ ಬೆಡ್‍ರೆಸ್ಟ್ ಕೂಡ ಒಳ್ಳೆಯದಲ್ಲ. ಕುಟುಂಬದವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಲು ಪ್ರಯತ್ನಿಸಿ. ಸಮಯಗಳ ಪರಿವಿಲ್ಲದಂತೆ ಕೆಲಸದಲ್ಲಿ ತಲ್ಲೀನರಾಗುವುದನ್ನು ನಿಲ್ಲಿಸಿ. ನಿಮ್ಮ ಆರೋಗ್ಯದ ಉತ್ತಮ ಸ್ಥಿತಿಗೆ ಭಾವನೆಗಳು ಪ್ರಮುಖವಾಗಿರುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

  ಆರ್ಥಿಕ ಪರಿಸ್ಥಿತಿ:

  ಜೂನ್ ತಿಂಗಳಲ್ಲಿ ಧನುರಾಶಿಯವರ ವಿತ್ತೀಯ ಸ್ಥಿತಿಯು ಉತ್ತಮವಾಗಿರುತ್ತದೆ. ಆದರೆ ನಿಮ್ಮದೆ ಆದ ಹಣಕಾಸಿನ ಗುರಿಯನ್ನು ತಲುಪಲು ಸಾಕಷ್ಟು ಶ್ರಮವಹಿಸಬೇಕಾಗುವುದು. ನಿಖರವಾದ ಹಣವನ್ನು ಇಟ್ಟಿಕೊಳ್ಳಲು ಹಾಗೂ ಒಂದಷ್ಟು ಹಣವನ್ನು ಮೀಸಲಾಗಿಟ್ಟುಕೊಳ್ಳುವುದನ್ನು ಸಲಹೆ ನೀಡಲಾಗುತ್ತದೆ. ಏಕೆಂದರೆ ಪರಿಸ್ಥಿತಿ ಹೇಗೇ ಇದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿರುತ್ತದೆ. ಸೃಜನಾತ್ಮಕ ಕಲೆಗಳಲ್ಲಿ ನಿಮಗೆ ಆಸಕ್ತಿ ಇದ್ದರೆ ಈ ತಿಂಗಳು ಹಣವನ್ನು ವಿನಿಯೋಗಿಸಲು ಯೋಗ್ಯವಾದ ಸಮಯ ಎಂದು ಹೇಳಲಾಗುವುದು.

  ಯಾವುದೇ ಬಗೆಯ ಹೊಸ ಬಂಡವಾಳ ಅಥವಾ ಸಾಹಸೋದ್ಯಮ ವ್ಯವಸ್ಥೆಯ ಕುರಿತು ಚಿಂತನೆಗಳಿದ್ದರೆ ಇದೀಗ ನಿಮಗೆ ಉತ್ತಮ ಸಮಯವಾಗಿರುತ್ತದೆ. ಈ ತಿಂಗಳಲ್ಲಿ ಆದಷ್ಟು ಕಡಿಮೆ ಪ್ರೊಫೈಲ್ ಅನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ಆದಷ್ಟು ಮುನ್ನೆಚ್ಚರಿಕೆಗಳು ಹಾಗೂ ಸೂಕ್ತ ಯೋಜನೆಗಳು ಇದ್ದಾಗ ನೀವು ಆರ್ಥಿಕ ಬಿಕ್ಕಟ್ಟನ್ನು ನಿಯಂತ್ರಿಸಲು ಸಹಾಯವಾಗುವುದು. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರಲು ಸಹಾಯವಾಗುವುದು.

  Sagittarius

  ಪ್ರೀತಿಯ ಜೀವನ

  ಈ ತಿಂಗಳು ನಿಮ್ಮ ಪ್ರೀತಿಯ ಜೀವನ ನೀವು ನಿರೀಕ್ಷಿಸುತ್ತಿರುವುದನ್ನು ಸ್ವಲ್ಪ ವಿಭಿನ್ನವಾಗಿ ಹೋಗುತ್ತದೆ. ನೀವು ಸ್ವಯಂ ಅನ್ವೇಷಣೆ ಪ್ರಯಾಣವನ್ನು ಮುಂದುವರಿಸುವುದು ಹಾಗೂ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚೆಂದು ಹೇಳಬಹುದು. ಪಾಲುದಾರರೊಂದಿಗೆ ಉತ್ತಮ ಸಹಕಾರ ಹಾಗೂ ಪ್ರೀತಿಯನ್ನು ಪಡೆದುಕೊಳ್ಳುವಿರಿ.

  ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕು. ತೆಗೆದುಕೊಳ್ಳುವ ನಿರ್ಧಾರ ಸೂಕ್ತವಾಗಿದೆಯೇ ಎಂದು ಸೂಕ್ತ ರೀತಿಯಲ್ಲಿ ಚಿಂತಿಸಿ. ವಿವಾಹಿತರಾಗಿದ್ದರೆ ಈ ತಿಂಗಳು ನ್ಯಾಯೋಚಿತ ಪಾಲುದಾರಿಕೆಯನ್ನು ಹೊಂದುವಿರಿ. ಈ ತಿಂಗಳು ನಿಮ್ಮ ಜೀವನ ಉತ್ತಮವಾಗಿರಲು ನೀವು ನೆನಪಿಟ್ಟುಕೊಳ್ಳಬೇಕಾದ ಎರಡು ವಿಚಾರವೆಂದರೆ ತಾಳ್ಮೆ ಮತ್ತು ಸಂಯಮ.

  ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳು

  2018 ಜೂನ್ ತಿಂಗಳ ಅದೃಷ್ಟದ ಸಂಖ್ಯೆಗಳು 4, 6 ಮತ್ತು 15.

  ಅದೃಷ್ಟದ ಬಣ್ಣಗಳು: ಗುಲಾಬಿ, ಕೆಂಪು, ನೇರಳೆ ಬಣ್ಣ.

  English summary

  Monthy Prediction - June- Sagittarius

  The zodiac sign Sagittarius is characterized by the sign of the Archer and people born between 22nd November and 21st December belong to this group. People belonging to the Sagittarius zodiac sign are very independent, brutally honest, and have strong opinions. They are also firm believers in personal freedom of expression and that sometimes causes conflicts in their interaction and relationships.
  Story first published: Sunday, May 27, 2018, 10:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more