For Quick Alerts
ALLOW NOTIFICATIONS  
For Daily Alerts

  2018 ಜೂನ್ ತಿಂಗಳ ಮೇಷ ರಾಶಿಯ ಭವಿಷ್ಯ

  |

  ರಾಶಿಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ರಾಶಿ ಮೇಷ. ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಚೈತನ್ಯವನ್ನು ಹೊಂದಿರುತ್ತಾರೆ. ಅವರ ನಾಯಕತ್ವ ಕೌಶಲ್ಯಗಳನ್ನು ಬಹಳ ಸುಂದರವಾಗಿ ನಿಭಾಯಿಸಬಲ್ಲರು. ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಬಹಳ ಸ್ವಾಭಿಮಾನಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಹಿರಿಯರು ಹಾಗೂ ದೈವ ಶಕ್ತಿಯಲ್ಲಿ ನಂಬಿಕೆ ಇಡುವ ಇವರು ಮುಂಗೋಪಿಗಳು ಹೌದು.

  ಜೂನ್ ತಿಂಗಳಲ್ಲಿ ನಡೆಯುವ ಕೆಲವು ಗ್ರಹಗತಿಗಳ ಚಲನೆ ಹಾಗೂ ಬದಲಾವಣೆಗಳು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. 2018ರ ಜೂನ್ ತಿಂಗಳು ಈ ರಾಶಿಯವರಿಗೆ ಸಿನಿಮಾದ ರೀತಿಯಲ್ಲಿ ಬದಲಾವಣೆಯನ್ನು ಕಾಣುವರು ಎಂದು ಹೇಳಲಾಗುತ್ತದೆ. ನಿಮ್ಮ ಆಕ್ರಮಣ ಶೀಲ ಗುಣವು ಹಿಮ್ಮುಖ ಚಲನೆಗೆ ಎಡೆಮಾಡಿಕೊಡುವುದು. ಅಲೆಗಳು ಅದೆಷ್ಟು ಏರಿಳಿತಗಳ ಅಬ್ಬರ ತಂದರು ಕಾಲನ್ನು ಗಟ್ಟಿಯಾಗಿ ಮಣ್ಣಿನಲ್ಲಿ ಹಿಡಿದಿಟ್ಟುಕೊಳ್ಳಬೇಕು.

  ಹಾಗೆಯೇ ಸನ್ನಿವೇಶಗಳು ಯಾವ ಪರಿ ಅಥವಾ ಪರಿವರ್ತನೆಯನ್ನು ತಂದರೂ ಸಹ ಅದನ್ನು ಎದುರಿಸುವ ಹಾಗೂ ನಿಭಾಯಿಸುವ ಸಾಮಥ್ರ್ಯವನ್ನು ಮೇಷ ರಾಶಿಯವರು ಅರಿತಿರಬೇಕು. ಮಳೆಗಾಲದ ಆರಂಭವನ್ನುಂಟುಮಾಡುವ ತಿಂಗಳಲ್ಲಿ ನಿಮ್ಮ ಬದುಕು ಯಾವ ಬಗೆಯ ಬದಲಾವಣೆಯನ್ನು ಎದುರಿಸಲು ನಿದ್ಧವಾಗಿರುತ್ತದೆ ಎನ್ನುವುದನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ. 

  Aries

  ಆರೋಗ್ಯ ಸ್ಥಿತಿ:

  ಮೇಷ ರಾಶಿಯವರಿಗೆ ಆರೋಗ್ಯ ವಿಚಾರದಲ್ಲಿ ಜೂನ್ ತಿಂಗಳು ಉತ್ತಮವಾದ ಫಲಿತಾಂಶವನ್ನು ನೀಡುವುದು. ನಕ್ಷತ್ರಗಳು ಅನುಕೂಲಕರವಾದ ವಿಲೇವಾರಿ ನಡೆಸುತ್ತವೆ. ಹಾಗಾಗಿ ಈ ತಿಂಗಳು ಆರೋಗ್ಯಕರವಾದ ಜೀವನವನ್ನು ನೀವು ಅನುಭವಿಸುವಿರಿ ಎಂದು ಹೇಳಲಾಗುವುದು. ಈಗಾಗಲೇ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಸಹ ಈ ತಿಂಗಳಲ್ಲಿ ಗಣನೀಯ ಪರಿಣಾಮವನ್ನು ಅನುಭವಿಸುವಿರಿ. ಆರೋಗ್ಯದಿಂದ ಇರುವಾಗಲೂ ಸಹ ಸಾಮಾನ್ಯವಾದ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಸೂಚಿಸಲಾಗುತ್ತದೆ.

  ಗಂಟಲು ಸೋಂಕು ಕಾಣಿಸಿಕೊಂಡರೆ ಅದನ್ನು ಲಘುವಾಗಿ ಪರಿಗಣಿಸದೆ ಸಂಪೂರ್ಣವಾಗಿ ತನಿಖೆ ಮಾಡಬೇಕು. ವೈದ್ಯರ ಸಹಾಯದಿಂದ ಸೋಂಕಿಗೆ ಸೂಕ್ತ ಕಾರಣವನ್ನು ಪತ್ತೆಹಚ್ಚಿಕೊಳ್ಳಬೇಕು. ಸೂಕ್ತ ತಪಾಸಣೆ ಹೊಂದುವುದರಿಂದ ಸಂಧಿವಾತ, ಜೀರ್ಣಾಂಗಗಳಲ್ಲಿ ಗಾಯದಿಂದ ಬಳಲುತ್ತಿದ್ದವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಸರಿಯಾದ ಚಿಕಿತ್ಸೆ ಹಾಗೂ ಔಷಧ ಪಡೆಯುವುದರ ಮೂಲಕ ಸಮಸ್ಯೆಯನ್ನು ಬಹುಬೇಗ ನಿವಾರಿಸಬಹುದು.

  ವೃತ್ತಿ ಜೀವನ:

  ಮೇಷ ರಾಶಿಯವರಿಗೆ ವೃತ್ತಿ ಜೀವನವು ಯಶಸ್ಸಿಗೆ ಅತ್ಯುತ್ತಮ ತಿಂಗಳಾಗಿ ಪರಿಣಮಿಸಲಿದೆ. ನಕ್ಷತ್ರಗಳು ವೃತ್ತಿ ಹಾಗೂ ಉದ್ಯೋಗದ ವಿಚಾರದಲ್ಲಿ ಅನುಕೂಲವನ್ನು ಒದಗಿಸಿಕೊಡುತ್ತವೆ. ಈ ತಿಂಗಳು ನೀವು ವೃತ್ತಿಯಲ್ಲಿ ಪ್ರಗತಿ ಹಾಗೂ ಆರ್ಥಿಕವಾಗಿ ಲಾಭವನ್ನು ಪಡೆದುಕೊಳ್ಳುವಿರಿ. ಕೆಲಸವನ್ನು ನಿರ್ವಹಿಸಲು ಅಹ್ಲಾದಕರ ವಾತಾವರಣವು ನಿಮಗೆ ಲಭಿಸುವುದು. ಸಹೋದ್ಯೋಗಿಗಳ ಸಹಕಾರ ಹಾಗೂ ಮೇಲಾಧಿಕಾರಿಗಳಿಂದ ಸಂಪೂರ್ಣವಾದ ಪ್ರಶಂಸೆ ಹಾಗೂ ಲಾಭ ದೊರೆಯುವುದು.

  ಆರ್ಥಿಕ ಸ್ಥಿತಿ:

  ಹಣಕಾಸಿನ ವಿಚಾರಕ್ಕೆ ಬಂದರೆ ನಿಮಗೆ ಈ ತಿಂಗಳು ಲಾಭದಾಯಕವಾಗಿಯೇ ಇರುತ್ತದೆ ಎಂದು ಹೇಳಬಹುದು. ಸಾರಿಗೆ, ಉದ್ಯಮ, ವ್ಯಾಪಾರ ಸೇರಿದಂತೆ ಎಲ್ಲಾ ಕೆಲಸದಲ್ಲೂ ದೊಡ್ಡ ಪ್ರಮಾಣದ ಲಾಭವನ್ನೇ ಗಳಿಸುವಿರಿ. ಯಾವುದಾದರೂ ಯೋಜಿತ ವ್ಯವಹಾರದಲ್ಲಿ ಕೈಗೊಂಡಿದ್ದರೆ ಅಥವಾ ಹೊಸ ಯೋಜನೆಗೆ ಮುಂದಾದರೂ ಸಹ ಉತ್ತಮ ಲಾಭವನ್ನೇ ಪಡೆದುಕೊಳ್ಳುವಿರಿ.

  ಅಂಗಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಚಿಕ್ಕ ಪ್ರಮಾಣದಲ್ಲೇ ಆದರೂ ಲಾಭ ದೊರೆಯುವುದು. ಯಾವುದಾದರೂ ದೀರ್ಘಕಾಲದ ಕಾನೂನು ಹೋರಾಟಗಳು ನಡೆಯುತ್ತಿದ್ದರೆ ಅದು ಸಹ ಸಮಾಪ್ತಿಗೊಳ್ಳುವುದು. ನಿಮ್ಮ ಪರವಾಗಿಯೇ ಆಡಳಿತ ನೀತಿ ಹಾಗೂ ಲಾಭ ದೊರೆಯುವುದು. ಕೆಲವು ಒತ್ತಡಗಳು ದೊಡ್ಡ ಪ್ರಮಾಣದ ಹೂಡಿಕೆಯಿಂದ ದೂರ ಇರುವ ಸಾಧ್ಯತೆಗಳಿವೆ. ಸಣ್ಣ ಹೂಡಿಕೆಯಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಿರಿ. ಸಾಮಾನ್ಯವಾಗಿ ಕೆಲಸದ ವರಮಾನದಲ್ಲಿ ಹೆಚ್ಚಳ, ಬೋನಸ್ ಹಾಗೂ ಮುಂಗಡ ಹಣವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

  Aries

  ಪ್ರೀತಿಯ ಜೀವನ

  ನಿಮ್ಮ ಸಂಬಂಧ ಹಾಗೂ ಪ್ರೀತಿಯ ವಿಚಾರದಲ್ಲಿ ಜೂನ್ ತಿಂಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಣಕಾಸು ಹಾಗೂ ಸಾಮಾಜಿಕ ವಿಚಾರದಂತೆ ಈ ವಿಷಯದಲ್ಲೂ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ನೀವು ಯಾರ ವಿಶೇಷತೆಯನ್ನು ಹುಡುಕುತ್ತಿದ್ದೀರೋ ಅದು ನಿಮಗೆ ಈ ತಿಂಗಳಲ್ಲಿ ದೊರೆಯುವ ಸಾಧ್ಯತೆಗಳಿವೆ. ನೀವು ವಿವಾಹಿತರಾಗಿದ್ದರೆ ನಿಮ್ಮ ಆಕ್ರಮಣ ಶೀಲ ವರ್ತನೆಯು ಪ್ರಚೋದನೆಗೆ ಒಳಗಾಗುವುದು. ನಿಮ್ಮ ಸಂಗಾತಿಯ ನಡುವೆ ಕೆಲವು ತಪ್ಪು ಗ್ರಹಿಕೆಗಳು ಉಂಟಾಗಬಹುದು. ಅವಸರದ ನಿರ್ಧಾರ ತೆಗೆದುಕೊಳ್ಳುವ ಬದಲು ನಿಧಾನವಾಗಿ ಯೋಚಿಸಿ ಯೋಜನೆ ಹಾಗೂ ಚಿಂತನೆಯನ್ನು ನಡೆಸುವುದು ಸೂಕ್ತವಾಗಿರುತ್ತದೆ.

  ಅದೃಷ್ಟದ ಬಣ್ಣಗಳು:

  ಜೂನ್ ತಿಂಗಳಲ್ಲಿ ನಿಮ್ಮ ಅದೃಷ್ಟದ ಬಣ್ಣಗಳು ಎಂದರೆ ಕೆಂಪು, ಕಡುಗೆಂಪು.

  ಅದೃಷ್ಟದ ಸಂಖ್ಯೆ: 9,6,24,33 ಮತ್ತು 36.

  ನೀವು ಅದೃಷ್ಟದ ಹರಳನ್ನು ಧರಿಸಲು ಬಯಸಿದರೆ ಕೆಂಪು ಹವಳ ಮತ್ತು ಅಮೆಥಿಸ್ಟೋನ್ ಅನ್ನು ಧರಿಸಬಹುದು.

  English summary

  Monthy Prediction - June- Aries

  Aries are known for their competitive spirit and tend to jump in to all kinds of situations that allow them to show off their leadership skills. Are you an Arian with similar traits? Do you also believe in looking at your horoscope or speaking to an astrologer before taking up anything important in your life? If the answer to both these questions is a yes, you may want to read on about what your horoscope and fortune predicts for the month of June, 2018.
  Story first published: Sunday, May 27, 2018, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more