For Quick Alerts
ALLOW NOTIFICATIONS  
For Daily Alerts

  ಕರ್ಕ ರಾಶಿಯ ಜೂನ್ ತಿಂಗಳ ಭವಿಷ್ಯ

  |

  ಈ ತಿಂಗಳಲ್ಲಿ ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಕರ್ಕ ರಾಶಿಯವರ ಮೇಲೆ ಪ್ರಭಾವ ಬೀರುವುದು. ಪ್ರಮುಖ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುವ ಸಾಧ್ಯತೆಗಳಿವೆ. ಅದರಲ್ಲಿ ಕೆಲವು ಘಟನೆಗಳು ನಿಮ್ಮ ಜೀವನದಲ್ಲಿ ಮರೆಯಲಾಗದ ಸಂಗತಿಗಳಾಗಬಹುದು ಅಥವಾ ನಿಮ್ಮ ನೆನಪುಗಳಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ. ದೀರ್ಘಕಾಲದ ನೆನಪುಗಳಾಗಬಲ್ಲ ಸನ್ನಿವೇಶಗಳು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

  ಕೆಲಸದಲ್ಲಿ ಉಂಟಾಗುವ ಕೆಲವು ಸಣ್ಣ ಸಮಸ್ಯೆಗಳು ಸಮಯ ಕಳೆದಂತೆ ಪರಿಣಾಮಕಾರಿಯಾಗಿ ಪರಿಹರಿಸಲಾಗುವುದು. ಹೆಚ್ಚು ಪ್ರಯತ್ನಗಳಿಲ್ಲದೆಯೂ ಕೆಲವು ಅದೃಷ್ಟವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ತಿಂಗಳು ಕರ್ಕ ರಾಶಿಯವರು ಕುಟುಂಬ ಹಾಗೂ ವೃತ್ತಿ ಜೀವನದ ನಡುವೆ ಸೂಕ್ಷ್ಮವಾದ ಸಮತೋಲನವನ್ನು ರಚಿಸಬೇಕಾಗುವುದು. ಏಕೆಂದರೆ ಈ ಎರಡು ಕರೆಯಲ್ಲೂ ನಿಮ್ಮ ಅಗತ್ಯತೆ ಅಧಿಕವಾಗಿರುತ್ತದೆ. ಹಾಗಾಗಿ ಒಂದು ವೇಳಾಪಟ್ಟಿಯನ್ನು ಹೊಂದುವುದರ ಮೂಲಕ ನೀವು ಸುಲಭ ಪರಿಹಾರ ಕಂಡುಕೊಳ್ಳಬಹುದು.

  Horoscope

  ಹಣಕಾಸಿನ ವಿಚಾರದಲ್ಲಿ ಸಿಗುವ ಉತ್ತಮ ಫಲಿತಾಂಶವು ನಿಮ್ಮನ್ನು ಆಶ್ಚರ್ಯಕರ ರೀತಿಯಲ್ಲಿ ಸ್ವಾಗತಿಸುತ್ತದೆ. ದೀರ್ಘ ಕಾಲಾವಧಿಗಳ ಕಾಲ ಕೆಲಸ ಮಾಡುವುದರ ಮೂಲಕ ಒಳ್ಳೆಯ ಪರಿವರ್ತನೆ ಕಾಣುವಿರಿ. ನಿಮ್ಮ ವೇಳಾಪಟ್ಟಿಗಿಂತ ಮುಂಚೆಯೇ ನಿಮ್ಮ ಕೆಲಸವು ಸುಗಮವಾಗಿ ನೆರವೇರುವುದರಿಂದ ಗೌರವಾನ್ವಿತ ವ್ಯಕ್ತಿಗಳಾಗಿ ಹೊರಹೊಮ್ಮುವಿರಿ.

  ನೀವು ಆರಾಮದಾಯಕ ವಲಯದಲ್ಲಿಯೇ ನಿಲ್ಲುವ ಬದಲು ನಿಮ್ಮದೇ ಆದ ಭರವಸೆ ಮತ್ತು ವಿಷಯಗಳನ್ನು ಸಾಧಿಸುವುದರ ಮೂಲಕ ಯಶಸ್ಸು ಕಾಣುವಿರಿ. ಈ ಜೂನ್ ತಿಂಗಳಲ್ಲಿ ನಿಮ್ಮ ಆರೋಗ್ಯ ಸ್ಥಿತಿ, ಕುಟುಂಬದಲ್ಲಿ ನಡೆಯುವ ಬದಲಾವಣೆ, ವೃತ್ತಿ ಜೀವನದ ಏರಿಳಿತ ಹಾಗೂ ಹಣದ ಹರಿವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

  ಆರೋಗ್ಯ ಸ್ಥಿತಿ

  ಕರ್ಕ ರಾಶಿಯವರು ಈ ತಿಂಗಳಲ್ಲಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ವಿಶೇಷವಾಗಿ ಕೆಲಸದ ಹೊರೆ ಅಥವಾ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ. ಬಿಡುವಿಲ್ಲದ ಜೀವನ ಶೈಲಿಯು ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುವುದು. ಅನುಚಿತವಾದ ಆರೋಗ್ಯ ಪದ್ಧತಿಯಿಂದಾಗಿ ಕ್ಯಾಲ್ಸಿಯಂ ಕೊರತೆ ಹಾಗೂ ಪೋಷಕಾಂಶಗಳ ಕೊರತೆಯನ್ನು ನೀವು ಅನುಭವಿಸಬೇಕಾಗುವುದು. ಕೆಲಸದ ಸಮಯ ಹಾಗೂ ಆರೋಗ್ಯ ಸೇವನೆಯ ಸಮಯವನ್ನು ಒಂದು ಸೂಕ್ತ ಸಮಯಕ್ಕೆ ಮೀಸಲಿಡಿ. ಆಗ ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರವನ್ನು ಸೇವಿಸಬಹುದು. ಜೊತೆಗೆ ಕ್ರಮಬದ್ಧವಾದ ವ್ಯಾಯಾಮವು ಅಗತ್ಯವಾಗಿರುತ್ತದೆ. ನೀವೇನಾದರೂ ಯೋಗ ಮತ್ತು ವ್ಯಾಯಾಮ ಗಳಂತಹ ಉತ್ತಮ ದೇಹ ದಂಡನೆಯ ಪರಿಯ ಬಗ್ಗೆ ಆಲೋಚನೆಯನ್ನು ಹೊಂದಿದ್ದರೆ ಆರಂಭಿಸಲು ಇದು ಸೂಕ್ತವಾದ ಸಮಯ.

  ವೃತ್ತಿ ಜೀವನ

  ನಿಮ್ಮ ವೃತ್ತಿ ಜೀವನದ ಮುಂಭಾಗದಲ್ಲಿ ಸುಧಾರಣೆಯ ಅವಕಾಶವು ವಿಶಾಲವಾಗಿದೆ. ಆರೋಗ್ಯದ ಸಮಸ್ಯೆಯಿಂದಾಗಿ ನಿಮಗೆ ನಿಮ್ಮ ಉತ್ತಮ ಕೆಲಸವನ್ನು ನೀಡಲು ಸಾಧ್ಯವಾಗದೆ ಇರಬಹುದು. ಅನೇಕ ಕೆಲಸಗಳನ್ನು ಒಮ್ಮೆಲೆ ನಿಮ್ಮ ಬಳಿ ಮಾಡಲು ಸಾಧ್ಯವಾಗದು ಎನ್ನುವುದನ್ನು ನೆನಪಿಡಿ. ಒಮ್ಮೆ ಒಂದೇ ವಿಷಯದಲ್ಲಿ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ವಿಶೇಷವಾದ ಪ್ರಯತ್ನವನ್ನು ಗುರುತಿಸದೆಯೇ ಮೇಲಾಧಿಕಾರಿಗಳ ಬಗ್ಗೆ ಚಿಂತನೆ ನಡೆಸದಿರಿ. ಮೂರನೇ ವ್ಯಕ್ತಿ ನಿಮ್ಮ ಕೆಲಸದಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರೆ ಅದನ್ನು ಲಘುವಾಗಿ ಸ್ವೀಕರಿಸದೆ, ಅದರ ಬಗ್ಗೆ ಪ್ರತಿಕ್ರಿಯಿಸುವುದನ್ನು ಮರೆಯದಿರಿ. ನೀವು ನಿಮ್ಮ ವಿಚಾರದಲ್ಲಿ ಸಾಕಷ್ಟು ಕಟ್ಟು ನಿಟ್ಟನ್ನು ವಹಿಸದಿದ್ದರೆ ನಿಮ್ಮನ್ನು ತುಳಿದು, ತಾವು ಮೇಲೆ ಬರುವ ಕನಸನ್ನು ಕಾಣುವರು. ಆದಷ್ಟು ಎಚ್ಚರಿಕೆ ಹಾಗೂ ಸೂಕ್ತ ರೀತಿಯ ಕೆಲಸ ನಿರ್ವಹಿಸುವುದರಿಂದ ನಿಮಗೆ ಉತ್ತಮ ಫಲಿತಾಂಶ ದೊರೆಯುವುದು. ಅಲ್ಲದೆ ನಿಮ್ಮ ಆತ್ಮ ವಿಶ್ವಾಸವೂ ಸಹ ಹೆಚ್ಚುವುದು.

  ಆರ್ಥಿಕ ಸ್ಥಿತಿ

  ಹಣಕಾಸಿನ ವಿಚಾರದಲ್ಲಿ ನೀವು ಹೆಚ್ಚು ಚಿಂತನಾಶೀಲರಾಗಿರಬೇಕು. ಹಣಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಕೈಗೊಳ್ಳುವ ಮುಂಚೆ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡರೆ ನಿಮಗೆ ಹಣಕಾಸಿನ ತೊಂದರೆಗಳು ಎದುರಾಗುತ್ತವೆ. ಉತ್ತಮ ಹೂಡಿಕೆ ಮಾರ್ಗವನ್ನು ಅನುಸರಿಸುವುದರ ಮೂಲಕ ಸಿಹಿಯಾದ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ನೀವು ಈ ತಿಂಗಳು ಸಾಕಷ್ಟು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ.

  Horoscope

  ನಿಶ್ಚಿತ ನಿವೃತ್ತಿಯ ಜೀವನವನ್ನು ಬಯಸಿದರೆ ನಿಮ್ಮ ಭವಿಷ್ಯದ ಯೋಜನೆಗೆ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಹಣಕಾಸಿನ ವಿಚಾರದಲ್ಲಿ ಎಡವಿದರೆ ಕುಟುಂಬದ ಕ್ರೋಧವನ್ನು ನೀವು ಎದುರಿಸಬೇಕಾಗುವುದು. ನೀವು ಖರ್ಚುಮಾಡುವ ಪರಿಯು ವ್ಯರ್ಥದ ಸಂಗತಿಯಗಿರಬಾರದು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದು ವಸ್ತುವಿಗೆ ಅಧಿಕ ಹಣವನ್ನು ವ್ಯಯ ಮಾಡುವ ಬದಲು ಆಸ್ತಿಯನ್ನು ಖರೀದಿಸಬಹುದು. ಇದು ನಿಮ್ಮ ಗೆಲುವಿಗೆ ಕಾರಣವಾಗುವುದು.

  ಪ್ರೀತಿಯ ಜೀವನ

  ಈ ತಿಂಗಳು ಪ್ರೀತಿಯ ವಿಚಾರದಲ್ಲಿ ನೀವು ಅದೃಷ್ಟವಂತರು ಎಂದು ಹೇಳಬಹುದು. ಏಕೆಂದರೆ ನಿಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯು ಇತರರನ್ನು ಸೆಳೆಯುವ ಅಥವಾ ಆಕರ್ಷಿಸುವ ಶಕ್ತಿಯನ್ನು ಹೊಂದಿರುತ್ತವೆ. ವಿವಾಹಿತ ವ್ಯಕ್ತಿಗಳು ತಮ್ಮ ಸಂಸಾರದೊಂದಿಗೆ ವಿಹಾರ ಅಥವಾ ಮೋಜಿನ ಪ್ರವಾಸಕ್ಕೆ ಕರೆದೊಯ್ಯಲು ಉತ್ತಮ ಸಮಯವಾಗಿರುತ್ತದೆ. ಈ ರೀತಿಯ ಪರಿಯಿಂದ ನೀವು ಮಾನಸಿಕವಾಗಿ ಶಾಂತಿಯನ್ನು ಪಡೆದುಕೊಳ್ಳುವಿರಿ.

  ಅದೃಷ್ಟದ ಬಣ್ಣ ಮತ್ತು ಸಂಖ್ಯೆಗಳು

  ಜೂನ್ ತಿಂಗಳ ಅದೃಷ್ಟದ ಬಣ್ಣಗಳು ಬಿಳಿ ಮತ್ತು ಮೃದುವಾದ ನೀಲಿ ಬಣ್ಣದ ಛಾಯೆಗಳು.

  ಅದೃಷ್ಟದ ಸಂಖ್ಯೆಗಳು 4, 1, 12 ಮತ್ತು 16.

  English summary

  Cancer Monthly Horoscope for June 2018

  The Month of June may be mixed for all the cancerians as you will be surrounded by both positive and negative energies. There will be some important events happening in the month. While some will be forgettable, others will be anticipated from a long time and will bring about positive changes in your life. Any minor issues arising at work will be efficiently solved as time passes. You will be lucky to not require putting in more efforts in anything but reaping good benefits nevertheless.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more