For Quick Alerts
ALLOW NOTIFICATIONS  
For Daily Alerts

ಯಶಸ್ವಿ ವ್ಯಕ್ತಿಗಳ ಕೆಲವೊಂದು ಒಳ್ಳೆಯ ಅಭ್ಯಾಸಗಳು

|

ಯಶಸ್ಸು ಎನ್ನುವುದು ಹಾಗೆ ರಾತ್ರಿ ಬೆಳಗಾಗುದರೊಳಗಡೆ ಬರುವುದಿಲ್ಲ. ಇದಕ್ಕಾಗಿ ಕಠಿಣ ಪರಿಶ್ರಮ, ಬದ್ಧತೆಯೊಂದಿಗೆ ಸ್ವಲ್ಪ ಮಟ್ಟಿನ ಅದೃಷ್ಟ ಕೂಡ ಬೇಕಾಗುವುದು. ಹೀಗಿದ್ದರೆ ಮನುಷ್ಯನಿಗೆ ಯಶಸ್ಸಿನ ಮೆಟ್ಟಿಲೇರಲು ಕಷ್ಟವಾಗದು. ಕೇವಲ ಅದೃಷ್ಟವನ್ನೇ ನಂಬಿಕೊಂಡು ಕುಳಿತುಕೊಂಡರೆ ಆಗ ಯಶಸ್ಸು ಖಂಡಿತವಾಗಿಯೂ ಕೈಗೆಟುಕದು. ಕಠಿಣ ಪರಿಶ್ರಮ ಪಟ್ಟರೆ ಆಗ ಅದೃಷ್ಟ ಕೂಡ ನಮ್ಮ ಜತೆಗಿರುವುದು. ವಿಶ್ವದಲ್ಲಿ ನಾವು ಹಲವಾರು ಮಂದಿ ಯಶಸ್ವಿ ವ್ಯಕ್ತಿಗಳನ್ನು ನೋಡುತ್ತೇವೆ. ಇಂತಹ ವ್ಯಕ್ತಿಗಳು ಹಲವಾರು ವರ್ಷಗಳ ಪರಿಶ್ರಮದಿಂದಾಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವ್ಯಕ್ತಿಗಳ ಯಶಸ್ಸಿಗೆ ಕೇವಲ ಕಠಿಣ ಪರಿಶ್ರಮ ಹಾಗೂ ಅದೃಷ್ಟ ಮಾತ್ರ ಕಾರಣವಲ್ಲ. ಇವರು ಪ್ರತಿನಿತ್ಯ ಪಾಲಿಸಿಕೊಂಡು ಬರುತ್ತಿರುವಂತಹ ಕೆಲವೊಂದು ಅಭ್ಯಾಸಗಳು ಕೂಡ ಇವರ ಯಶಸ್ಸಿನಲ್ಲಿ ಪಾಲು ಪಡೆದಿದೆ.

good habits

ಅಧ್ಯಯನಗಳ ಪ್ರಕಾರ ಬೆಳಗ್ಗಿನ ಕೆಲವೊಂದು ಅಭ್ಯಾಸಗಳು ಆ ದಿನ ಹಾಗೂ ಸಂಪೂರ್ಣ ವಾರದ ಮೂಡ್ ನ್ನು ಸೃಷ್ಟಿ ಮಾಡುವುದು. ಇದರಿಂದಾಗಿ ಇಂತಹ ಕೆಲವೊಂದು ಅಭ್ಯಾಸಗಳು ಆ ವ್ಯಕ್ತಿಯನ್ನು ದೀರ್ಘಕಾಲದವರೆಗೆ ಯಶಸ್ವಿಯಾಗಿಸುವುದು. ಈ ಲೇಖನದಲ್ಲಿ ಕೆಲವೊಂದು ಯಶಸ್ವಿ ವ್ಯಕ್ರಿಗಳು ಪಾಲಿಸಿಕೊಂಡು ಹೋಗುತ್ತಿರುವ ಬೆಳಗ್ಗೆ ಅಭ್ಯಾಸದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ನಿಮಗೆ ಜೀವನದಲ್ಲಿ ಯಶಸ್ಸು ಬೇಕಿದ್ದರೆ ಆಗ ನೀವು ಇವುಗಳನ್ನು ಪಾಲಿಸಿಕೊಂಡು ಹೋಗಬಹುದು.

ಬೆಳಗ್ಗೆ ಬೇಗ ಎದ್ದೇಳಿ

ಬೆಳಗ್ಗೆ ಬೇಗ ಎದ್ದೇಳಿ

ಬೆಳಗ್ಗೆ ನೀವು ಮೊದಲು ಮಾಡಬೇಕಾದ ಕೆಲಸವೆಂದರೆ ಬೇಗನೆ ಎದ್ದೇಳುವುದು. ಇದರಿಂದ ನಿಮಗೆ ಕೆಲಸಗಳನ್ನು ಪೂರೈಸಲು ಹೆಚ್ಚಿನ ಸಮಯ ಸಿಗುವುದು. ಸೂರ್ಯ ಹುಟ್ಟುವ ತನಕ ನೀವು ಮಲಗಿದ್ದರೆ ಆಗ ನಿಮಗೆ ಯಶಸ್ಸು ಸಿಗುವುದು ತುಂಬಾ ಕಷ್ಟ.

Most Read: ಪಾಪ, ಹುಟ್ಟುವಾಗಲೇ ಈತನ ಅರ್ಧ ದೇಹ ಸ್ವಾಧೀನದಲ್ಲಿರಲಿಲ್ಲ!

5 ನಿಮಿಷ ಧ್ಯಾನ ಮಾಡಿ

5 ನಿಮಿಷ ಧ್ಯಾನ ಮಾಡಿ

ನಿಮ್ಮ ವ್ಯಸ್ತ ವೇಳಾಪಟ್ಟಿಯಿಂದ ಸಮಯ ತೆಗೆದುಕೊಂಡು ಸ್ವಲ್ಪ ಸಮಯ ಧ್ಯಾನ ಮಾಡಿದರೆ ಆಗ ನಿಮಗೆ ಶಕ್ತಿ ಸಿಗುವುದು ಮತ್ತು ಮನಸ್ಸು ಶಾಂತವಾಗಿರುವುದು. ಇಷ್ಟು ಮಾತ್ರವಲ್ಲದೆ ನಿಮಗೆ ಧನಾತ್ಮಕವಾಗಿರಲು ಮತ್ತು ನಕರಾತ್ಮಕತೆಯಿಂದ ದೂರವಿರಲು ನೆರವಾಗುವುದು. ಧಾನ್ಯ ಮಾಡುವುದರಿಂದ ನೀವು ಎದುರಿಸುವಂತಹ ಕೆಲವೊಂದು ಸಮಸ್ಯೆಗಳಿಗೂ ಉತ್ತರ ಸಿಗಬಹುದು. ಇದರಿಂದ ನೀವು ಶಾಂತ ಹಾಗೂ ಆತ್ಮವಿಶ್ವಾಸದಿಂದ ಇರಬೇಕು.

ದೇಹಕ್ಕೆ ಶಕ್ತಿ ನೀಡಿ

ದೇಹಕ್ಕೆ ಶಕ್ತಿ ನೀಡಿ

ಆರೋಗ್ಯಕರವಾದ ಉಪಾಹಾರ ಮಾಡಿ. ಇದರಿಂದ ನಿಮ್ಮ ಮೆದುಳು ಸರಿಯಾಗಿ ಕೆಲಸ ಮಾಡಲು ಸಹಕರಿಸುವುದು. ಆರೋಗ್ಯಕಾರಿ ಉಪಾಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿ ಸಿಗುವುದು. ಮನಸ್ಸು ಹಾಗೂ ದೇಹವು ದಿನದ ಕೆಲಸಗಳಿಗೆ ತಯಾರಾಗುವುದು.

Most Read: ಹಣೆಗೆ ಅಂಟುವ ಬಿಂದಿ ಇಟ್ಟುಕೊಳ್ಳಬಾರದಂತೆ, ಇದರಿಂದ ಸಮಸ್ಯೆಗಳೇ ಜಾಸ್ತಿಯಂತೆ!

ಆತ್ಮವಿಶ್ವಾಸದಿಂದ ಇರಬೇಕು

ಆತ್ಮವಿಶ್ವಾಸದಿಂದ ಇರಬೇಕು

ಯಶಸ್ವಿಯಾಗಿರುವಂತಹ ವ್ಯಕ್ತಿಗಳಲ್ಲಿ ಯಾವಾಗಲೂ ಆತ್ಮವಿಶ್ವಾಸವು ಇರುವುದು. ನಿಮ್ಮ ಸಾಮರ್ಥ್ಯ, ಪ್ರತಿಭೆ ಮತ್ತು ಬಲವನ್ನು ಸರಿಯಾಗಿ ಬಳಸಿಕೊಂಡು ಇದನ್ನು ಪಡೆದುಕೊಳ್ಳಬೇಕು. ತನ್ನ ಮೇಲೆ ಬಲವಾದ ನಂಬಿಕೆಯೆನ್ನುವುದು ಇದ್ದರೆ ಆಗ ಇದು ಆತ್ಮವಿಶ್ವಾಸ ತುಂಬಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುವುದು.

English summary

Habits Of Highly Successful People

Success can be achieved not just by having luck, but by also working hard towards reaching the goal. Studies reveal that the morning routine generally sets the mood for the rest of the day and the rest of the week. These habits, in the long run, tend to make a person successful over a period of time.
X
Desktop Bottom Promotion