For Quick Alerts
ALLOW NOTIFICATIONS  
For Daily Alerts

  2018 ಜೂನ್ ತಿಂಗಳ ಮೀನ ರಾಶಿಯ ಭವಿಷ್ಯ

  |

  ಸ್ವಭಾವದಲ್ಲಿ ಸ್ನೇಹಪರರಾಗಿದ್ದು, ಶಾಂತ ಚಿತ್ತದವರು ಎಂದರೆ ಮೀನ ರಾಶಿಯವರು. ಇವರ ಸ್ನೇಹದ ಗುಣವು ಇವರ ಸುತ್ತಲು ಒಂದಷ್ಟು ಜನರು ಸುತ್ತಿರುವಂತೆ ಮಾಡುತ್ತದೆ. ಇವರಲ್ಲಿ ನೈಸರ್ಗಿಕವಾಗಿಯೇ ಒರಟುತನವಿದ್ದರೂ ಅದನ್ನು ಸುಂದರವಾಗಿ ಮರೆ ಮಾಚುವುದರ ಮೂಲಕ ಸಮಾಜಕ್ಕೆ ಮೃದು ಗುಣವನ್ನು ತೋರ್ಪಡಿಸುತ್ತಾರೆ. ಸೂರ್ಯನ ಚಿಹ್ನೆಯನ್ನು ಹೊಂದಿರುವ ಇವರು ತಮ್ಮ ಭಾವನೆಯನ್ನು ಮತ್ತು ಪ್ರೀತಿಯನ್ನು ಇತರರಿಗೆ ಸುಲಭವಾಗಿ ತೋರುತ್ತಾರೆ. ಈ ಗುಣಗಳೇ ಅವರಿಗೆ ಹೆಚ್ಚು ಪಾರದರ್ಶಕತೆಯನ್ನು ತಂದುಕೊಡುತ್ತದೆ.

  2018 ಜೂನ್ ತಿಂಗಳಲ್ಲಿ ಅನೇಕ ಗ್ರಹಗತಿಗಳ ಚಲನ ವಲನಗಳ ಬದಲಾವಣೆಯಿಂದ ಮೀನರಾಶಿಯವರು ಗಂಭೀರ ಬದಲಾವಣೆಯನ್ನು ಅನುಭವಿಸಬೇಕಾಗುವುದು. ಈ ಸಮಯದಲ್ಲಿ ಪ್ರಕ್ಷುಬ್ಧತೆಯನ್ನು ಎದುರಿಸಲು ಸೂಕ್ತವಾದ ಸೃಜನ ಶೀಲತೆ ಹಾಗೂ ಒಳನೋಟವನ್ನು ಬಳಸಬೇಕಾಗುವುದು. ಕೆಲವು ಪರಿಣಾಮಗಳು ಬೇಸರವನ್ನು ತಂದೊಡ್ಡಿದರೆ ಇನ್ನೂ ಕೆಲವು ಪರಿಣಾಮಗಳು ಸಂತೋಷವನ್ನು ನೀಡುವುದು.

  ನೀವು ಮೀನರಾಶಿಯವರು, ನಿಮಗೆ ನಿಮ್ಮ ರಾಶಿಚಕ್ರದ ಪ್ರಭಾವದಿಂದ ಯಾವೆಲ್ಲಾ ಬದಲಾವಣೆಯನ್ನು ಅನುಭವಿಸುವಿರಿ? ಆರೋಗ್ಯ, ಸಂಬಂಧ, ಹಣಕಾಸು ಸೇರಿದಂತೆ ಇನ್ನಿತರ ವಿಚಾರದಲ್ಲಿ ಯಾವೆಲ್ಲಾ ವ್ಯತ್ಯಾಸಗಳನ್ನು ಕಾಣುವಿರಿ? ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

  Pisces

  ಆರೋಗ್ಯದ ಸ್ಥಿತಿ:

  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2018ರ ಜೂನ್ ತಿಂಗಳಲ್ಲಿ ಆರೋಗ್ಯವು ದುರ್ಬಲವಾಗಿರುತ್ತದೆ. ಆರೋಗ್ಯ ಎನ್ನುವ ಆಸ್ತಿಯು ದುರ್ಬಲವಾಗಿರುತ್ತದೆ. ಜೂನ್ 21ರ ತನಕವೂ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕಾಗುವುದು. ಜೊತೆಗೆ ಆರೋಗ್ಯಕರವಾದ ಆಹಾರವನ್ನೇ ಸೇವಿಸಬೇಕು. ಆಗ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆರೋಗ್ಯದ ಸಮಸ್ಯೆಯಿಂದ ಚಿಂತಿಸುವುದನ್ನು ತಡೆಯಬಹುದು.

  ಈ ತಿಂಗಳಲ್ಲಿ ನಿಮಗೆ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿರುತ್ತದೆ ಎಂದರ್ಥವಲ್ಲ. ಸೂಕ್ತ ಮುನ್ನೆಚ್ಚರಿಕೆ ಹಾಗೂ ಆರೈಕೆ ಮಾಡಿಕೊಳ್ಳುವುದರಿಂದ ನಿಮ್ಮ ಉತ್ಸಾಹದ ಪ್ರವೃತ್ತಿಗೆ ಒಂದಿಷ್ಟು ಸಹಾಯವಾಗುವುದು. ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚುವುದು. ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಂದ ಮುಕ್ತರಾಗಬಹುದು. ಮಾನಸಿಕ ಒತ್ತಡವು ಕಡಿಮೆಯಾಗುವುದು.

  ವೃತ್ತಿ ಜೀವನ

  ಈ ತಿಂಗಳ ಪೂರ್ತಿ ನೀವು ಕೆಲಸದಲ್ಲಿ ಹೆಚ್ಚು ಶ್ರಮವನ್ನು ವಹಿಸುವಿರಿ. ನಿಮ್ಮ ಕೆಲಸವನ್ನು ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳು ಗಮನಿಸುವರು. ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಹೆಚ್ಚು ಮಾನ್ಯತೆ ಹಾಗೂ ಗೌರವ ದೊರೆಯುವುದು. ನಿಮ್ಮ ಘನತೆಯು ಹೆಚ್ಚುವುದು ಎಂದು ಹೇಳಲಾಗುತ್ತದೆ. ವೃತ್ತಿಯ ವಿಚಾರವಾಗಿ ಎಲ್ಲವೂ ಉತ್ತಮವಾಗಿರುತ್ತದೆ.

  ಆರ್ಥಿಕ ಸ್ಥಿತಿ

  ದೊಡ್ಡ ಹೂಡಿಕೆಗೆ ಕೈಹಾಕಲು ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸಲು ನಿಮಗೆ ಈ ತಿಂಗಳು ಸೂಕ್ತವಾದದ್ದು. ಹಣಕಾಸು ಹಾಗೂ ಆರ್ಥಿಕ ಸ್ಥಿತಿಯು ಸುಧಾರಣೆ ಕಾಣಲು ಇದು ಉತ್ತಮವಾದ ಸಮಯ ಎಂದು ಹೇಳಲಾಗುವುದು. ಈ ತಿಂಗಳು ನಿಮಗೆ ಭಾರಿ ಲಾಭ ಉಂಟಾಗುವುದು. ಸರ್ಕಾರದೊಂದಿಗೆ ಯಾವುದೇ ಉದ್ಯಮ ಹೊಂದಿದ್ದರೆ ಅಥವಾ ಅದರೊಂದಿಗೆ ಹೊಸ ಉದ್ಯಮವನ್ನು ನೀವು ಪ್ರಾರಂಭಿಸಿದ್ದರೆ ಉತ್ತಮ ಲಾಭ ದೊರೆಯುವುದು.

  Pisces

  ಪ್ರೀತಿಯ ಜೀವನ

  ವೃತ್ತಿ ಜೀವನದಂತೆ ನಿಮ್ಮ ಪ್ರೀತಿಯ ಜೀವನವು ಅನುಕೂಲಕರವಾಗಿರದೆ ಇರಬಹುದು. ನಿಮ್ಮ ಜೀವನದಲ್ಲಿ ಕೆಲವು ವಿಚಾರದ ಅಂಗವಾಗಿ ನಿಮ್ಮ ಭಾವನೆಗಳ ಮೇಲೆ ಗಂಭೀರವಾದ ಪರಿಣಾಮ ಬೀರುವುದು. ಈ ತಿಂಗಳ ಪೂರ್ತಿ ನಿಮ್ಮ ಪ್ರಣಯದ ಭಾವನೆಯು ಉಲ್ಬಣಗೊಳ್ಳುವುದು. ನಿಮ್ಮ ಸಂಗಾತಿಗೆ ಅಥವಾ ಪ್ರೀತಿಪಾತ್ರರಿಗೆ ಪ್ರಣಯದ ಭಾವನೆಯನ್ನು ವಿನಿಮಯ ಮಾಡುವುದರಲ್ಲಿ ನಿರಾಶೆಗೆ ಒಳಗಾಗಬಹುದು. ಹಾಗಾಗಿ ಈ ತಿಂಗಳು ಪ್ರೀತಿಯ ವಿಚಾರದಲ್ಲಿ ನೀವು ಆದಷ್ಟು ತಾಳ್ಮೆಯಿಂದ ಇರುವುದನ್ನು ಕಲಿಯಬೇಕು.

  ಅದೃಷ್ಟದ ಬಣ್ಣಗಳು

  ಈ ತಿಂಗಳ ನಿಮ್ಮ ಅದೃಷ್ಟದ ಬಣ್ಣಗಳು: ನೀಲಕ ಬಣ್ಣ, ನೇರಳೆ ಬಣ್ಣ ಮತ್ತು ಸಮುದ್ರ ಹಸಿರು ಬಣ್ಣ.

  ಅದೃಷ್ಟ ಸಂಖ್ಯೆಗಳು: 3, 9, 12, 15, 18 ಮತ್ತು 24.

  English summary

  Monthy Prediction - June Pisces

  The month of June 2018 will be full of conflicts and trials for the Pisces zodiac sign. You have to use all your inventiveness and insight to face the turbulence and come up with suitable answers. Almost 60 percent of the planets are in Grand Square pattern this month which suggests that individuals and planetary powers at loggerheads. Pisces star sign should be prepared to face a few disappointments.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more