For Quick Alerts
ALLOW NOTIFICATIONS  
For Daily Alerts

ರಾಶಿ ಭವಿಷ್ಯ: ಮೇ ತಿಂಗಳಲ್ಲಿ ಸಿಂಹ ರಾಶಿಯವರ ಭವಿಷ್ಯ ಹೇಗಿದೆ ನೋಡಿ...

|

ಸಿಂಹರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜನ್ಮತಃ ನಾಯಕರಾಗಿರುತ್ತಾರೆ. ಇವರು ವಿಶ್ವಾಸಿಗಳೂ, ಇತರರ ಮೇಲೆ ಪ್ರಭಾವ ಬೀರಬಲ್ಲವರೂ ಹಾಗೂ ಕ್ರಿಯಾತ್ಮಕರೂ ಆಗಿರುತ್ತಾರೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ತೊಡಕುಗಳನ್ನು ಎದುರಿಸಿ ಜಯಗಳಿಸಲು ಯತ್ನಿಸುವ ಮೂಲಕ ಸದಾ ಜಯಶೀಲರಾಗಿರುತ್ತಾರೆ. ಇವರ ನಿಷ್ಠೆ ಮತ್ತು ಔದಾರ್ಯ ಸ್ವಭಾವಗಳು ಅಲ್ಪಸಮಯದಲ್ಲಿಯೇ ಹೆಚ್ಚಿನ ಸ್ನೇಹಿತರನ್ನು ಪಡೆಯಲು ನೆರವಾಗುತ್ತದೆ. ವೈಯಕ್ತಿಕವಗಿ ಇವರು ಆಕರ್ಷಕ ಮತ್ತು ಭವ್ಯ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೂ ಇವರು ಇತರರ ಮೇಲೆ ಸುಲಭವಾಗಿ ಪ್ರಭಾವ ಬೀರಬಲ್ಲವರಾಗಿರುತ್ತಾರೆ.

ಸಾಮಾನ್ಯವಾಗಿ ಸಿಂಹರಾಶಿಯವರಲ್ಲಿ ಕೆಲವು ಅಹಂಭಾವಗಳಿರುತ್ತವೆ ಹಾಗೂ ಇದನ್ನು ಪೂರ್ಣಗೊಳಿಸಲು ಆ ಅಹಂಭಾವವನ್ನು ಬೆಳೆಯಲು ಬಿಡುತ್ತಾರೆ. ಆದರೆ ಈ ವ್ಯಕ್ತಿಗಳನ್ನು ಅರಿಯಲು ಇದೊಂದೇ ಗುಣ ಸಾಲದು. ಮೇ ತಿಂಗಳಲ್ಲಿ ಗಗನದಲ್ಲಿ ಗೋಚರಿಸಲಿರುವ ಗ್ರಹ ಮತ್ತು ತಾರೆಗಳನ್ನು ಅನುಸರಿಸಿ ಈ ತಿಂಗಳಲ್ಲಿ ಸಿಂಹರಾಶಿಯವರು ಯಾವ ಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ದರಾಗಿರಬೇಕು ಎಂಬುದನ್ನು ಅರಿತುಕೊಳ್ಳುವುದು ಉತ್ತಮ. ಇಂದಿನ ಲೇಖನದಲ್ಲಿ ಸಿಂಹ ರಾಶಿಯವರು ಇಡಿಯ ಮೇ ತಿಂಗಳಲ್ಲಿ ಹೇಗೆ ತಯಾರಿ ನಡೆಸಬೇಕು ಎಂಬುದನ್ನು ವಿವರಿಸಲಾಗಿದ್ದು ಇದಕ್ಕಾಗಿ ಮುಂಚಿತವಾಗಿ ಸಿದ್ದರಿರುವ ಮೂಲಕ ಈ ಗ್ರಹಗತಿಗಳ ಪೂರ್ಣ ಪ್ರಯೋಜನವನ್ನು ಪಡೆಯಬಹುದು..

ಆರೋಗ್ಯ ಭಾಗ್ಯ

ಆರೋಗ್ಯ ಭಾಗ್ಯ

ಆರೋಗ್ಯದ ದೃಷ್ಟಿಯಿಂದ ಈ ತಿಂಗಳ ಅರ್ಧಭಾಗ ಕಳೆದ ಬಳಿಕ ಅಂದರೆ ಸುಮಾರು 21ನೇ ತಾರೀಖಿನ ಬಳಿಕ ಗಣನೀಯ ಸುಧಾರಣೆ ಕಂಡುಬರಲಿದೆ. ಈ ತಿಂಗಳಲ್ಲಿ ನೀವು ಹೆಚ್ಚು ಆರಾಮ ಪಡೆಯಲಿದ್ದೀರಿ ಹಾಗೂ ವ್ಯಾಯಾಮ ಕಡಿಮೆಯಾಗಲಿದೆ. ನಿಮ್ಮ ದೇಹದಿಂದ ಹರಿದು ಹೋಗುತ್ತಿದ್ದ ಚೈತ್ಯನ್ಯವನ್ನು ಉಳಿಸಿಕೊಳ್ಳುವ ಮೂಲಕ ಈ ತಿಂಗಳಲ್ಲಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ವೃತ್ತಿಜೀವನದ ಬಗ್ಗೆ

ವೃತ್ತಿಜೀವನದ ಬಗ್ಗೆ

ಈ ತಿಂಗಳಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯೇನೂ ಕಂಡುಬರುವುದಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಈ ತಿಂಗಳಲ್ಲಿ ನಿಮ್ಮ ಪ್ರಯಾಣಗಳು ಮಾತ್ರ ಹೆಚ್ಚಲಿವೆ ಆದರೆ ಈ ಪ್ರಯಾಣಗಳಿಂದಲೂ ಹೆಚ್ಚಿನ ಲಾಭ ದೊರಕದು! ಆದರೆ ಪೂರ್ವಾಭಿಮುಖವಾದ ಪ್ರಯಾಣ ನಿಮಗೆ ಶ್ರೇಯಸ್ಕರವಾಗಿದೆ. ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳು ಹಾಗೂ ನಿಮ್ಮ ಆತ್ಮೀಯ ಸ್ನೇಹಿತರೂ ನಿಮ್ಮಿಂದ ದೂರ ಉಳಿಯಬಹುದು. ಆದ್ದರಿಂದ ಸಾಧ್ಯವಾದಷ್ಟೂ ಇವರ ಮೇಲಿನ ಅವಲಂಬನೆಯಿಂದ ದೂರವಿರಿ.

ಈ ತಿಂಗಳ ಹಣಕಾಸಿನ ಬಗ್ಗೆ

ಈ ತಿಂಗಳ ಹಣಕಾಸಿನ ಬಗ್ಗೆ

ಈ ತಿಂಗಳಲ್ಲಿ ನಿಮ್ಮ ಹಣಕಾಸಿನ ವ್ಯವಸ್ಥೆ ಹಿಂದಿನ ದಿನಗಳಿಗಿಂತ ಭಿನ್ನವೇನೂ ಇರದು! ಅಲ್ಲದೇ ಹೊಸ ವ್ಯಾಪಾರ ಅಥವಾ ಹೂಡಿಕೆಯನ್ನು ಹೂಡುವವರಿದ್ದರೆ ಇದು ಸರಿಯಾದ ಕಾಲವಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ಸಮಯ ಬರುವವರೆಗೂ ಈ ಹೂಡಿಕೆ ಅಥವಾ ಪ್ರಾರಂಭಿಸಬೇಕಾದ ವಾಣಿಜ್ಯ ವಹಿವಾಟನ್ನು ಮುಂದೂಡುವುದೇ ಉತ್ತಮ. ಏಕೆಂದರೆ ಈ ತಿಂಗಳ ಗ್ರಹಗತಿಗಳು ಯಾವುದೇ ಬಗೆಯ ಹಣದ ಹೂಡುವಿಕೆಗೆ ಪೂರಕವಾಗಿಲ್ಲ. ಅಲ್ಲದೇ ಸಾರಿಗೆ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವವರು ನಷ್ಟ ಅನುಭವಿವ ಸಾಧ್ಯತೆ ಇದೆ. ಈ ಸಮಯದಲ್ಲಿ ಆದಷ್ಟೂ ಕಡಿಮೆ ಖರ್ಚು ಇರುವಂತೆ ತಮ್ಮ ಜೀವನವನ್ನು ಸರಳಗೊಳಿಸುವ ಮೂಲಕ ಈ ಕಷ್ಟಕರ ಸಮಯವನ್ನು ಪಾರಾಗಬಹುದು.

 ನಿಮ್ಮ ಪ್ರೀತಿಯ ಜೀವನದ ಬಗ್ಗೆ

ನಿಮ್ಮ ಪ್ರೀತಿಯ ಜೀವನದ ಬಗ್ಗೆ

ನೀವು ನಿಮ್ಮ ಗೆಳೆಯ/ಗೆಳತಿಯ ಒಡನಾಟವನ್ನು ಸಂಬಂಧದ ರೂಪದಲ್ಲಿ ಬದಲಿಸಬಹುದಾದ ಸಾಧ್ಯತೆಗಳು ದ್ವಂದ್ವರೂಪದಲ್ಲಿರುತ್ತವೆ. ನಿಮ್ಮ ಜೊತೆಗಾರರು ತಮ್ಮ ವೈಯಕ್ತಿಕ ಸ್ವಾತಂತ್ಯ್ರಕ್ಕೇ ಹೆಚ್ಚಿನ ಮಹತ್ವ ನೀಡುವುದು ನಿಮಗೆ ಇಷ್ಟವಾಗಲಿಕ್ಕಿಲ್ಲ. ಆದರೆ ಸಾಮರಸ್ಯ ಹಾಗೂ ಶಾಂತಿ ಕಾಪಾಡಲಿಕ್ಕಾದರೂ ಸರಿ, ನೀವು ಅಪಾರವಾದ ತಾಳ್ಮೆಯನ್ನು ವಹಿಸಬೇಕಾಗುತ್ತದೆ. ಒಂಟಿಜೀವಿಗಳಿಗೆ ಈ ತಿಂಗಳು ಹೆಚ್ಚು ಅವಕಾಶಗಳನ್ನು ಒದಗಿಸಿಕೊಡಲಿದೆ. ಆನ್ಲೈನ್ ಮೂಲಕ ಸ್ನೇಹಿತರನ್ನು ಪಡೆಯಬಯಸುವವರೂ ಪ್ರೇಮಸಂಬಂಧವನ್ನು ಪಡೆಯಲಿದ್ದಾರೆ. ಆದರೆ ವಿವಾಹ ಅಥವಾ ವಿಚ್ಛೇದನಗಳಿಗೆ ಈ ತಿಂಗಳು ಸಮರ್ಪಕವಲ್ಲ!

ಅದೃಷ್ಟ ಸಂಖ್ಯೆಗಳು ಮತ್ತು ಬಣ್ಣಗಳು

ಅದೃಷ್ಟ ಸಂಖ್ಯೆಗಳು ಮತ್ತು ಬಣ್ಣಗಳು

ಈ ತಿಂಗಳಲ್ಲಿ ಸಿಂಹರಾಶಿಯವರಿ ಅದೃಷ್ಟ ತರಲಿರುವ ಸಂಖ್ಯೆಗಳೆಂದರೆ 6, 24, 39, 59, ಹಾಗೂ 83.

ಅದೃಷ್ಟ ದಿನಾಂಕಗಳೆಂದರೆ: 2, 3, 12, 13, 21, 22, 29, 30.

ಅದೃಷ್ಟ ಬಣ್ಣಗಳೆಂದರೆ: ಬಿಳಿ ಮತ್ತು ಚಿನ್ನದ ಬಣ್ಣ, ತಾಮ್ರದ ಬಣ್ಣ ಹಾಗೂ ತಿಳಿಹಸಿರು. ಇನ್ನು ಈ ರಾಶಿ ಚಕ್ರದ ಚಿಹ್ನೆಯನ್ನು ಸೂರ್ಯನ ರಾಜ ಎಂದು ಕರೆಯಲಾಗುತ್ತದೆ. ಈ ರಾಶಿಯ ಅದೃಷ್ಟ ಬಣ್ಣ ಚಿನ್ನ ಮತ್ತು ಕಿತ್ತಳೆ ಹಳದಿ. ಈ ಬಣ್ಣವು ಸಿಂಹ ರಾಶಿಯವರಿಗೆ ಉತ್ತಮ ಅದೃಷ್ಟ ತಂದು ಕೊಡುವುದು.

ಸಿಂಹ ರಾಶಿಯವರು ಅತ್ಯಂತ ಬುದ್ಧಿವಂತ ರಾಶಿ

ಸಿಂಹ ರಾಶಿಯವರು ಅತ್ಯಂತ ಬುದ್ಧಿವಂತ ರಾಶಿ

ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

ಇವರು ಸಿಂಹದಂತೆಯೇ ದೃಢ ನಿಶ್ಚಯವುಳವರು

ಇವರು ಸಿಂಹದಂತೆಯೇ ದೃಢ ನಿಶ್ಚಯವುಳವರು

ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ಜೀವನಸಂಗಾತಿ ಅಥವಾ ಪ್ರಾಣ ಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರಿಗೆ ಸರ್ಕಾರಿ ಕೆಲಸ, ಕಾನೂನು ಸೇವೆ, ಕಲೆ, ವಿನ್ಯಾಸ, ವಾಸ್ತುಶಿಲ್ಲ, ಇಂಜಿನಿಯರಿಂಗ್, ಮನೋರಂಜನೆ, ರಿಯಲ್ ಎಸ್ಟೇಟ್ ಅಥವಾ ಶಿಕ್ಷಣ ಕ್ಷೇತ್ರವು ಹೊಂದಿಕೆಯಾಗುತ್ತದೆ.

ಇವರಿಗೆ ಕೋಪ ಜಾಸ್ತಿ!

ಇವರಿಗೆ ಕೋಪ ಜಾಸ್ತಿ!

ಇನ್ನು ಈ ರಾಶಿಯವರು ತಮ್ಮ ಮಾತನ್ನು ಯಾರಾದರೂ ಕೇಳುತ್ತಿಲ್ಲ ಎಂದಾದರೆ ತಕ್ಷಣವೇ ಕೋಪಗೊಳ್ಳುತ್ತಾರೆ. ಇವರು ತಕ್ಷಣಕ್ಕೆ ನಿರಾಶೆಯ ಭಾವ ಮತ್ತು ಆಶ್ಚರ್ಯಕರ ಪ್ರವೃತ್ತಿಗೆ ಒಳಗಾಗುತ್ತಾರೆ. ಇವರು ಒಂದು ರೀತಿಯ ಕಿರಿಕಿರಿಗೆ ಒಳಗಾದರೆ ಬಹಳ ಬೇಸರ ಹಾಗೂ ಅಸಮಧಾನಕ್ಕೆ ಒಳಗಾಗುತ್ತಾರೆ. ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದನ್ನು ಅವರು ಭಾವಿಸಿದರೆ ಸಿಟ್ಟಿಗೆ ಒಳಗಾಗುವರು. ಕೆಲವು ವಿಚಾರಗಳನ್ನು ಇವರೇ ನಿರ್ಲಕ್ಷಿಸುತ್ತಿದ್ದರೆ ಮಾನಸಿಕವಾಗಿ ಸಮಾಧಾನದಲ್ಲಿ ಇರುತ್ತಾರೆ.

English summary

Leo May 2018 Horoscope Predictions

Leos always wish to fuel their ego and grow it to find some fulfillment. But this is not enough to know them well. Understanding on what the stars have in store for them during the month of May helps them be prepared for the best and worst in advance. Here, in this article, our astro-experts reveal about the entire May 2018 predictions for the Leo zodiac sign. If this is your sign, then you need to be aware of the oncoming events for the entire month. Check it out.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more