For Quick Alerts
ALLOW NOTIFICATIONS  
For Daily Alerts

ಮಹಿಳೆಯ ಕಿವಿಯೊಳಗೆ ಜೇಡದ ವಾಸ! ಕೊನೆಗೆ ಏನಾಯಿತು ಗೊತ್ತೇ?

By Deepu
|

ನಿಮಗೆ ಇದುವರೆಗೆ ಎದುರಾದ ಅತ್ಯಂತ ಘೋರ ದುಃಸ್ವಪ್ನ ಯಾವುದು? ಭೂತವನ್ನು ಕಂಡು ಬೆಚ್ಚಿಬೀಳುವುದು ಅಥವಾ ನೀವು ಊಹಿಸಲೂ, ಸಹಿಸಲೂ ಸಾಧ್ಯವಿಲ್ಲದ ಭಯಾನಕವಾದ ಯಾವುದೋ ಘಟನೆ?

ಆದರೆ ವಾಸ್ತವ ಕಲ್ಪನೆಗಿಂತಲೂ ಘೋರವಾಗಿರುತ್ತದೆ ಎಂದು ಆಂಗ್ಲ ಸುಭಾಷಿತವೊಂದು ಹೇಳುತ್ತದೆ. ಇಂತಹ ಒಂದು ವಾಸ್ತವ ಘಟನೆ ನಿಮಗೆ ರೋಮಾಂಚನ ಮೂಡಿಸಬಹುದು. ಓರ್ವ ತರುಣಿ ತನಗೆ ಎದುರಾದ ತಲೆನೋವಿಗೆ ಚಿಕಿತ್ಸೆ ಪಡೆಯಲೆಂದು ವೈದ್ಯರ ಬಳಿ ಹೋದಾಗ ಇದಕ್ಕೆ ಜೇಡವೊಂದು ಕಾರಣ ಎಂದು ಆಕೆ ಕನಸಿನಲ್ಲಿಯೂ ಊಹಿಸಿರಲಾರಳು! ಆಕೆಯ ಕಿವಿಯನ್ನು ಪರೀಕ್ಷಿಸಿದ ವೈದ್ಯರಿಗೆ ಅಲ್ಲಿ ವಾಸವಾಗಿರುವ ಜೇಡವೊಂದನ್ನು ಕಂಡಾಗ ಅವರೇ ಮೊದಲು ಚಕಿತರಾಗಿದ್ದರಂತೆ.

ಅದರಲ್ಲೂ ಜೇಡ ಜೀವಂತವಾಗಿದ್ದು ಆರಾಮವಾಗಿ ಕಿವಿಯ ಒಳಭಾಗವನ್ನೇ ತನ್ನ ಮನೆಯನ್ನಾಗಿಸಿ ಆರಾಮವಾಗಿ ಓಡಾಡಿಕೊಂಡಿತ್ತು. ಜೇಡದ ಕಾಲುಗಳಲ್ಲಿ ಅತಿಸೂಕ್ಷ್ಮವಾದ ಕೂದಲುಗಳಿದ್ದು ಜೇಡ ನಡೆದಾಡುವಾಗ ಕಿವಿಯ ಅತಿಸೂಕ್ಷ್ಮಭಾಗಗಳಿಗೆ ಸಂವೇದನೆಯುಂಟಾಗಿ ಇದರ ಪರಿಣಾಮದಿಂದ ಆಕೆಗೆ ತಲೆನೋವು ಪ್ರಾರಂಭವಾಗಿತ್ತು! ಬನ್ನಿ, ನಮ್ಮ ಭಾರತದಲ್ಲಿಯೇ ನಡೆದ ಈ ಘಟನೆಯ ಬಗ್ಗೆ ಅರಿಯೋಣ..

ಒಂದು ದಿನ ಎದ್ದಾಗ ಆಕೆಯ ಕಿವಿ ಮುಚ್ಚಿತ್ತು

ಒಂದು ದಿನ ಎದ್ದಾಗ ಆಕೆಯ ಕಿವಿ ಮುಚ್ಚಿತ್ತು

ಒಂದು ದಿನ ಆಕೆ ಎದ್ದಾಗ ಆಕೆಯ ಬಲಗಿವಿ ಎಂದಿನಂತಿಲ್ಲ ಎನ್ನಿಸಿತ್ತು. ಕಿವಿ ನೋವಿನಿಂದ ಕೂಡಿದ್ದು ಪೂರ್ಣವಾಗಿ ಮುಚ್ಚಿಹೋಗಿದೆ ಎಂಬ ಅನುಭವವಾಗುತ್ತಿತ್ತು. ಆದರೆ ಹೊರಭಾಗಕ್ಕೇನೂ ಕಾಣದ ಕಾರಣ ಹಾಗೂ ಕೊಂಚ ಹೊತ್ತಿನ ಬಳಿಕ ಸರಿಹೋಗಬಹುದೆಂದು ತಿಳಿದು ಆಕೆ ಪ್ರಾರಂಭಿಕ ನೋವನ್ನು ಅಲಕ್ಷಿ಼ಸಿದಳು. ಆದರೆ ಕಾಲಕ್ರಮೇಣ ಈ ನೋವು ಹೆಚ್ಚುತ್ತಾ ಹೋಯಿತು ಹಾಗೂ ಕೊಂಚ ಸಮಯದಲ್ಲಿಯೇ ತಡೆಯಲಸಾಧ್ಯವಾಯ್ತು.

ಆಕೆಯ ಕಿವಿಯೊಳಗೇನಾಗುತ್ತಿದೆ ಎಂದೇ ಆಕೆಗೆ ಗೊತ್ತಿರಲಿಲ್ಲ

ಆಕೆಯ ಕಿವಿಯೊಳಗೇನಾಗುತ್ತಿದೆ ಎಂದೇ ಆಕೆಗೆ ಗೊತ್ತಿರಲಿಲ್ಲ

ನೋವಿಗೆ ಏನು ಕಾರಣ ಎಂದು ಆಕೆ ಊಹಿಸಲು ಅಸಮರ್ಥಳಾಗಿದ್ದಳು. ಜೇಡ ಅಲುಗಿದಂತೆಲ್ಲಾ ನೋವು ಭುಗಿಲೆದ್ದು ಆಕೆ ತತ್ತರಿಸುವಂತೆ ಮಾಡುತ್ತಿತ್ತು.

ತಪಾಸಣೆ ನಡೆಸಿದ ವೈದ್ಯರಿಗೇ ಆಘಾತ ಎದುರಾಗಿತ್ತು

ತಪಾಸಣೆ ನಡೆಸಿದ ವೈದ್ಯರಿಗೇ ಆಘಾತ ಎದುರಾಗಿತ್ತು

ನೋವು ತಡೆಯಲಾಗದೇ ವೈದ್ಯರ ಬಳಿಗೆ ಹೋದ ಆಕೆಯನ್ನು ಪರಿಶೀಲಿಸಿದ ವೈದ್ಯರಿಗೆ ತಮ್ಮ ಜೀವಮಾನದ ದೊಡ್ಡ ಆಘಾತ ಎದುರಾಗಿತ್ತು. ಕಿವಿಯೊಳಗೊಂದು ಪೂರ್ಣಪ್ರಮಾಣದ ಜೇಡವೊಂದು ಮನಕಟ್ಟಿ ಕುಳಿತಿತ್ತು.

ಆಕೆಯ ನೋವಿಗೆ ಏನು ಕಾರಣ ಎಂದು ಅಕೆಗೆ ತಿಳಿಸಿದಾಗ....

ಆಕೆಯ ನೋವಿಗೆ ಏನು ಕಾರಣ ಎಂದು ಅಕೆಗೆ ತಿಳಿಸಿದಾಗ....

ಆಕೆಗೆ ಸತ್ಯಸಂಗತಿಯನ್ನು ತಿಳಿಸಿದಾಗ ಆಕೆ ತನ್ನ ಜೀವಮಾನದ ಗರಿಷ್ಟ ಆಘಾತವನ್ನು ಎದುರಿಸಬೇಕಾಯ್ತು ಹಾಗೂ ಆಕೆ ವಿಪರೀತವಾಗಿ ಹೆದರಿದ್ದಳು ಹಾಗೂ ತಾನು ಸತ್ತೇ ಹೋಗುತ್ತೇನೆಂದು ತೀವ್ರವಾಗಿ ಬೆದರಿದಳು. ಕಿವಿಯೊಳಗೆ ಚಿಕ್ಕ ಪುಟ್ಟ ಕೀಟಗಳು ನುಸುಳುವುದು ಸಾಮಾನ್ಯವಾದರೂ ಕಿವಿಯೊಳಗೆ ಮನೆಕಟ್ಟಿ ಕುಳಿತ ಜೇಡದ ಬಗ್ಗೆ ವೈದ್ಯವಿಜ್ಞಾನದಲ್ಲಿಯೇ ಯಾವ ಮಾಹಿತಿಯೇ ಇಲ್ಲದ ಕಾರಣ ವೈದ್ಯರಿಗೂ ಇದೊಂದು ದೊಡ್ಡ ಸವಾಲಾಗಿತ್ತು.

ಈಕೆಯ ಕಿವಿಯಿಂದ ಶಸ್ತ್ರಚಿಕಿತ್ಸೆಯ ಮೂಲಕ ಜೇಡನನ್ನು ಹೊರತೆಗೆಯುವುದು ಭಾರೀ ಕಷ್ಟಕರವಾಗಿತ್ತು

ಈಕೆಯ ಕಿವಿಯಿಂದ ಶಸ್ತ್ರಚಿಕಿತ್ಸೆಯ ಮೂಲಕ ಜೇಡನನ್ನು ಹೊರತೆಗೆಯುವುದು ಭಾರೀ ಕಷ್ಟಕರವಾಗಿತ್ತು

ಜೇಡ ಜೀವಂತವಾಗಿದ್ದು ಇದು ಯಾವುದೇ ಸಮಯದಲ್ಲಿ ಆಕೆಯನ್ನು ಕುಟುಕುವ ಸಂಭವವಿತ್ತು. ಅಲ್ಲದೇ ಬೆದರಿದ್ದ ಮಹಿಳೆಯ ಕಿವಿಯಿಂದ ಕೀಟವನ್ನು ಆಕೆಗೆ ಕುಟುಕದಂತೆ ಹೊರತೆಗೆಯುವುದೂ ದೊಡ್ಡ ಸವಾಲಾಗಿತ್ತು. ತನ್ನ ಕಿವಿಯೊಳಗೆ ಜೇಡವಿದೆ ಎಂದು ಗೊತ್ತಾದ ಕ್ಷಣದಿಂದ ಆಕೆ ತತ್ತರಿಸಿಹೋಗಿ ಒಂದು ಕಡೆ ನಿಲ್ಲಲಾರದೇ ಚಡಪಡಿಸಹತ್ತಿದ್ದಳು. ಅನಿವಾರ್ಯವಾಗಿ ವೈದ್ಯರು ಆಕೆಗೆ ನಿದ್ದೆ ಬರುವ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ನೀಡಿ ಶಸ್ತ್ರಚಿಕಿತ್ಸೆಗೆ ಸಜ್ಜಾದರು.

ಶಸ್ತ್ರಚಿಕಿತ್ಸೆ ಯಶಸ್ವಿಯಾಯ್ತು

ಶಸ್ತ್ರಚಿಕಿತ್ಸೆ ಯಶಸ್ವಿಯಾಯ್ತು

ಮಹಿಳೆಯನ್ನು ಗಾಢನಿದ್ದೆಗೆ ಒಳಪಡಿಸಿದ ಬಳಿಕ ಆಕೆಯ ಕಿವಿಯಲ್ಲಿ ಉಪ್ಪುನೀರನ್ನು ತುಂಬಿ ಜೇಡ ತಾನಾಗಿಯೇ ಹೊರಬರುವಂತೆ ಮಾಡಲಾಯಿತು. ಉಪ್ಪನ್ನು ಸಹಿಸದ ಜೇಡ ತನ್ನ ಮನೆಯನ್ನು ಬಿಟ್ಟು ತಕ್ಷಣವೇ ಹೊರಬಂದಿತ್ತು! ಬಳಿಕ ಕಿವಿಯೊಳಗಿದ್ದ ಜೇಡನ ಬಲೆಯನ್ನೆಲ್ಲಾ ನಿವಾರಿಸಿ ಕಿವಿಯನ್ನು ಸ್ವಚ್ಛಗೊಳಿಸಿ ಆಕೆಯನ್ನು ಬಳಿಕ ಮನೆಗೆ ಕಳಿಸಿಕೊಡಲಾಯ್ತು. ಈಗ ಈ ಮಹಿಳೆ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ.

ಕಿವಿಯೊಳಗೆ ಕೀಟಗಳ ಪ್ರವೇಶವನ್ನು ನಿರ್ಬಂಧಿಸುವುದು ಹೇಗೆ?

ಕಿವಿಯೊಳಗೆ ಕೀಟಗಳ ಪ್ರವೇಶವನ್ನು ನಿರ್ಬಂಧಿಸುವುದು ಹೇಗೆ?

ನಮ್ಮ ಕಿವಿಯ ತೂತನ್ನೂ ತಮಗೆ ಮನೆ ಮಾಡಲು ಸೂಕ್ತ ಎಂದು ಇರುವೆ ಮೊದಲಾದ ಕೀಟಗಳು ಪರಿಗಣಿಸಿ ಒಳಗೆ ಧಾವಿಸುತ್ತವೆ. ಇದನ್ನು ತಡೆಯಲು ಕೀಟಗಳ ಬಾಧೆ ಇಲ್ಲದ ಪ್ರದೇಶದಲ್ಲಿ ಮಲಗುವುದು ಉತ್ತಮ ಕ್ರಮವಾಗಿದೆ. ಸಾಮಾನ್ಯವಾಗಿ ನೆಲದ ಮೇಲೆ ಮಲಗುವಾಗ ಸುತ್ತ ಮುತ್ತಲ ಸ್ಥಳ ಸ್ವಚ್ಚವಾಗಿಲ್ಲದಿದ್ದರೆ ಇಲ್ಲಿ ಚಿಕ್ಕ ಪುಟ್ಟ ಕೀಟಗಳು ಧಾವಿಸುವುದು ಸಾಮಾನ್ಯ ಹಾಗೂ ಇವುಗಳನ್ನು ಹಿಡಿಯಲು ಜೇಡಗಳೂ ಆಗಮಿಸುತ್ತವೆ. ಹಾಗಾಗಿ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದೇ ಅತ್ಯಂತ ಉತ್ತಮವಾದ ಮುನ್ನೆಚ್ಚರಿಕೆಯ ಕ್ರಮವಾಗಿದೆ.ಇಂತಹ ವಿಸ್ಮಯಕಾರಿ ಸಂಗತಿಗಳು ಇಷ್ಟವೇ? ಹಾಗಾದರೆ ಈ ವಿಭಾಗವನ್ನು ಆಗಾಗ ಗಮನಿಸುತ್ತಿರಿ, ಮುಂದೆ ವಿಶ್ವದಲ್ಲಿ ನಡೆಯುವ ಇನ್ನೂ ಹಲವಾರು ರೋಚಕ ಸಂಗತಿಗಳನ್ನು ನಾವು ತಿಳಿಸುವವರಿದ್ದೇವೆ

English summary

Doctors Find Spider Living In Woman's Ear!!

What was even more worse was that the spider was alive and was moving inside her ear and it caused immense pain! Here are some more details of this most bizarre case of a spider being found in the ear of the woman.
X
Desktop Bottom Promotion