For Quick Alerts
ALLOW NOTIFICATIONS  
For Daily Alerts

ಎಚ್ಚರ! ಲೈಂಗಿಕ ಕ್ರಿಯೆಯಿಂದ ಕೂಡ ಕ್ಯಾನ್ಸರ್ ಹರಡಬಹುದು!!

By Deepu
|

ಕೆಲವು ಕಾಯಿಲೆಗಳು ದೈಹಿಕ ಸಂಪರ್ಕದಿಂದ ಹರಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದರಿಂದ ಇಂತಹ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವು ಕ್ಯಾನ್ಸರ್ ಗಳು ಕೂಡ ದೈಹಿಕ ಸಂಪರ್ಕದಿಂದ ಹರಡುವುದು. ಅದರಲ್ಲೂ ಲೈಂಗಿಕ ಕ್ರಿಯೆ ವೇಳೆ ಇದು ಪ್ರಮುಖವಾಗಿ ಹರಡುವುದು.

ಎಚ್ ಪಿವಿ ಎನ್ನುವ ವೈರಸ್ ಲೈಂಗಿಕ ಕ್ರಿಯೆ ವೇಳೆ ಹರಡುವುದು. ಈ ವೈರಸ್ ನಿಂದ ಕೆಲವೊಂದು ರೀತಿಯ ಕ್ಯಾನ್ಸರ್ ಹರಡುವುದು. ಲೈಂಗಿಕ ಕ್ರಿಯೆಯಿಂದ ಹರಡುವಂತಹ ಕೆಲವೊಂದು ವಿಧದ ಕ್ಯಾನ್ಸರ್ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಲಿದ್ದೇವೆ...

ಗರ್ಭಕಂಠದ ಕ್ಯಾನ್ಸರ್

ಗರ್ಭಕಂಠದ ಕ್ಯಾನ್ಸರ್

ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗುವಂತಹ ಗರ್ಭಕೋಶದಲ್ಲಿ ಎಚ್ ಪಿವಿ ತೀವ್ರ ವೈಪರಿತ್ಯವನ್ನು ಉಂಟು ಮಾಡಬಹುದು. ಈ ರೀತಿಯ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಕೆಲವೊಂದು ವೈದ್ಯಕೀಯ ಪರೀಕ್ಷೆಗಳಿಂದ ಇದನ್ನು ತಿಳಿಯಬಹುದು. ಋತುಚಕ್ರದ ಬಳಿಕವೂ ರಕ್ತಸ್ರಾವವಾಗುತ್ತಿದ್ದರೆ ಇದನ್ನು ಗರ್ಭಕೋಶದ ಕ್ಯಾನ್ಸರ್ ಎನ್ನಬಹುದು.

ಗುದದ್ವಾರ ಕ್ಯಾನ್ಸರ್

ಗುದದ್ವಾರ ಕ್ಯಾನ್ಸರ್

ಕೆಲವೊಂದು ವಿಧದ ಗುದದ್ವಾರ ಕ್ಯಾನ್ಸರ್ ಗೆ ಎಚ್ ಪಿವಿ ವೈರಸ್ ಕಾರಣವಾಗುವುದು. ದೈಹಿಕ ಸಂಪರ್ಕದಿಂದ ಇದು ಹರಡುವುದು. ಗುದದ್ವಾರದಲ್ಲಿ ನೋವು, ರಕ್ತಸ್ರಾವ ಮತ್ತು ಮಲ ಹೊರಹಾಕಲು ತುಂಬಾ ಕಷ್ಟವಾಗುವುದು ಇದರ ಲಕ್ಷಣಗಳಾಗಿವೆ. ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಮತ್ತು ರೇಡಿಯೋಥೆರಪಿ ಈ ಕ್ಯಾನ್ಸರ್ ನ ಹಂತವನ್ನು ನೋಡಿ ಮಾಡಲಾಗುತ್ತದೆ.

ಯೋನಿ ಕ್ಯಾನ್ಸರ್

ಯೋನಿ ಕ್ಯಾನ್ಸರ್

ಕ್ಯಾನ್ಸರ್ ನ್ನು ಉಂಟು ಮಾಡುವಂತಹ ಕೋಶಗಳು ಮಹಿಳೆಯ ಜನನೇಂದ್ರಿಯದಲ್ಲಿ ಸೇರಿಕೊಂಡಾಗ ಯೋನಿ ಕ್ಯಾನ್ಸರ್ ಕಾಣಿಸುವುದು. ರಕ್ತಸ್ರಾವವು ಇದರ ಲಕ್ಷಣವಾಗಿದೆ. ಎಚ್ ವಿಪಿಯು ಈ ಕ್ಯಾನ್ಸರ್ ಅಪಾಯ ಹೆಚ್ಚಿಸುವುದು.

 ಶಿಶ್ನ ಕ್ಯಾನ್ಸರ್

ಶಿಶ್ನ ಕ್ಯಾನ್ಸರ್

ಶಿಶ್ನದ ಕ್ಯಾನ್ಸರ್ ಲೈಂಗಿಕ ಸಂಪರ್ಕದಿಂದ ಹರಡುವುದು. ಇದು ಪುರುಷರಲ್ಲಿ ಶಿಶ್ನ ಕ್ಯಾನ್ಸರ್ ಉಂಟು ಮಾಡುವುದು. ಕೆಂಪಾಗುವುದು, ಊತ, ಸ್ರಾವ ಮತ್ತು ರಕ್ತ ಬರುವುದು ಇದರ ಲಕ್ಷಣಗಳು.

ಬಾಯಿಯ ಕ್ಯಾನ್ಸರ್

ಬಾಯಿಯ ಕ್ಯಾನ್ಸರ್

ಲೈಂಗಿಕ ಕ್ರಿಯೆಯ ಮೂಲಕ ಕೆಲವೊಂದು ರೀತಿಯ ಬಾಯಿಯ ಕ್ಯಾನ್ಸರ್ ಹರಡಬಹುದು. ಬಾಯಿ ಕ್ಯಾನ್ಸರ್ ಮತ್ತು ಗಂಟಲಿನ ಕ್ಯಾನ್ಸರ್ ಇದ್ದರೆ ಆಹಾರ ನುಂಗುವಾಗ ನೋವಾಗುವುದು. ಆಗಾರ ಬರುವ ಬಾಯಿಯ ಅಲ್ಸರ್, ಹಠಾತ್ ತೂಕ ಕಳೆದುಕೊಳ್ಳುವುದು, ಗಂಟಲು ಊದಿಕೊಳ್ಳುವುದು ಕೆಲವು ಸುಳಿವುಗಳಾಗಿದೆ. ಇದರ ಬಗ್ಗೆ ಎಚ್ಚರವಹಿಸಿ. ಕ್ಯಾನ್ಸರ್ ಪತ್ತೆಯಾದರೆ ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ರೇಡಿಯೋಥೆರಪಿಯಿಂದ ಇದನ್ನು ಗುಣಪಡಿಸಬಹುದು.

ತಡೆಯುವುದು ಹೇಗೆ?

ತಡೆಯುವುದು ಹೇಗೆ?

ಇದನ್ನು ತಡೆಯುವಂತಹ ಸುಲಭ ವಿಧಾನವೆಂದರೆ ಎಚ್ ಪಿವಿ ಲಸಿಕೆ ಹಾಕಿಸಿಕೊಳ್ಳುವುದು. ಇದು ಎಲ್ಲಾ ರೀತಿಯ ಕ್ಯಾನ್ಸರ್ ಅನ್ನು ತಡೆಗಟ್ಟುವುದಿಲ್ಲ. ಆದರೆ ಬಾಯಿ, ಗರ್ಭಕೋಶ ಮತ್ತು ಗುದದ್ವಾರದ ಕ್ಯಾನ್ಸರ್ ಅಪಾಯವನ್ನು ಕಡಿಮೆಗೊಳಿಸುವುದು.

ಕ್ಯಾನ್ಸರ್‌ ರೋಗದ ಬೆಚ್ಚಿ ಬೀಳಿಸುವ ಲಕ್ಷಣಗಳು

ಕ್ಯಾನ್ಸರ್‌ ರೋಗದ ಬೆಚ್ಚಿ ಬೀಳಿಸುವ ಲಕ್ಷಣಗಳು

ಕ್ಯಾನ್ಸರ್ ಬರುವುದಕ್ಕಿಂತ ಮೊದಲೇ ಅದರ ಚಿಹ್ನೆಗಳಿಂದ ಜಾಗೃತರಾಗಿ ಅದನ್ನು ತಡೆಯಲು ಪ್ರಯತ್ನಿಸಬೇಕು. ನಮಗೆಲ್ಲರಿಗೂ ತಿಳಿದಂತೆ, ಧೂಮಪಾನದಿಂದ, ಹಾನಿಕಾರಕ ವಿಕರಣಗಳಿಂದ, ವಂಶವಾಹಿಯಿಂದ ಮತ್ತು ವಾತಾವರಣದ ಪರಿಣಾಮಗಳಿಂದ ಕ್ಯಾನ್ಸರ್ ಸಂಭವಿಸಲಿದ್ದು, ಈ ಪ್ರಕ್ರಿಯೆಗಳಿಂದ ದೂರವಿದ್ದಲ್ಲಿ ಕ್ಯಾನ್ಸರ್ ಸಂಭವದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಈ ಕಾರಣಗಳೂ ಸಹ ಒಮ್ಮೊಮ್ಮೆ ನಮ್ಮ ಹಿಡಿತಕ್ಕೆ ಸಿಗದೆ ಅನಿಯಂತ್ರಿತವಾಗುತ್ತವೆ. ಆದ್ದರಿಂದ ಅಲ್ಪ ಪ್ರಮಾಣದಲ್ಲಿ ಮಾತ್ರ ತಡೆಯಲು ಪ್ರಯತ್ನಿಸಬಹುದು.

ಕರುಳಿನ ಅಸಹಜ ಚಲನವಲನ

ಕರುಳಿನ ಅಸಹಜ ಚಲನವಲನ

ದೀರ್ಘಕಾಲ ಬದಲಾಗದ ಮಲಬದ್ಧತೆ ಮತ್ತು ಅತಿಸಾರ ತೊಂದರೆಯಿದ್ದರೆ ಇದು ಕರುಳಿನ ಕ್ಯಾನ್ಸರ್ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ನ ಪ್ರಾರಂಭಿಕ ಲಕ್ಷಣಗಳು. ಇದರ ಹೊರತಾಗಿ ಮಲಮೂತ್ರದಲ್ಲಿ ರಕ್ತದ ಅಂಶಗಳು ಕಂಡುಬಂದಲ್ಲಿ ಕರುಳಿನ ಕ್ಯಾನ್ಸರ್ ಅಥವಾ ಕಿಡ್ನಿಯ ಕ್ಯಾನ್ಸರ್ ಎನ್ನಬಹುದು.

ವಾಕರಿಕೆ ಅಥವಾ ವಾಂತಿ

ವಾಕರಿಕೆ ಅಥವಾ ವಾಂತಿ

ಹೊಟ್ಟೆಯಲ್ಲಿ ಅನುಪಯುಕ್ತ ಮಾಂಸದ ಗೆಡ್ಡೆ ಉಂಟಾದರೆ ವಾಕರಿಕೆ ಅಥವಾ ವಾಂತಿಯ ಲಕ್ಷಣಗಳು ಕಾಣಿಸುತ್ತವೆ. ನೀವು ಸೇವಿಸುವ ಆಹಾರವು ಪೂರ್ಣವಾಗಿ ಒಳಹೋಗದೇ ಹಿಂದಕ್ಕೆ ಬರುವಂತಾಗಿ ವಾಕರಿಕೆ ಅಥವಾ ವಾಂತಿ ಸಂಭವಿಸಲು ಕಾರಣವಾಗುತ್ತದೆ.

ಅತಿಯಾದ ಆಯಾಸ

ಅತಿಯಾದ ಆಯಾಸ

ಕ್ಯಾನ್ಸರ್‌ನ ಭಾಗ ಅಥವಾ ಸಾಮಾನ್ಯ ಗುಣವೇ ಅತಿಯಾದ ಆಯಾಸ. ಇದರಿಂದ ಊಟ ಸೇವಿಸಲು ಅನೇಕ ಬಾರಿ ತೊಂದರೆಯಾಗುತ್ತದೆ. ಇದರಿಂದ ದೇಹಕ್ಕೆ ಪೌಷ್ಠಿಕಾಂಶದ ಕೊರತೆಯುಂಟಾಗಿ ಅತಿಯಾದ ಆಯಾಸಕ್ಕೆ ಕಾರಣವಾಗುತ್ತದೆ.

ಕಿಬ್ಬೊಟ್ಟೆಯಲ್ಲಿ ನೋವು

ಕಿಬ್ಬೊಟ್ಟೆಯಲ್ಲಿ ನೋವು

ಕಿಬ್ಬೊಟ್ಟೆಯಲ್ಲಿ ನೋವು ಅಥವಾ ಸಂಕಟವಿದ್ದಲ್ಲಿ ಹೊಟ್ಟೆಯ, ಕರುಳಿನ ಮತ್ತು ಅಂಡಾಶಯದ ಕ್ಯಾನ್ಸರ್‌ನ ಗುಣಲಕ್ಷಣಗಳು. ಕಿಬ್ಬೊಟ್ಟೆಯಲ್ಲಿ ಅನುಪಯುಕ್ತ ಮಾಂಸಗಡ್ಡೆಗಳು ಬೆಳೆದುಕೊಂಡು, ಹೆಚ್ಚು ನೋವುಂಟಾಗಿ ಹೊಟ್ಟೆಯ ಭಾಗವು ಒತ್ತಿದಂತಾಗುತ್ತದೆ.

ರಕ್ತ ಹೆಪ್ಪುಗಟ್ಟುವುದು

ರಕ್ತ ಹೆಪ್ಪುಗಟ್ಟುವುದು

ಒಂದು ವೇಳೆ ವೃಷಣಗಳಲ್ಲಿರುವ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಇದರ ಪರಿಣಾಮವಾಗಿ ಉಸಿರೇ ಸಿಕ್ಕದಿರುವುದು ಹಾಗೂ ಕಾಲುಗಳು ಊದಿಕೊಳ್ಳುವುದು ಕಾಣಿಸಿಕೊಳ್ಳುತ್ತದೆ. ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು DVT ಅಥವಾ deep venous thrombosis ಎಂದು ಕರೆಯುತ್ತಾರೆ. ಕೆಲವು ಪುರುಷರಲ್ಲಿ ಈ ಲಕ್ಷಣ ವೃಷಣದ ಕ್ಯಾನ್ಸರ್ ಆವರಿಸುತ್ತಿರುವ ಲಕ್ಷಣವನ್ನು ಪ್ರಕಟಿಸುತ್ತವೆ. ಆದರೆ ಈ ಲಕ್ಷಣಗಳು ಬೇರೆ ತೊಂದರೆಯಿಂದಲೂ ಎದುರಾಗುವ ಸಾಧ್ಯತೆ ಇರುವ ಕಾರಣ ಇದು ವೃಷಣಗಳ ಕ್ಯಾನ್ಸರ್ ಹೌದೇ ಅಲ್ಲವೇ ಎಂಬುದನ್ನು ಕೇವಲ ವೈದ್ಯಕೀಯ ಪರೀಕ್ಷಾ ವರದಿಗಳು ಮಾತ್ರ ಖಚಿತಪಡಿಸಬಲ್ಲವು.

ರಕ್ತದ ಸಕ್ಕರೆ ಮಟ್ಟ ಹೆಚ್ಚುವುದು

ರಕ್ತದ ಸಕ್ಕರೆ ಮಟ್ಟ ಹೆಚ್ಚುವುದು

ರಕ್ತದ ಸಕ್ಕರೆ ಮಟ್ಟದಲ್ಲಿ ಹಠಾತ್ ಆಗಿ ಹೆಚ್ಚಳವಾಗುವುದು ಮೇದೋಜೀರಕ ಗ್ರಂಥಿಗಳ ಕ್ಯಾನ್ಸರ್ ನ ಪ್ರಮುಖ ಲಕ್ಷಣವಾಗಿದೆ. ನಿಮ್ಮ ಕುಟುಂಬದಲ್ಲಿ ಯಾರಿಗೂ ಮಧುಮೇಹ ಇಲ್ಲವೆಂದಾದರೆ ಸಕ್ಕರೆ ಮಟ್ಟವು ಹೆಚ್ಚಾಗುತ್ತಾ ಇದ್ದರೆ ಇದನ್ನು ಪರೀಕ್ಷಿಸಿಕೊಳ್ಳಬೇಕು.

ತೂಕ ಕಳಕೊಳ್ಳುವುದು

ತೂಕ ಕಳಕೊಳ್ಳುವುದು

ಯಾವುದೇ ಕಾರಣವಿಲ್ಲದೆ ಹಠಾತ್ತಾಗಿ ತೂಕ ಕಳೆದುಕೊಳ್ಳುವುದು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಮೇದೋಜೀರಕದಲ್ಲಿರುವ ಕ್ಯಾನ್ಸರ್ ಕೋಶಗಳಿಂದಾಗಿ ಹಠಾತ್ತಾಗಿ ತೂಕ ಕಳೆದುಕೊಳ್ಳಬೇಕಾಗುತ್ತದೆ.

ಕಣ್ಣು ಅಥವಾ ಚರ್ಮ ಹಳದಿಯಾಗುವುದು

ಕಣ್ಣು ಅಥವಾ ಚರ್ಮ ಹಳದಿಯಾಗುವುದು

ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಕೋಶಗಳು ಪಿತ್ತರಸ ನಾಳವನ್ನು ತಡೆಯುವುದರಿಂದ ಯಕೃತ್‌ನಲ್ಲಿ ಪಿತ್ತರಸವು ಜಮೆಯಾಗಿ ಕಾಮಾಲೆ ಕಾಣಿಸಿಕೊಳ್ಳುವುದು. ಕಣ್ಣು ಮತ್ತು ಚರ್ಮ ಹಳದಿಯಾಗುವುದು ಇದರ ಲಕ್ಷಣವಾಗಿದೆ.

English summary

Do Cancers Spread Through Intercourse?

Most of us know only about certain infections that are transmitted through intimate physical contact. But even certain types of cancers are said to be spread through intimate physical contact. The main role is played by HPV which is a virus that is transmitted through intercourse. This virus can increase the chances of certain types of cancers. Here are the types of cancers that can be caused by physical relations with multiple partners...
X
Desktop Bottom Promotion