For Quick Alerts
ALLOW NOTIFICATIONS  
For Daily Alerts

  2018 ಜೂನ್ ತಿಂಗಳ ಕುಂಭರಾಶಿ ಭವಿಷ್ಯ

  |

  ಸೃಜನಾತ್ಮಕ ಗುಣಗಳನ್ನು ಒಳಗೊಂಡಿರುವ ವ್ಯಕ್ತಿಗಳು ಎಂದರೆ ಕುಂಭರಾಶಿಯವರು ಎಂದು ಹೇಳಬಹುದು. ಹೆಚ್ಚು ಮೌನದ ಸ್ವಭಾವದವರಾದ ಇವರು ಎಲ್ಲವೂ ಶಿಸ್ತುಬದ್ಧವಾಗಿರಬೇಕೆಂದು ಬಯಸುತ್ತಾರೆ. ಅಂತೆಯೇ ತಾವೂ ನಡೆದುಕೊಳ್ಳುತ್ತಾರೆ. ಕಲಹದಿಂದ ದೂರ ಉಳಿಯುವ ಇವರಲ್ಲಿ ಅಂತರ್ಮುಖಿ ಸ್ವಭಾವ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ಪ್ರೀತಿ, ಕುಟುಂಬ, ವೃತ್ತಿ ಹಾಗೂ ಹಣಕಾಸುಗಳ ವಿಚಾರದಲ್ಲಿ ಇವರು ತಮ್ಮದೇ ಆದ ವಿಶೇಷ ನಿಲುವನ್ನು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ಶ್ರಮ ಜೀವಿಗಳು ಎನಿಸಿಕೊಳ್ಳುವ ಕುಂಭ ರಾಶಿಯವರಿಗೆ ಜೂನ್ ತಿಂಗಳು ಅಗಾದ ಬದಲಾವಣೆಯನ್ನು ಅನುಭವಿಸುವರು. ಖಗೋಳದಲ್ಲಿ ನಡೆಯುವ ಗ್ರಹಗಳ ಸ್ಥಾನ ಬದಲಾವಣೆ ಹಾಗೂ ನಕ್ಷತ್ರಗಳ ಪ್ರಭಾವ ಈ ರಾಶಿಯವರ ಮೇಲೆ ವಿಶೇಷ ಪ್ರಭಾವ ಬೀರಲಿದೆ. ನಿಮ್ಮ ಶ್ರಮದಾಯಕ ಕೆಲಸಗಳಿಗೆ ಸೂಕ್ತ ಫಲಿತಾಂಶ ದೊರೆಯುವುದರ ಜೊತೆಗೆ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು. ಕುಂಭ ರಾಶಿಯವರಿಗೆ ವಿಶೇಷವಾದ ಬದಲಾವಣೆಯನ್ನು ಕಾಣಲು ಜೂನ್ ತಿಂಗಳು ಸೂಕ್ತವಾದ ಸಮಯ.

  Aquarius

  ಇವರು ತಮ್ಮ ಜೀವನದಲ್ಲಿ ಬದಲಾವಣೆ ನಡೆದಂತೆ ಪ್ರಪಂಚದಾದ್ಯಂತವೂ ಬದಲಾವಣೆ ಉಂಟಾಗುತ್ತಿದೆ ಎಂದು ಅರಿಯಬಹುದು. ಇವರು ಹೆಚ್ಚಿನ ಪ್ರಗತಿಯನ್ನು ನಿರೀಕ್ಷಿಸಬಹುದು. ಸಂತೋಷ ಪಡೆಯಲು ಹಾಗೂ ವಿರಾಮಕ್ಕಾಗಿ ಸೂಕ್ತ ಸಮಯವಾಗಿರುವುದಷ್ಟೆ ಅಲ್ಲದೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳುವಿರಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನೀವು ಅಥವಾ ನಿಮ್ಮವರು ಕುಂಭ ರಾಶಿಯವರಾಗಿದ್ದರೆ ಅವರ ಭವಿಷ್ಯ ಹೇಗಿದೆ ಎನ್ನುವುದನ್ನು ಈ ಮುಂದೆ ವಿವರಿಸಲಾದ ವಿವರಣೆಯ ಮೂಲಕ ಅರಿಯಿರಿ.

  ಆರೋಗ್ಯ ಸ್ಥಿತಿ:

  ಈ ತಿಂಗಳು ನೀವು ಸೂರ್ಯನ ರಕ್ಷಾಕವಚ ಶಕ್ತಿಯನ್ನು ಹೊಂದುವಿರಿ. ನಿಮ್ಮ ಈ ಶಕ್ತಿಯು ಮುಂದೆ ಸಾಗಲು ಅನುವು ಮಾಡಿಕೊಡುವುದು. ಶೀತ ಮತ್ತು ವಿಭಿನ್ನ ಬಗೆಯ ಅಸ್ವಸ್ಥತೆಯು ನಿಮ್ಮ ಮೇಲೆ ಪರಿಣಾಮ ಬೀರುವ ಸಂಭವನೀಯತೆ ಇದೆ. ಹಾಗಾಗಿ ಸರಳ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ನಿಮ್ಮಷ್ಟಕ್ಕೆ ನೀವು ಆರೈಕೆ ಮಾಡಿಕೊಳ್ಳುವುದು ಸೂಕ್ತ. ನಿಮ್ಮ ಆರೋಗ್ಯ ಉತ್ತಮವಾಗಿರಲು ನಿಯಮಿತವಾದ ವ್ಯಾಯಾಮಗಳನ್ನು ಮಾಡಿ. ಸ್ನಾಯುಗಳಿಗೆ ಒತ್ತಡವನ್ನುಂಟುಮಾಡುವ ಚಟುವಟಿಕೆಗಳಿಂದ ದೂರವಿರಿ. ಇದರಿಂದ ಗಾಯಗಳು ಉಂಟಾಗುವ ಸಾಧ್ಯತೆಗಳಿವೆ. ಅಲ್ಲದೆ ಅದನ್ನು ಪುನಃ ಗುಣಪಡಿಸುವುದು ಸಹ ಸ್ವಲ್ಪ ಕಷ್ಟಕರವಾಗಿಯೇ ಇರುತ್ತದೆ. ಈ ತಿಂಗಳಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯನ್ನು ಹೊರತು ಪಡಿಸಿದರೆ ಬೇರೆ ದೊಡ್ಡ ಸಮಸ್ಯೆಗಳು ಬರದು. ಆದರೂ ನೀವು ನಿಮ್ಮ ಕಾಳಜಿಯಲ್ಲಿ ಇರಬೇಕು. ಸೂಕ್ತ ವ್ಯಾಯಾಮ ಹಾಗೂ ಉತ್ತಮ ಆಹಾರವನ್ನು ಸೇವಿಸುವುದನ್ನು ಮರೆಯಬಾರದು.

  ವೃತ್ತಿ ಜೀವನ:

  ಜೂನ್ ತಿಂಗಳಲ್ಲಿ ನಿಮ್ಮ ವೃತ್ತಿ ಜೀವನ ಅಷ್ಟು ಅನುಕೂಲಕರವಾಗಿರದೆ ಇರಬಹುದು. ತಿಂಗಳ ಪೂರ್ತಿ ಕೆಲಸದ ಪ್ರಯುಕ್ತ ಕೆಲವು ಕಷ್ಟಕರವಾದ ಸಂಗತಿಯನ್ನು ನೀವು ನಿಭಾಯಿಸಬೇಕಾಗುವುದು. ನಿಮ್ಮ ವ್ಯವಸ್ಥಾಪಕರು ಹಾಗೂ ಸಹೋದ್ಯೋಗಿಗಳಿಂದ ನಿರೀಕ್ಷಿತ ಮಟ್ಟದ ಸಹಕಾರ ದೊರೆಯದು. ಬದಲಿಗೆ ಕೆಲಸದಲ್ಲಿ ಒತ್ತಡ ಹಾಗೂ ತುಳಿತವನ್ನು ಅನುಭವಿಸಬೇಕಾಗುವುದು. ನೀವು ಕೆಲಸದ ಕಡೆಗೆ ಹೆಚ್ಚು ಗಮನವನ್ನು ಹಾಗೂ ಶ್ರಮವನ್ನು ವಹಿಸುವಿರಿ. ಆದರೆ ನಿಮ್ಮ ಪರಿಶ್ರಮ ನಿರೀಕ್ಷಿತ ಮಟ್ಟದ ಲಾಭವನ್ನು ಪಡೆಯದೆ ಇರಬಹುದು. ಅದರಿಂದಾಗಿ ನೀವು ಇನ್ನಷ್ಟು ಹತಾಷೆಯನ್ನು ಅನುಭವಿಸಬೇಕಾಗುವುದು. ನಿಲುಗಡೆಗಾಗಿ ಸೂಕ್ತ ಕಾರಣಗಳನ್ನು ನೀವು ಕಂಡುಹಿಡಿಯಬೇಕು. ಜೊತೆಗೆ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಬೇಕು.

  ಆರ್ಥಿಕ ಸ್ಥಿತಿ:

  2018ರ ಜೂನ್ ತಿಂಗಳು ಕುಂಭರಾಶಿಯವರಿಗೆ ಆರ್ಥಿಕ ಸ್ಥಿತಿ ಅಷ್ಟಾಗಿ ಉತ್ತಮ ಸ್ಥಿತಿಯಲ್ಲಿ ಇರುವುದಿಲ್ಲ ಎಂದೇ ಹೇಳಬೇಕು. ಅನಗತ್ಯವಾದ ಖರ್ಚು ಹಾಗೂ ತೊಂದರೆಗಳು ನಿಮ್ಮನ್ನು ಕಾಡುವುದು. ಅನಗತ್ಯವಾದ ವಿಚಾರಗಳಿಗೆ ಹಣಹೂಡುವುದು ಅಥವಾ ವ್ಯವಹಾರ ಮಾಡಲು ಮುಂದಾಗುವುದನ್ನು ಕೈಗೊಳ್ಳದಿರಿ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿಯೇ ನಷ್ಟವನ್ನು ಅನುಭವಿಸಬೇಕಾಗುವುದು. ಆ ಬಗೆಯ ಯೋಜನೆಗಳಿದ್ದರೆ ಅವುಗಳನ್ನು ಸ್ವಲ್ಪ ಸಮಯದ ಮಟ್ಟಿಗೆ ಮುಂದೂಡುವುದು ಉತ್ತಮ. ಕೆಲವು ದಾವೆಗಳ ವಿಚಾರವಾಗಿ ಪ್ರಯಾಣ ಕೈಗೊಳ್ಳಬೇಕಾಗುವುದು.

  Aquarius

  ಪ್ರೀತಿಯ ಜೀವನ

  ನಿಮ್ಮ ವೃತ್ತಿ ಜೀವನದಂತೆ ಪ್ರೀತಿಯ ವಿಚಾರದಲ್ಲೂ ಇದು ನಿಮಗೆ ಸ್ವಲ್ಪ ಒರಟಾದ ಸಮಯ ಅಥವಾ ಕಷ್ಟದ ಸಮಯ ಎಂದು ಹೇಳಬಹುದು. ಸಂಗಾತಿಯೊಂದಿಗೆ ಸಂಪರ್ಕ ಹೊಂದಲು ಅನೇಕ ಅಡ್ಡಿಗಳು ಎದುರಾಗುವುದು. ಸಂಬಂಧವನ್ನು ಬಲಪಡಿಸಲು ನೀವು ಸ್ವಲ್ಪ ಕಾಳಜಿಯನ್ನು ಮತ್ತು ತಾಳ್ಮೆಯನ್ನು ಕೈಗೊಳ್ಳುವ ಅಗತ್ಯ ಇರುತ್ತದೆ ಎನ್ನುವುದನ್ನು ಮರೆಯಬಾರದು. ನಿಮಗೆ ನಿಮ್ಮ ಪ್ರೀತಿ ಹಾಗೂ ಪಾಲುದಾರರ ವಿಚಾರದಲ್ಲಿ ಇದೊಂದು ಪರೀಕ್ಷಾ ಸಮಯ ಎಂದು ಹೇಳಬಹುದು. ಸಣ್ಣ ಪುಟ್ಟ ವಾದಗಳು ದೊಡ್ಡ ಬೆಂಕಿಯನ್ನು ಸೃಷ್ಟಿ ಮಾಡಬಹುದು. ಈ ತಿಂಗಳ 17ರ ನಂತರ ಪ್ರೀತಿ ಹಾಗೂ ಸಂಬಂಧಕ್ಕೆ ಸಂಬಂಧಿಸಿದಂತೆ ಕೆಲವು ಸ್ಪಷ್ಟತೆ ದೊರೆಯುವುದು.

  ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳು

  2018 ಜೂನ್ ತಿಂಗಳ ಅದೃಷ್ಟ ಸಂಖ್ಯೆಗಳು 4, 7, 11, 22 ಮತ್ತು 29.

  ಅದೃಷ್ಟದ ಬಣ್ಣಗಳು: ತಿಳಿ ನೀಲಿ ಮತ್ತು ಬೆಳ್ಳಿ ಬಣ್ಣ

  English summary

  Monthy Prediction - June Aquarius

  This long stretch of June will be loaded with high points and low points that would be quite serious in the first few days. Your involvement in your work environment and in addition to your dealings in your business will be a learning stage. Try not to become careless with your work, since it can cause adverse results. As far as your endeavors, you will be fulfilled as the outcomes for your diligent work, which will be quite appreciated. Read on for what the stars have in store for you in terms of your health fortune, career, finances and love life.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more