Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ಈ 8 ಭಾಗಗಳಲ್ಲಿ ಮಚ್ಚೆಯಿದ್ದರೆ ಆರ್ಥಿಕ ಸಂಕಷ್ಟ ಹಾಗೂ ಹಣದ ಸಮಸ್ಯೆ ಕಾಡಲಿದೆ!
ಪ್ರತಿಯೊಬ್ಬರ ದೇಹದಲ್ಲಿ ಎಲ್ಲಾದರೊಂದು ಭಾಗದಲ್ಲಿ ಮಚ್ಚೆ ಇದ್ದೇ ಇರುವುದು. ಆದರೆ ಈ ಮಚ್ಚೆಗಳ ಪ್ರಾಮುಖ್ಯತೆ ಮಾತ್ರ ನಮಗೆ ತಿಳಿದಿರಲ್ಲ. ಸಮುದ್ರಿಕಾ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿರುವ ಮಚ್ಚೆಗಳ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತದೆ. ದೇಹದ ಕೆಲವೊಂದು ಭಾಗದಲ್ಲಿರುವ ಮಚ್ಚೆಗಳು ಅದೃಷ್ಟ ಉಂಟು ಮಾಡಿದರೆ, ಇನ್ನು ಕೆಲವು ಭಾಗದಲ್ಲಿರುವ ಮಚ್ಚೆಗಳು ತೊಂದರೆ ಉಂಟು ಮಾಡಬಹುದು.
ಇದರಲ್ಲಿ ವಿಶೇಷವಾಗಿ ಕೆಲವು ಭಾಗದಲ್ಲಿರುವ ಮಚ್ಚೆಗಳು ಆರ್ಥಿಕ ಮುಗ್ಗಟ್ಟು ಉಂಟು ಮಾಡುವುದು. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ನಿಮಗೆ ಆರ್ಥಿಕ ಮುಗ್ಗಟ್ಟು ಉಂಟಾಗುವುದು ಎಂದು ಈ ಲೇಖನದಲ್ಲಿ ತಿಳಿಯಿರಿ.

1.ಎಡಗಲ್ಲದಲ್ಲಿ ಮಚ್ಚೆ
ಎಡಗಲ್ಲದ ಮೇಲೆ ಮಚ್ಚೆಯಿದ್ದರೆ ಆಗ ನಿಮಗೆ ಆದಾಯದ ಶ್ರೇಷ್ಠ ಮೂಲವಿದೆ ಎನ್ನಬಹುದು. ಅದಾಗ್ಯೂ, ನೀವು ಉಳಿತಾಯ ಮಾಡಲು ವಿಫವಾಗುವಂತಹ ಲಕ್ಷಣಗಳು ಇವೆ.

2.ಕೆಳತುಟಿಯಲ್ಲಿ ಮಚ್ಚೆ
ಕೆಳತುಟಿಯ ಯಾವುದೇ ಭಾಗದಲ್ಲಿ ಮಚ್ಚೆಯಿದ್ದರೆ, ಆಗ ಈ ವ್ಯಕ್ತಿಯು ಯಾವಾಗಲೂ ಆರ್ಥಿಕ ಸಮಸ್ಯೆಯನ್ನು ಎದುರಿಸಲಿರುವನು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಮಚ್ಚೆ ಇರುವವರು ಸದಾ ಹಣದ ಮುಗ್ಗಟ್ಟಿನಲ್ಲಿಯೇ ಇರುತ್ತಾರೆ.

3.ಎಡ ಅಂಗೈಯಲ್ಲಿ ಮಚ್ಚೆ
ಎಡ ಅಂಗೈಯಲ್ಲಿ ಮಚ್ಚೆಯಿರುವಂತಹ ವ್ಯಕ್ತಿಯು ತನ್ನ ಪ್ರೌಢಾವಸ್ಥೆಯಲ್ಲಿ ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಾನೆ ಎನ್ನಲಾಗಿದೆ. ನಿಮಗೆ ಹಣದ ಕೊರತೆಯಾಗದೆ ಇರುವುದು ಒಳ್ಳೆಯ ವಿಚಾರ. ಆದರೆ ವೆಚ್ಚ ಸರಿದೂಗಿಸಲು ಕಠಿಣವಾಗುವುದು. ಅಚ್ಚರಿ ಏನೆಂದರೆ ಈ ವ್ಯಕ್ತಿಗಳಿಗೆ ಹಣದ ಮುಗ್ಗಟ್ಟು ಎಷ್ಟು ಎದುರಾದರೂ ಹಣ ಸದಾ ಹೊಂದಿಕೆಯಾಗುತ್ತದೆ. ಈ ವ್ಯಕ್ತಿಗಳಿಗೆ ಖರ್ಚನ್ನು ಕಡಿಮೆ ಮಾಡುವುದೇ ಕಷ್ಟಕರವಾದ ವಿಷಯವಾಗಿರುತ್ತದೆ.

4.ಎಡಗಾಲಿನ ಮಚ್ಚೆ
ಎಡಗಾಲಿನ ಯಾವುದೇ ಭಾಗದಲ್ಲಿ ಮಚ್ಚೆಯಿದ್ದರೂ ಆಗ ಆ ವ್ಯಕ್ತಿಯು ಯಾವುದೇ ಕಾರಣವಿಲ್ಲದೆಯೂ ಹಣದ ನಷ್ಟ ಅನುಭವಿಸಬಹುದು. ಇವರು ಎಷ್ಟು ಕಠಿಣವಾಗಿ ಹಣ ಉಳಿಸಲು ಪ್ರಯತ್ನಿಸಿದರೂ ಅದು ಅಂತಿಮವಾಗಿ ಖರ್ಚಾಗಿ ಹೋಗುವುದು. ಇವರು ಆದಷ್ಟು ಖರ್ಚನ್ನು ಕಡಿಮೆ ಮಾಡಲು, ಆದಾಯವನ್ನು ಉಳಿಸಲು ಕಷ್ಟ ಪಡುತ್ತಾರೆ ಆದರೆ ಕಡೆಯದಾಗಿ ಇವರ ಉಳಿತಾಯ ಮಾತ್ರ ಹೆಚ್ಚೂ ಕಡಿಮೆ ಸೊನ್ನೆಯೇ ಆಗಿರುತ್ತದೆ.

5.ತೋರು ಬೆರಳಿನ ಮಚ್ಚೆ
ತೋರು ಬೆರಳಿನ ಒಳಭಾಗದಲ್ಲಿ ಮಚ್ಚೆಯಿದ್ದರೆ ಇದು ವ್ಯಕ್ತಿಯೊಬ್ಬನು ತನ್ನ ಜೀವನದಲ್ಲಿ ದುಡ್ಡಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಿಲುಕುವನು ಎಂದು ಹೇಳಲಾಗುತ್ತದೆ. ಕೆಲವೊಂದು ಸಲ ಕೈಗೆ ಬಂದದ್ದು ಬಾಯಿಗೆ ಬರದಂತಹ ಪರಿಸ್ಥಿತಿ ಬರಬಹುದು. ಎಷ್ಟೂ ಸಂದರ್ಭಗಳಲ್ಲಿ ಇವರು ಒಪ್ಪೊತ್ತಿನ ಊಟಕ್ಕೂ ಹಣವಿಲ್ಲದ ಸ್ಥಿತಿಯನ್ನು ಎದುರಿಸುತ್ತಾರೆ.

6.ಗುರುವಿನ ನಡುಕಟ್ಟು
ಗುರುವಿನ ನಡುಕಟ್ಟುವಿನ ಮೇಲೆ ತುಂಬಾ ಗಾಢವಾಗಿರುವ ಮಚ್ಚೆಯು ಇದ್ದರೆ ಆಗ ಈ ವ್ಯಕ್ತಿಯಲ್ಲಿ ಹಣವು ಹೆಚ್ಚಿನ ಸಮಯ ಕೈಯಲ್ಲಿರುವುದಿಲ್ಲ. ಈ ವ್ಯಕ್ತಿಗಳು ತುಂಬಾ ಶ್ರೀಮಂತರನ್ನು ಮದುವೆಯಾದರೂ ಹಣದ ಕೊರತೆಯ ಸಮಸ್ಯೆ ಮಾತ್ರ ಇವರಿಗೆ ಇರುವುದು.

7.ಎಡ ಕಂಕುಳಿನಲ್ಲಿ ಮಚ್ಚೆ
ಎಡ ಕಂಕುಳಿನಲ್ಲಿ ಮಚ್ಚೆಯಿದ್ದರೆ ಇಂತಹ ವ್ಯಕ್ತಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಈ ವ್ಯಕ್ತಿಗಳ ಹೆಚ್ಚಿನ ಹಣವು ಕಾಯಿಲೆ ಮತ್ತು ಚಿಕಿತ್ಸೆಗೆ ವ್ಯಯವಾಗುವುದು. ಇದರಿಂದಾಗಿ ಇವರಿಗೆ ಹಣದ ವೆಚ್ಚದ ಬಗ್ಗೆ ನಿಯಂತ್ರಣವಿರಲ್ಲ.

8.ಮೂಗಿನ ಪಕ್ಕದಲ್ಲಿರುವ ಮಚ್ಚೆ
ಮೂಗಿನ ಯಾವುದೇ ಪಕ್ಕದಲ್ಲಿ ಮಚ್ಚೆ ಇರುವ ವ್ಯಕ್ತಿಗಳಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಆದರೆ ಜೀವಮಾನವಿಡೀ ಈ ಕಷ್ಟಗಳು ಇರುತ್ತವೆ ಎಂದು ಈ ವ್ಯಕ್ತಿಗಳು ಕೊರಗಬೇಕಾಗಿಲ್ಲ. ಹೆಚ್ಚಿನ ಕಷ್ಟಗಳು ಈ ವ್ಯಕ್ತಿಗಳ ವಿವಾಹದ ಬಳಿಕ ಸುಗಮವಾಗುತ್ತವೆ ಹಾಗೂ ಮುಂದಿನ ಜೀವನ ಸುಖಕರವಾಗುತ್ತದೆ. ಆದರೆ ವಿವಾಹದವರೆಗೂ ಈ ವ್ಯಕ್ತಿಗಳು ಕೊಂಚ ಹೆಚ್ಚೇ ಕಷ್ಟಪಡಬೇಕಾಗುತ್ತದೆ.



Click it and Unblock the Notifications
