For Quick Alerts
ALLOW NOTIFICATIONS  
For Daily Alerts

ಗುರು ಶಂಕರಾಚಾರ್ಯರ ಬಗ್ಗೆ ಕೆಲವು ಅಗತ್ಯ ಮಾಹಿತಿಗಳು

|

ಹಿಂದೂ ಕ್ಯಾಲೆಂಡರ್ ಪ್ರಕಾರ, ವೈಶಾಖ ಮಾಸ ಅತಿ ಪವಿತ್ರವಾದ ಮಾಸವಾಗಿದ್ದು ಎಲ್ಲಾ ಮಾಸಗಳಲ್ಲಿ ಮುಖ್ಯವಾದ ಮಾಸವಾಗಿದೆ. ಈ ತಿಂಗಳಲ್ಲಿ ನಾವು ಹಲವಾರು ಹಬ್ಬಗಳನ್ನು ಆಚರಿಸುತ್ತೇವೆ. ಇವು ಖಗೋಳಶಾಸ್ತ್ರದ ಪ್ರಕಾರವೂ ಮುಖ್ಯವಾಗಿದ್ದು ಈ ತಿಂಗಳಲ್ಲಿ ಕೆಲವು ದೈವಿಕ ವ್ಯಕ್ತಿಗಳು, ಋಷಿಮುನಿಗಳು ಹಾಗೂ ಸಂತರು ತಮ್ಮ ಜನ್ಮದಿನವನ್ನು ಹೊಂದಿದ್ದಾರೆ.

ಏಪ್ರಿಲ್ 20ರಂದು ಆದಿ ಶಂಕರಾಚಾರ್ಯರು ಜನಸಿದರು. ಆದಿ ಶಂಕರಾಚಾರ್ಯರನ್ನು ಭಗವಂತ ಶಿವನ ಅವತಾರ ಎಂದು ಭಾವಿಸಲಾಗುತ್ತದೆ. ಇವರೊಬ್ಬ ಸಂತ, ತತ್ವಜ್ಞಾನಿ ಹಾಗೂ ದೇವತಾಶಾಸ್ತ್ರಜ್ಞರೂ ಆಗಿದ್ದರು. ಇವರು ಅದ್ವೈತ ವೇದಾಂತ ತತ್ವಜ್ಞಾನದ ಸಮರ್ಥಕರಾಗಿದ್ದರು ಹಾಗೂ ಹಿಂದೂ ಧರ್ಮದ ಹಲವಾರು ನಂಬಿಕೆಗಳನ್ನು ಆದಿ ಶಂಕರಾಚಾರ್ಯರೇ ಆಚರಣೆಗೆ ತಂದರು ಎಂದು ಭಾವಿಸಲಾಗುತ್ತದೆ.

ಭಗವಂತ ಶಿವನ ಆಶೀರ್ವಾದದಿಂದ ಜನಿಸಿದ ಆರ್ಯರು

ಆದಿ ಶಂಕರಾಚಾರ್ಯರು ಸುಮಾರು 1200 ವರ್ಷಗಳ ಹಿಂದೆ ಇಂದಿನ ಕೇರಳದ ಕೊಚ್ಚಿನ್ ನಗರದಿಂದ ಸುಮಾರು ಐದಾರು ಕಿ.ಮೀ ದೂರವಿರುವ ಕಾಲ್ಟಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ಕುಟುಂಬ ಬ್ರಾಹ್ಮಣ ಮನೆತನಕ್ಕೆ ಸೇರಿದ್ದಾಗಿತ್ತು. ಆದರೆ ಕೆಲವರು ಆದಿ ಶಂಕರಾಚಾರ್ಯರು ಜನ್ಮಸ್ಥಳ ತಮಿಳುನಾಡಿನ ಚಿದಂಬರಂ ಎಂದು ಪ್ರತಿಪಾದಿಸುತ್ತಾರೆ. ಯಾವ ಮಾಹಿತಿ ಸರಿ ಎಂದು ಖಚಿತಪಡಿಸಲು ಸರಿಯಾದ ದಾಖಲೆಗಳಿಲ್ಲದಿರುವ ಕಾರಣ ಈ ಬಗ್ಗೆ ಸ್ಪಷ್ಟ ವಿವರಣೆ ನೀಡಲು ಸಾಧ್ಯವಿಲ್ಲ.

ಆದಿ ಶಂಕರಾಚಾರ್ಯರು ಜನಿಸುವ ಮುನ್ನ ಇವರ ತಂದೆತಾಯಿಯರಿಗೆ ಹಲವಾರು ವರ್ಷಗಳವರೆಗೆ ಮಕ್ಕಳ ಭಾಗ್ಯವೇ ಇರಲಿಲ್ಲ. ಇವರು ಸಂತಾನಭಾಗ್ಯಕ್ಕಾಗಿ ಭಗವಂತ ಶಿವನಲ್ಲಿ ಅತೀವ ಭಕ್ತಿ ಹಾಗೂ ಶ್ರದ್ದೆಯಿಂದ ಬೇಡಿಕೊಂಡರು. ಹಲವರು ವರ್ಷಗಳವರೆಗೆ ಈ ದಂಪತಿಗಳು ತಮ್ಮ ಪೂಜೆಯನ್ನು ಮುಂದುವರೆಸಿದ ಬಳಿಕ ಒಂದು ದಿನ ಭಗವಂತ ಶಿವ ಇವರ ಕನಸಿನಲ್ಲಿ ಬಂದು ವರವೊಂದನ್ನು ಕೇಳಿದ. ಇದಕ್ಕುತ್ತರವಾಗಿ ಈ ದಂಪತಿಗಳು ತಮಗೊಂದು ದೀರ್ಘಾಯಸ್ಸು ಹಾಗೂ ಲೋಕಪ್ರಸಿದ್ದನಾಗುವ ಸಂತಾನವೊಂದನ್ನು ಕರುಣಿಸುವಂತೆ ಬೇಡಿಕೊಂಡರು.

Shankaracharya

ಆದರೆ ಎರಡೂ ಗುಣಗಳಿರುವ ಸಂತಾನವನ್ನು ನೀಡಲು ಸಾಧ್ಯವಿಲ್ಲ, ಎರಡರಲ್ಲೊಂದನ್ನು ಬೇಡಿಕೊಳ್ಳಿ ಎಂದು ಶಿವ ತಿಳಿಸಿದಾಗ ಈ ದಂಪತಿಗಳು ಎರಡನೆಯದನ್ನೇ, ಅಂದರೆ ಲೋಕವಿಖ್ಯಾತಿ ಪಡೆಯುವ ಸಂತಾನವನ್ನೇ ನೀಡುವಂತೆ ಬೇಡಿಕೊಂಡರು. ತಮ್ಮ ಮಗು ಕೇವಲ ದೀರ್ಘಾಯಸ್ಸು ಪಡೆಯುವುದಕ್ಕಿಂತಲೂ ವಿಶ್ಯವಿಖ್ಯಾತಿ ಪಡೆಯುವುದಕ್ಕೆ ಇವರು ಆದ್ಯತೆ ನೀಡಿದ್ದರು. ಈ ಬೇಡಿಕೆಯನ್ನು ಮನ್ನಿಸಿದ ಶಿವನ ಅನುಗ್ರಹದ ಪರಿಣಾಮವಾಗಿ ಈ ದಂಪತಿಗಳಿಗೆ ಗಂಡುಮಗುವೊಂದು ಹುಟ್ಟಿತು. ಈ ಮಗುವಿಗೆ ಶಂಕರ ಎಂದು ನಾಮಕರಣ ಮಾಡಿದರು. ಈ ಮಗುವೇ ಮುಂದೆ ಶಂಕರಾಚಾರ್ಯರ ಹೆಸರಿನಲ್ಲಿ ವಿಶ್ವವಿಖ್ಯಾತಿ ಪಡೆಯಿತು. ಆದರೆ ಬಾಲಕ ಶಂಕರರಿಗೆ ಕೇವಲ ಮೂರು ವರ್ಷವಾಗಿದ್ದಾಗ ಇವರ ತಂದೆ ವಿಧಿವಶರಾಗಿದ್ದರು.

ಅಪ್ರತಿಮ ಪ್ರತಿಭೆಯುಳ್ಳ ಬಾಲಕ ಶಂಕರಾಚಾರ್ಯ

ಆಚಾರ್ಯ ಎಂದರೆ ಗುರು ಎಂದು ಅರ್ಥ. ಇದುವರೆಗೆ ಈ ಜಗತ್ತು ಕಂಡಿರುವ ಇತರ ದೈವಿಕ ವ್ಯಕ್ತಿಗಳಂತೆಯೇ ಶಂಕರಾಚಾರ್ಯರೂ ಲೋಕಕಲ್ಯಾಣಕ್ಕಾಗಿ ಸನ್ಯಾಸತ್ವವನ್ನು ಸ್ವೀಕರಿಸಲು ಒಲವು ತೋರಿದ್ದರು. ಮುಂದಿನ ಜೀವನವನ್ನು ಸನ್ಯಾಸಿಯಾಗಿ ಕಳೆಯಲು ಅವರು ಬಾಲಕನಾಗಿದ್ದಾಗಲೇ ದೃಢಸಂಕಲ್ಪ ಹೊಂದಿದ್ದರು. ಬಾಲಕನಾಗಿದ್ದಾಗಲೇ ಇವರು ಅಪ್ರತಿಮ ಪ್ರತಿಭೆಯನ್ನು ಪ್ರಕಟಿಸಿದ್ದರು. ಕೇವಲ ಮೂರು ವರ್ಷದವರಾಗಿದ್ದಾಗಲೇ ಇವರು ಮಲಯಾಳಂ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದರು. ಏಳನೆ ವಯಸ್ಸಿನಲ್ಲಿಯೇ ಇವರು ಎಲ್ಲಾ ವೇದಗಳನ್ನು ಕಲಿತು ಪಾರಾಂಗತರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿ ಇವರು ಎಲ್ಲಾ ಶಾಸ್ತ್ರಗಳನ್ನು ಬಾಯಿಪಾಠ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಹದಿನಾರನೇ ವಯಸ್ಸು ತಲುಪುವಷ್ಟರಲ್ಲಿ ಸುಮಾರು ನೂರಕ್ಕೂ ಹೆಚ್ಚು ಗ್ರಂಥಗಳನ್ನು ಇವರು ಬರೆದಿದ್ದರು.

ಜಗತ್ತಿಗಾಗಿ ಸಕಲವನ್ನೂ ತ್ಯಾಗ ಮಾಡಿದ ಶಂಕರಾಚಾರ್ಯರು

ಒಮ್ಮೆ ಶಂಕರಾಚಾರ್ಯರು ತಮ್ಮ ತಾಯಿಯೊಂದಿಗೆ ಪರವೂರಿಗೆ ಹೋಗಿದ್ದರು. ಅಲ್ಲಿನ ನದಿಯ ತೀರವನ್ನು ತಲುಪಿದಾಗ ಶಂಕರರು ನದಿಯಲ್ಲಿದ್ದ ಒಂದು ಮೊಸಳೆ ಅವರತ್ತಲೇ ಸಾಗುತ್ತಿದ್ದುದನ್ನು ಗಮನಿಸಿದರು. ಆಗ ಶಂಕರರು ತಮ್ಮ ತಾಯಿಯಲ್ಲಿ ತನ್ನನ್ನು ಸನ್ಯಾಸಿಯಾಗಲು ಅನುಮತಿ ನೀಡುವಂತೆಯೂ ತಪ್ಪಿದಲ್ಲಿ ಈ ಮೊಸಳೆ ತನ್ನನ್ನು ತಿಂದುಬಿಡುತ್ತದೆ ಎಂದು ತಿಳಿಸಿದರು. ತನ್ನ ಮಗ ಸನ್ಯಾಸಿಯಾಗುತ್ತಾನೆ ಎಂಬುದನ್ನು ಎಂದೂ ಒಪ್ಪದ ಆ ತಾಯಿಗೆ ಆ ಸಮಯದಲ್ಲಿ ತಮ್ಮ ಮಗನ ಮನವಿಯನ್ನು ಒಪ್ಪದೇ ಬೇರೆ ಮಾರ್ಗವೇ ಇರಲಿಲ್ಲ. ಧರ್ಮಬೀರುವಾಗಿದ್ದ ಆಕೆ ತನ್ನ ಮಗನನ್ನು ಸನ್ಯಾಸಿಯಾಗಲು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿದರು. ಈ ಸ್ಥಳದಿಂದಲೇ ಶಂಕರಾಚಾರ್ಯರು ಸನ್ಯಾಸಿಯಾಗಲು ಅಗತ್ಯವಿರುವ ಶಿಕ್ಷಣವನ್ನು ಪಡೆಯಲು ಹೊರಟರು ಎಂದು ಭಾವಿಸಲಾಗಿದೆ. ಈ ಸಂದರ್ಭದಲ್ಲಿ ಅವರ ವಯಸ್ಸು ಕೇವಲ ಎಂಟು ವರ್ಷಗಳಾತ್ತಷ್ಟೇ!

ತತ್ವಜ್ಞಾನಿಯಾಗಿ ಹೊಮ್ಮಿದ ಶಂಕರಾಚಾರ್ಯರು:

ಶಂಕರಾಚಾರ್ಯರು ತಮ್ಮ ಗುರುವಾಗಿ ಗೋವಿಂದ ಭಾಗವತ್ಪಾದರನ್ನು ಆರಿಸಿಕೊಂಡರು. ಅಲ್ಲದೇ ಹಿಂದೂ ಧರ್ಮದ ಮೀಮಾಂಸೆಯ ವಿದ್ವಾಂಸರಾದ ಕುಮಾರಿಕಾ ಹಾಗೂ ಪ್ರಭಾಕರರನ್ನೂ ಇವರು ಭೇಟಿಯಾದರು. ಅಲ್ಲದೇ ಶಾಸ್ತ್ರಾರ್ಥ ಸಂದರ್ಭದಲ್ಲಿ ಬೌದ್ದರನ್ನೂ ಇವರು ಭೇಟಿಯಾದರು. ಶಾಸ್ತ್ರಾರ್ಥ ಎಂದರೆ ಬೌದ್ದ ವಿದ್ವಾಂಸರು ಹಾಗೂ ಜನಸಾಮಾನ್ಯರ ನಡುವೆ ನಡೆಯುವ ಸಭೆಯಾಗಿದ್ದು ಹಲವಾರು ಚರ್ಚೆಗಳು ನಡೆಯುತ್ತವೆ.

ಈ ಸಭೆಗಳಲ್ಲಿ ಬೌದ್ಧ ಹಾಗೂ ಹಿಂದೂ ಧರ್ಮಗಳ ನಡುವಣ ವ್ಯತ್ಯಾಸಗಳನ್ನು ಆಳವಾಗಿ ಅಭ್ಯಸಿಸಿದ ಬಳಿಕ ಹಿಂದೂಧರ್ಮದ ಮೀಮಾಂಸೆಯ ವಿದ್ಯಾಶಾಲೆಯಲ್ಲಿ ಕಲಿಸುತ್ತಿರುವ ವಿಷಯಗಳ ಬಗ್ಗೆ ಹಲವಾರು ಟೀಕೆಗಳನ್ನು ಪ್ರಕಟಿಸಿದರು. ಹಿಂದೂ ಧರ್ಮದಲ್ಲಿ ಆತ್ಮಕ್ಕೆ ಸಾವಿಲ್ಲ ಎಂದು ತಿಳಿಸಲಾಗಿದ್ದರೆ ಬೌದ್ಧಧರ್ಮದಲ್ಲಿ ಆತ್ಮದ ಇರುವಿಕೆಯನ್ನೇ ಅಲ್ಲಗಳೆಯಲಾಗುವುದನ್ನು ಇವರು ಪ್ರತಿಪಾದಿಸಿದರು. ಬಳಿಕ ಶಂಕರಾಚಾರ್ಯರು ನಾಲ್ಕು ಮಠಗಳ ಆಶ್ರಯದಲ್ಲಿ ಹಿಂದೂ ಧರ್ಮದ ಹತ್ತು ಪಂಗಡಗಳನ್ನು ಸ್ಥಾಪಿಸಿದರು. ಈ ನಾಲ್ಕು ಮಠಗಳೆಂದರೆ ಭಾರತದಲ್ಲಿ ಪ್ರಸಿದ್ದವಾಗಿರುವ ದ್ವಾರಕಾ, ಜಗನ್ನಾಥ ಪುರಿ, ಬದರೀನಾಥ ಹಾಗೂ ಶೃಂಗೇರಿ ಆಗಿವೆ.

ಶಂಕರಾಚಾರ್ಯರು ಒಂದೇ ಕಾಲದಲ್ಲಿ ಐದು ದೇವರನ್ನು ಅಂದರೆ ಭಗವಂತ ಗಣೇಶ, ಭಗವಂತ ಶಿವ, ಭಗವಂತ ವಿಷ್ಣು, ಭಗವಂತ ಸೂರ್ಯ ಹಾಗೂ ದೇವಿಯವರನ್ನು ಪ್ರಾರ್ಥಿಸುವ ಇನ್ನೊಂದು ವ್ಯವಸ್ಥೆಯನ್ನೂ ಪ್ರಾರಂಭಿಸಿದರು. ಈ ಐವರೂ ಭಗವಂತ ಬ್ರಹ್ಮದೇವರ ಅವತಾರಗಳೇ ಆಗಿದ್ದಾರೆ ಎಂದು ಶಂಕರಾಚಾರ್ಯರು ಭಾವಿಸಿದ್ದರು.

ಅಲ್ಲದೇ ವೇದಗಳು,ಪುರಾಣ ಹಾಗೂ ಭಗವದ್ಗೀತೆಯ ಕುರಿತು ಇವರು ಹಲವಾರು ಟಿಪ್ಪಣಿಗಳನ್ನು ಬರೆದರು. ಅಲ್ಲದೇ ಬ್ರಹ್ಮಸೂತ್ರ, ಬ್ರಹ್ಮಭಾಷ್ಯ, ಉಪದೇಶ ಸಹಸ್ರಿ ಮೊದಲಾದ ಗ್ರಂಥಗಳನ್ನು ರಚಿಸುವ ಸಹಿತ ಭಗವಂತ ಕೃಷ್ಣ ಹಾಗೂ ಭಗವಂತ ಶಿವನ ಕುರಿತ ಹಲವಾರು ಕವನಗಳನ್ನು ರಚಿಸಿದ್ದು ಈ ಕವನಗಳನ್ನು ಸ್ತೋತ್ರಗಳು ಎಂದು ಕರೆಯಲಾಗುತ್ತದೆ.

ಶಂಕರಾಚಾರ್ಯರು ಆತ್ಮ ಹಾಗೂ ಸರ್ವೋಚ್ಛ ಆತ್ಮಗಳ ತತ್ವಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರು. ಇವರ ನಂಬಿಕೆಯ ಪ್ರಕಾರ ಆತ್ಮಕ್ಕೆ ಸಾವಿಲ್ಲದಾಗಿದ್ದು ದೇಹ ನಷ್ಟಹೊಂದಿದ ಬಳಿಕ ಇನ್ನೊಂದು ದೇಹವನ್ನು ಸೇರಿಕೊಳ್ಳುತ್ತದೆ. ಸರ್ವೋಚ್ಛ ಆತ್ಮ ಶಾಶ್ವತ ಹಾಗೂ ಸರ್ವವ್ಯಾಪಿಯಾಗಿದ್ದು ಇದು ಎಂದಿಗೂ ರೂಪಾಂತರ ಹೊಂದುವುದಿಲ್ಲ.

ಶಂಕರಾಚಾರ್ಯರು ಕೇವಲ ಮೂವತ್ತೆರಡು ವಯಸ್ಸಿನವರಾಗಿದ್ದಾಗ ದೇಹತ್ಯಾಗ ಮಾಡಿದರು. ಶಂಕರಾಚಾರ್ಯರ ಜನ್ಮದಿನವನ್ನು ವಿಶೇಷವಾಗಿ ಈ ನಾಲ್ಕು ಮಠಗಳಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದ ಮೇಲೆ ಶಂಕರಾಚಾರ್ಯರ ಪ್ರಭಾವ ಅತಿ ಮಹತ್ವದ್ದಾಗಿದೆ. ಇದು ಅದ್ವೈತ ವೇದಾಂತ ತತ್ವಶಾಸ್ತ್ರವೇ ಆಗಿರಬಹುದು ಅಥವಾ ಇವರ ಕೃತಿಗಳೇ ಆಗಿರಬಹುದು, ಶಂಕರಾಚಾರ್ಯರನ್ನು ಜನತೆ ಅಪಾರವಾಗಿ ನಂಬುತ್ತಿದ್ದರು.

ಸನ್ಯಾಸಿಯಾಗಿ ಶಂಕರಾಚಾರ್ಯರು ಅತ್ಯಂತ ಸಾರ್ಥಕ ಜೀವನವನ್ನು ಸವೆಸಿದರು ಹಾಗೂ ತಮ್ಮ ಅಲ್ಪಾಯಸ್ಸಿನಲ್ಲಿಯೇ ಜನತೆಗೆ ಅಪಾರವಾದ ಮಾಹಿತಿ ಹಾಗೂ ರಕ್ಷಣೆಯನ್ನು ಒದಗಿಸಿದರು. ಹಿಂದೂ ಧರ್ಮದ ಮೇಲೆ ಶಂಕರಾಚಾರ್ಯರ ಕೃತಿಗಳು ಮತ್ತು ಜೀವನ ಅಪಾರವಾದ ಪ್ರಭಾವವನ್ನು ಬೀರಿವೆ.

English summary

Facts about Guru Shankaracharya

According to the Hindu calender, the month of Vaishakh is one of the most important months. We celebrate a number of festivals in this month, either as astrologically important days or as the birth anniversaries of some divine personalities, sages and saints. On 20th of April, Adi Shankaracharya was born, who is believed to be the incarnation of Lord Shiva. A saint, philosopher and a theologian, he was not only the supporter of the philosophy of Advaita Vedanta, but also the one who brought in the main beliefs of Hinduism.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more