For Quick Alerts
ALLOW NOTIFICATIONS  
For Daily Alerts

  ಮಕರ ರಾಶಿಯ ಜೂನ್ ತಿಂಗಳ ಭವಿಷ್ಯ

  |

  ಈ ತಿಂಗಳಲ್ಲಿ ನೀವು ಕೆಲಸದ ವಿಚಾರವಾಗಿ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಇದರಿಂದಾಗಿ ಹೆಚ್ಚಿನ ಸಮಯವನ್ನು ನೀವು ಕೆಲಸದಲ್ಲಿ ಕಳೆಯುವಿರಿ. ಮನೆ ಮತ್ತು ಕೆಲಸದ ನಡುವಿನ ಪರಿಪೂರ್ಣ ಸಮತೋಲನವನ್ನು ರಚಿಸುವುದರಿಂದ ಎಲ್ಲಾ ವಿಚಾರದಲ್ಲೂ ಪರಿಪೂರ್ಣತೆಯನ್ನು ಕಾಣಲು ಸಾಧ್ಯವಾಗುವುದು. ಕೆಲಸದ ಒತ್ತಡವು ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಇಂಗಿಸುವುದು.

  ಸೂರ್ಯನು ನಿಮ್ಮ ರಾಶಿಚಕ್ರದ ಮೇಲೆ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಜೀವನದಲ್ಲಿ ಕಠಿಣವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಜೂನ್ 21ರ ನಂತರ ಕೆಲವು ಸಮಸ್ಯೆಗಳು ನಿಮ್ಮನ್ನು ಸುತ್ತಬಹುದು. ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಸಂಚು ಮಾಡಬಹುದು. ಈ ಎಲ್ಲಾ ಪ್ರಕ್ರಿಯೆಯು ನಿಮ್ಮ ಮಾನಸಿಕ ಚಿಂತನೆಗಳ ಮೇಲೆ ಪರಿಣಾಮ ಬೀರಬಹುದು.

  ನಿಮ್ಮ ಸಂಪನ್ಮೂಲಗಳನ್ನು ನೀವೇ ನಾಶಗೊಳಿಸಬಹುದು ಅಥವಾ ವ್ಯರ್ಥಗೊಳಿಸಬಹುದು. ಅದು ಸಮಯ ಅಥವಾ ಹಣವಾಗಿರಬಹುದು. ಯಾವುದಾದರನ್ನೂ ನಾವು ಕಳೆದುಕೊಂಡ ನಂತರವೇ ಅದರ ಬೆಲೆ ಅರ್ಥವಾಗುತ್ತದೆ. ಅಲ್ಲಿಯವರೆಗೂ ಅದರ ಮೌಲ್ಯ ನಮಗೆ ತಿಳಿಯುವುದಿಲ್ಲ. ಅದು ವ್ಯಕ್ತಿ ಅಥವಾ ವಸ್ತುವೇ ಆಗಿರಬಹುದು ಎನ್ನುವುದನ್ನು ನೀವು ತಿಳಿದು ಕೊಳ್ಳುವಿರಿ.

  Capricorn Monthly Horoscope

  ಹೆಚ್ಚಿನ ಶ್ರಮವಿಲ್ಲದೆಯೇ ಪ್ರಗತಿಯನ್ನು ಕಾಣುವಿರಿ. ಧನಾತ್ಮಕ ಪರಿಣಾಮವನ್ನು ಅನುಭವಿಸುವ ನಿಮ್ಮ ಬೌದ್ಧಿಕ ಶಕ್ತಿಯು ಸರ್ವಕಾಲಿಕವಾಗಿಯೂ ಉನ್ನತ ಮಟ್ಟದಲ್ಲಿ ಇರುತ್ತದೆ. ಅದು ದೀರ್ಘಕಾಲದ ನಿಮ್ಮ ಗುರಿಯನ್ನು ತಲುಪಲು ಸಹಾಯವಾಗುವದು. ನಿಮ್ಮ ಜೀವನದಲ್ಲಿ ನಡೆಯುವ ಇನ್ನಷ್ಟು ಸಂಗತಿಯನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಓದಿ...

  ಆರೋಗ್ಯ ಸ್ಥಿತಿ

  ಅನಾರೋಗ್ಯವನ್ನು ತಡೆಗಟ್ಟಲು ಸಾಕಷ್ಟು ಗಮನವನ್ನು ಹರಿಸಬೇಕಾಗುತ್ತದೆ. ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಈಜುವುದು, ನೃತ್ಯ ಸೇರಿದಂತೆ ಇನ್ನಿತರ ಯೋಗ್ಯ ಚಟುವಟಿಕೆಯಲ್ಲಿ ನೀವು ಪಾಲ್ಗೊಳ್ಳಬಹುದು. ನಿರ್ವಿಷೀಕರಣ ಯೋಜನೆಯನ್ನು ನೀವು ಹೊಂದಬಹುದು.

  ಜೂನ್ 21ರ ನಂತರ ಆರೋಗ್ಯದ ಸ್ಥಿತಿ ಇನ್ನಷ್ಟು ಹದಗೆಡಬಹುದು. ಆದರೆ ಅದು ಅತ್ಯಂತ ಕಡಿಮೆ ಅವಧಿಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ನಿಯಮಿತ ಆರೋಗ್ಯ ತಪಾಸಣೆಯಿಂದ ಆರೋಗ್ಯ ಸಮಸ್ಯೆಯಿಂದ ದೂರ ಉಳಿಯಬಹುದು ಅಥವಾ ನಿಯಂತ್ರಿಸಬಹುದು. ಮಾನಸಿಕ ಒತ್ತಡವು ನಿಮಗೆ ಕಿರಿಕಿರಿಯನ್ನುಂಟುಮಾಡುವುದು. ಇದನ್ನು ನಿಯಂತ್ರಿಸಲು ನೀವು ನಿಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಒಂದಿಷ್ಟು ಸಮಯವನ್ನು ಕಳೆಯುವುದು ಸೂಕ್ತ.

  ವೃತ್ತಿ ಜೀವನ

  ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಪರಿಶ್ರಮವನ್ನು ನೀವು ಕಾಣಬೇಕಾಗುವುದು. ಗುರಿ ಸಾಧಿಸುವಲ್ಲಿ ನಿಮಗೆ ಸಂತೋಷ ಮತ್ತು ತೃಪ್ತಿ ನೀಡುತ್ತದೆ. ಜೂನ್ 22ರ ವರೆಗೆ ನೀವು ನಿಮ್ಮ ವೃತ್ತಿಪರ ಗುರಿಯನ್ನು ಮುಂದುವರಿಸಲು ನಿರತರಾಗಿರುತ್ತೀರಿ. ಕಾರ್ಯವನ್ನು ಪೂರ್ಣಗೊಳಿಸಲು ಪ್ರಯಾಣ ಕೈಗೊಳ್ಳುವ ಮುನ್ನ ಒಂದಷ್ಟು ಗಮನವನ್ನು ಕೇಂದ್ರಿಕರಿಸಿ. ನಿಮ್ಮ ವೃತ್ತಿ ಜೀವನದಲ್ಲಿ ವರ್ಗಾವಣೆ ಅಥವಾ ಸ್ಥಳ ಬದಲಾವಣೆಯನ್ನು ಕಾಣುವ ಸಾಧ್ಯತೆಗಳಿವೆ.  ಏಕಾಂಗಿಯಾಗಿಯೇ ಸಾಕಷ್ಟು ಸವಾಲುಗಳನ್ನು ಅನುಭವಿಸುವಿರಿ. ನಿಮ್ಮಿಂದ ಸಹೋದ್ಯೋಗಿಗಳು ಹೆಚ್ಚಿನ ಅವಕಾಶ ಹಾಗೂ ಪ್ರಯೋಜನವನ್ನು ಪಡೆದುಕೊಳ್ಳುವರು. ಇದರಿಂದ ಅವರು ಯಶಸ್ಸನ್ನು ಗಳಿಸುವರು. ನಿಮ್ಮ ಸುತ್ತಲಿನ ನಕಾರಾತ್ಮಕ ಅಂಶವು ನಿಮ್ಮ ಕೆಲಸದ ಗುಣಮಟ್ಟದ ಮೇಲೆ ಪ್ರಭಾವ ಬೀರುವುದು. ವಾದ ಮಾಡುವುದರಿಂದ ದೂರ ಇರಿ.

  ಹಣಕಾಸು

  ನೀವು ಈ ತಿಂಗಳು ನಿಮ್ಮ ಹಣಕಾಸಿನ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ಇಲ್ಲವಾದರೆ ಸಾಕಷ್ಟು ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಸರ್ಕಾರದೊಂದಿಗೆ ನಡೆಸುವ ಹಣಕಾಸಿನ ವ್ಯವಹಾರವು ವಹಿವಾಟುಗಳ ದಾರಿಯಲ್ಲಿ ಅಡಚಣೆಯನ್ನುಂಟುಮಾಡುವುದು. ಗ್ರಹಗತಿಗಳು ನಿಮ್ಮ ಪರವಾಗಿ ಇಲ್ಲದೆ ಇರುವುದರಿಂದ ಆದಾಯದಲ್ಲಿ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುವಿರಿ. ಹೊಸ ಯೋಜನೆಯ ಅಡಿಯಲ್ಲಿ ಹಣ ಹೂಡುವುದನ್ನು ಉತ್ತಮ ದಿನಗಳಿಗೆ ಮುಂದುವರಿಸಿ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ರಚಿಸಿ. ಹಣಕಾಸಿನ ವಿಚಾರವಾಗಿ ನೀವು ಸಾಕಷ್ಟು ಮಾನಸಿಕ ಸ್ಥಿಮಿತವನ್ನು ಹೊಂದಿರಬೇಕು. ಗ್ರಹಗಳು ನಿಮ್ಮ ಹಣಕಾಸಿನ ಮೇಲೆ ಋಣಾತ್ಮಕ ಪ್ರಭಾವ ಬೀರದೆ ಇದ್ದರೂ ನೀವು ನಿಮ್ಮ ಎಚ್ಚರಿಕೆಯಲ್ಲಿ ಹಣಕಾಸು ತಜ್ಞರಿಂದ ಸಲಹೆ ಪಡೆದುಕೊಳ್ಳಬೇಕು.

  Capricorn Monthly Horoscope

  ಪ್ರೀತಿಯ ಜೀವನ

  ಚಂದ್ರನ ಪ್ರಭಾವದಿಂದ ನಿಮ್ಮ ಹಾಗೂ ಸಂಗಾತಿಯ ನಡುವೆ ಬಿಕ್ಕಟ್ಟು ಉಂಟಾಗಬಹುದು. ಆದಗ್ಯೂ ಸಾಕಷ್ಟು ಹೊಂದಾಣಿಕೆಯ ಮೂಲಕ ಪರಸ್ಪರ ಪ್ರೀತಿಯನ್ನು ಪಡೆದುಕೊಳ್ಳುವಿರಿ. ನೀವು ಭಾವನಾತ್ಮಕವಾಗಿ ಸಂಬಂಧಕ್ಕೆ ಒಳಪಟ್ಟಿದ್ದರೆ ಸ್ವಲ್ಪ ಸಮಯದಲ್ಲಿಯೇ ಹಾನಿಯುಂಟುಮಾಡಬಹುದು. ಸಣ್ಣ ತಪ್ಪುಗಳನ್ನು ಸಹ ಜೀವನದಲ್ಲಿ ದೊಡ್ಡ ಪರಿಣಾಮವನ್ನು ನೀಡುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.  ಅವಿವಾಹಿತರು ನಿಮ್ಮನ್ನು ಬಯಸುವವರು ಅಥವಾ ನಿಮಗಾಗಿ ಎಲ್ಲೋ ಒಬ್ಬರು ಇದ್ದಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಆದಷ್ಟು ಅರಿವಿನ ನಿರ್ಧಾರವನ್ನು ಕೈಗೊಳ್ಳಿ. ವಿವಾಹವಾದವರು ತಮ್ಮ ಕುಟುಂಬ ಹಾಗೂ ಸಂಗಾತಿಯೊಂದಿಗೆ ಸಂಪೂರ್ಣವಾದ ಆನಂದವನ್ನು ಅನುಭವಿಸುವರು. ಇಬ್ಬರಲ್ಲೂ ಭಾವನಾತ್ಮಕ ತಿಳಿವಳಿಕೆ ಇರುವುದರಿಂದ ಪರಸ್ಪರ ಪ್ರಾಮಾಣಿಕತೆ ಹಾಗೂ ಪ್ರೀತಿಯನ್ನು ಹಂಚಿಕೊಳ್ಳುವಿರಿ.

  ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳು

  ಅದೃಷ್ಟದ ಬಣ್ಣಗಳು ಹಳದಿ, ಗುಲಾಬಿ ಮತ್ತು ಬಿಳಿ

  ಅದೃಷ್ಟದ ಸಂಖ್ಯೆಗಳು 3, 21, 83 ಮತ್ತು 84

  English summary

  Capricorn Monthly Horoscope For June 2018

  The Sun will be positioned strongly in your zodiac house which will enable you to make tough choices in life. There may be difficulties strewn on your path after 21st, when the sun will be positioned in the opposite zodiac sign. Things may not go according to you. In fact, your colleagues at work may conspire against you. Don’t let all these situations affect you mentally though. You may tend to waste your resources this month, be it time or money. Both need to be monitored properly. It usually happens that we do not realise the value of things before we lose them. So make sure not to let it happen to you.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more